GT vs CSK, Weather Update: ಗುಜರಾತ್-ಚೆನ್ನೈ ಕ್ವಾಲಿಫೈಯರ್-1 ಪಂದ್ಯ ಮಳೆಯಿಂದ ರದ್ದಾದರೆ ಮೀಸಲು ದಿನವಿಲ್ಲ: ಫಲಿತಾಂಶ ಹೇಗೆ?

ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಲೀಗ್ ಹಂತದ ಎಲ್ಲ ಪಂದ್ಯಗಳು ಮುಕ್ತಾಯಗೊಂಡಿದ್ದು, ಗುಜರಾತ್, ಚೆನ್ನೈ, ಲಖನೌ ಮತ್ತು ಮುಂಬೈ ತಂಡಗಳು ಪ್ಲೇ ಆಫ್​ಗೆ ಕ್ವಾಲಿಫೈ ಆಗಿದೆ.ಇಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಎಂಎಸ್ ಧೋನಿ ಅವರ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ.ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್​ಗೆ ಲಗ್ಗೆಯಿಟ್ಟರೆ ಸೋತ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ಟೀಮ್​ನೊಂದಿಗೆ ಸೆಣೆಸಾಟ ನಡೆಸಲಿದೆ. ಹೀಗೆ ಸಾಕಷ್ಟು ಮಹತ್ವದ ಪಡೆದುಕೊಂಡಿರುವ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ?.ಜಿಟಿ-ಸಿಎಸ್​ಕೆ ಪಂದ್ಯಕ್ಕೆ ಚೆನ್ನೈನಲ್ಲಿ ಮಳೆ ಬೀಳುವ ಸಾಧ್ಯತೆಗಳು ಇಲ್ಲವಾದರೂ, ಎಲ್ಲಾದರು ಮಳೆ ಬಂದರೆ ಸೂಪರ್ ಓವರ್ ನಡೆಸಿ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಎಲ್ಲಾ ಪ್ಲೇ-ಆಫ್‌ಗಳು ಮತ್ತು ಫೈನಲ್‌ ಪಂದ್ಯಗಳಿಗೆ ಕೂಡ ಈ ನಿಯಮ ಅನ್ವಯಿಸುತ್ತದೆ.ಒಂದುವೇಳೆ ಮಳೆ ನಿಲ್ಲದೆ ಸೂಪರ್ ಓವರ್‌ ಕೂಡ ನಡೆಸಲು ಸಾಧ್ಯವಾಗಿಲ್ಲ ಎಂದಾದಲ್ಲಿ, ಲೀಗ್ ಅಂಕಗಳು ವಿಜೇತರನ್ನು ನಿರ್ಧರಿಸುತ್ತವೆ. ಇದು ಕೂಡ ಎಲ್ಲಾ ಪ್ಲೇ-ಆಫ್ ಪಂದ್ಯಗಳಿಗೆ ಅನ್ವಯಿಸುತ್ತದೆ. ಕ್ವಾಲಿಫೈಯರ್ 1, ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಯಾವುದೇ ಮೀಸಲು ದಿನಗಳನ್ನು ಹೊಂದಿಲ್ಲ.ಎಲ್ಲಾದರು ಇಂದಿನ ಜಿಟಿ ಹಾಗೂ ಚೆನ್ನೈ ಪಂದ್ಯಕ್ಕೆ ಮಳೆ ಬಂದು ಸೂಪರ್ ಓವರ್ ಕೂಡ ನಡೆಸಲು ಆಗಿಲ್ಲವಾದರೆ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ತಂಡ ಫೈನಲ್​ಗೆ ಎಂಟ್ರಿ ಕೊಡಲಿದೆ.

source https://tv9kannada.com/photo-gallery/cricket-photos/ipl-2023-qualifier-1-match-no-reserve-day-if-gt-vs-csk-qualifier-1-match-canceled-due-to-rain-kannada-news-vb-585022.html

Leave a Reply

Your email address will not be published. Required fields are marked *