ಕಪ್ಪು ಟೊಮೆಟೊ ಕ್ಯಾನ್ಸರ್‌ನಿಂದ ನೀಡುತ್ತೆ ಮುಕ್ತಿ, ನೀವು ಎಂದಾದರೂ ತಿಂದಿದ್ದೀರಾ?

Black Tomato: ಅನೇಕ ಜನರು ಕೆಂಪು ಟೊಮೆಟೊಗಳನ್ನು ನೋಡಿರುತ್ತಾರೆ. ಆದರೆ ಇಂದು ನಾವು ನಿಮಗೆ ಕಪ್ಪು ಟೊಮೆಟೊಗಳನ್ನು ತೋರಿಸಲಿದ್ದೇವೆ. ಇವುಗಳನ್ನು ಆಹಾರದಲ್ಲಿ ಸೇವಿಸುವುದರಿಂದ ದೇಹಕ್ಕೆ ಹಲವಾರು ಲಾಭಗಳು ದೊರೆಯುತ್ತವೆ. ಇದಲ್ಲದೇ ಕ್ಯಾನ್ಸರ್ ನಿಂದ ಮುಕ್ತಿಯೂ ದೊರೆಯುತ್ತದೆ.  

Black Tomato Health Benefits : ಟೊಮೆಟೊ ಬೆಲೆ ಗಗನಕ್ಕೇರಿರುವುದು ಎಲ್ಲರಿಗೂ ಗೊತ್ತು. ಬೆಲೆ ಕೊಟ್ಟರೂ ಖರೀದಿಸಿ ತಿನ್ನುವುದು ನಿಶ್ಚಿತ. ಏಕೆಂದರೆ ಟೊಮೆಟೊದೊಂದಿಗೆ ಹಾಕಿ ಮಾಡಿದ ಆಹಾರಗಳು ಬಾಯಿಗೆ ಹೆಚ್ಚು ರುಚಿಯನ್ನು ನೀಡುತ್ತವೆ. ಮಾರುಕಟ್ಟೆಯಲ್ಲಿ ಕೆಂಪು ಟೊಮೆಟೊವನ್ನು ಹೆಚ್ಚಾಗಿ ನೋಡುತ್ತೇವೆ. ಆದರೆ ನೀವು ಹಿಂದೆಂದೂ ನೋಡಿರದ ಬಣ್ಣದ ಟೊಮೆಟೊವನ್ನು ಇಂದು ನಾವು ನಿಮಗೆ ತೋರಿಸಲಿದ್ದೇವೆ. ಇದಲ್ಲದೆ, ನಾವು ಇದರ ಪ್ರಯೋಜನಗಳನ್ನು ಸಹ ವಿವರಿಸಲಿದ್ದೇವೆ.

ನೀವು ಆಗಾಗ್ಗೆ ಕೆಂಪು ಟೊಮೆಟೊಗಳನ್ನು ನೋಡುತ್ತೀರಿ. ಕಪ್ಪು ಟೊಮೆಟೊಗಳನ್ನು ಎಂದಾದರೂ ನೋಡಿದ್ದೀರಾ? ಈಗ ಮಾರುಕಟ್ಟೆಗಳಲ್ಲಿ ಕಪ್ಪು ಬಣ್ಣದ ಟೊಮೆಟೊ ಲಭ್ಯವಿದೆ. ಇವುಗಳನ್ನು ಸೇವಿಸುವುದರಿಂದ ದೇಹಕ್ಕೆ ಹಲವಾರು ಲಾಭಗಳು ಸಿಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು.

ಈ ಕಪ್ಪು ಟೊಮೆಟೊಗಳನ್ನು ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ ಎಂದು ವರದಿಯಾಗಿದೆ. ಇದರ ಬೀಜಗಳು ಸಹ ಕಪ್ಪು ಬಣ್ಣದಲ್ಲಿರುತ್ತವೆ. ಇವುಗಳನ್ನು ನಿಯಮಿತವಾಗಿ ಆಹಾರದಲ್ಲಿ ಸೇವಿಸುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳನ್ನು ತರುತ್ತದೆ. ಅದರಲ್ಲೂ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವವರು ಈ ಟೊಮೆಟೊದಿಂದ ತಯಾರಿಸಿದ ಆಹಾರಗಳನ್ನು ಪ್ರತಿದಿನ ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಜೊತೆಗೆ, ಇದು ಪೌಷ್ಟಿಕಾಂಶದಿಂದ ಸಮೃದ್ಧವಾಗಿದೆ.

ಸದ್ಯ ಟೊಮೆಟೊ ಬೆಲೆಯಲ್ಲಿ ಭಾರೀ ಏರಿಕೆಯಾಗಿರುವುದರಿಂದ ಈ ಕಪ್ಪು ಟೊಮೆಟೊ ಬೆಲೆಯೂ ಯಾರೂ ನಿರೀಕ್ಷಿಸದ ಪ್ರಮಾಣದಲ್ಲಿ ಏರಿಕೆಯಾಗಿದೆ. ಇವುಗಳನ್ನು ಬೆಳೆದ ರೈತರು ತುಂಬಾ ಖುಷಿಯಾಗಿದ್ದಾರೆ. ಆದರೆ, ಕೆಲವೆಡೆ ಟೊಮೆಟೊ ಬೆಲೆ ದುಬಾರಿಯಾಗಿದ್ದರಿಂದ ಜನ ಕೊಂಡುಕೊಳ್ಳುತ್ತಿಲ್ಲ. 

ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಸಮಗ್ರ ಸುದ್ದಿ ಅದನ್ನು ಖಚಿತಪಡಿಸುವುದಿಲ್ಲ. 

Source: https://zeenews.india.com/kannada/health/black-tomato-has-many-health-benefits-148092

Leave a Reply

Your email address will not be published. Required fields are marked *