“Health Tips” | ಹಣ್ಣುಗಳನ್ನು ತಿನ್ನೋದ್ರಲ್ಲೂ ಜಾಣತನ ಬೇಕು! ಈ fruits ಮಿಕ್ಸ್ ಮಾಡಿದ್ರೆ ಆರೋಗ್ಯಕ್ಕೆ ಹಾನಿಯಾಗೋದು ಖಂಡಿತ!

ಹಣ್ಣುಗಳು ಆರೋಗ್ಯಕ್ಕೆ ಉತ್ತಮವೆಂದು ನಮಗೆ ತಿಳಿದಿದೆ. ಆದರೆ ಎಲ್ಲ ಹಣ್ಣುಗಳನ್ನೂ ಒಟ್ಟಿಗೆ ತಿನ್ನುವುದು ಸೂಕ್ತವಲ್ಲ. ಫ್ರೂಟ್ ಸಲಾಡ್ ಅಥವಾ ಸ್ಮೂಥಿ ತಯಾರಿಸಲು ನಾವು ಅನೇಕ ಹಣ್ಣುಗಳನ್ನು ಸೇರಿಸುತ್ತೇವೆ. ಆದರೆ ಆಯುರ್ವೇದ ಮತ್ತು ಪೌಷ್ಟಿಕ ತಜ್ಞರ ಪ್ರಕಾರ, ಕೆಲವೊಂದು ಹಣ್ಣುಗಳ ತಪ್ಪು ಸಂಯೋಜನೆಗಳು ಜೀರ್ಣಕ್ರಿಯೆಗೆ ಅಡ್ಡಿಯಾಗಿ, ಹೊಟ್ಟೆ ಸಂಬಂಧಿತ ಸಮಸ್ಯೆಗಳನ್ನುಂಟು ಮಾಡಬಹುದು.

ಆಮ್ಲೀಯ + ಸಿಹಿ ಹಣ್ಣುಗಳು:
ಕಿತ್ತಳೆ, ಸ್ಟ್ರಾಬೆರಿ ಹಾಗೂ ಬಾಳೆಹಣ್ಣ
ಆಮ್ಲೀಯ ಹಣ್ಣುಗಳು (ಕಿತ್ತಳೆ, ಸೇಬು, ಸ್ಟ್ರಾಬೆರಿ) ವೇಗವಾಗಿ ಜೀರ್ಣವಾಗುತ್ತವೆ. ಬಾಳೆಹಣ್ಣು ಮತ್ತು ಅಂಜೂರದಂತಹ ಸಿಹಿ ಹಣ್ಣುಗಳು ನಿಧಾನವಾಗಿ ಜೀರ್ಣವಾಗುತ್ತವೆ. ಇವೆರಡನ್ನು ಸೇರಿಸಿದರೆ ಜೀರ್ಣಕ್ರಿಯೆಯಲ್ಲಿ ವ್ಯತ್ಯಯ, ಅನಿಲ ಉಂಟಾಗುತ್ತದೆ.

ಪಿಷ್ಟಭರಿತ + ಪ್ರೋಟೀನ್ ಹಣ್ಣುಗಳು:
ಉದಾ:ಪಚ್ಚೆ ಬಾಳೆಹಣ್ಣು ಮತ್ತು ಆವಕಾಡೋ
ಪಿಷ್ಟ ಪದಾರ್ಥಗಳು ಕ್ಷಾರೀಯ ವಾತಾವರಣದಲ್ಲಿ ಜೀರ್ಣವಾಗಬೇಕಾಗುತ್ತದೆ, ಆದರೆ ಪ್ರೋಟೀನ್‌ಗಳಿಗೆ ಆಮ್ಲೀಯ ಪರಿಸರ ಬೇಕು. ಈ ಸಂಯೋಜನೆ ಜೀರ್ಣಶಕ್ತಿಗೆ ಅಡಚಣೆ ಉಂಟುಮಾಡುತ್ತದೆ.

ಕಲ್ಲಂಗಡಿ + ಇತರ ಹಣ್ಣುಗಳು:
ಉದಾ: ಕಲ್ಲಂಗಡಿಯನ್ನು ಸೇಬು, ಪೇರಳೆ ಮುಂತಾದ ಹಣ್ಣು
ಕಲ್ಲಂಗಡಿಯಲ್ಲಿ ಹೆಚ್ಚಿನ ನೀರಿನ ಅಂಶವಿದೆ ಮತ್ತು ಅದು ವೇಗವಾಗಿ ಜೀರ್ಣವಾಗುತ್ತದೆ. ಆದರೆ ಸೇಬು, ಪೇರಳೆ ಮುಂತಾದ ಹಣ್ಣುಗಳು ನಿಧಾನವಾಗಿ ಜೀರ್ಣವಾಗುತ್ತವೆ. ಇವುಗಳ ಮಿಶ್ರಣದಿಂದ ವಾಕರಿಕೆ, ಅತಿಸಾರ ಸಂಭವಿಸಬಹುದು.

ಪಪ್ಪಾಯಿ + ನಿಂಬೆ:
ಈ ಮಿಶ್ರಣ ದೇಹದ pH ಸಮತೋಲನ ಹದಗೆಡಿಸಿ, ಉರಿಯೂತ ಉಂಟುಮಾಡುತ್ತದೆ.

ಪೇರಲ + ಬಾಳೆಹಣ್ಣು:
ಪೇರಲ ಮತ್ತು ಬಾಳೆಹಣ್ಣು ಎರಡೂ ಪೌಷ್ಟಿಕಾಂಶಗಳಲ್ಲಿ ಸಮೃದ್ಧ. ಆದರೆ ಈ ಜೋಡಿಯಲ್ಲಿ ಪೇರಲದ ಫೈಬರ್ ಮತ್ತು ಬಾಳೆಹಣ್ಣಿನ ಪಿಷ್ಟ ಸೇರಿಕೊಂಡಾಗ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್‌ಗೆ ಕಾರಣವಾಗಬಹುದು.

ಹಣ್ಣುಗಳು + ತರಕಾರಿಗಳು:
ಉದಾ: ಕಿತ್ತಳೆ ಮತ್ತು ಕ್ಯಾರೆಟ್ ಸಂಯೋಜನೆ
ಹಣ್ಣುಗಳು (ವಿಶೇಷವಾಗಿ ಸಿಹಿ ಅಥವಾ ಆಮ್ಲೀಯ) ಬೇಗನೆ ಜೀರ್ಣವಾಗುತ್ತವೆ. ತರಕಾರಿಗಳು ನಿಧಾನವಾಗಿ ಜೀರ್ಣವಾಗುತ್ತವೆ. ಈ ಎರಡನ್ನು ಸೇರಿಸುವುದರಿಂದ ಅಜೀರ್ಣಕ್ರಿಯೆ, ಗ್ಯಾಸ್ಟ್ರಿಕ್‌, ತಲೆನೋವುಗಳು ಸಂಭವಿಸಬಹುದು.

ಆರೋಗ್ಯಕ್ಕೆ ಹಾನಿಕಾರಕ ಪರಿಣಾಮಗಳಿಲ್ಲದಿರಲು ಹಣ್ಣುಗಳನ್ನು ಪ್ರತ್ಯೇಕವಾಗಿ ಸೇವಿಸುವುದೇ ಉತ್ತಮ. ತಪ್ಪು ಸಂಯೋಜನೆಯು ಉತ್ತಮ ಆಹಾರವನ್ನೂ ವಿಷದಂತೆ ಮಾಡಬಹುದು ಎಂಬ ಮಾತನ್ನು ಮರೆಯಬೇಡಿ.

Leave a Reply

Your email address will not be published. Required fields are marked *