ಚಿನ್ನ ಪ್ರಿಯರೇ.. ಇಂದಿನ ಬಂಗಾರದ ಬೆಲೆ ಕೇಳಿದ್ರೆ ನಿಮ್ಮ ಖುಷಿ ದುಪ್ಪಟ್ಟಾಗುತ್ತೆ

Business: ಭಾರತೀಯರು ವಿಶೇಷವಾಗಿ ಮಹಿಳೆಯರು ಚಿನ್ನವನ್ನು ಖರೀದಿಸುವುದು ಮತ್ತು ಆಭರಣಗಳನ್ನು ಅಲಂಕಾರವಾಗಿ ಧರಿಸುವುದು ವಾಡಿಕೆ. ಮದುವೆ, ಇತರೆ ಶುಭ ಸಮಾರಂಭ, ಹಬ್ಬ ಹರಿದಿನಗಳಲ್ಲಿ ಇವುಗಳಿಗೆ ಉತ್ತಮ ಬೇಡಿಕೆ ಇರುತ್ತದೆ. ಆದರೆ ಈಗ ಇವುಗಳನ್ನು ಕೊಳ್ಳಲು ಜನ ಹೆದರುತ್ತಿದ್ದಾರೆ. ಕಾರಣ ಬಂಗಾರದ ಬೆಲೆ. 

ಚಿನ್ನ ಖರೀದಿಸಲು ಬಯಸುವಿರಾ? ಆದರೆ ಸರಿಯಾದ ಸಮಯವನ್ನು ಹುಡುಕುತ್ತಿರುವಿರಾ? ಹಾಗಾದ್ರೆ ಮೊದಲು ನೀವು ಬಂಗಾರದ ಪ್ರಸ್ತುತ ಬೆಲೆ ತಿಳಿಯಬೇಕು. ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಜೀವಮಾನದ ಗರಿಷ್ಠ ಮಟ್ಟದಲ್ಲಿಯೇ ಉಳಿದಿವೆ. ಸದ್ಯ ಅಲ್ಲಿಂದ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಪ್ರಸ್ತುತ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ದರವು ಪ್ರತಿ ಔನ್ಸ್‌ಗೆ 1995 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಸ್ಪಾಟ್ ಬೆಳ್ಳಿ ದರ ಪ್ರತಿ ಔನ್ಸ್‌ಗೆ 25 ಡಾಲರ್‌ನಲ್ಲಿ ಮುಂದುವರಿಯುತ್ತಿದೆ. ರೂಪಾಯಿ ಮೌಲ್ಯ ಮತ್ತೊಮ್ಮೆ ಕುಸಿದಿದೆ. ಪ್ರಸ್ತುತ ಇದು ಡಾಲರ್ ಎದುರು ರೂ.82 ರ ಮಟ್ಟದಲ್ಲಿದೆ. ಆದರೆ ಭಾರತದಲ್ಲಿ ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ತಟಸ್ಥವಾಗಿದೆ. 

ಹೈದರಾಬಾದ್‌ನಲ್ಲಿ ಪ್ರಸ್ತುತ 10 ಗ್ರಾಂ 22 ಕ್ಯಾರೆಟ್ ಚಿನ್ನ ರೂ. 55930 ಇದ್ದರೆ, 24ಕ್ಯಾರೆಟ್ ಚಿನ್ನದ ದರ ರೂ.61,020ರಲ್ಲಿ ಮುಂದುವರಿದಿದೆ. ದೆಹಲಿ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ 22ಕ್ಯಾರೆಟ್ ಚಿನ್ನದ ಬೆಲೆ ರೂ.56,080ರಲ್ಲಿ ವಹಿವಾಟು ನಡೆಸುತ್ತಿದ್ದರೆ, ಅದೇ 24ಕ್ಯಾರೆಟ್ ಚಿನ್ನದ ಬೆಲೆ ರೂ.61,170 ರಲ್ಲಿ ಮುಂದುವರಿದಿದೆ. 

ಹೈದರಾಬಾದ್‌ನಲ್ಲಿ ಪ್ರತಿ ಕೆಜಿ ಬೆಳ್ಳಿಯ ದರ ಪ್ರತಿ ಕೆಜಿಗೆ 81,600 ರೂ.ಗಳಾಗಿದ್ದು, ದೆಹಲಿಯಲ್ಲಿ ಪ್ರತಿ ಕೆಜಿಗೆ 78,500 ರೂ. ಆಗಿದೆ. ಹೈದರಾಬಾದ್‌ಗೆ ಹೋಲಿಸಿದರೆ ದೆಹಲಿಯಲ್ಲಿ ಚಿನ್ನದ ಬೆಲೆ ಹೆಚ್ಚಾಗಿದೆ. ಅದೇ ಬೆಳ್ಳಿಯ ದರಕ್ಕೆ ಬಂದರೆ ದೆಹಲಿಯಲ್ಲಿ ತುಂಬಾ ಕಡಿಮೆಯಾಗಿದೆ. ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ಈ ಬೆಲೆಗಳು ಏರಿಳಿತಗೊಳ್ಳುತ್ತವೆ. 

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (10ಗ್ರಾಂ) : 

ಬೆಂಗಳೂರು 
24K –  ₹56,080 
22K –  ₹61,170

ಚೆನ್ನೈ 
24K –  ₹56,490
22K –  ₹61,630

ಮುಂಬೈ  
24K – ₹55,930 
22K – ₹61,020

ದೆಹಲಿ 
24K – ₹56,080 
22K – ₹61,170

ಕೋಲ್ಕತ್ತಾ 
24K – ₹55,930 
22K – ₹61,020

ಹೈದರಾಬಾದ್
24K – ₹55,930 
22K – ₹61,020

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿಯ ಬೆಲೆ (1 ಕೆಜಿ) : 

ಚೆನ್ನೈ – ₹81,600
ಮುಂಬೈ –  ₹78,500
ದೆಹಲಿ – ₹78,500
ಕೋಲ್ಕತ್ತಾ – ₹78,500
ಬೆಂಗಳೂರು – ₹81,600
ಹೈದರಾಬಾದ್ – ₹81,600

Source: https://zeenews.india.com/kannada/business/gold-and-silver-price-today-18-april-2023-remain-same-as-yesterday-129649

Leave a Reply

Your email address will not be published. Required fields are marked *