

ಐಪಿಎಲ್ 2023 ರಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮತ್ತೊಮ್ಮೆ ಮುಖಾಮುಖಿಯಾಗಿವೆ. ಇದು ಈ ಸೀಸನ್ನಲ್ಲಿ ಎರಡೂ ತಂಡಗಳ ಎರಡನೇ ಪಂದ್ಯವಾಗಿದ್ದು ಎರಡೂ ತಂಡಗಳಿಗೂ ಬಹಳ ಮಹತ್ವದ್ದಾಗಿದೆ. ಗುಜರಾತ್ ತಂಡವು ಈ ಪಂದ್ಯದ ಗೆಲುವಿನೊಂದಿಗೆ ಪ್ಲೇಆಫ್ ಟಿಕೆಟ್ ಅನ್ನು ಬಹುತೇಕ ಖಚಿತಪಡಿಸಿಕೊಳ್ಳಲು ಬಯಸುತ್ತಿದೆ. ಮತ್ತೊಂದೆಡೆ, ಲಕ್ನೋ ತಂಡ ಸೋಲಿನ ಸರಣಿಯಿಂದ ಹೊರಬರಲು ಪ್ರಯತ್ನಿಸಲಿದೆ.