Gold Price Today: ಆಷಾಢ ಬಂದ್ರೂ ಇಳಿಕೆ ಆಗಲೇ ಇಲ್ಲ ಹಳದಿ ಲೋಹ..!!

Gold Price Today: ಆಷಾಢ ಮಾಸದಲ್ಲಿ ಚಿನ್ನದ ಬೆಲೆ ಕಡಿಮೆ ಆಗುವ ಬದಲು ಏರಿಕೆ ಕಂಡಿದ್ದು  ಚಿನ್ನದ ಬೆಲೆ ಇಳಿಕೆ ಆಗಲಿದೆ ಎಂದು ಭಾರೀ ನಿರೀಕ್ಷೆಯಲ್ಲಿದ್ದ ಮಹಿಳೆಯರಿಗೆ ಹಳದಿ ಲೋಹ ಪೆಟ್ಟುಕೊಟ್ಟಿದೆ. 

Gold Price Today: ಆಷಾಢ ಮಾಸದಲ್ಲಿ ಹಾಗೂ ಅಧಿಕ ಮಾಸದಲ್ಲಿ ಹೆಚ್ಚಾಗಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಹಾಗಾಗಿ, ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಈ ಮಾಸದಲ್ಲಿ ಹಳದಿ ಲೋಹದ ದರ ಕಡಿಮೆ ಆಗುತ್ತದೆ ಎಂಬ ನಿರೀಕ್ಷೆ ಇರುತ್ತದೆ. ಹಾಗಾಗಿಯೇ ನಮ್ಮಲ್ಲಿ ಬಹುತೇಕ ಜನರು ಈ ಮಾಸದಲ್ಲಿ ಚಿನ್ನ ಖರೀದಿಸಲು ಯೋಚಿಸುತ್ತಾರೆ. ಆದರೆ, ವಿಪರ್ಯಾಸವೆಂದರೆ ಆಷಾಢದಲ್ಲಿ ಚಿನ್ನದ ಬೆಲೆ ಕಡಿಮೆ ಆಗುತ್ತದೆ ಎಂದು ಕಾಯುತ್ತಿದ್ದವರಿಗೆ ಈ ಬಾರಿ ನಿರಾಶೆ ಮೂಡಿದೆ. ಇದಕ್ಕೆ ಮುಖ್ಯ ಕಾರಣ ಆಷಾಢ ಬಂದ್ರೂ ಹಳದಿ ಲೋಹದ ದರದಲ್ಲಿ ಕಡಿಮೆ ಆಗದೇ ಇರುವುದು. 

ಹೌದು, ಆಷಾಢ ಮಾಸದಲ್ಲಿ ಚಿನ್ನದ ಬೆಲೆ ಕಡಿಮೆ ಆಗುವ ಬದಲು ಏರಿಕೆ ಕಂಡಿದ್ದು  ಚಿನ್ನದ ಬೆಲೆ ಇಳಿಕೆ ಆಗಲಿದೆ ಎಂದು ಭಾರೀ ನಿರೀಕ್ಷೆಯಲ್ಲಿದ್ದ ಮಹಿಳೆಯರಿಗೆ ಹಳದಿ ಲೋಹ ಪೆಟ್ಟುಕೊಟ್ಟಿದೆ. ಚಿನ್ನದ ಬೆಲೆ ಇಂದು ಪ್ರತಿ 10 ಗ್ರಾಂಗೆ ರೂ. 58, 281 ಕ್ಕೆ ವಹಿವಾಟು ನಡೆಸುತ್ತಿದೆ. 

60ರ ಸನಿಹದಲ್ಲಿ ಚಿನ್ನದ ಬೆಲೆ: 
ಜಾಗತಿಕ ಮಾರುಕಟ್ಟೆಯಲ್ಲಿ ಕುಸಿತಕ್ಕೆ ಸಾಕ್ಷಿಯಾಗಿದ್ದ ಚಿನ್ನದ ಬೆಲೆ ಮತ್ತೆ ಏರಿಕೆಯತ್ತ ಮುಖ ಮಾಡಿದೆ. ಆಭರಣ ಚಿನ್ನದ ಬೆಲೆ ಮತ್ತು ಶುದ್ಧ ಚಿನ್ನದ ಬೆಲೆ ಎರಡೂ ಕೂಡ ಗಗನಮುಖಿ ಆಗುತ್ತಿದ್ದು, 60ರ ಸನಿಹಕ್ಕೆ ತಲುಪಿದೆ. ಇದರಿಂದಾಗಿ ಜನಸಾಮಾನ್ಯರು ಚಿನ್ನ ಖರೀದಿಸುವುದೇ ಕನಸು ಎಂಬಂತಾಗಿದೆ. 

ಮಂಗಳವಾರವೂ ಚಿನ್ನದ ಬೆಲೆ ಏರಿಕೆ- ಮಹಿಳೆಯರಿಗೆ ಶಾಕ್..!!
ಕಳೆದ ಐದು ದಿನಗಳಿಂದ ಆಕಾಶದತ್ತ ಮುಖ ಮಾಡಿರುವ ಚಿನ್ನ ಬೆಲೆ ಮಂಗಳವಾರವೂ ಏರಿಕೆ ಕಂಡಿದೆ. ಗಮನಾರ್ಹವಾಗಿ, ಕಳೆದ ಐದು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ 200ರೂ. ಏರಿಕೆ ಕಂಡು ಬಂದಿದೆ. 

ಐದು ದಿನಗಳ ಹಿಂದೆ ಇಳಿಕೆಯ ಟ್ರೆಂಡ್‌ನಲ್ಲಿದ್ದ ಚಿನ್ನ: 
ಹೌದು, ಕಳೆದ ಐದು ದಿನಗಳ ಹಿಂದೆ ಚಿನ್ನದ ದರ ಇಳಿಕೆಯಾಗುತ್ತಿತ್ತು. ಆದರೆ, ಇದೀಗ ಮೆತ್ತೆ ಚಿನ್ನದ ಬೆಲೆ ಹೆಚ್ಚಳವಾಗುತ್ತಿರುವುದು ಆಭರಣ ಪ್ರಿಯರಿಗೆ ಬೇಸರ ಮೂಡಿಸಿದೆ. ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸಗೊಂಡಿದ್ದು, ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ಮೇಲೆ 100ರೂ. ಏರಿಕೆ ಕಂಡಿದೆ. 

ದಿನಾಂಕ22 ಕ್ಯಾರೆಟ್ ಚಿನ್ನದ ಬೆಲೆ ರೂ.ಗಳಲ್ಲಿ
ಜುಲೈ -0454,150 ರೂ. 
ಜುಲೈ -0354,050 ರೂ.
ಜುಲೈ -0254,150 ರೂ.
ಜುಲೈ -0154,150 ರೂ.
ಜೂನ್-3053,950 ರೂ. 
ದಿನಾಂಕ24 ಕ್ಯಾರೆಟ್ ಚಿನ್ನದ ಬೆಲೆ ರೂ.ಗಳಲ್ಲಿ
ಜುಲೈ -0459,060 ರೂ. 
ಜುಲೈ -0358,950 ರೂ.
ಜುಲೈ -0259,070 ರೂ.
ಜುಲೈ -0159,070 ರೂ.
ಜೂನ್-3058,850 ರೂ.

Source : https://zeenews.india.com/kannada/business/gold-price-have-not-been-down-in-ashada-too-know-todays-gold-rate-tuesday-04th-july-2023-143458

Leave a Reply

Your email address will not be published. Required fields are marked *