ಮಾನಸಿಕ ಆರೋಗ್ಯ ಸಲಹೆ: ದೈಹಿಕ ಆರೋಗ್ಯದ ಜೊತೆಗೆ ನಾವು ಮಾನಸಿಕ ಆರೋಗ್ಯದ ಬಗ್ಗೆಯೂ ಸಮಾನ ಕಾಳಜಿ ತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ಅನೇಕರಿಗೆ ತಲೆಯಲ್ಲಿ ಭಾರದ ಸಮಸ್ಯೆ ಕಾಡುತ್ತದೆ. ಇದಕ್ಕೆ ನೀವು ಕೆಲವು ಸುಲಭವಾದ ಆಯುರ್ವೇದ ಚಿಕಿತ್ಸೆಗಳನ್ನು ತೆಗೆದುಕೊಳ್ಳಬಹುದು.
ನವದೆಹಲಿ: ನಮ್ಮಲ್ಲಿ ಅನೇಕರು ಮಾನಸಿಕ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ ಎಂಬುದನ್ನು ನಾವು ಮರೆಯುತ್ತೇವೆ. ಈ ಬಗ್ಗೆ ಕಾಳಜಿ ವಹಿಸದಿದ್ದರೆ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಜನರು ಅನೇಕ ರೀತಿಯ ಒತ್ತಡ ಎದುರಿಸಬೇಕಾಗುತ್ತದೆ. ಇದರಿಂದಾಗಿ ದೇಹದಲ್ಲಿ ಭಾರವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೋವು ನಿವಾರಕಗಳು ಅಥವಾ ಇನ್ನಾವುದೇ ಔಷಧವನ್ನು ತೆಗೆದುಕೊಳ್ಳುವುದು ಅಪಾಯಕಾರಿ. ಏಕೆಂದರೆ ಸಂಶೋಧನೆಯು ಇದರ ಅನೇಕ ಅಡ್ಡಪರಿಣಾಮಗಳನ್ನು ಬಹಿರಂಗಪಡಿಸಿದೆ. ಇದಕ್ಕೆ ಸ್ವಲ್ಪ ಆಯುರ್ವೇದ ಚಿಕಿತ್ಸೆ ಪಡೆಯುವುದು ಉತ್ತಮ.
ತಲೆಯ ಭಾರಕ್ಕೆ ಆಯುರ್ವೇದ ಚಿಕಿತ್ಸೆ
ತಲೆಯಲ್ಲಿ ಭಾರವಾಗಲು ಅಥವಾ ಮಾನಸಿಕ ಆಯಾಸಕ್ಕೆ ಹಲವು ಕಾರಣಗಳಿರಬಹುದು. ಇದು ದೀರ್ಘಕಾಲದ ಅನಾರೋಗ್ಯ, ಕೆಲಸದ ಒತ್ತಡ, ದೀರ್ಘಕಾಲದವರೆಗೆ ಔಷಧಿ ತೆಗೆದುಕೊಳ್ಳುವುದು ಅಥವಾ ವೈಯಕ್ತಿಕ ಸಮಸ್ಯೆಗಳನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ನೀವು 3 ವಿಧದ ಆಯುರ್ವೇದ ಔಷಧಿಗಳನ್ನು ತೆಗೆದುಕೊಳ್ಳಬಹುದು. ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
1. ಬ್ರಾಹ್ಮಿ: ಮಾನಸಿಕ ಆಯಾಸ ಮತ್ತು ತಲೆಯ ಭಾರದಿಂದ ಬಳಲುತ್ತಿರುವ ಜನರು ಆಗಾಗ್ಗೆ ಜ್ಞಾಪಕ ಶಕ್ತಿ ಕಳೆದುಕೊಳ್ಳಬೇಕಾಗುತ್ತದೆ. ಇದನ್ನು ಹೋಗಲಾಡಿಸಲು ನೀವು ಬ್ರಾಹ್ಮಿಯನ್ನು ಸೇವಿಸಬಹುದು. ಇದು ಮಾನಸಿಕ ಭಾರ ಮತ್ತು ಆಯಾಸದಿಂದ ಪರಿಹಾರವನ್ನು ನೀಡುತ್ತದೆ.
2. ಅಶ್ವಗಂಧ: ಅಶ್ವಗಂಧ ಒಂದು ಆಯುರ್ವೇದ ಔಷಧವಾಗಿದ್ದು, ಮಾನಸಿಕ ಅಸ್ವಸ್ಥತೆ ಮತ್ತು ತಲೆಯ ಭಾರಕ್ಕೆ ಉತ್ತಮ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ. ನೀವು ಮಾನಸಿಕ ಮತ್ತು ಉದ್ವೇಗದಿಂದ ಮುಕ್ತವಾಗಿರಲು ಈ ವಿಶೇಷ ಆಯುರ್ವೇದಿಕ್ ಔಷಧ ಬಳಸಬಹುದು. ಇದರಲ್ಲಿರುವ ಗುಣಗಳು ನಮ್ಮ ಮೆದುಳಿಗೆ ಎಲ್ಲ ರೀತಿಯಲ್ಲೂ ಪ್ರಯೋಜನವನ್ನು ನೀಡುತ್ತದೆ.
3. ಶಂಖಪುಷ್ಪಿ: ಶಂಖಪುಷ್ಪಿಯ ಸೇವನೆಯು ಮೆದುಳಿಗೆ ಮಾತ್ರವಲ್ಲದೇ ದೇಹಕ್ಕೂ ಅಷ್ಟೇ ಪ್ರಯೋಜನಕಾರಿ. ಇದನ್ನು ಆಯುರ್ವೇದದ ಸಂಪತ್ತು ಎಂದು ಕರೆದರೆ ಬಹುಶಃ ತಪ್ಪಾಗಲಾರದು. ಇದು ಮನಸ್ಸಿನ ಭಾರವನ್ನು ಹೋಗಲಾಡಿಸುತ್ತದೆ. ಈ ಹೂವಿನಿಂದ ಮಾಡಿದ ಶರಬತ್ತು ಅಥವಾ ಸಿರಪ್ ಅನ್ನು ನೀವು ಕುಡಿಯಬಹುದು.
(ಗಮನಿಸಿರಿ: ಇಲ್ಲಿ ನೀಡಿರುವ ಸಲಹೆ ಪಾಲಿಸುವ ಮೊದಲು ನೀವು ಕಡ್ಡಾಯವಾಗಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು.)
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1