ಬೆಂಗಳೂರು, ಡಿ.17:
ರಾಯಚೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆ ಹೊರಗುತ್ತಿಗೆ ಆಧಾರದಲ್ಲಿ ನಡೆಯಲಿದ್ದು, ಒಟ್ಟು 9 ಹುದ್ದೆಗಳು ಲಭ್ಯವಿವೆ.
ಖಾಲಿ ಇರುವ ಹುದ್ದೆಗಳು:
- ತಾಂತ್ರಿಕ ಸಂಯೋಜಕರು – 2
- ತಾಲೂಕು ಎಂಐಎಸ್ ಸಂಯೋಜಕರು – 2
- ಆಡಳಿತ ಸಹಾಯಕರು – 3
- ಕಂಪ್ಯೂಟರ್ ನಿರ್ವಾಹಕರು – 2
ವಿದ್ಯಾರ್ಹತೆ:
ತಾಂತ್ರಿಕ ಸಂಯೋಜಕರು ಮತ್ತು ತಾಲೂಕು ಎಂಐಎಸ್ ಸಂಯೋಜಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಬೋರ್ಡ್‌ನಿಂದ ಬಿ.ಇ / ಬಿಟೆಕ್ / ಬಿಸಿಎ / ಬಿಎಸ್ಸಿ ಪದವಿ ಹೊಂದಿರಬೇಕು.
ಆಡಳಿತ ಸಹಾಯಕರ ಹುದ್ದೆಗೆ ವಾಣಿಜ್ಯ ವಿಷಯದಲ್ಲಿ ಪದವಿ ಜೊತೆಗೆ ಕನ್ನಡ ಹಾಗೂ ಇಂಗ್ಲಿಷ್ ಟೈಪಿಂಗ್ ಜ್ಞಾನ ಕಡ್ಡಾಯ.
ಕಂಪ್ಯೂಟರ್ ನಿರ್ವಾಹಕರು ಹುದ್ದೆಗೆ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ಮತ್ತು ಕನ್ನಡ–ಇಂಗ್ಲಿಷ್ ಟೈಪಿಂಗ್ ಕೌಶಲ್ಯ ಅಗತ್ಯ.
ವೇತನ ವಿವರ:
- ತಾಂತ್ರಿಕ ಸಂಯೋಜಕರು – ಮಾಸಿಕ ₹33,000 + ₹2,000 ಪ್ರಯಾಣ ಭತ್ಯೆ
- ತಾಲೂಕು ಎಂಐಎಸ್ ಸಂಯೋಜಕರು – ಮಾಸಿಕ ₹28,000
- ಆಡಳಿತ ಸಹಾಯಕರು – ಮಾಸಿಕ ₹22,000
- ಕಂಪ್ಯೂಟರ್ ನಿರ್ವಾಹಕರು – ಮಾಸಿಕ ₹18,480
ವಯೋಮಿತಿ:
ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಗರಿಷ್ಠ ವಯೋಮಿತಿ 40 ವರ್ಷ ಮೀರಿರಬಾರದು.
ಅರ್ಜಿ ಸಲ್ಲಿಕೆ ವಿಧಾನ:
ಅರ್ಜಿ ಸಲ್ಲಿಕೆ ಪ್ರಕ್ರಿಯೆ ನವೆಂಬರ್ 20ರಿಂದ ಆರಂಭವಾಗಿದ್ದು, ಡಿಸೆಂಬರ್ 24 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಜಿಲ್ಲಾಡಳಿತದ ಅಧಿಕೃತ ಜಾಲತಾಣದ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ನರೇಗಾ ಯೋಜನೆಯಡಿ ಸರ್ಕಾರಿ ಉದ್ಯೋಗಾವಕಾಶ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಆಸಕ್ತರು ಅರ್ಹತಾ ನಿಯಮಗಳನ್ನು ಪರಿಶೀಲಿಸಿ ಸಮಯದೊಳಗೆ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಮನವಿ ಮಾಡಿದೆ.
Views: 93