Health Tips: ಪೌಷ್ಟಿಕಾಂಶದ ಆಗರವಾಗಿರುವ ಮೆಂತ್ಯ ಸೊಪ್ಪಿನಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳು.

Fenugreek leaves health benefits: ಮೆಂತ್ಯಯಲ್ಲಿರುವ ಫೈಬರ್‌ ಕರುಳಿನ ಸೂಕ್ಷ್ಮಜೀವಿಗಳಿಗೆ ಆಹಾರವಾಗಿ ಕಾರ್ಯನಿರ್ವಹಿಸುತ್ತದೆ. ಇದು ಕರುಳಿನಿಂದ ನೀರನ್ನು ಹೀರಿಕೊಳ್ಳುತ್ತದೆ ಮತ್ತು ಕರುಳನ್ನು ಮೃದುಗೊಳಿಸುತ್ತದೆ. ಇದು ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ನಿಮಗೆ ಮುಕ್ತಿ ನೀಡುತ್ತದೆ. 

Fenugreek leaves health benefits: ಮೆಂತ್ಯ ಸೊಪ್ಪಿನಲ್ಲಿ ಅನೇಕ ಔಷಧೀಯ ಗುಣಗಳಿದೆ. ಇದನ್ನು ಪ್ರತಿದಿನ ಆಹಾರವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಮೆಂತ್ಯ ಸೊಪ್ಪಿನಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆಗೆ ಪ್ರಮುಖ ಔಷಧವನ್ನಾಗಿ ಉಪಯೋಗಿಸಲಾಗುತ್ತದೆ. ಇನ್ನೂ ಪೌಷ್ಟಿಕಾಂಶದ ಆಗರವಾಗಿರುವ ಮೆಂತ್ಯ ಸೊಪ್ಪಿನಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ. ನಿಯಮಿತವಾಗಿ ಮೆಂತ್ಯ ಸೋಪ್ಪು ಸೇವನೆಯಿಂದ ದೇಹದ ರೋಗ ನಿರೋಧ ಶಕ್ತಿ ಹೆಚ್ಚುತ್ತದೆ. ಇದು ಕಿಡ್ನಿ ಸೇರಿದಂತೆ ದೇಹದ ಸಮಗ್ರ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. 

ಮೆಂತ್ಯ ಸೊಪ್ಪು ವಿಟಮಿನ್‌ A, C ಮತ್ತು B ಹಾಗೂ ಖನಿಜಗಳಿಂದ ಸಮೃದ್ಧವಾಗಿವೆ. ಪ್ರತಿದಿನ ಮೆಂತ್ಯ ಸೊಪ್ಪಿನ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. 

ಮೆಂತ್ಯ ಸೊಪ್ಪಿನ ಎಲೆಗಳಲ್ಲಿ ವಿಟಮಿನ್‌ ʼCʼ ಇದ್ದು, ಇದು ಉರಿಯೂತದ ಕಾಯಿಲೆಯನ್ನು ತಡೆಯುವ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಮೆಂತ್ಯ ಸೊಪ್ಪುಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ ಬಿಡುಗಡೆಯನ್ನು ತಡೆಯುತ್ತದೆ.

ಮೆಂತ್ಯ ಸೊಪ್ಪು ಕಿಣ್ವಗಳ ಚಟುವಟಿಕೆಗಳನ್ನು ಕಡಿಮೆ ಮಾಡುವ ಮೂಲಕ ಸಿರೋಸಿಸ್‌ ಅಪಾಯವನ್ನು ಕಡಿಮೆ ಮಾಡುತ್ತದೆ. ಯಕೃತ್ತಿನ ಆರೋಗ್ಯಕ್ಕೆ ಇಂದು ಪ್ರಯೋಜನಕಾರಿಯಾಗಿದೆ. ಇದು ಗ್ಲುಕೋಸ್‌ ನಿಯಂತ್ರಿಸಲು ಸಹಾಯ ಮಾಡುತ್ತದೆ

ಮೆಂತ್ಯಯಲ್ಲಿ ನಾರಿನಂಶ ಅಧಿಕವಾಗಿದ್ದು, ನೀವು ಅತಿಯಾಗಿ ಆಹಾರ ಸೇವಿಸುವುದನ್ನು ನಿಯಂತ್ರಿಸುತ್ತದೆ. ಈ ಮೂಲಕ ಇದು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಲು ಸಹಕಾರಿಯಾಗಿದೆ. 

ಮೆಂತ್ಯಯಲ್ಲಿರುವ ಫೈಬರ್‌ ಕರುಳಿನ ಸೂಕ್ಷ್ಮಜೀವಿಗಳಿಗೆ ಆಹಾರವಾಗಿ ಕಾರ್ಯನಿರ್ವಹಿಸುತ್ತದೆ. ಇದು ಕರುಳಿನಿಂದ ನೀರನ್ನು ಹೀರಿಕೊಳ್ಳುತ್ತದೆ ಮತ್ತು ಕರುಳನ್ನು ಮೃದುಗೊಳಿಸುತ್ತದೆ. ಇದು ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ನಿಮಗೆ ಮುಕ್ತಿ ನೀಡುತ್ತದೆ. 

Source: https://zeenews.india.com/kannada/photo-gallery/health-tips-do-you-know-what-happens-if-you-eat-fenugreek-greens-every-day-210776/fenugreek-leaves-health-benefits-210780

Leave a Reply

Your email address will not be published. Required fields are marked *