Pongame oiltree benefits: ಹೊಂಗೆ ಎಣ್ಣೆಯು ಚರ್ಮ ರೋಗಕ್ಕೆ ರಾಮಬಾಣ. ಇದರ ಎಣ್ಣೆಯಿಂದ ದೀಪ ಉರಿಸಿದರೆ ಸೊಳ್ಳೆ, ನೊಣಗಳು ಬರುವುದಿಲ್ಲ. ಸಾಬೂನು ತಯಾರಿಕೆ ಮತ್ತು ನೋವು ನಿವಾರಕ ತೈಲಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ.

Pongame oiltree benefits: ನದಿ, ಹಳ್ಳ-ಕೊಳ್ಳ, ಬೆಟ್ಟ-ಗುಡ್ಡಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಹೊಂಗೆ ಮರವು ಅಪಾರ ಔಷಧೀಯ ಗುಣಗಳನ್ನು ಹೊಂದಿದೆ. ಕಹಿ ವಗರು ಮಿಶ್ರಿತ ರುಚಿ ಹೊಂದಿರುವ ಇದರ ಕಡ್ಡಿಗಳನ್ನು ಬಳಸುವುದರಿಂದ ಹಲ್ಲುಗಳ ಮೇಲಿನ ಕಲೆಗಳು ಮಾಯವಾಗಿ ಹಲ್ಲು, ವಸಡುಗಳು ಗಟ್ಟಿಯಾಗುತ್ತವೆ. ಹೊಂಗೆ ಕಡ್ಡಿಗಳಿಂದ ಹಲ್ಲುಜ್ಜಿದರೆ ಬಾಯಿಯ ದುರ್ಗಂಧ ದೂರವಾಗುತ್ತದೆ. ಹೊಂಗೆ ಎಣ್ಣೆಯು ಚರ್ಮ ರೋಗಕ್ಕೆ ರಾಮಬಾಣ. ಇದರ ಎಣ್ಣೆಯಿಂದ ದೀಪ ಉರಿಸಿದರೆ ಸೊಳ್ಳೆ, ನೊಣಗಳು ಬರುವುದಿಲ್ಲ. ಸಾಬೂನು ತಯಾರಿಕೆ ಮತ್ತು ನೋವು ನಿವಾರಕ ತೈಲಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಹೊಂಗೆ ಮರದ ಮತ್ತಷ್ಟು ಪ್ರಯೋಜನಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ನಿಮಗೆ ಮಂಡಿ ನೋವು/ಹಿಮ್ಮಡಿ ನೋವು/ಕೀಲು ನೋವು ಇದ್ದರೆ ಬಿಸಿ ಮಾಡಿದ ಹೊಂಗೆ ಎಣ್ಣೆಯಲ್ಲಿ ಪಚ್ಚ ಕರ್ಪೂರ ಬೆರೆಸಿ ಹೆಚ್ಚಬೇಕು. ಚರ್ಮ ರೋಗಗಳಲ್ಲಿ ಇದರ ಎಣ್ಣೆಯಲ್ಲಿ ಲಿಂಬೆ ರಸವನ್ನು ಬೆರೆಸಿ ಹಚ್ಚಬೇಕು.
ಕೂದಲು ಉದುರುತ್ತಿದ್ದರೆ ಹೊಂಗೆಮರದ ಹೂವುಗಳನ್ನು ಅರೆದು ಹಚ್ಚುವುದರಿಂದ ಪರಿಹಾರ ಸಿಗುತ್ತದೆ. ಹೊಂಗೆ ಎಣ್ಣೆ ಹಚ್ಚುವುದರಿಂದ ಗಾಯಗಳು ಬೇಗನೆ ವಾಸಿಯಾಗುತ್ತವೆ.
ಮಧುಮೇಹದಲ್ಲಿ 10-15MLನಷ್ಟು ಎಲೆಗಳ ರಸವನ್ನು ಸೇವಿಸಬಹುದು. ಹುರುಕು ರೋಗವಿದ್ದರೆ ಇದರ ಬೇರು ತೇಯ್ದು ಹಚ್ಚಬೇಕು.
ನೀವು ಹೆಚ್ಚು ಕೆಮ್ಮುತ್ತಿದ್ದರೆ 10MLನಷ್ಟು ಇದರ ಬೇರು ಅಥವಾ ಬೀಜಗಳ ಕಷಾಯವನ್ನು ಕುಡಿದರೆ ಪರಿಹಾರ ದೊರೆಯುತ್ತದೆ.
ತುರಿಕೆ, ಕಜ್ಜಿ ಇತ್ಯಾದಿ ಚರ್ಮ ರೋಗವಿದ್ದರೆ ಹೊಂಗೆ ಬೀಜಗಳನ್ನು ತೇಯ್ದು ಹಚ್ಚಬಹುದು ಅಥವಾ ಹೊಂಗೆ ಎಣ್ಣೆಯನ್ನು ಹಚ್ಚಬಹುದು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1
Views: 0