Health: ವರ್ಟಿಗೋ ಅಥವಾ “ಚಕ್ಕರ್” ತಲೆಸುತ್ತು, ಅಸ್ಥಿರತೆ, ಮತ್ತು ವಾಕರಿಕೆಯಂತಹ ಆರಂಭಿಕ ಲಕ್ಷಣಗಳ ಒಳನೋಟ ಅಧ್ಯಯನ ವರದಿ!

ವಿಶ್ವಾದ್ಯಂತ ಪ್ರತೀ 10 ಜನರಲ್ಲಿ ಒಬ್ಬರು ತಮ್ಮ ಜೀವನ ದಲ್ಲಿ ಯಾವುದಾದರೂ ಒಂದು ಸಂದರ್ಭ ದಲ್ಲಿ ವರ್ಟಿಗೋ ಸಮಸ್ಯೆ ಎದುರಿಸುತ್ತಾರೆ. ತಲೆಸುತ್ತು, ಅಸ್ಥಿರತೆ, ಮತ್ತು ವಾಕರಿಕೆಯಂತಹ ಆರಂಭಿಕ ಲಕ್ಷಣಗಳನ್ನು ಕಾಣಬಹುದಾದರೆ ಆ ಲಕ್ಷಣಗಳನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ. ಆರಂಭಿಕ ಹಂತದಲ್ಲಿಯೇ ಈ ಸಮಸ್ಯೆ ಪತ್ತೆ ಹಚ್ಚುವುದರಿಂದ ಮತ್ತು ಸೂಕ್ತ ಚಿಕಿತ್ಸೆ ನೀಡುವುದರಿಂದ ಭವಿಷ್ಯ ದಲ್ಲು ಉಂಟಾಗುವ ಹೆಚ್ಚಿನ ಸಮಸ್ಯೆಗಳನ್ನು ತಡೆಯಬಹುದು.

ಈಗ ಆರೋಗ್ಯ ಕುರಿತ ಮಾಹಿತಿಯನ್ನು ಆನ್ ಲೈನ್ ನಲ್ಲಿ ಹುಡುಕುವುದು ಸಾಮಾನ್ಯವಾಗಿದೆ. ಅದರಲ್ಲೂ ವಿಶೇಷವಾಗಿ “ಚಕ್ಕರ್” ಬರುವುದು ಅಥವಾ ತಲೆಸುತ್ತುತ್ತಿದೆ ಅನ್ನಿಸಿದಾಗ ಜನರು ತಕ್ಷಣ ಇಂಟರ್ನೆಟ್‌ ನಲ್ಲಿ ಸರ್ಚ್ ಮಾಡಲು ತೊಡಗುತ್ತಾರೆ.

  • ಒಮ್ಮೆ ಸರ್ಚ್ ಮಾಡಿದರೆ ಈ ಕುರಿತು ಸಾಕಷ್ಟು ಬರಹಗಳು, ವಿಡಿಯೋಗಳು ಸಿಗುತ್ತವೆ. ಆದರೆ ಜನರು ಸಾಮಾನ್ಯವಾಗಿ ತಲೆಸುತ್ತು ಬರುವುದು ಅಥವಾ ತಲೆ ಹಗುರವಾದಂತೆ ಭಾಸವಾಗುವು ದನ್ನು ವರ್ಟಿಗೋ ಲಕ್ಷಣ ಎಂದು ಭಾವಿಸಿ ಗೊಂದಲಕ್ಕೊಳಗಾಗುತ್ತಾರೆ.
  • ಭಾರತದಲ್ಲಿ ಸುಮಾರು 7 ಕೋಟಿ ಜನರು ವರ್ಟಿಗೋಗೆ ಸಂಬಂಧಿಸಿದ ಸಮಸ್ಯೆಗಳನ್ನು ಅನುಭ ವಿಸುತ್ತಾರೆ. ಸಾಮಾನ್ಯ ತಲೆಸುತ್ತುವಿಕೆಗಿಂತ ಸಂಪೂರ್ಣ ಭಿನ್ನವಾಗಿರುವ ವರ್ಟಿಗೋ ಸಮಸ್ಯೆಯು ದೀರ್ಘಕಾಲ ಕಾಡಬಹುದಾಗಿದೆ ಇಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ಪರಿಣಾಮ ಬೀರಬಹುದಾಗಿದೆ.
  • ಇತ್ತೀಚೆಗೆ ಬಿಡುಗಡೆಯಾಗಿರುವ ಅಬಾಟ್ ಬೆಂಬಲಿತ ಇಂಟರ್‌ ನ್ಯಾಷನಲ್ ಜರ್ನಲ್ ಆಫ್ ಕ್ಲಿನಿಕಲ್ ಸ್ಕಿಲ್ಸ್‌ ನ ಅಧ್ಯಯನ ವರದಿಯು ಜನರು ಆರೋಗ್ಯ ಮಾಹಿತಿ ತಿಳಿಯಲು ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳನ್ನು ಅವಲಂಬಿಸುತ್ತಿದ್ದಾರೆ ಎಂಬುದನ್ನು ಬಹಿರಂಗ ಪಡಿಸಿದೆ.
  • ವರ್ಟಿಗೋ ಬಗ್ಗೆ ಆನ್‌ ಲೈನ್‌ ನಲ್ಲಿ ಹುಡುಕುವವರಲ್ಲಿ ಶೇ.65ರಷ್ಟು ಮಹಿಳೆಯರು ಎಂಬು ವಿಶೇಷ. ಅದರಲ್ಲೂ ಹೆಚ್ಚಿನ ಹೆಚ್ಚಿನ ಪ್ರಶ್ನೆಗಳನ್ನು (ಶೇ.51) ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಕೇಳಲಾಗುತ್ತವೆ. ಶೇ.46ರಷ್ಟು ಪ್ರಶ್ನೆಗಳನ್ನು ವೈದ್ಯಕೀಯ ವೇದಿಕೆಗಳಲ್ಲಿ ಕೇಳಲಾಗುತ್ತದೆ ಮತ್ತು ಯೂಟ್ಯೂಬ್ ಕೂಡ ಅಷ್ಟೇ ಜನಪ್ರಿಯವಾಗಿದೆ.
  • ಶೇ.51ರಷ್ಟು ಜನರು ವರ್ಟಿಗೋ ಕಾರಣಗಳು ಮತ್ತು ರೋಗನಿರ್ಣಯದ ಕುರಿತು ತಿಳಿಯಲು ಬಯಸುತ್ತಾರೆ. “ತಲೆಸುತ್ತು” ಎಂಬ ವಿಚಾರವನ್ನು ಸಾಕಷ್ಟು ಮಂದಿ ಸರ್ಚ್ ಮಾಡಿದ್ದು, ಸುಮಾರು 1 ಲಕ್ಷ ಸರ್ಚ್ ಆಗಿರುವುದಾಗಿ ಮಾಹಿತಿ ದೊರೆತಿದೆ.

ಭಾರತದಲ್ಲಿ ವರ್ಟಿಗೋದ ವಾಸ್ತವ ಸ್ಥಿತಿ: ಅಬಾಟ್ ಮತ್ತು ಐಕ್ಯೂವಿಐಎ ಸಹಯೋಗದಲ್ಲಿ ನಡೆದ ಸಮೀಕ್ಷಾ ವರದಿಯಲ್ಲಿ ಈ ಕೆಳಗಿನ ಮಾಹಿತಿಯನ್ನು ನೀಡಲಾಗಿದೆ:

  • ಶೇ.44ರಷ್ಟು ಜನರು ಒಂದು ವರ್ಷಕ್ಕಿಂತ ಹೆಚ್ಚು ಕಾಲ ವರ್ಟಿಗೋ ಸಮಸ್ಯೆಯ ಜೊತೆ ಬದುಕುತ್ತಿದ್ದಾರೆ. ವಾರಕ್ಕೊಮ್ಮೆ ವರ್ಟಿಗೋ ಲಕ್ಷಣಗಳಿಂದ ತೊಂದರೆ ಅನುಭವಿಸುತ್ತಾರೆ.
  • ಅನೇಕರು ಕಡಿಮೆ ಬ್ಲಡ್ ಶುಗರ್, ಕಡಿಮೆ ರಕ್ತದೊತ್ತಡ, ನಿರ್ಜಲೀಕರಣ, ಅಥವಾ ಒತ್ತಡದಿಂದ ವರ್ಟಿಗೋ ಉಂಟಾಗುತ್ತದೆ ಎಂದು ತಪ್ಪು ತಿಳಿದಿದ್ದಾರೆ.
  • ತಲೆಸುತ್ತು ಸಮಸ್ಯೆ ಇರುವವರಲ್ಲಿ ಕೇವಲ ಶೇ.48ರಷ್ಟು ಮಂದಿ ಮಾತ್ರ ವೈದ್ಯಕೀಯ ನೆರವು ಪಡೆಯುತ್ತಾರೆ.
  • ಸಮಸ್ಯೆ ಗೊತ್ತಾದ ನಂತರವೂ ಬಹಳಷ್ಟು ಮಂದಿ ಸಮಸ್ಯೆ ಅಂತಿಮ ಚರಣ ತಲುಪುವವರೆಗೆ ವೈದ್ಯಕೀಯ ಸಹಾಯ ಪಡೆಯಲು ಮುಂದಾಗುವುದಿಲ್ಲ.
Vertigo R

ಈ ಕುರಿತು ಮಾತನಾಡುವ ಅಬಾಟ್ ಇಂಡಿಯಾದ ವೈದ್ಯಕೀಯ ವ್ಯವಹಾರಗಳ ನಿರ್ದೇಶಕರಾದ ಡಾ. ಜೆಜೋ ಕರಣ್‌ಕುಮಾರ್ ಅವರು , “ವಿಶ್ವಾದ್ಯಂತ ಪ್ರತೀ 10 ಜನರಲ್ಲಿ ಒಬ್ಬರು ತಮ್ಮ ಜೀವನ ದಲ್ಲಿ ಯಾವುದಾದರೂ ಒಂದು ಸಂದರ್ಭದಲ್ಲಿ ವರ್ಟಿಗೋ ಸಮಸ್ಯೆ ಎದುರಿಸುತ್ತಾರೆ. ತಲೆಸುತ್ತು, ಅಸ್ಥಿರತೆ, ಮತ್ತು ವಾಕರಿಕೆಯಂತಹ ಆರಂಭಿಕ ಲಕ್ಷಣಗಳನ್ನು ಕಾಣಬಹುದಾದರೆ ಆ ಲಕ್ಷಣಗಳನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ. ಆರಂಭಿಕ ಹಂತದಲ್ಲಿಯೇ ಈ ಸಮಸ್ಯೆ ಪತ್ತೆ ಹಚ್ಚುವು ದರಿಂದ ಮತ್ತು ಸೂಕ್ತ ಚಿಕಿತ್ಸೆ ನೀಡುವುದರಿಂದ ಭವಿಷ್ಯದಲ್ಲು ಉಂಟಾಗುವ ಹೆಚ್ಚಿನ ಸಮಸ್ಯೆ ಗಳನ್ನು ತಡೆಯಬಹುದು. ಜಾಗೃತಿ ಉಂಟು ಮಾಡುವ ಮೂಲಕ, ಆರಂಭಿಕ ಹಂತದಲ್ಲಿ ಸಮಸ್ಯೆ ಪತ್ತೆ ಹಚ್ಚಲು ಪ್ರೋತ್ಸಾಹಿಸುವ ಮೂಲಕ, ಮತ್ತು ವರ್ಟಿಗೋ ಇರುವವರಿಗೆ ನೆರವು ನೀಡುವ ಮೂಲಕ ಎಲ್ಲರೂ ಸಮತೋಲನದ ಜೀವನವನ್ನು ನಡೆಸಲು ಸಹಾಯ ಮಾಡಬಹುದು” ಎಂದು ಹೇಳುತ್ತಾರೆ.

ಡಾಕ್ಟರ್ ಇಂಟರ್ ನೆಟ್‌ ನ ಪಾತ್ರ: ಅಬಾಟ್ ಬೆಂಬಲಿತ ಇಂಟರ್‌ ನ್ಯಾಷನಲ್ ಜರ್ನಲ್ ಆಫ್ ಕ್ಲಿನಿಕಲ್ ಸ್ಕಿಲ್ಸ್‌ ಅಧ್ಯಯನ ವರದಿಯು ಈಗ ವರ್ಟಿಗೋ ಕುರಿತು ತಿಳಿದುಕೊಳ್ಳಲು ಜನ ಸಾಮಾಜಿಕ ಮಾಧ್ಯಮವನ್ನು ಅವಲಂಬಿಸಿರುವುದನ್ನು ತಿಳಿಸಿದೆ. ಈ ಅಧ್ಯಯನದ ಭಾಗವಾಗಿ ಕಳೆದ ಎರಡು ವರ್ಷಗಳಲ್ಲಿ ಸುಮಾರು 6,900 ಆನ್ ಲೈನ್ ಪೋಸ್ಟ್‌ ಗಳನ್ನು ವಿಶ್ಲೇಷಣೆ ನಡೆಸಲಾಗಿದೆ. ವರ್ಟಿಗೋಗೆ ಸಂಬಂಧಿಸಿದ 4,353 ಸಂವಹನಗಳನ್ನು ವಿಶ್ಲೇಷಿಸಲಾಗಿದೆ. ವಿಶೇಷವಾಗಿ ವರ್ಟಿಗೋ ಕುರಿತು ಇರುವ ತಪ್ಪು ಅಭಿಪ್ರಾಯಗಳನ್ನು ಕೂಡ ಈ ವರದಿ ಬಹಿರಂಗ ಪಡಿಸಿದೆಯ ಈ ಅಧ್ಯಯನ ವರದಿಯ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ:

ಶೇ.65ರಷ್ಟು ಮಹಿಳೆಯರು ವರ್ಟಿಗೋ ಕುರಿತು ಆನ್‌ ಲೈನ್‌ ನಲ್ಲಿ ಮಾಹಿತಿ ಸರ್ಚ್ ಮಾಡುತ್ತಾರೆ.

  • ಶೇ.51ರಷ್ಟು ಪ್ರಶ್ನೆಗಳನ್ನು ಎಕ್ಸ್ ನಲ್ಲಿ, ಶೇ.46ರಷ್ಟು ಪ್ರಶ್ನೆಗಳನ್ನು ವೈದ್ಯಕೀಯ ವೇದಿಕೆಗಳಲ್ಲಿ ಕೇಳಲಾಗುತ್ತದೆ ಮತ್ತು ಯೂಟ್ಯೂಬ್ ಕೂಡ ಜನಪ್ರಿಯವಾಗಿದೆ.
  • ಶೇ.51ರಷ್ಟು ಜನರು ವರ್ಟಿಗೋ ಕಾರಣಗಳು ಮತ್ತು ರೋಗನಿರ್ಣಯದ ಕುರಿತು ತಿಳಿಯಲು ಆಸಕ್ತರಾಗಿದ್ದಾರೆ.
  • “ತಲೆಸುತ್ತು” ಎಂಬ ವಿಚಾರವನ್ನು 1 ಲಕ್ಷ ಬಾರಿ ಸರ್ಚ್ ಮಾಡಲಾಗಿದೆ.
  • ಕೆಲವರು ವರ್ಟಿಗೋ ತಮ್ಮ ಡಯಾಬಿಟೀಸ್, ಅಧಿಕ ರಕ್ತದೊತ್ತಡ, ಅಥವಾ ಸರ್ವಿಕಲ್ ಸ್ಪಾಂಡಿಲೋಸಿಸ್‌ ಗೆ ಸಂಬಂಧಿಸಿದ್ದೇ ಎಂಬ ಅನುಮಾನ ಹೊಂದಿದ್ದಾರೆ.
  • ವರ್ಟಿಗೋ ಮತ್ತು ತಲೆಸುತ್ತಿನ ನಡುವಿನ ವ್ಯತ್ಯಾಸ, ತಪ್ಪು ರೋಗನಿರ್ಣಯ, ಮತ್ತು ತಡವಾದ ರೋಗನಿರ್ಣಯವು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ವಿಷಯಗಳಾಗಿವೆ.

ಈ ಪ್ರಶ್ನೆಗಳಿಗೆ ಮಾಹಿತಿ ಪಡೆಯುವುದು ಸೂಕ್ತವಾದರೂ ಈ ಕುರಿತು ಈ ಮಾಹಿತಿಗಳನ್ನು ವೈದ್ಯರ ಜೊತೆ ಚರ್ಚೆ ನಡೆಸಿ ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ.

ಈ ಕುರಿತು ಮಾತನಾಡಿರುವ ಹೈದರಾಬಾದ್ ಅಪೋಲೋ ಹಾಸ್ಪಿಟಲ್ ನ ಪ್ರೊಫೆಸರ್ ಮತ್ತು ನರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸುಧೀರ್ ಕುಮಾರ್ ಅವರು :

“ವರ್ಟಿಗೋ ಒಂದು ಲಕ್ಷಣವೇ ಹೊರತು ರೋಗವಲ್ಲ. ವರ್ಗಿಯೋ ಸಾಮಾನ್ಯವಾಗಿ ಒಳ ಕಿವಿಯ ಸಮತೋಲನ ವ್ಯವಸ್ಥೆಯ ಸಮಸ್ಯೆಯಿಂದ ಉಂಟಾಗುತ್ತದೆ. ಆನ್‌ ಲೈನ್‌ ನಲ್ಲಿ ವರ್ಟಿಗೋ ಬಗ್ಗೆ ಸಾಕಷ್ಟು ಮಾಹಿತಿ ಇದ್ದರೂ ಸರಿಯಾದ ಮತ್ತು ಸಕಾಲಿಕ ರೋಗ ನಿರ್ಣಯಕ್ಕಾಗಿ ವೈದ್ಯರನ್ನು ಭೇಟಿಯಾಗುವುದು ಬಹಳ ಮುಖ್ಯ. ಸೂಚಿಸಲಾದ ಚಿಕಿತ್ಸೆಗಳು ಮತ್ತು ವ್ಯಾಯಾಮಗಳನ್ನು ಅನುಸರಿಸುವುದರಿಂದ ವರ್ಟಿಗೋ ಮತ್ತು ಅದರ ಲಕ್ಷಣಗಳಿಂದ ಪಾರಾಗಬಹುದು” ಎಂದು ಹೇಳಿದರು.

ವರ್ಟಿಗೋ ನಿರ್ವಹಣೆ: ಕೆಲವು ಸರಳ ಹೆಜ್ಜೆಗಳನ್ನು ಪಾಲಿಸುವ ಮೂಲಕ ವರ್ಟಿಗೋವನ್ನು ನಿರ್ವಹಿಸಬಹುದು ಮತ್ತು ಆ ಮೂಲಕ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು. ವರ್ಟಿಗೋ ಹೊಂದಿರುವವರು ಪಾಲಿಸಬೇಕಾದ ಸಲಹೆಗಳು ಈ ಕೆಳಗಿನಂತಿವೆ:

  • ಸೂಕ್ತ ಮಾಹಿತಿ ತಿಳಿದುಕೊಳ್ಳುವುದು: ಶೇ.54ರಷ್ಟು ಪ್ರಶ್ನೆಗಳು ಮಧ್ಯವಯಸ್ಕ ವಯಸ್ಕರಿಂದ, ಶೇ.27ರಷ್ಟು ಪ್ರಶ್ನೆಗಳು ಯುವಜನರಿಂದ, ಮತ್ತು ಶೇ.19ರಷ್ಟು ಪ್ರಶ್ನೆಗಳು ವೃದ್ಧ ರೋಗಿಗಳಿಂದ ಬಂದಿವೆ. ಶೇ.46ರಷ್ಟು ಜನರು ವೈದ್ಯಕೀಯ ವೇದಿಕೆಗಳಲ್ಲಿ ಈ ಕುರಿತು ವೈದ್ಯರ ಸಲಹೆ ಮತ್ತು ಔಷಧಿಗಳ ಮಾಹಿತಿ ಪಡೆಯುತ್ತಾರೆ. ವರ್ಟಿಗೋ ಲಕ್ಷಣಗಳನ್ನು ಹೊಂದಿರುವವರು ಸೂಕ್ತ ಸಮಯದಲ್ಲಿ ರೋಗ ನಿರ್ಣಯಕ್ಕಾಗಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.
  • ನಿರಂತರತೆ ಬಹಳ ಮುಖ್ಯ: ಲಕ್ಷಣಗಳನ್ನು ಸೂಕ್ತವಾಗಿ ನಿರ್ವಹಿಸಲು ನಿಯಮಿತ ತಪಾಸಣೆಗಳನ್ನು ನಡೆಸುವುದು ಬಹಳ ಅವಶ್ಯ. ಮತ್ತು ಅದರಿಂದ ಸೂಕ್ತ ಚಿಕಿತ್ಸೆಯನ್ನು ನೀಡಲು ಸಹಾಯ ಆಗುತ್ತದೆ. ಯೋಗ ಮತ್ತು ವಾಕಿಂಗ್ ನಂತಹ ಸೌಮ್ಯ ವ್ಯಾಯಾಮಗಳನ್ನು ಮಾಡುವ ಮೂಲತ ವರ್ಟಿಗೋ ಲಕ್ಷಣಗಳನ್ನು ಕಡಿಮೆ ಮಾಡಿ ಸಮತೋಲನದಿಂದ ಮುನ್ನಡೆಯಬಹುದು.
  • ನಿದ್ರೆ ಮಾಡುವ ಭಂಗಿಯನ್ನು ಉತ್ತಮಗೊಳಿಸಿ: ನಿದ್ರೆ ಮಾಡುವ ಭಂಗಿ ಕೂಡ ವರ್ಟಿಗೋ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ತಲೆಯನ್ನು ಕೊಂಚ ಎತ್ತರವಾಗಿಟ್ಟು ಬೆನ್ನಿನ ಮೇಲೆ ಮಲಗುವುದು ವರ್ಟಿಗೋ ಲಕ್ಷಣಗಳನ್ನು ಕಡಿಮೆ ಮಾಡಬಹುದು. ಪಕ್ಕಕ್ಕೆ ಮಲಗುವುದರಿಂದ ಲಕ್ಷಣಗಳು ಹೆಚ್ಚಾಗಬಹುದು.

ವರ್ಟಿಗೋ ಇರುವವರು ಲಭ್ಯವಿರುವ ಸಂಪನ್ಮೂಲಗಳಿಂದ ಸರಿಯಾದ ಮಾಹಿತಿಯನ್ನು ಪಡೆದು ಕೊಂಡು, ಸೂಕ್ತ ಸಹಾಯವನ್ನು ಪಡೆದರೆ ಉತ್ತಮವಾದ, ಆರೋಗ್ಯಕರ ಜೀವನವನ್ನು ನಡೆಸಬಹು ದಾಗಿದೆ.

Source: Vishwavani

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *