GST Update: ದೇಶದೆಲ್ಲೆಡೆ ಶೀಘ್ರದಲ್ಲೇ ಹಬ್ಬದ ಸೀಸನ್ ಶೀಘ್ರದಲ್ಲಿಯೇ ಆರಂಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ತುಪ್ಪ, ಬೆಣ್ಣೆ ಮೇಲಿನ ತೆರಿಗೆ ಕಡಿತದಿಂದ ಹಬ್ಬಗಳ ಸಂಭ್ರಮ ಹೆಚ್ಚಾಗಲಿದೆ ಎನ್ನಲಾಗಿದೆ.

GST Update: ಟೊಮೇಟೊ, ಹಸಿರು ತರಕಾರಿಗಳ ಬೆಲೆಯಲ್ಲಿನ ಭಾರಿ ಏರಿಕೆಯಿಂದ ಕಂಗೆಟ್ಟಿರುವ ಶ್ರೀಸಾಮಾನ್ಯರ ಪಾಲಿಗೆ ಮುಂದಿನ ದಿನಗಳಲ್ಲಿ ನೆಮ್ಮದಿಯ ಸುದ್ದಿ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಅದೂ ಹಬ್ಬ ಹರಿದಿನಗಳು ಆರಂಭವಾಗುತ್ತಿರುವ ಹೊಸ್ತಿಲಲ್ಲಿ. ಮುಂದಿನ ದಿನಗಳಲ್ಲಿ ತುಪ್ಪ, ಬೆಣ್ಣೆ ಬೆಲೆಯಲ್ಲಿ ಗಣನೀಯ ಇಳಿಕೆಯಾಗುವ ಸಾಧ್ಯತೆ ಇದೆ. ಹಬ್ಬ ಹರಿದಿನಗಳಲ್ಲಿ (Business News In Kannada) ಈ ಎರಡನ್ನೂ ಪ್ರತಿ ಮನೆಯಲ್ಲೂ ವ್ಯಾಪಕವಾಗಿ ಬಳಸಲಾಗುತ್ತದೆ.
ಪ್ರಸ್ತುತ ಈ ತೆರಿಗೆ ಅನ್ವಯಿಸುತ್ತದೆ
ವಾಸ್ತವದಲ್ಲಿ, ಸರ್ಕಾರ ಸರಕು ಮತ್ತು ಸೇವಾ ತೆರಿಗೆ ದರಗಳನ್ನು ಅಂದರೆ ತುಪ್ಪ ಮತ್ತು ಬೆಣ್ಣೆಯ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಲು ಪ್ರಸ್ತಾಪಿಸಲಿದೆ. ಮಿಂಟ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಸರ್ಕಾರವು ಶೀಘ್ರದಲ್ಲೇ ಇಂತಹ ಪ್ರಸ್ತಾಪವನ್ನು ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಸ್ತುತ ತುಪ್ಪ ಮತ್ತು ಬೆಣ್ಣೆ ಎರಡಕ್ಕೂ ಶೇ.12-12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಅದನ್ನು ಶೇ.5-5ಕ್ಕೆ ಇಳಿಸಲು ಕೇಂದ್ರ ಸರ್ಕಾರ ಮುಂದಾಗಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಹಬ್ಬ ಹರಿದಿನಗಳ ಸಂಭ್ರಮ ಹೆಚ್ಚಾಗಲಿದೆ
ಇದು ಒಂದು ವೇಳೆ ಕಾರ್ಯರೂಪಕ್ಕೆ ಬಂದರೆ ಸಾಮಾನ್ಯ ಜನರಿಗೆ ಹೆಚ್ಚಿನ ಪರಿಹಾರವನ್ನು ಸಿಗಲಿದೆ. ದೇಶದಲ್ಲಿ ಶೀಘ್ರದಲ್ಲೇ ಹಬ್ಬದ ಸೀಸನ್ ಪ್ರಾರಂಭವಾಗಲಿದ್ದು, ಡಿಸೆಂಬರ್ ಅಂತ್ಯದವರೆಗೆ ಮುಂದುವರೆಯಲಿದೆ. ಹಬ್ಬ ಹರಿದಿನಗಳಲ್ಲಿ ಪ್ರತಿ ಮನೆಯಲ್ಲೂ ಬಗೆಬಗೆಯ ಸಿಹಿ ಪದಾರ್ಥಗಳನ್ನು, ಆಹಾರ ಪದಾರ್ಥಗಳನ್ನು ತಯಾರಿಸುತ್ತಾರೆ, ಅವುಗಳಲ್ಲಿ ತುಪ್ಪ, ಬೆಣ್ಣೆಯನ್ನು ಹೆಚ್ಚು ಬಳಸಲಾಗುತ್ತದೆ. ಹೀಗಿರುವಾಗ ಅವುಗಳ ಬೆಲೆ ಕಡಿಮೆಯಾದರೆ ಜನ ಸಾಮಾನ್ಯರಿಗೆ ಹಬ್ಬ ಹರಿದಿನಗಳ ಖುಷಿ ಹೆಚ್ಚಾಗಲಿದೆ.
ಹಣದುಬ್ಬರದ ಹೊಡೆತಕ್ಕೆ ತತ್ತರಿಸಿದ ಜನ
ಜನಸಾಮಾನ್ಯರು ಪ್ರಸ್ತುತ ಹಣದುಬ್ಬರದಿಂದ ಬಳಲುತ್ತಿದ್ದು ಈ ಬೆಳವಣಿಗೆ ಅವರಿಗೆ ಕೊಂಚ ನೆಮ್ಮದಿಯನ್ನು ನೀಡಲಿದೆ. ಚಿಲ್ಲರೆ ಹಣದುಬ್ಬರದ ದರ ಸುಮಾರು ಒಂದೂವರೆ ವರ್ಷಗಳ ಕಾಲ ಹೆಚ್ಚೇ ಇತ್ತು. ಟೊಮ್ಯಾಟೊ ಮತ್ತು ಹಸಿರು ತರಕಾರಿಗಳ ಬೆಲೆಗಳು ರಾಕೆಟ್ ರೀತಿಯಲ್ಲಿ ಗಗನಕ್ಕೆರಿವೆ. ಆದರೆ ಸರ್ಕಾರ ಅವುಗಳನ್ನು ನಿಯಂತ್ರಿಸಲು ಯತ್ನಿಸುತ್ತಿದೆ. ಮತ್ತೊಂದೆಡೆ ಹಾಲಿನ ದರ ನಿರಂತರವಾಗಿ ಏರಿಕೆಯಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಹಾಲು ಶೇ.10.1ರಷ್ಟು ಮತ್ತು ಮೂರು ವರ್ಷಗಳಲ್ಲಿ ಶೇ.21.9ರಷ್ಟು ದುಬಾರಿಯಾಗಿದೆ. ಇದರಿಂದ ಜನ ಸಾಮಾನ್ಯರ ಅಡುಗೆ ಮನೆಯ ಬಜೆಟ್ ಕೂಡ ಹಾಳಾಗಿದೆ.
ಈ ಇಲಾಖೆಯ ಮನವಿ
ಮಿಂಟ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ತುಪ್ಪ ಮತ್ತು ಬೆಣ್ಣೆಯ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಲು ವಿನಂತಿಸಿದೆ. ಜಿಎಸ್‌ಟಿ ಫಿಟ್‌ಮೆಂಟ್ ಸಮಿತಿಯ ಮುಂದೆ ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಇಲಾಖೆಯು ಹಣಕಾಸು ಸಚಿವಾಲಯವನ್ನು ಕೋರಿದೆ. ಅದರ ನಂತರ ಪ್ರಸ್ತಾವನೆಯನ್ನು ಜಿಎಸ್‌ಟಿ ಕೌನ್ಸಿಲ್‌ನ ಮುಂದೆ ಇರಿಸಬಹುದು, ಇದು ದರಗಳಿಗೆ ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿನ ಬದಲಾವಣೆಗಳನ್ನು ನಿರ್ಧರಿಸುವ ಉನ್ನತ ಸಂಸ್ಥೆಯಾಗಿದೆ.
Views: 0