ವಿದ್ಯಾರ್ಥಿಗಳಿಗೆ ಶುಭವಾದ ದಿನ, ನಿರುದ್ಯೋಗಿಗಳಿಗೆ ಉತ್ತಮ ಅವಕಾಶ; ಇಲ್ಲಿದೆ ಇಂದಿನ ರಾಶಿ ಭವಿಷ್ಯ!

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಚಿತ್ತಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ

ಮೇಷ ರಾಶಿ

  • ಈ ದಿನದ ಆರಂಭ ತುಂಬಾ ಕಷ್ಟವೆನಿಸಬಹುದು
  • ನೀವೇ ಹಾಕಿಕೊಂಡ ನಿಯಮಗಳಿಂದ ತೊಂದರೆಯಾಗಬಹುದು
  • ಹಿರಿಯರಿಂದ ಸ್ವಲ್ಪ ಒತ್ತಡ ಹೆಚ್ಚಾಗಬಹುದು
  • ವ್ಯಾವಹಾರಿಕವಾಗಿ ಹಣಕಾಸಿನ ಸಮಸ್ಯೆಯೂ ಕಾಡಬಹುದು
  • ಮಾನಸಿಕ ಸಮಾಧಾನವಿಲ್ಲದೆ ಒದ್ದಾಡುತ್ತೀರಿ
  • ಇಂದು ಆರ್ಥಿಕ ಸ್ಥಿತಿ ಸಾಧಾರಣವಾಗಿರಲಿದೆ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ವ್ಯಾವಹಾರಿಕ ಅಡೆತಡೆಗಳನ್ನು ನಿವಾರಿಸುತ್ತೀರಿ
  • ಪ್ರೇಮಿಗಳಿಗೆ ಶುಭಕರವಾದ ದಿನ
  • ಉದ್ಯೋಗದಲ್ಲಿ ಭಡ್ತಿ ಅಥವಾ ಅನುಕೂಲವಿದೆ
  • ಮನೆಯವರ ಜೊತೆ ಸಂತೋಷವಾಗಿರುತ್ತೀರಿ
  • ಹೊಸ ಉದ್ಯೋಗ ಯೋಜನೆಗಳ ಬಗ್ಗೆ ಚಿಂತಿಸುತ್ತೀರಿ
  • ಕಬ್ಬಿಣ ವ್ಯಾಪಾರಿಗಳಿಗೆ ಸ್ವಲ್ಪ ಸಮಸ್ಯೆಯಾಗಬಹುದು
  • ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಶನೇಶ್ವರನನ್ನು ಪ್ರಾರ್ಥನೆ ಮಾಡಿ

ಮಿಥುನ

  • ಮನೆಯವರ ಆಸೆ ಆಕಾಂಕ್ಷೆಗಳನ್ನು ಈಡೇರಿಸುವುದಕ್ಕೆ ಶ್ರಮಿಸುತ್ತೀರಿ
  • ಉತ್ತಮ ಬಂಧುತ್ವದಿಂದ ಕೆಲಸ ಸಾಧನೆಯಾಗಲಿದೆ
  • ಸಾಮೂಹಿಕ ಅಥವಾ ಸಾರ್ವಜನಿಕ ಕೆಲಸಗಳಲ್ಲಿ ಭಾಗಿಗಳಾಗಬಾರದು
  • ನಿಮ್ಮದಲ್ಲದ ತಪ್ಪಿಗೆ ಗುರಿಯಾಗುತ್ತೀರಿ
  • ಮಕ್ಕಳಲ್ಲಿ ಮನೋವಿಕಾರ ಕಾಣಬಹುದು
  • ಶಿವರಾಧನೆಯನ್ನು ಮಾಡಿ

ಕಟಕ

  • ಉದ್ಯೋಗದಲ್ಲಿ ಹೊಂದಾಣಿಕೆ ಇರುವುದಿಲ್ಲ
  • ಸಹೋದ್ಯೋಗಿಗಳಿಂದ ಅತಿಯಾದ ಸಮಸ್ಯೆಗೆ ಒಳಪಡುತ್ತೀರಿ
  • ಅನುಪಯುಕ್ತ ವಸ್ತುಗಳ ಖರೀದಿ ಮಾಡಿ ನಷ್ಟ ಹೊಂದುತ್ತೀರಿ
  • ಆಸ್ತಿಯಿಂದ ಮಾಡಿದ ಹೂಡಿಕೆ ಅಪಾಯಕಾರಿ ಎನಿಸಬಹುದು
  • ದೈಹಿಕ ಆಯಾಸ ತುಂಬಾ ಕಾಡಬಹುದು
  • ಮನೆಯಲ್ಲಿ ಮನಸ್ತಾಪಕ್ಕೆ ತುಂಬಾ ಕಾರಣಗಳಿರಲಿದೆ
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ಸಿಂಹ

  • ನಿಮ್ಮ ತತ್ವ ಸಿದ್ಧಾಂತಗಳನ್ನು ಬೇರೆಯವರು ವಿರೋಧಿಸಬಹುದು
  • ಪ್ರೇಮಿಗಳು ಪರಸ್ಪರ ಅನುಮಾನದಿಂದ ದೂರವಾಗುವ ಸಾಧ್ಯತೆ
  • ಮಕ್ಕಳ ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ
  • ಯಾವ ಕೆಲಸದಲ್ಲಿ ಮನಸ್ಸಿಲ್ಲವೋ ಆ ಕೆಲಸವನ್ನು ಮಾಡಬೇಡಿ
  • ಯಾರ ದಾಕ್ಷಿಣ್ಯಕ್ಕೂ ಒಳಗಾಗಬೇಡಿ
  • ಮಾನಸಿಕವಾಗಿ ಒಳ್ಳೆಯ ಸಂಕಲ್ಪ ಚಿಂತನೆಗಳಿರಲಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಸ್ನೇಹಿತರ ಸಲಹೆ ಉಪಯೋಗಕ್ಕೆ ಬರಬಹುದು
  • ಅವಿವಾಹಿತರಿಗೆ ಶುಭ ಸೂಚನೆಯಿದೆ
  • ಬುದ್ಧಿವಂತಿಕೆಯ ನಿರ್ಧಾರಗಳನ್ನು ಮಾಡಿ
  • ವ್ಯಾವಹಾರಿಕವಾಗಿ ಉತ್ತಮ ಯಶಸ್ಸನ್ನು ಹೊಂದುತ್ತೀರಿ
  • ಕಳೆದ ಕೆಲವು ವಸ್ತು, ಹಣ, ಆಸ್ತಿಯಿಂದ ಬೇಸರ ಆಗಬಹುದು
  • ವಾಹನ ದುರಸ್ತಿಗೆ ಅಧಿಕ ಖರ್ಚು ಮನಸ್ಸಿಗೆ ಬೇಸರ ತರಲಿದೆ
  • ದುರ್ಗಾರಾಧನೆ ಮಾಡಿ

ತುಲಾ

  • ಸಾಂಸಾರಿಕವಾಗಿ ಯಾವ ವಾಗ್ಯುದ್ಧ ಬೇಡ
  • ನಿಮ್ಮ ಪ್ರತಿಭೆಗೆ ಪ್ರೋತ್ಸಾಹ ಮತ್ತು ಗೌರವ ಸಿಗಲಿದೆ
  • ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಗಮನಹರಿಸಬೇಕು
  • ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಸಿಗಬಹುದು
  • ಸಂತಾನಾಪೇಕ್ಷಿಗಳಿಗೆ ಸಿಹಿಸುದ್ದಿ ಇದೆ
  • ಹಿರಿಯರ ಆಶೀರ್ವಾದ ಪಡೆಯಿರಿ ಮತ್ತು ಹಿರಿಯರ ಸೇವೆ ಮಾಡಿ
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಹೊಸ ವ್ಯವಹಾರದ ಆಲೋಚನೆಯಿದ್ದರೆ ಲಾಭವಿದೆ
  • ಪ್ರಯಾಣವು ಅಧಿಕವಾಗಬಹುದು
  • ಇಂದು ಮಾತಿನಲ್ಲಿ ಗಟ್ಟಿತನವಿರಲಿ
  • ಈ ದಿನ ತೋರಿಕೆಯ ಮಾತು ಬೇಡ
  • ನಡವಳಿಕೆಯಲ್ಲಿ ಸ್ವಲ್ಪ ಹೊಂದಾಣಿಕೆ ಬೇಕಾಗಲಿದೆ
  • ಮನೆಯಲ್ಲಿ ಶಾಂತಿಯನ್ನು ಕಾಪಾಡಿ
  • ಆಸ್ತಿಯ ವಿಚಾರದಲ್ಲಿ ಜಯಶಾಲಿಗಳಾಗುತ್ತೀರಿ
  • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಧನಸ್ಸು

  • ಪ್ರೇಮಿಗಳಲ್ಲಿ ಪರಸ್ಪರ ಕಿತ್ತಾಟ ದೂರವಾಗುವ ಸಾಧ್ಯತೆಯಿದೆ
  • ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಸುಧಾರಣೆಯಾಗಲಿದೆ
  • ಹೊಸ ಸ್ನೇಹಿತರ, ಬಂಧುಗಳ ವಿರಸವಾಗಲಿದೆ
  • ನಿಮ್ಮ ವೈಯಕ್ತಿಕವಾದ ವಿಚಾರಗಳಿಗೆ ಆದ್ಯತೆ ನೀಡಿ
  • ಯಾವ ವ್ಯವಹಾರದ ಮಧ್ಯಸ್ಥಿಕೆ ವಹಿಸಬೇಡಿ ಅವಮಾನವಿದೆ
  • ಆದಷ್ಟು ಮೌನಿಯಾಗಿದ್ದರೆ ಬೆಲೆ ಹೆಚ್ಚು
  • ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ

ಮಕರ

  • ಕುಟುಂಬದಲ್ಲಿ ನಿಮ್ಮ ಅವಶ್ಯಕತೆ ಹೆಚ್ಚಾಗಿರಲಿದೆ
  • ಹಳೆಯ ನೆನಪುಗಳು ನಿಮ್ಮನ್ನು ಕಾಡಬಹುದು
  • ಪ್ರತಿ ಸಮಸ್ಯೆಯನ್ನು ಸಮರ್ಥವಾಗಿ ಬಗೆಹರಿಸಿಕೊಳ್ಳಿ
  • ಮಕ್ಕಳ ಬಗ್ಗೆ ಅತಿಯಾದ ಚಿಂತನೆ ಇರಲಿದೆ
  • ಹಳೆಯ ವಸ್ತು, ಪದಾರ್ಥದ ವಿಚಾರಕ್ಕೆ ಜಗಳವಾಗಬಹುದು
  • ಮನೆಯಲ್ಲಿಯ ವಿಚಾರಕ್ಕೆ ಹೆಚ್ಚು ಗಮನ ಹರಿಸಬೇಕಾಗಲಿದೆ
  • ಸಾಯಿಬಾಬರನ್ನು ಪ್ರಾರ್ಥನೆ ಮಾಡಿ

ಕುಂಭ

  • ವ್ಯವಹಾರದ ದೃಷ್ಟಿಯಿಂದ ಗೌಪ್ಯ ವಿಷಯಗಳು ಹೊರಬರಬಹುದು
  • ನಿಮ್ಮ ದೌರ್ಬಲ್ಯದ ಲಾಭ ಪಡೆಯಲು ಬೇರೆಯವರು ಕಾಯುತ್ತಿರುತ್ತಾರೆ
  • ಯಾವುದೇ ವ್ಯವಹಾರದಲ್ಲಿ ಪಾಲುದಾರಿಕೆ ಬೇಡ
  • ವ್ಯವಹಾರದಲ್ಲಿ ಪಾರದರ್ಶಕತೆಯಿರಲಿ
  • ಹಣ ಅಥವಾ ವಸ್ತುಗಳನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳಿ
  • ನೇರವಾಗಿ ನಿಷ್ಠೂರವಾದ, ಕಠಿಣವಾದ ಮಾತು ಬೇಡ
  • ದುರ್ಗಾರಾಧನೆ ಮಾಡಿ

ಮೀನ 

  • ಕಷ್ಟ ಪಡುತ್ತೀರಿ ಆದರೆ ಫಲವಿಲ್ಲ ಬೇಸರವಾಗಬಹುದು
  • ಯಾವುದೇ ವಿಚಾರವನ್ನು ತುಂಬಾ ಕೆದಕಿ ಕೇಳಬೇಡಿ
  • ನಿಮ್ಮ ಪ್ರತಿಭೆಗೆ ಗೌರವವಿದೆ
  • ಸಾಧನೆಗಳನ್ನು ಅತಿಯಾಗಿ ಹೇಳಿಕೊಳ್ಳಬೇಡಿ
  • ಸಂಶೋಧನೆಗೆ ಸಂಬಂಧಿಸಿದ ವಿಚಾರಗಳಿಂದ ಒಳ್ಳೆಯದಾಗಲಿದೆ
  • ನಿಮ್ಮ ವ್ಯವಹಾರಕ್ಕೆ ಪೂರಕವಾಗಿ ನಡೆದುಕೊಳ್ಳಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ.

Source: https://newsfirstlive.com/february-17th-2025-today-horoscope-kannada-raashi-bhavishya

Leave a Reply

Your email address will not be published. Required fields are marked *