IPL 2023: 400 ರನ್ ನೀಡಿದ ಹರ್ಷಲ್ ಪಟೇಲ್

IPL 2023: ಹೈದರಾಬಾದ್​ನಲ್ಲಿ ನಡೆದ ಐಪಿಎಲ್​ನ 65ನೇ ಪಂದ್ಯದಲ್ಲೂ ಆರ್​ಸಿಬಿ ವೇಗಿ ಹರ್ಷಲ್ ಪಟೇಲ್ ದುಬಾರಿಯಾಗಿದ್ದಾರೆ. ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು.ಅದರಂತೆ ಮೊದಲ ಓವರ್​ನಲ್ಲಿ ಮಾರಕ ದಾಳಿ ಸಂಘಟಿಸುವ ಮೂಲಕ ಮೊಹಮ್ಮದ್ ಸಿರಾಜ್ ಆರ್​ಸಿಬಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಇನ್ನು ವೇಯ್ನ್ ಪಾರ್ನೆಲ್ 2ನೇ ಓವರ್​ನಲ್ಲಿ ನೀಡಿದ್ದು ಕೇವಲ 5 ರನ್. ಅದರಂತೆ ಎಸ್​ಆರ್​ಹೆಚ್ ತಂಡವು ಮೊದಲೆರಡು ಓವರ್​ಗಳಲ್ಲಿ ಕೇವಲ 7 ರನ್​ ಮಾತ್ರ ಗಳಿಸಿದ್ದರು.
ಇನ್ನು ಐದನೇ ಓವರ್​ ವೇಳೆ ದಾಳಿಗಿಳಿದ ಮೈಕೆಲ್ ಬ್ರೇಸ್​ವೆಲ್ 6 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದ್ದರು. ಆದರೆ ಆ ನಂತರ ಶಹಬಾಝ್ ಅಹ್ಮದ್ ಒಂದೇ ಓವರ್​ನಲ್ಲಿ 16 ರನ್ ಚಚ್ಚಿಸಿಕೊಂಡರು.
ಇದಾದ ಬಳಿಕ ದಾಗಿಳಿದ ಅನುಭವಿ ವೇಗಿ ಹರ್ಷಲ್ ಪಟೇಲ್ ತಮ್ಮ ಮೊದಲ ಓವರ್​ನಲ್ಲಿ 9 ರನ್ ನೀಡಿದರು. ಹಾಗೆಯೇ 2ನೇ ಓವರ್​ನಲ್ಲಿ ಕೇವಲ 5 ರನ್ ಮಾತ್ರ ನೀಡಿ ಮತ್ತೆ ಲಯಕ್ಕೆ ಬಂದಿದ್ದರು. ಇನ್ನು 16ನೇ ಓವರ್​ನಲ್ಲಿ ನೀಡಿದ್ದು 8 ರನ್ ಮಾತ್ರ.ಆದರೆ 19ನೇ ಓವರ್​ನಲ್ಲಿ 15 ರನ್​ ಚಚ್ಚಿಸಿಕೊಳ್ಳುವ ಮೂಲಕ ಹರ್ಷಲ್ ಪಟೇಲ್ ಮತ್ತೆ ದುಬಾರಿಯಾದರು. ಅಲ್ಲದೆ 4 ಓವರ್​ಗಳಲ್ಲಿ 37 ರನ್ ನೀಡಿ 1 ವಿಕೆಟ್ ಪಡೆದರು.

source https://tv9kannada.com/photo-gallery/cricket-photos/harshal-patel-conducted-400-runs-in-ipl-2023-kannada-news-zp-581940.html

Views: 0

Leave a Reply

Your email address will not be published. Required fields are marked *