ಕೇಂದ್ರ ಸರ್ಕಾರದ ಗಡಿ ಭದ್ರತಾ ಪಡೆ (Border Security Force – BSF) ಕ್ರೀಡಾ ಕೋಟಾದಡಿ 549 ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. 10ನೇ ತರಗತಿ ಉತ್ತೀರ್ಣರಾಗಿದ್ದು, ಅಂತರರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಪದಕ ಗಳಿಸಿರುವ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ ನಡೆಯುವ ಈ ನೇಮಕಾತಿ ಕ್ರೀಡಾಪಟುಗಳಿಗೆ ಉತ್ತಮ ಸರ್ಕಾರಿ ಉದ್ಯೋಗದ ಸುವರ್ಣಾವಕಾಶವಾಗಿದೆ.
ಖಾಲಿ ಹುದ್ದೆಗಳ ವಿವರ
- ಒಟ್ಟು ಹುದ್ದೆಗಳು: 549
- ಪುರುಷರು: 277
- ಮಹಿಳೆಯರು: 272
ಶೈಕ್ಷಣಿಕ ಮತ್ತು ಕ್ರೀಡಾ ಅರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು. ಜೊತೆಗೆ ಕಳೆದ ಎರಡು ವರ್ಷಗಳಲ್ಲಿ ಅಥ್ಲೆಟಿಕ್ಸ್, ಬಾಕ್ಸಿಂಗ್, ಬ್ಯಾಸ್ಕೆಟ್‌ಬಾಲ್, ವಾಲಿಬಾಲ್, ಫುಟ್‌ಬಾಲ್, ಹಾಕಿ, ಈಜು, ಶೂಟಿಂಗ್, ಜೂಡೋ, ಕರಾಟೆ, ಕುಸ್ತಿ, ವೇಟ್‌ಲಿಫ್ಟಿಂಗ್, ಟೇಬಲ್ ಟೆನ್ನಿಸ್, ಬಿಲ್ಲುಗಾರಿಕೆ, ಬ್ಯಾಡ್ಮಿಂಟನ್, ಸೈಕ್ಲಿಂಗ್, ಜಲಕ್ರೀಡೆ, ವುಶು ಸೇರಿದಂತೆ ಯಾವುದೇ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕ ಗೆದ್ದಿರಬೇಕು.
ವಯೋಮಿತಿ
- ಗರಿಷ್ಠ ವಯಸ್ಸು: 23 ವರ್ಷ
- ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ
- ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ
ದೈಹಿಕ ಮಾನದಂಡಗಳು
- ಪುರುಷರು: ಎತ್ತರ 170 ಸೆಂ.ಮೀ., ಎದೆ 80 ಸೆಂ.ಮೀ. (5 ಸೆಂ.ಮೀ. ವಿಸ್ತರಣೆ)
- ಮಹಿಳೆಯರು: ಎತ್ತರ 157 ಸೆಂ.ಮೀ.
- ಎತ್ತರ ಮತ್ತು ತೂಕ ವಯಸ್ಸಿಗೆ ಅನುಗುಣವಾಗಿರಬೇಕು
ಅರ್ಜಿ ಶುಲ್ಕ
- ಸಾಮಾನ್ಯ ಅಭ್ಯರ್ಥಿಗಳು: ರೂ.159
- ಎಸ್‌ಸಿ / ಎಸ್‌ಟಿ / ಮಹಿಳೆಯರು: ಅರ್ಜಿ ಶುಲ್ಕವಿಲ್ಲ
ಆಯ್ಕೆ ಪ್ರಕ್ರಿಯೆ
ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇಲ್ಲ. ಅಭ್ಯರ್ಥಿಗಳನ್ನು ದೈಹಿಕ ಮಾನದಂಡ ಪರೀಕ್ಷೆ (PST) ಮತ್ತು ಕ್ರೀಡಾ ಅರ್ಹತೆಯ ಆಧಾರದ ಮೇಲೆ ನೇರವಾಗಿ ಆಯ್ಕೆ ಮಾಡಲಾಗುತ್ತದೆ.
ವೇತನ
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.21,700 ರಿಂದ ರೂ.69,100 ವರೆಗೆ ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಅರ್ಹ ಅಭ್ಯರ್ಥಿಗಳು ಜನವರಿ 1ರೊಳಗೆ BSF ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದುವುದು ಕಡ್ಡಾಯ.
Views: 24