Kitchen Tips: ಅಡುಗೆ ಮನೆ ಸ್ವಚ್ಛವಾಗಿದ್ದರೆ ಮಾತ್ರ ಅಡುಗೆ ಮಾಡೋಕೆ ಮನಸ್ಸು ಬರುತ್ತದೆ. ಪಾತ್ರೆ, ಲೋಟಗಳನ್ನು ತೊಳೆದಿಡುವ ನಾವು ಎಷ್ಟೋ ಬಾರಿ ಗ್ಯಾಸ್ ಬರ್ನರ್ಗಳ ಕಡೆಗೆ ಲಕ್ಷ್ಯ ನೀಡಲು ಹೋಗುವುದೇ ಇಲ್ಲ. ಹೀಗಾಗಿ ಗ್ಯಾಸ್ ಬರ್ನರ್ಗಳಲ್ಲಿ ಕೊಳೆ ತುಂಬಿಕೊಂಡು ಬಿಟ್ಟಿರುತ್ತದೆ.

ಇನ್ನೂ ಹಲವರಿಗೆ ಗ್ಯಾಸ್ ಬರ್ನರ್ಗಳನ್ನು ಸ್ವಚ್ಛಗೊಳಿಸೋದು ಕಷ್ಟ ಎಂಬ ತಪ್ಪು ಕಲ್ಪನೆ ಕೂಡ ಇರುತ್ತದೆ. ಆದರೆ ನೀವು ಇಲ್ಲಿ ಹೇಳಲಾದ ಸಿಂಪಲ್ ಸಲಹೆಗಳನ್ನು ಅಳವಡಿಸಿಕೊಂಡರೆ ಗ್ಯಾಸ್ ಬರ್ನರ್ಗಳನ್ನು ಅತ್ಯಂತ ಸುಲಭವಾಗಿ ಸ್ವಚ್ಛಗೊಳಿಸಬಹುದಾಗಿದೆ.
ಮನೆಯ ಇತರೆ ಭಾಗಗಳನ್ನು ಸ್ವಚ್ಛಗೊಳಿಸುವಂತೆ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೂಡ ತುಂಬಾನೇ ಮುಖ್ಯವಾಗಿದೆ. ಅಡುಗೆ ಮನೆಯೆಂದರೆ ಕೇವಲ ನೆಲ, ಗೋಡೆ, ಪಾತ್ರೆಗಳನ್ನು ಶುಚಿಗೊಳಿಸುವುದು ಮಾತ್ರವಲ್ಲ. ಗ್ಯಾಸ್ ಸ್ಟೌಗಳ ಮೇಲೆಯೇ ಎಲ್ಲಾ ಆಹಾರಗಳನ್ನು ಬೇಯಿಸುವುದರಿಂದ ಇದನ್ನು ಸ್ವಚ್ಛಗೊಳಿಸುವುದು ಕೂಡ ಮುಖ್ಯವಾಗಿದೆ. ಹೀಗಾಗಿ ರಾತ್ರಿ ಮಲಗುವ ಮುನ್ನ ನೀವು ಗ್ಯಾಸ್ ಬರ್ನರ್ಗಳನ್ನು ಸ್ವಚ್ಛಗೊಳಿಸಬೇಕು.
ಆಗ್ಗಾಗ್ಗೆ ಬರ್ನರ್ ಸ್ವಚ್ಚಗೊಳಿಸಬೇಕು
ಮನೆಯಲ್ಲಿ ಮಹಿಳೆಯರು ಗ್ಯಾಸ್ ಸ್ಟೌಗಳನ್ನು ಶುಚಿಗೊಳಿಸುವ ಸಂದರ್ಭದಲ್ಲಿ ಒಂದು ಮುಖ್ಯವಾದ ವಿಷಯವನ್ನೇ ಮರೆತುಬಿಡುತ್ತಾರೆ. ಗ್ಯಾಸ್ ಬರ್ನರ್ ಪ್ರತಿದಿನ ಸ್ವಚ್ಛಗೊಳಿಸಬೇಕು ಎಂಬ ಗೋಜಿಗೆ ಮಹಿಳೆಯರು ಹೋಗುವುದೇ ಇಲ್ಲ. ಆದರೆ ನೀವು ಪ್ರತಿದಿನ ಗ್ಯಾಸ್ ಬರ್ನರ್ ಶುಚಿಗೊಳಿಸದೇ ಹೋದಲ್ಲಿ ಅದರ ಮೇಲೆ ಜಿಡ್ಡು ಕುಳಿತುಕೊಂಡು ಕ್ರಮೇಣವಾಗಿ ಅದು ಹಾಳಾಗಿಬಿಡಬಹುದು. ಒಂದು ದಿನ ಗ್ಯಾಸ್ ಬರ್ನರ್ನಿಂದ ಬೆಂಕಿಯೇ ಹೊರಬರದೇ ಇರಬಹುದು..!
ಹಾಗಂತ ಪ್ರತಿದಿನ ಗ್ಯಾಸ್ ಬರ್ನರ್ ಶುಚಿಗೊಳಿಸುವುದು ಸುಲಭದ ಕೆಲಸ ಕೂಡ ಅಲ್ಲ. ಇದೇ ಕಾರಣಕ್ಕೆ ಮಹಿಳೆಯರು ಕೆಲಸವನ್ನು ಮಾಡುವ ಗೋಜಿಗೆ ಹೋಗುವುದಿಲ್ಲ. ಅನೇಕರ ಮನೆಯಲ್ಲಿ ಗ್ಯಾಸ್ ಬರ್ನರ್ ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ. ಗ್ಯಾಸ್ ಬರ್ನರ್ನ ರಂಧ್ರಗಳಲ್ಲಿ ಜಿಡ್ಡು ಕುಳಿತ ಪರಿಣಾಮ ಗ್ಯಾಸ್ ಬರ್ನರ್ನಿಂದ ಹೊರಬರುವ ಬೆಂಕಿಯ ಪ್ರಮಾಣ ಕಡಿಮೆಯಾಗಬಹುದು. ಅನೇಕ ಸಂದರ್ಭಗಳಲ್ಲಿ ಅನಿಲ ಸೋರಿಕೆಯಿಂದ ಬರುವ ಕೆಟ್ಟ ವಾಸನೆ ಅಡುಗೆ ಮನೆ ತುಂಬೆಲ್ಲ ಇರುತ್ತದೆ. ನಿಮ್ಮ ಅಡುಗೆ ಮನೆಗಳಲ್ಲೂ ಇಂಥಾ ಸಮಸ್ಯೆ ಕಾಣಿಸಿಕೊಳ್ತಿದ್ದರೆ ಅಥವಾ ಇಂಥ ಸಮಸ್ಯೆಗಳಿಂದ ನಿಮ್ಮ ಅಡುಗೆ ಮನೆಯನ್ನು ನೀವು ಕಾಪಾಡಿಕೊಳ್ಳಬೇಕು ಎಂದುಕೊಂಡಿದ್ದರೆ ನೀವು ಹೊಸ ಬರ್ನರ್ಗೆ ಪದೇ ಪದೇ ಹಣ ಹಾಕುವುದನ್ನು ತಪ್ಪಿಸಬೇಕಾದರೆ ನೀವು ಗ್ಯಾಸ್ ಬರ್ನರ್ ಶುದ್ಧಗೊಳಿಸಬೇಕು.
ಅಂದಹಾಗೆ ಇದು ನೀವೆಂದುಕೊಂಡಂತೆ ಯಾವುದೇ ಬ್ರಹ್ಮ ವಿದ್ಯೆ ಕೂಡ ಅಲ್ಲ. ಕೇವಲ 2 ನಿಮಿಷಗಳಲ್ಲಿ ನೀವು ಗ್ಯಾಸ್ ಬರ್ನರ್ಗಳನ್ನು ಶುಚಿಗೊಳಿಸಿ ಲಕ ಲಕ ಹೊಳೆಯುವಂತೆ ಮಾಡಬಹುದು. ಗ್ಯಾಸ್ ಬರ್ನರ್ನ್ನು ಥಟ್ ಅಂತ ಸ್ವಚ್ಛಗೊಳಿಸಲು ಬೇಕಾಗಿರುವ ದ್ರವವನ್ನು ನೀವು ಮನೆಯಲ್ಲಿರುವ ಪದಾರ್ಥಗಳನ್ನು ಬಳಕೆ ಮಾಡಿ ತಯಾರಿಸಬಹುದು. ಅದನ್ನು ತಯಾರಿಸುವುದು ಹೇಗೆ..? ಹಾಗೂ ಅದರಿಂದ ಗ್ಯಾಸ್ ಬರ್ನರ್ ಶುಚಿಗೊಳಿಸುವುದು ಹೇಗೆ ಎಂಬುದಕ್ಕೆ ಮಾಹಿತಿ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು : ಬಿಸಿ ನೀರು, ನಿಂಬೆ ರಸ 1 ಚಮಚ, ಇನೋ 2 ಪ್ಯಾಕೆಟ್, ಲಿಕ್ವಿಡ್ ಸೋಪ್ – 1 ಚಮಚ, ಹಲ್ಲುಜ್ಜುವ ಬ್ರಶ್ – ಹಳೆಯದ್ದು
ಶುಚಿಗೊಳಿಸುವ ವಿಧಾನ: ಬಿಸಿ ನೀರಿನಲ್ಲಿ ನಿಂಬೆ ರಸ ಹಾಗೂ ಇನೋವನ್ನು ಮಿಶ್ರಣ ಮಾಡಿ. ಇದರಲ್ಲಿ ಗ್ಯಾಸ್ ಬರ್ನರ್ಗಳನ್ನು ಹಾಕಿ 15 ನಿಮಿಷಗಳ ಕಾಲ ನೆನೆಯಲು ಬಿಡಿ. 15 ನಿಮಿಷಗಳ ಬಳಿಕ ಅವುಗಳ ಮೇಲಿರುವ ಜಿಡ್ಡಿನಂಶ ಹೋಗುತ್ತಿದೆಯೇ ಎಂಬುದನ್ನು ಪರಿಶೀಲನೆ ಮಾಡಿ. ಜಿಡ್ಡು ತೇವವಾಗಿದೆ ಎಂಬುದು ನಿಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ಹಳೆಯ ಬ್ರಶ್ನಿಂದ 2 ನಿಮಿಷಗಳ ಕಾಲ ಬರ್ನರ್ನ್ನು ಶುದ್ಧಗೊಳಿಸಿ. ಪ್ರತಿ 15 ದಿನಗಳಿಗೊಮ್ಮೆ ಈ ರೀತಿ ಮಾಡುವ ಮೂಲಕ ಗ್ಯಾಸ್ ಬರ್ನರ್ನ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬಹುದು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1