ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಸೂರ್ಯ ಗ್ರಹಣ ಗೋಚರಿಸುತ್ತಾ? ಗೋಚರಿಸಿದರೂ, ಗೋಚರಿಸದೇ ಇದ್ದರೂ ಗ್ರಹಣದ ವೇಳೆ ಶಾಸ್ತ್ರಗಳನ್ನು ಮಾಡಬೇಕಾ? ಊಟ ಮಾಡಬಹುದಾ? ಊಟ ಮಾಡಬಾರದಾ? ನಿಮ್ಮ ಗೊಂದಲಕ್ಕೆ ಇಲ್ಲಿವೆ ಉತ್ತರ…
ಸೂರ್ಯಗ್ರಹಣ (solar eclipse) ಖಗೋಳದಲ್ಲಿ (astronomy) ನಡೆಯುವ ಒಂದು ವಿಸ್ಮಯ. ಗ್ರಹಣ ಎಂಬುದು ಸಹಜ ಪ್ರಕ್ರಿಯೆ ಆದರೂ ಹಿಂದಿನ ಕಾಲದಿಂದ ಮೂಢನಂಬಿಕೆಗಳಲ್ಲಿ ಆಚರಣೆ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ವಿಜ್ಞಾನದ (science) ಜ್ಞಾನಾರ್ಜನೆಯಿಂದ ಇದೊಂದು ಸಹಜ ಪ್ರಕ್ರಿಯೆ ಎಂದು ಅರಿತುಕೊಂಡರೂ ಕೆಲ ಜನರು ಹಿರಿಯರು ಆಚರಿಸಿಕೊಂಡ ಪದ್ಧತಿಗಳನ್ನು ಅನುಸರಿಸುತ್ತಲೇ ಬರುತ್ತಿದ್ದಾರೆ. ಗ್ರಹಣದ ಸಮಯದಲ್ಲಿ ಆಹಾರ ಸೇವನೆಯನ್ನು ಮಾಡುವುದಿಲ್ಲ.
ಏಪ್ರಿಲ್ 8ಕ್ಕೆ ಸೂರ್ಯ ಗ್ರಹಣ
ಸೂರ್ಯಗ್ರಹಣಗಳು ಪುರಾಣಗಳು ಮತ್ತು ಮೂಢನಂಬಿಕೆಗಳಿಂದ ಸುತ್ತುವರೆದಿವೆ. ಇದರಂತೆ ಜನ ಸಹ ಆಹಾರ ಸೇವನೆ ಮತ್ತು ಆಹಾರ ಪದ್ಧತಿಗಳ ಬಗ್ಗೆ ಹೆಚ್ಚು ನಿಗಾ ವಹಿಸುತ್ತಾರೆ. ಈ ವರ್ಷ 2024ರ ಸಂಪೂರ್ಣ ಸೂರ್ಯಗ್ರಹಣ ಏಪ್ರಿಲ್ 8ರಂದು ಸಂಭವಿಸಲಿದೆ.
ಭಾರತದಲ್ಲಿ ಗೋಚರಿಸುತ್ತಾ ಗ್ರಹಣ?
ಸಂಪೂರ್ಣ ಸೂರ್ಯಗ್ರಹಣ ಪೆಸಿಫಿಕ್, ಅಟ್ಲಾಂಟಿಕ್, ಮೆಕ್ಸಿಕೋ, ಉತ್ತರ ಅಮೆರಿಕಾ, ಮಧ್ಯ ಅಮೆರಿಕಾ, ದಕ್ಷಿಣ ಅಮೆರಿಕಾ, ಕೆನಡಾ ಹಾಗೂ ಇಂಗ್ಲೆಂಡ್ ಭಾಗದಲ್ಲಿ ಗೋಚರಿಸಲಿದೆ. ಆದರೆ ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲ. ಗೋಚರಿಸದಿದ್ದರೂ ಜನರು ಅಂದು ಅನುಸರಿಸುವ ಪದ್ಧತಿಗಳನ್ನು ಅನುಸರಿಸುತ್ತಾರೆ. ಸೂರ್ಯಗ್ರಹಣ ವೇಳೆ ಪುರಾಣಗಳಲ್ಲಿ ಹೇಳಿರುವ ಆಹಾರ ಪದ್ಧತಿಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ.
ಸೂರ್ಯಗ್ರಹಣ ವೇಳೆ ಏಕೆ ಆಹಾರ ಸೇವಿಸುವುದಿಲ್ಲ?
ಸೂರ್ಯಗ್ರಹಣದ ಸಮಯದಲ್ಲಿ ಬೇಯಿಸಿದ ಆಹಾರವು ತಿನ್ನಲು ಅಸುರಕ್ಷಿತವಾಗಿದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಆದರೆ ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಗ್ರಹಣದ ಸಂದರ್ಭದಲ್ಲಿ ಸೂರ್ಯಣ ಕಿರಣಗಳಿಂದ ಋಣಾತ್ಮಕ ಶಕ್ತಿ ಬಿಡುಗಡೆಯಾಗುತ್ತದೆ. ಇದರಿಂದ ಆಹಾರಗಳ ಮೇಲೆ ಋಣಾತ್ಮಕ ಪ್ರಭಾವ ಬೀರಿರುತ್ತದೆ. ಇಂತಹ ಆಹಾರ ಸೇವಿಸುವುದು ಸುರಕ್ಷಿತವಲ್ಲ ಎಂದು ಅನಾದಿ ಕಾಲದಿಂದಲೂ ನಂಬಿಕೊಂಡು ಬರಲಾಗಿದೆ.
ವಿಜ್ಞಾನ ಹೇಳುವುದು ಏನು?
ಆದರೆ ವಿಜ್ಞಾನವು ಸೂರ್ಯಗ್ರಹಣದ ವೇಳೆ ಯಾವುದೇ ಆಹಾರವನ್ನು ತಯಾರಿಸಿ ಸೇವಿಸಬಹುದು. ಇದರಿಂದ ಯಾವುದೇ ಹಾನಿಯಾಗುವುದಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಗರ್ಭಿಣಿಯರು ಆಹಾರ ಸೇವಿಸಬಾರದಾ?
ಸೂರ್ಯಗ್ರಹಣದ ವೇಳೆ ಗರ್ಭಿಣಿಯರು ಹೊರಗೆ ಹೋಗುವುದು, ಗ್ರಹಣ ವೀಕ್ಷಿಸುವುದು ತಾಯಿ ಮತ್ತು ಮಗುವಿಗೆ ಸುರಕ್ಷಿತವಲ್ಲ ಎಂದು ಹಿರಿಯರು ಹೇಳುತ್ತಾರೆ. ಸೂರ್ಯಗ್ರಹಣದ ವೇಳೆ ಗರ್ಭಿಣಿಯರು ಆಹಾರವನ್ನೂ ಸೇವಿಸಬಾರದು ಎಂದು ಹೇಳುತ್ತಾರೆ. ಇದರಿಂದ ಹುಟ್ಟುವ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ನಂಬುತ್ತಾರೆ. ಆದರೆ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಗರ್ಭಿಣಿಯರು ಯಾವ ಸಮಯದಲ್ಲಾದರೂ ಸರಿ ಆರೋಗ್ಯಕರ ಆಹಾರ ಸೇವಿಸಬಹುದು ಎಂದು ವಿವರಿಸಿದ್ದಾರೆ.
ಸೂರ್ಯಗ್ರಹಣದಿಂದ ಆಹಾರ ಬೇಗ ಕೆಡುತ್ತದೆಯೇ?
ಸೂರ್ಯಗ್ರಹಣದಿಂದ ಆಹಾರ ಬೇಗ ಹಾಳಾಗುತ್ತದೆ ಎಂದು ಮೊದಲಿನಿಂದ ನಂಬುತ್ತಿದ್ದಾರೆ. ಆದರೆ ಇದಕ್ಕೂ ಸಹ ಯಾವುದೇ ಪುರಾವೆಗಳಿಲ್ಲ. ಆಹಾರವು ತಾಪಮಾನ, ಆರ್ದ್ರತೆ ಮತ್ತು ಬ್ಯಾಕ್ಟೀರಿಯಾಕ್ಕೆ ಒಡ್ಡಿಕೊಳ್ಳುವಿಕೆಯಂತಹ ಅಂಶಗಳಿಂದ ಹಾಳಾಗುತ್ತದೆ. ಆಹಾರ ಕೆಡಲು ಸೂರ್ಯಗ್ರಹಣ ಕಾರಣವಾಗಲ್ಲ ಎಂದು ಹೇಳಲಾಗುತ್ತದೆ. ಆಹಾರ ಹಾಳಾಗದಂತೆ ಸರಿಯಾಗಿ ಎತ್ತಿಡುವುದು, ಸರಿಯಾದ ಸ್ಥಳದಲ್ಲಿ ಇಡುವುದು ಉತ್ತಮ.
ಎಂದಿನಂತೆ ಊಟ ಮಾಡಬಹುದಾ?
ಸೂರ್ಯಗ್ರಹಣ ಖಗೋಳದಲ್ಲಿ ನಡೆಯುವ ಒಂದು ಸಹಜ ಪ್ರಕ್ರಿಯೆಯಾಗಿದೆ. ಇದಕ್ಕೆ ಯಾವುದೇ ಮೂಢನಂಬಿಕೆಗಳು ಅನುಸರಿಸುವ ಅಗತ್ಯವಿಲ್ಲ. ವೈಜ್ಞಾನಿಕ ಆಧಾರದ ಮೇಲೆ ಸೂರ್ಯಗ್ರಹಣದಿಂದ ಆಹಾರ ಪದ್ಧತಿ ಬದಲಾಯಿಸುವ ಅಗತ್ಯವಿಲ್ಲ. ಎಂದಿನಂತೆ ಸಹಜವಾಗಿ ಸೂರ್ಯಗ್ರಹಣದ ವೇಳೆಯೂ ಆಹಾರ ಸೇವಿಸಬಹುದು, ಇದರಿಂದ ಯಾವುದೇ ಹಾನಿಯಾಗುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
Source : https://kannada.news18.com/news/astrology/can-you-eat-during-solar-eclipse-ach-1644777.html
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1