Health Benefits of Garlic: ಹಲವಾರು ಕಾಯಿಲೆಗಳಿಗೆ ಬೆಳ್ಳುಳ್ಳಿ ರಾಮಬಾಣ!

Health Benefits of Garlic: ಬೆಳಗ್ಗೆ ಎದ್ದಕೂಡಲೇ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಹೃದಯ ಸಂಬಂಧಿ ರೋಗಗಳಿಂದ ದೂರವಿರಬಹುದು. ಕೊಲೆಸ್ಟ್ರಾಲ್ ಇಳಿಕೆಗೆ ಇದು ತುಂಬಾ ಸಹಾಯ ಮಾಡುತ್ತದೆ.

ನವದೆಹಲಿ: ಪ್ರತಿದಿನವೂ ಬೆಳ್ಳುಳ್ಳಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆದುಕೊಳ್ಳಬಹುದು. ಹಲವಾರು ರೋಗಗಳಿಗೆ ರಾಮಬಾಣವಾಗಿ ಬೆಳ್ಳುಳ್ಳಿ ಕೆಲಸ ಮಾಡುತ್ತದೆ. ತಜ್ಞರ ಪ್ರಕಾರ ಖಿನ್ನತೆಯಂತಹ ರೋಗಗಳನ್ನು ಜಯಿಸಲು ಬೆಳ್ಳುಳ್ಳಿ ಸಹಕಾರಿಯಾಗಿದೆ. ಮೂಲ್ಯವ್ಯಾಧಿ, ಮಲಬದ್ಧತೆ, ಕಿವಿನೋವು, ರಕ್ತದೊತ್ತಡ ಇತ್ಯಾದಿ ಅನೇಕ ಕಾಯಿಲೆಗಳಿಗೆ ಬೆಳ್ಳುಳ್ಳಿ ರಾಮಬಾಣವಾಗಿದೆ. ಬೆಳ್ಳುಳ್ಳಿ ಸೇವನೆಯ ಮತ್ತಷ್ಟು ಆರೋಗ್ಯ ಪ್ರಯೋಜನಗಳ ಮಾಹಿತಿ ಇಲ್ಲಿದೆ ನೋಡಿ.

ಹಲವಾರು ರೋಗಗಳಿಗೆ ರಾಮಬಾಣವಾಗಿರುವ ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸಿದರೆ ಹೆಚ್ಚು ಪ್ರಯೋಜನವಿದೆ. ಅಡುಗೆಯಲ್ಲಿ ಬಳಸಿದರೂ ನೀವು ಆರೋಗ್ಯ ಪ್ರಯೋಜನ ಪಡೆಯುತ್ತೀರಿ. ಹಲವಾರು ಕಾಯಿಲೆಗಳಿಗೆ ರಾಮಬಾಣವಾಗಿ ಬೆಳ್ಳುಳ್ಳಿ ಕೆಲಸ ಮಾಡುತ್ತದೆ.

ಬೆಳಗ್ಗೆ ಎದ್ದಕೂಡಲೇ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಹೃದಯ ಸಂಬಂಧಿ ರೋಗಗಳಿಂದ ದೂರವಿರಬಹುದು. ಕೊಲೆಸ್ಟ್ರಾಲ್ ಇಳಿಕೆಗೆ ಇದು ತುಂಬಾ ಸಹಾಯ ಮಾಡುತ್ತದೆ.

ಮಧುಮೇಹಿಗಳು ದಿನನಿತ್ಯ 1 ಬೆಳ್ಳುಳ್ಳಿ ತಿನ್ನುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು. ಬೆಳ್ಳುಳ್ಳಿ ನಿಯಮಿತವಾಗಿ ಸೇವಿಸುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಬೆಳ್ಳುಳ್ಳಿ ಹಸಿವು ಹೆಚ್ಚಿಸುವ ಕೆಲಸ ಮಾಡುತ್ತದೆ. ಬೊಜ್ಜು ನಿವಾರಕವಾಗಿಯೂ ಇದು ಕೆಲಸ ಮಾಡುತ್ತದೆ.ಬೆಳಗ್ಗೆ ಬೆಳ್ಳುಳ್ಳಿ ಸೇವಿಸಿದ 1 ಗಂಟೆಯಲ್ಲಿ ಜೀರ್ಣವಾಗಿ ಆರೋಗ್ಯ ವೃದ್ಧಿ ಮಾಡುತ್ತದೆ.

ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಕ್ಕಳಿಗೆ ಸ್ಮರಣ ಶಕ್ತಿ  ಹೆಚ್ಚಿಸುವ ವಿಶೇಷ ಗುಣ ಇದರಲ್ಲಿದೆ. ಆಯುರ್ವೇದಲ್ಲಿ ಬೆಳ್ಳುಳ್ಳಿಗೆ ವಿಶೇಷ ಸ್ಥಾನವಿದೆ. ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಅನೇಕ ಸಂಶೋಧನೆಗಳು ಸಹ ಬೆಳಕು ಚೆಲ್ಲಿವೆ.

Source : https://zeenews.india.com/kannada/photo-gallery/health-tips-amazing-and-proven-health-benefits-of-garlic-eating-everyday-154714/proven-health-benefits-of-garlic-154715

Leave a Reply

Your email address will not be published. Required fields are marked *