ಚಿತ್ರದುರ್ಗ| ಭಯೋತ್ಪಾದನಾ ಚಟುವಟಿಕೆ ತಡೆಗೆ ಬಹುತೇಕ ದೇಶಗಳು ಭಾರತದ ಜೊತೆ ನಿಲ್ಲುವ ಭರವಸೆ ನೀಡಿವೆ: ಗೋವಿಂದ ಕಾರಜೋಳ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮೇ. 05 : ನಮ್ಮ ಜಿಲ್ಲೆಯಲ್ಲಿ ಯಾರೇ ಪಾಕಿಸ್ತಾನದ ಪ್ರಜೆಗಳು ಇದ್ದರು ಅವರನ್ನ ಹೊರ ಹಾಕುವ ಕೆಲಸ ಜಿಲ್ಲಾಡಳಿತ ಮಾಡಬೇಕು ಈ ಕುರಿತು ಕೇಂದ್ರ ಸರ್ಕಾರ ಸಹ ಸೂಚನೆ ಕೊಟ್ಟಿದ್ದು ರಾಜ್ಯ ಸರ್ಕಾರ ದಿಟ್ಟ ನಿರ್ದಾರ ತೆಗೆದುಕೊಂಡು ಅವರನ್ನ ಹೊರ ಹಾಕಬೇಕು ಎಂದು
ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಇಂದು ಚಿತ್ರದುರ್ಗದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಹಲ್ಗಾಮ್‍ನ ಉಗ್ರರ ದಾಳಿ
ಖಂಡಿಸಿ ತಕ್ಕ ಉತ್ತರಕ್ಕೆ ಪ್ರಧಾನಿಗಳು ಐದು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಈ ಹಿನ್ನೆಲೆ ನಾವೆಲ್ಲ ಸರ್ಕಾರದ ಜೊತೆ
ಇದ್ದು ಭಯೋತ್ಪಾದನಾ ಚಟುವಟಿಕೆ ತಡೆಗೆ ಬಹುತೇಕ ದೇಶಗಳು ನಮ್ಮ ದೇಶದ ಜೊತೆ ಇದ್ದಾವೆ. ಈ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ
ತಕ್ಕ ಉತ್ತರ ಕೊಡುವ ನಿಟ್ಟಿನಲ್ಲಿ ಪಾಕಿಸ್ತಾನದ ಜೊತೆ ನಮ್ಮ ಸಂಬಂದವನ್ನ ಕಡಿದು ಹಾಕಿದ್ದೇವೆ ಎಂದರು.

ನಮ್ಮ ಜಿಲ್ಲೆಯಲ್ಲಿ ಯಾರೇ ಪಾಕಿಸ್ತಾನದ ಪ್ರಜೆಗಳು ಇದ್ದರು ಅವರನ್ನ ಹೊರ ಹಾಕುವ ಕೆಲಸ ಜಿಲ್ಲಾಡಳಿತ ಮಾಡಬೇಕು ಈ ಕುರಿತು
ಕೇಂದ್ರ ಸರ್ಕಾರ ಸಹ ಸೂಚನೆ ಕೊಟ್ಟಿದ್ದು ರಾಜ್ಯ ಸರ್ಕಾರ ದಿಟ್ಟ ನಿರ್ದಾರ ತೆಗೆದುಕೊಂಡು ಅವರನ್ನ ಹೊರ ಹಾಕಬೇಕು ಎಂದು
ಗೋವಿಂದ ಕಾರಜೋಳ ತಿಳಿಸಿದ್ದು ಇನ್ನೂ ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಆದರೂ ಕೂಡ ಅಭಿವೃದ್ಧಿ ಕೆಲಸ ಆಗುತ್ತಿಲ್ಲ,
ಕೇವಲ ಭಾವನಾತ್ಮಕ ಸಮಸ್ಯೆಗಳ ಮೂಲಕ ಓಟ್ ಬ್ಯಾಂಕ್‍ಗೋಸ್ಕರ ಆಲೋಚನೆಯಲ್ಲಿ ಇದ್ದಾರೆ. ಮೂರುವರೆ ಸಾವಿರ ರೈತರು
ಆತ್ಮಹತ್ಯೆ ಮಾಡಿಕೊಂಡಿದ್ದ ಸಿದ್ದರಾಮಯ್ಯ ಅವರು ಭಂಡತನದಿಂದ ಇದ್ದು ನುಡಿದಂತೆ ನಡೆದಿಲ್ಲ ಎಂದು ದೂರಿದರು.

ಭಯೋತ್ಪಾದಕರ ಮಟ್ಟ ಹಾಕಲಿಕ್ಕೆ ದೇಶದ 140 ಕೋಟಿ ಜನ ಕೇಂದ್ರ ಸರ್ಕಾರದ ಜೊತೆಯಲ್ಲಿ ಇದ್ದಾರೆ.ಭಯೋತ್ಪಾದನಾ
ಚಟುವಟಿಕೆಯನ್ನು ತಡೆಗಟ್ಟಲಿಕ್ಕೆ ಪ್ರಮುಖ ದೊಡ್ಡ ದೊಡ್ಡ ರಾಷ್ಟ್ರಗಳು ಭಾರತದ ಜೊತೆ ನಿಲ್ಲುವ ಭರವಸೆಯನ್ನು
ನೀಡಿವೆ.ಪಾಕಿಸ್ತಾನಿಗಳು ನಮ್ಮ ದೇಶದಲ್ಲಿ ಇನ್ನೂ ಉಳಿದಿದ್ದಾರೆ ಅವರನ್ನು ಹೊರ ಹಾಕಲಿಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು
ಬೆಂಗಳೂರು, ಗುಲ್ಬರ್ಗದಂತಹ ದೊಡ್ಡ ದೊಡ್ಡ ನಗರಗಳಲ್ಲಿ ಇನ್ನೂ ಇದ್ದಾರೆ ಎಂಬ ಮಾಹಿತಿಯಿದೆ.. ಅವರನ್ನು ಹೊರ ಹಾಕಬೇಕು
ಹೊರ ಹಾಕಲಿಕ್ಕೆ ರಾಜ್ಯ ಸರ್ಕಾರ ಯಾವುದೇ ಹಿಂದೇಟು ಹಾಕಬಾರದು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಗುತ್ತಾ ಬಂದಿದೆ ಯಾವುದೇ ಜಿಲ್ಲೆಯಲ್ಲಿ ಒಂದೇ ಒಂದು ಪೈಸೆ
ಅಭಿವೃದ್ಧಿ ಕೆಲಸ ಆಗಿಲ್ಲ.ಮುಖ್ಯಮಂತ್ರಿ ಸಿದ್ದರಾಮಯ್ಯರವರು ಭಾವನಾತ್ಮಕ ಸಂಕಷ್ಟ ಗಳನ್ನು ಸೃಷ್ಟಿ ಮಾಡಿ ಓಟ್ ಬ್ಯಾಂಕ್
ಮಾಡಿಕೊಳ್ಳುವ ಆಲೋಚನೆಯಲ್ಲಿದ್ದಾರೆ.ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಕಾನೂನು ಸುವ್ಯಸ್ಥೆ ಹದಗೆಟ್ಟಿದೆ
ಅಧಿಕಾರಿಗಳು, ಗುತ್ತಿಗೆದಾರರು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ.ಕಳೆದ ಎರಡು ವರ್ಷದಿಂದ ರಾಜ್ಯದಲ್ಲಿ 3100 ಜನ ರೈತರು
ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಮೈಕ್ರೋ ಫೈನಾನ್ಸ್‍ನವರ ಸಾಲ ವಸೂಲಾತಿಗೆ ಹೆದರಿ ಜನರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ..
ಆದರೂ ಭಂಡತನದ ಮುಖ್ಯಮಂತ್ರಿಗಳು ನುಡಿದಂತೆ ನಡೆದಿದ್ದೇವೆ ಅಂತ ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ನಿಮ್ಮ ಗ್ಯಾರೆಂಟಿ ಯೋಜನೆಗಳ ಬಗ್ಗೆ ನೀವೇ ಅವಲೋಕನ ಮಾಡಿಕೊಳ್ಳಿ ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ಹಣ ಏಕೆ
ನೀಡಿಲ್ಲ…?ಒಳ ಮೀಸಲಾತಿ ಜಾರಿ ವಿಚಾರವಾಗಿ 01.08.2024 ರಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ… ಆದರೆ
ಮುಖ್ಯಮಂತ್ರಿಗಳು ಜಾರಿ ಮಾಡದೇ ಆಯೋಗ ರಚನೆ ಅಂತ ಹೇಳುತ್ತಿದ್ದಾರೆ.ಕೇಂದ್ರ ಸರ್ಕಾರ ಜನಗಣತಿ ಜೊತೆ ಜಾತಿ ಗಣತಿ
ಮಾಡಲು ನಿರ್ಧರಿಸಿದೆ.. ಆದರೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ನಮ್ಮ ಒತ್ತಡಕ್ಕೆ ಮಣಿದು ಜಾತಿಗಣತಿ
ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಇದು ಸತ್ಯಕ್ಕೆ ದೂರವಾದ ಮಾತು.ಜಾತಿ ಗಣತಿ ಮಾಡುವ ಉದ್ದೇಶ ಈಗಾಗಲೇ
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸಾಗಿರುವುದರಿಂದ ಮಹಿಳೆಯರಿಗೂ ಸಹ ಮೀಸಲಾತಿ ಮತ್ತು ಒಳ ಮೀಸಲಾತಿ
ಕೊಡಬೇಕಾಗಿರುವುದರಿಂದ ಜಾತಿ ಗಣತಿ ಅವಶ್ಯಕತೆಯಿದೆ.ನರೇಂದ್ರ ಮೋದಿಯ ವರು ಕಳೆದ 25 ವರ್ಷದಿಂದ ಕಳಂಕರಹಿತ
ಆಡಳಿತ ನಡೆಸಿದ ಕೆಳ ಸಮುದಾಯದ ನಾಯಕ.. ಇವರಿಂದ ಕೆಳ ಸಮುದಾಯಕ್ಕೆ ಹಾಗೂ ಹಿಂದುಳಿದ ಸಮುದಾಯಕ್ಕೆ ಯಾವುದೇ
ಅನ್ಯಾಯವಾಗುವುದಿಲ್ಲ ಎಂದರು.

ಕಾಂತರಾಜ್ ವರದಿಗೆ ಕಾಂತರಾಜ್ ಹಾಗೂ ಕಮಿಟಿ ಸದಸ್ಯರೇ ಸಹಿ ಮಾಡಿಲ್ಲ. 2023 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ
ಇದೇ ಚಿತ್ರದುರ್ಗ ನಗರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದ
ಸಿದ್ದರಾಮಯ್ಯರವರು ಈಗ ವರದಿಯನ್ನು ಕೆಳಗೆ ಹಾಕಿಕೊಂಡು ಕುಳಿತಿದ್ದಾರೆ.. ಕಾಂಗ್ರೆಸ್ ನವರು ಎರಡು ನಾಲಿಗೆ ನಾಯಕರು
ಅಂಬೇಡ್ಕರ್ ರವರನ್ನು ಸೋಲಿಸಿದ್ದು ಕಾಂಗ್ರೆಸ್ ನವರು.. ಕಾಂಗ್ರೆಸ್ ನವರಿಗೆ ಅಸ್ಪೃಶ್ಯರ ಬಗ್ಗೆ, ಹಿಂದುಳಿದವರ ಬಗ್ಗೆ ಕಳಕಳಿ ಇಲ್ಲ…
ಕಾಂಗ್ರೆಸ್ ಪಕ್ಷಕ್ಕೆ ದಲಿತರನ್ನು ಉದ್ಧಾರ ಮಾಡಲಿಕ್ಕೆ ಆಗಲ್ಲ ಎಂದು ಸಂಸದರು ದೂರಿದರು.

ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ ನವೀನ್ ಮಾತನಾಡಿ ಮೇ.8ರಂದು ನಡೆಯುವ ಜನಾಕೋಶ ಯಾತ್ರೆಯ ಸಂದರ್ಭದಲ್ಲಿ
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಮಂಡನೆ ಮಾಡಲಿದ್ದೇವೆ… ಅಂಬೇಡ್ಕರ್ ರವರ ಭಾವಚಿತ್ರ
ಮೆರವಣಿಗೆಯನ್ನು ಸಹ ಮಾಡಲಿದ್ದೇವೆ.ಅಂಬೇಡ್ಕರ್ ರವರು ಲಕ್ನೋದಲ್ಲಿ ಕಾಂಗ್ರೆಸ್ ಒಂದು ಸುಡುವ ಮನೆ ಅದರಿಂದ ಹೊರಬನ್ನಿ
ಎಂದು ದಲಿತರಿಗೆ ಕರೆ ಕೊಟ್ಟಿದ್ದರು.ಸಿದ್ದರಾಮಯ್ಯರವರು ನಡೆಸಿದ ಜಾತಿ ಗಣತಿ ಬೋಗಸ್ ಜಾತಿ ಗಣತಿ.. ಅದರ ಮೂಲ ವರದಿ
ಕಳೆದು ಹೋಗಿದೆ ಅಂತ ಹೇಳುತ್ತಾರೆ.ಕೇಂದ್ರ ಸರ್ಕಾರದ ನೈಜ ಜಾತಿಗಣತಿ ಹೊರಗೆ ಬಂದರೆ ಸಿದ್ದರಾಮಯ್ಯರವರ ಬಣ್ಣ ಯಾವಾಗ
ಬಯಲಾಗುತ್ತೋ ಅನ್ನುವ ಕಾರಣದಿಂದ ನಮ್ಮ ಒತ್ತಡದಿಂದ ಕೇಂದ್ರ ಸರ್ಕಾರ ಜಾತಿಗಣತಿ ಮಾಡಲು ಹೊರಟಿದೆ ಅಂತ
ಹೇಳುತ್ತಿದ್ದಾರೆ..ಬಿಜೆಪಿ ಪಕ್ಷವು ಜಾತಿ ಗಣತಿ ಮಾಡುವಂತೆ ಹೋರಾಟ ಮಾಡುತ್ತಾ ಬಂದಿದೆ.. ಆದರೆ ಸಿದ್ದರಾಮಯ್ಯನವರ ವರದಿಯ
ಬಗ್ಗೆ ವಿರೋಧವಿದೆ.ರಾಜ್ಯದಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಕೊಲೆಯಾಗಿದೆ… ಮತ್ತೆ ಇಬ್ಬರಿಗೆ ಕೊಲೆಯ ಬೆದರಿಕೆ
ಬಂದಿದೆ. ಮುಖ್ಯಮಂತ್ರಿಗಳಿಗೆ ಕೊಲೆ ಆದವರ ಬಗ್ಗೆ ಇರಬೇಕಾದ ಅನುಕಂಪಕ್ಕಿಂತ ಕೊಲೆ ಮಾಡಿದವರ ಬಗ್ಗೆ ಅನುಕಂಪ ಜಾಸ್ತಿಯಿದೆ
ಎಂದು ಟೀಕಿಸಿದರು.

ಈ ಸರ್ಕಾರ ಬಂದಾಗಿನಿಂದ ನಿರಂತರವಾಗಿ ಹಿಂದೂ ಕಾರ್ಯಕರ್ತರ ಕೊಲೆ ನಡೆಯುತ್ತಿದೆ.ರಾಜ್ಯದ ಪೊಲೀಸರಿಗೆ ಸ್ವತಂತ್ರವಾಗಿ
ಕೆಲಸ ಮಾಡಲು ಬಿಡಿ.ಈ ಸರ್ಕಾರ ಬಂದಾಗಿನಿಂದ 16 ಸಾವಿರ ರೌಡಿ ಶೀಟರ್ ಗಳ ರೌಡಿ ಶೀಟ್ ಗಳನ್ನು ವಾಪಾಸ್ ಪಡೆದಿದ್ದಾರೆ..ನಾನು ರಾಜ್ಯದ ಜಿಲ್ಲಾವಾರು ರೌಡಿಶೀಟರ್ ಗಳ ಮಾಹಿತಿಯನ್ನು ಕೊಡಿ ಎಂದು ಈಗಾಗಲೇ ಸಭಾಧ್ಯಕ್ಷರ ಮೂಲಕ ಮನವಿ ಮಾಡಿದ್ದೇನೆ.

ಇದೇ ತಿಂಗಳು 8 ನೇ ತಾರೀಕು ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಚಿತ್ರದುರ್ಗಕ್ಕೆ ಜನಾಕ್ರೋಶ ಯಾತ್ರೆ ಆಗಮಿಸಲಿದೆ. ರಾಜ್ಯ
ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆಯನ್ನು ಕೈಗೊಂಡಿದ್ದೆವು.. ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದನಾ ದಾಳಿಯಿಂದ
ಯಾತ್ರೆಯನ್ನು ಮುಂದೂಡಿದ್ದೆವು.ದಿನಾಂಕ: 08.05.2025 ರಂದು ಜನಾಕ್ರೋಶ ಯಾತ್ರೆಯನ್ನು ಪ್ರಾರಂಭ ಮಾಡಲಿದ್ದೇವೆ..
ಯಾತ್ರೆಯು ತುಮಕೂರಿನಿಂದ ಪ್ರಾರಂಭವಾಗಲಿದ್ದು ದಿನಾಂಕ:08.05.2025 ರಂದು ಮಧ್ಯಾಹ್ನ 3-00 ಗಂಟೆಗೆ ಚಿತ್ರದುರ್ಗ ನಗರಕ್ಕೆ
ಆಗಮಿಸಲಿದೆ.ಯಾತ್ರೆಯು ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಎಂ.ಜಿ ಸರ್ಕಲ್, ಎಸ್.ಬಿ.ಐ ಸರ್ಕಲ್,
ಪ್ರವಾಸಿ ಮಂದಿರದ ಮುಖಾಂತರ ಒಬವ್ವ ಸರ್ಕಲ್ ಗೆ ಬಂದು ವೇದಿಕೆ ಕಾರ್ಯಕ್ರಮ ಮಾಡಲಿದ್ದೇವೆ.ಸದರಿ ಯಾತ್ರೆಯಲ್ಲಿ ಬಿಜೆಪಿ
ಪಕ್ಷದ ರಾಜ್ಯಾಧ್ಯಕ್ಷರಾದ ಬಿ. ವೈ ವಿಜಯೇಂದ್ರ, ವಿಧಾನ ಸಭೆಯ ವಿರೋಧ ಪಕ್ಷ ನಾಯಕರಾದ ಆರ್. ಅಶೋಕ, ಮಾಜಿ ಸಚಿವರಾದ
ಶ್ರೀರಾಮುಲು, ವಿಧಾನ ಪರಿಷತ್ತಿನ ವಿರೋಧಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ ರವರುಗಳು ಭಾಗವಹಿಸಲಿದ್ದಾರೆ.

ಗೋಷ್ಟಿಯಲ್ಲಿ ಮಾಜಿ ಶಾಸಕರಾದ ಜಿಎಚ್.ತಿಪ್ಪಾರೆಡ್ಡಿ, ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಪ್ರಧಾನ ಕಾರ್ಯದರ್ಶಿ
ಸಂಪತ್ ಕುಮಾರ್, ಸುರೇಶ್ ಸಿದ್ದಾಪುರ, ರಾಮದಾಸ್, ಬಿಜೆಪಿ ಮುಖಂಡರಾದ ಗುಂಡಾರ್ಪಿ ಸಿದ್ದಾರ್ಥ್, ಜೈಪಾಲಯ್ಯ,
ವೆಂಕಟೇಶ್ ಯಾದವ್, ನಾಗರಾಜ್ ಬೇದ್ರೆ, ರಾಮರೆಡ್ಡಿ, ಶೈಲೇಶ್ ಶ್ರೀರಾಮ್ ರೆಡ್ಡಿ ಜಿಂಕಲ್ ಬಸವರಾಜ್ ಯಶವಂತ್ ಕಿರಣ್
ಉಪಸ್ಥಿತರಿದ್ದರು

Leave a Reply

Your email address will not be published. Required fields are marked *