Health Tips: ರಕ್ತ ಶುದ್ಧೀಕರಣಕ್ಕೆ ಈ ಆಹಾರಗಳನ್ನು ಸೇವಿಸಿರಿ

Foods that help purify your blood: ಪಾಲಕ್ ಸೊಪ್ಪು, ಮೆಂತೆ ಸೊಪ್ಪು, ಬೀನ್ಸ್, ಕೋಸುಗಡ್ಡೆ, ಕ್ಯಾರೆಟ್, ಹೂಕೋಸು, ಬ್ರೊಕೋಲಿ, ಬೀಟ್ರೋಟ್, ಇಂತಹ ಹಸಿರೆಲೆ ಸೊಪ್ಪು ತರಕಾರಿಗಳಲ್ಲಿ ಯಥೇಚ್ಛವಾಗಿ ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ಕಂಡು ಬರುತ್ತದೆ.

Blood Purifier Food: ರಕ್ತದ ಅರೋಗ್ಯ ಚೆನ್ನಾಗಿ ಇರಬೇಕೆಂದರೆ ಹಸಿರೆಲೆ ತರಕಾರಿಗಳು, ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಪ್ರಕೃತಿಯು ನಮಗೆ ನೈಸರ್ಗಿಕ ರಕ್ತವನ್ನು ಶುದ್ಧೀಕರಿಸುವ ಹಲವಾರು ಆಹಾರಗಳನ್ನು ಉಡುಗೊರೆಯಾಗಿ ನೀಡಿದೆ. ದೇಹದ ರಕ್ತ ಶುದ್ಧೀಕರಣಕ್ಕೆ ಕೆಲವು ಆಹಾರಗಳನ್ನು ಪ್ರತಿದಿನ ತಿನ್ನಲೇಬೇಕು. ಈ ಆಹಾರಗಳು ಯಾವುದು ಎಂದು ತಿಳಿಯಿರಿ…

ಪಾಲಕ್ ಸೊಪ್ಪು, ಮೆಂತೆ ಸೊಪ್ಪು, ಬೀನ್ಸ್, ಕೋಸುಗಡ್ಡೆ, ಕ್ಯಾರೆಟ್, ಹೂಕೋಸು, ಬ್ರೊಕೋಲಿ, ಬೀಟ್ರೋಟ್ ಇಂತಹ ಹಸಿರೆಲೆ ಸೊಪ್ಪು ತರಕಾರಿಗಳಲ್ಲಿ ಯಥೇಚ್ಛವಾಗಿ ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ಕಂಡುಬರುತ್ತದೆ. ಇವು ದೇಹದ ರಕ್ತವನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ ದೇಹದ ಲಿವರ್ ಭಾಗದಲ್ಲಿ ಕಂಡು ಬರುವ ವಿಷಕಾರಿ ಕಲ್ಮಶಗಳನ್ನು ಹೋಗಲಾಡಿಸಿ, ದೇಹದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸೇಬು, ವಿಟಮಿನ್ ʼಸಿʼ ಇರುವ ಸೀಬೆಹಣ್ಣು, ಪ್ಲಮ್, ಪಿಯರ್ಸ್, ದ್ರಾಕ್ಷಿಹಣ್ಣು, ದಾಳಿಂಬೆ ಹಣ್ಣು, ಕಲ್ಲಂಗಡಿ ಹಣ್ಣು, ಕಿತ್ತಳೆ ಹಣ್ಣು, ಪರಂಗಿ ಹಣ್ಣು, ಬೆರ್ರಿ ಹಣ್ಣು ಇಂತಹ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಸೇಬು, ಪಿಯರ್ಸ್ ಹಾಗೂ ಪ್ಲಮ್‌ನಂತಹ ಹಣ್ಣುಗಳಲ್ಲಿ ಕರಗುವ ನಾರಾಗಿರುವ ಪೆಕ್ಟಿನ್ ಎನ್ನುವ ಸಂಯುಕ್ತ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ರಕ್ತ ಶುದ್ಧೀಕರಿಸಲು ಪರಿಣಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ.

ಬೀಟ್ರೂಟ್‌ನಲ್ಲಿ ವಿಟಮಿನ್ ʼಸಿʼ, ಮ್ಯಾಂಗನೀಸ್, ಪೊಟಾಶಿಯಂ, ಕ್ಯಾಲ್ಸಿಯಂ ಮುಖ್ಯವಾಗಿ ಕಬ್ಬಿನಾಂಶ, ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಇದೊಂದು ಆರೋಗ್ಯಕಾರಿ ತರಕಾರಿ. ಬೀಟೈನ್ ಎನ್ನುವ ಅಂಶವು ದೇಹದ ಲಿವರ್ ಭಾಗದಲ್ಲಿ ಯಾವುದೇ ರೀತಿಯ ಕಲ್ಮಶಗಳು ಸಂಗ್ರಹಣೆ ಆಗದಂತೆ ನೋಡಿಕೊಂಡು ರಕ್ತವನ್ನು ಶುದ್ಧೀಕರಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತದೆ.

ಬೆಲ್ಲವು ನೈಸರ್ಗಿಕ ರಕ್ತಶುದ್ಧೀಕಾರಕವಾಗಿದೆ. ಇದರಲ್ಲಿ ಕಂಡುಬರುವ ಪೌಷ್ಟಿಕ ಸತ್ವಗಳು, ದೇಹದ ಕಲ್ಮಶಗಳನ್ನು ವಿಸರ್ಜಿಸಲು ನೆರವಾಗುತ್ತದೆ. ಜಿಂಕ್ ಮತ್ತು ಸೆಲೆನಿಯಂ ಅಂಶಗಳ ಪ್ರಮಾಣ ಬೆಲ್ಲದಲ್ಲಿ ಹೆಚ್ಚಾಗಿ ಕಂಡುಬರುವುರಿಂದ ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ, ಇದರಲ್ಲಿ ಕಂಡುಬರುವ ಕಬ್ಬಿಣದ ಅಂಶ, ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿ, ದೇಹದ ರಕ್ತವನ್ನು ಕೂಡ ಶುದ್ಧೀಕರಣ ಮಾಡುತ್ತದೆ.

Source: https://zeenews.india.com/kannada/photo-gallery/health-tips-eat-these-foods-for-blood-purification-238122/blood-purifier-food-238123

Leave a Reply

Your email address will not be published. Required fields are marked *