ಬೆಳಗಿನ ಉಪಹಾರಕ್ಕೆ ಮುನ್ನ ಸೇವಿಸಬಹುದಾದ, ಕೆಲವೊಂದು ಆರೋಗ್ಯಕರ ಆಹಾರಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಿದ್ದೇವೆ ಮುಂದೆ ಓದಿ…
ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ನಾವು ಏನನ್ನು ಸೇವನೆ ಮಾಡುತ್ತೆವೆಯೋ ಅದು ನಮ್ಮ ಇಡೀ ದಿನದ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಹೀಗಾಗಿ ನಮ್ಮ ದಿನದ ಮೊದಲ ಆಹಾರ ಯಾವತ್ತಿಗೂ ಕೂಡ ಆರೋಗ್ಯಕರವಾಗಿರಬೇಕು.ಕೆಲವರು ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಬೆಡ್ ಕಾಫಿ ಕುಡಿಯುವುದು ಅಥವಾ ಚಹಾ ಕುಡಿಯುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಬನ್ನಿ ಇಂದಿನ ಲೇಖನದಲ್ಲಿ ಯಾವೆಲ್ಲಾ ಆಹಾರಗಳನ್ನು ಖಾಲಿ ಹೊಟ್ಟೆ ಯಲ್ಲಿ ಸೇವನೆ ಮಾಡಬಹುದು ಹಾಗೂ ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳು ಇವೆ ಎನ್ನುವುದರ ಬಗ್ಗೆ ನೋಡುತ್ತಾ ಹೋಗೋಣ…
ಶುದ್ಧ ಹಸುವಿನ ತುಪ್ಪ
- ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಒಂದು ಸಣ್ಣ ಚಮಚದಷ್ಟು ತುಪ್ಪವನ್ನು ಸೇವನೆ ಮಾಡುವುದರಿಂದ, ನಾವು ಸೇವಿಸುವ ಆಹಾರಗಳು ಹೊಟ್ಟೆಯಲ್ಲಿ ಚೆನ್ನಾಗಿ ಜೀರ್ಣವಾಗು ವಂತೆ ನೋಡಿಕೊಳ್ಳುತ್ತದೆ ಜೊತೆಗೆ ಅಜೀರ್ಣ ಮಲಬದ್ಧತೆ, ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ಉಬ್ಬರ ಉಂಟಾಗದಂತೆ ಕಾಪಾಡು ತ್ತದೆ.
- ಅಷ್ಟೇ ಅಲ್ಲದೆ ತುಪ್ಪದಲ್ಲಿ ತನ್ನಲ್ಲಿ ವಿಟಮಿನ್ ಸಿ ಪ್ರಮಾಣ ವನ್ನು ಹೆಚ್ಚಾಗಿ ಒಳಗೊಂಡಿರುವುದು ಮಾತ್ರವಲ್ಲದೆ, ಆಂಟಿ ಬ್ಯಾಕ್ಟೀರಿಯಲ್ ಹಾಗೂ ಆಂಟಿ ಫಂಗಲ್ ಗುಣಲಕ್ಷಣಗಳನ್ನು ಕೂಡ ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ಒಳಗೊಂಡಿರುವುದರಿಂದ, ಚಳಿಗಾಲದ ಸಂದರ್ಭದಲ್ಲಿ ಎದುರಾಗುವ ನೆಗಡಿ, ಕೆಮ್ಮು, ಶೀತ, ಜ್ವರ ಇತ್ಯಾದಿಗಳ ವಿರುದ್ಧ ನಮಗೆ ರಕ್ಷಣೆ ಮಾಡುವುದರ ಜೊತೆಗೆ ದೇಹದ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸಲು ನೆರ ವಾಗುತ್ತದೆ.
ನೆನೆಸಿಟ್ಟ ಬಾದಾಮಿ ಬೀಜಗಳು
- ಆರೋಗ್ಯಕಾರಿ ಆಹಾರಗಳ ಪಟ್ಟಿಯಲ್ಲಿ ಬಾದಾಮಿ ಬೀಜಗಳಿಗೆ ಮೊದಲ ಸ್ಥಾನವನ್ನು ನೀಡಲಾಗಿದೆ. ಇದಕ್ಕೆ ಪ್ರಮುಖ ಕಾರಣ ಈ ಒಣಫಲದಲ್ಲಿ ಹಲವಾರು ಬಗೆಯ ಪೋಷಕಾಂಶಗಳು ಅಡಗಿವೆ.
- ಪ್ರಮುಖವಾಗಿ ಈ ಒಣಬೀಜದಲ್ಲಿ ಉತ್ತಮ ಪ್ರಮಾಣದ ಕರಗುವ ನಾರಿನಾಂಶ, ಪ್ರೋಟೀನ್, ವಿಟಮಿನ್ ಇ, ಮೆಗ್ನೀಶಿಯಂ ಒಮೆಗಾ-3, ಒಮೆಗಾ -6 ಕೊಬ್ಬಿನ ಆಮ್ಲಗಳು ಹಾಗೂ ಇನ್ನಿತರ ಪೋಷಕಾಂಶಗಳು ಅಗಾಧ ಪ್ರಮಾಣದಲ್ಲಿ ಕಂಡು ಬರುತ್ತದೆ.
- ಹೀಗಾಗಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಮೂರು-ನಾಲ್ಕು ಬಾದಾಮಿ ಬೀಜಗಳನ್ನು ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟು, ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಗೆ, ಸೇವನೆ ಮಾಡುವುದರಿಂದ, ಆರೋಗ್ಯ ವೃದ್ಧಿಯಾಗುವುದು ಮಾತ್ರವಲ್ಲದೆ ಹಲವಾರು ಕಾಯಿಲೆಗಳು ನಮ್ಮಿಂದ ದೂರವಾಗುವುದು
ನೆನೆಸಿಟ್ಟ ಒಣದ್ರಾಕ್ಷಿ
- ಬಾದಾಮಿಗಳಂತೆಯೇ ಒಣದ್ರಾಕ್ಷಿಗಳನ್ನು ರಾತ್ರಿಯಿಡೀ ನೀರಿ ನಲ್ಲಿ ನೆನೆಸಿ, ಮರುದಿನ ಖಾಲಿ ಹೊಟ್ಟೆಗೆ ಸೇವನೆ ಮಾಡುವು ದರಿಂದ, ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ.
- ಪ್ರಮುಖವಾಗಿ ಒಣದ್ರಾಕ್ಷಿಯಲ್ಲಿ ನೈಸರ್ಗಿಕ ಸಕ್ಕರೆಯಾಂಶ ಹೆಚ್ಚಿನ ಪ್ರಮಾಣದಲ್ಲಿ ತುಂಬಿರುವುದರಿಂದ, ದೇಹದ ಶಕ್ತಿ ಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ಅಷ್ಟೇ ಅಲ್ಲದೆ ಒಣದ್ರಾಕ್ಷಿ ಹಣ್ಣಿನಲ್ಲಿ ಕಬ್ಬಿಣಾಂಶ, ಕರಗುವ ನಾರಿನಾಂಶ, ಪೊಟ್ಯಾಸಿಯಂ ಮತ್ತು ಕ್ಯಾಲ್ಸಿಯಂ ಮೊದಲಾದ ಪೋಷಕಾಂಶ ಗಳು ಅಧಿಕ ಪ್ರಮಾಣದಲ್ಲಿ ಕಂಡು ಬರುವುದ ರಿಂದ ರಕ್ತದೊತ್ತಡ ವನ್ನು ನಿರ್ವಹಿಸಲು, ಮೂಳೆಗಳನ್ನು ಸದೃಢವಾಗಿಸಲು, ಜೀರ್ಣಕ್ರಿಯೆ ಯನ್ನು ಸರಾಗಗೊಳಿಸಲು ಸಹಾಯ ಮಾಡುತ್ತದೆ.
ಪಪ್ಪಾಯಿ ಹಣ್ಣು
- ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ನೈಸರ್ಗಿಕವಾದ ಸಿಹಿ ಅಂಶ ವನ್ನು ಹಾಗೂ ಅಷ್ಟೇ ಪ್ರಮಾಣದಲ್ಲಿ ಆರೋಗ್ಯದ ಲಾಭಗ ಳನ್ನು ಒಳಗೊಂಡಿರುವ ಪರಂಗಿ ಹಣ್ಣನ್ನು ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ, ಅನೇಕ ರೀತಿಯ ಆರೋಗ್ಯ ಸಮಸ್ಯೆ ಗಳು ನಮ್ಮಿಂದ ದೂರವಾಗುತ್ತವೆ.
- ಪ್ರಮುಖವಾಗಿ ನಾರಿನಾಂಶ ಹೆಚ್ಚಾಗಿರುವ ಪಪ್ಪಾಯಿ ಹಣ್ಣ ನ್ನು ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ, ಅಜೀರ್ಣ ಮಲ ಬದ್ಧತೆಯಂತಹ ಸಮಸ್ಯೆಗಳು ದೂರವಾಗಿ ಜೀರ್ಣಕ್ರಿಯೆ ಪ್ರಕ್ರಿಯೆಯು ಹೆಚ್ಚಾಗುತ್ತದೆ.
- ಇದರ ಜೊತೆಗೆ ಈ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿರುವುದ ರಿಂದ ದೇಹದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ.
- ಇನ್ನೂ ಪ್ರಮುಖವಾಗಿ ಈ ಹಣ್ಣಿನಲ್ಲಿ ಕ್ಯಾಲೋರಿಗಳು ತುಂಬಾ ನೇ ಕಡಿಮೆ ಪ್ರಮಾಣದಲ್ಲಿ ಕಂಡು ಬರುವುದರಿಂದ, ದೇಹದ ತೂಕ ಇಳಿಸಲು ಬಯಸುವವರು, ಖಾಲಿ ಹೊಟ್ಟೆಗೆ ಈ ಹಣ್ಣನ್ನು ಸೇವನೆ ಮಾಡುವುದರಿಂದ ತುಂಬಾನೇ ಲಾಭ ಪಡೆಯಬಹುದು.
ಖರ್ಜೂರ
- ತನ್ನಲ್ಲಿ ನೈಸರ್ಗಿಕ ಸಿಹಿ ಅಂಶವನ್ನು ಹೊಂದಿರುವ ಒಂದೆರಡು ಖರ್ಜೂಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದ ರಿಂದ, ದೇಹದಲ್ಲಿ ಸುಸ್ತು, ಆಯಾಸ ಕಾಣಿಸುವುದಿಲ್ಲ!
- ಇದಕ್ಕೆ ಪ್ರಮುಖ ಕಾರಣಈ ಹಣ್ಣಿನಲ್ಲಿ ಸಿಗುವ ಸರ್ಗಿಕ ಸಕ್ಕರೆ ಅಂಶ ದೇಹಕ್ಕೆ ಶಕ್ತಿ ಮತ್ತು ಚೈತನ್ಯವನ್ನು ಕೊಡುವಲ್ಲಿ ನೆರವಾ ಗುತ್ತವೆ. ಇನ್ನು ಈ ಹಣ್ಣಿನಲ್ಲಿ ನಾರಿನ ಅಂಶವು ಅಧಿಕ ಪ್ರಮಾಣ ದಲ್ಲಿ ಸಿಗುವುದರಿಂದ, ಜೀರ್ಣಶಕ್ತಿ ಪ್ರಕ್ರಿಯೆಯು ಹೆಚ್ಚಾಗಿ, ಅಜೀರ್ಣ ಮಲಬದ್ಧತೆಯಂತಹ ಆರೋಗ್ಯ ಸಮಸ್ಯೆಗಳು ಕೂಡ ದೂರವಾಗುತ್ತವೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1