ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಮೊದಲ ಪಂದ್ಯ ಯಾವಾಗ, ಯಾರ ವಿರುದ್ಧ, ಯಾವ ಸಮಯದಲ್ಲಿ? ಇಲ್ಲಿದೆ ಡಿಟೇಲ್ಸ್‌.

ಐಸಿಸಿ ಟಿ20 ವಿಶ್ವಕಪ್‌ 2024ಕ್ಕೆ ಕ್ಷಣಗಣನೆ ಆರಂಭವಾಗಿದೆ. 9ನೇ ಆವೃತ್ತಿಯ ಟಿ20 ವಿಶ್ವಕಪ್ ಅಮೆರಿಕ ಮತ್ತು ಕೆನಡಾ ನಡುವಿನ ಪಂದ್ಯದಿಂದ ಆರಂಭವಾಗಲಿದೆ. ಐಸಿಸಿ ಟಿ20 ವಿಶ್ವಕಪ್ 2024 (T20 World Cup 2024) ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಆಯೋಜಿಸಲಾಗಿದೆ. ಟೀಂ ಇಂಡಿಯಾ (Team India) ಲೀಗ್‌ನ ಎಲ್ಲಾ ನಾಲ್ಕು ಪಂದ್ಯಗಳನ್ನು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಆಡಲಿದೆ. ಇನ್ನು, ಆದರೆ ಭಾರತದ ಮೊದಲ ಪಂದ್ಯ ಯಾವಾಗ ನಡೆಯಲಿದೆ? ಅನೇಕ ಅಭಿಮಾನಿಗಳಿಗೆ ಈ ಬಗ್ಗೆ ಇನ್ನೂ ತಿಳಿದಿಲ್ಲ. ಟೀಂ ಇಂಡಿಯಾದ ಮೊದಲ ಪಂದ್ಯ ಯಾರ ವಿರುದ್ಧ ಯಾವಾಗ ಮತ್ತು ಯಾವ ಸಮಯದಲ್ಲಿ ನಡೆಯಲಿದೆ ಎಂದು ತಿಳಿಯೋಣ.

ಟೀಂ ಇಂಡಿಯಾ ಮೊದಲ ಪಂದ್ಯ ಯಾವಾಗ?

ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಜೂನ್ 5ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಇದಕ್ಕೂ ಮುನ್ನ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಬೇಕಿದೆ. ಐರ್ಲೆಂಡ್ ವಿರುದ್ಧ ಭಾರತದ ದಾಖಲೆ ಅತ್ಯುತ್ತಮವಾಗಿದೆ. ಭಾರತ ಮತ್ತು ಐರ್ಲೆಂಡ್ ನಡುವಿನ ಹಣಾಹಣಿಯಲ್ಲಿ ಇಲ್ಲಿಯವರೆಗೆ ಭಾರತ ತಂಡವೇ ಮೇಲುಗೈ ಸಾಧಿಸಿತ್ತು. ಈ ಎರಡು ತಂಡಗಳು 7 ಬಾರಿ ಮುಖಾಮುಖಿಯಾಗಿದ್ದು, ಭಾರತ ತಂಡ ಏಳು ಬಾರಿ ಗೆದ್ದಿದೆ. ಭಾರತ ತಂಡ ತನ್ನ ಎಲ್ಲಾ ನಾಲ್ಕು ಗುಂಪು ಹಂತದ ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಿದೆ. ಟೀಂ ಇಂಡಿಯಾ ಲೀಗ್ ಹಂತದಲ್ಲಿ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪಂದ್ಯಗಳು ಆರಂಭವಾಗಲಿದೆ.

ವಿಶ್ವಕಪ್‌ನ ಇತರ ಪಂದ್ಯಗಳು ಬೆಳಗ್ಗೆ 6 ಗಂಟೆಗೆ, ರಾತ್ರಿ 9 ಗಂಟೆಗೆ, ಬೆಳಗ್ಗೆ 5 ಗಂಟೆಗೆ, ಮಧ್ಯಾಹ್ನ 12:30ಕ್ಕೆ, ರಾತ್ರಿ 10 ಗಂಟೆಗೆ ಮತ್ತು ರಾತ್ರಿ 10:30ರಿಂದ ನಡೆಯಲಿವೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಭಾರತದಲ್ಲಿ ನಡೆಯಲಿರುವ ICC T20 ವಿಶ್ವಕಪ್ 2024ರ ಎಲ್ಲಾ ಪಂದ್ಯಗಳ ನೇರ ಪ್ರಸಾರವನ್ನು ಅಭಿಮಾನಿಗಳು ವೀಕ್ಷಿಸಬಹುದು. ಅದೇ ಸಮಯದಲ್ಲಿ, ಭಾರತದಲ್ಲಿನ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಆನ್‌ಲೈನ್ ಲೈವ್ ಸ್ಟ್ರೀಮಿಂಗ್ ಅನ್ನು ಕಾಣಬಹುದು. ಅಲ್ಲದೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಈ ಬಾರಿಯ ಟಿ20 ವಿಶ್ವಕಪ್‌‌ನ್ನು ಸಂಪೂರ್ಣ ಉಚಿತವಾಗಿ ವೀಕ್ಷಿಸಬಹುದು.

ಟಿ20 ವಿಶ್ವಕಪ್‌ಗೆ ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್,  ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.
ಮೀಸಲು ಆಟಗಾರರು: ರಿಂಕು ಸಿಂಗ್, ಶುಭಮನ್ ಗಿಲ್, ಖಲೀಲ್ ಅಹ್ಮದ್, ಅವೇಶ್ ಖಾನ್.

ಟೀಂ ಇಂಡಿಯಾ ವಿಶ್ವಕಪ್‌ ವೇಳಾಪಟ್ಟಿ:

05-ಜೂನ್-24 ಭಾರತ vs ಐರ್ಲೆಂಡ್ 8:00 PM ನ್ಯೂ ಯಾರ್ಕ್
09-ಜೂನ್-24 ಭಾರತ vs ಪಾಕಿಸ್ತಾನ 8:00 PM ನ್ಯೂ ಯಾರ್ಕ್
12-ಜೂನ್-24 ಯುಎಸ್ಎ vs ಭಾರತ 8:00 PM ನ್ಯೂ ಯಾರ್ಕ್

15-ಜೂನ್-24 ಭಾರತ vs ಕೆನಡಾ 8:00 PM ನ್ಯೂ ಯಾರ್ಕ್

Source : https://kannada.news18.com/news/sports/team-india-first-match-in-t20-world-cup-2024-against-ireland-live-stream-details-squads-skb-1721600.html

Leave a Reply

Your email address will not be published. Required fields are marked *