RCB ತಂಡದ ಗ್ರೀನ್​ ಗೇಮ್ ಯಾವಾಗ? ಯಾರ ವಿರುದ್ಧ? ಇಲ್ಲಿದೆ ಮಾಹಿತಿ

IPL 2023: ಐಪಿಎಲ್​ನ ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್​ಗೆ ಸೋಲುಣಿಸಿ ಶುಭಾರಂಭ ಮಾಡಿದ್ದ ರೆಡ್ ಆರ್ಮಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಇದೀಗ ಸತತ ಸೋಲುಗಳಿಂದ ಕಂಗೆಟ್ಟಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿರುವ ಆರ್​ಸಿಬಿ ಗ್ರೀನ್ ಗೇಮ್​ಗಾಗಿ ಡೇಟ್ ಫಿಕ್ಸ್ ಮಾಡಿದೆ.ಆರ್​ಸಿಬಿ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 15 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಆದರೆ ಆರ್​ಸಿಬಿ ಗ್ರೀನ್​ ಜೆರ್ಸಿಯಲ್ಲಿ ಕಣಕ್ಕಿಳಿಯಲಿರುವುದು ಏಪ್ರಿಲ್ 23 ರಂದು. ಅದು ಕೂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎಂಬುದು ವಿಶೇಷ.
ಏಪ್ರಿಲ್ 23 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಈ ಮೂಲಕ ತವರು ಮೈದಾನದಲ್ಲಿ ಆರ್​ಸಿಬಿ ಫ್ರಾಂಚೈಸಿ ಗೋ ಗ್ರೀನ್ ಅಭಿಯಾನ ನಡೆಸಲಿದೆ.2011 ರಿಂದ ಐಪಿಎಲ್​ನಲ್ಲಿ ಗೋ ಗ್ರೀನ್ ಅಭಿಯಾನ ಅರಂಭಿಸಿರುವ ಆರ್​ಸಿಬಿ ಪ್ರತಿ ಸೀಸನ್​ನ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಾ ಬಂದಿದೆ. ಇದರ ಮೂಲ ಉದ್ದೇಶ ಪರಿಸರದ ಬಗ್ಗೆ ಕಾಳಜಿ ಮೂಡಿಸುವುದು. ಅದರಲ್ಲೂ ಮರಗಳನ್ನು ಉಳಿಸಿ-ಬೆಳೆಸಿ ಎಂಬ ಸಂದೇಶ ಸಾರಲು ಆರ್​ಸಿಬಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದೆ.ಇದಾಗ್ಯೂ 2021 ರ ಐಪಿಎಲ್​ ವೇಳೆ ಆರ್​ಸಿಬಿ ಗ್ರೀನ್ ಜೆರ್ಸಿ ಬದಲಿಗೆ ಬ್ಲೂ ಜೆರ್ಸಿಯಲ್ಲಿ ಕಣಕ್ಕಿಳಿದಿತ್ತು ಎಂಬುದು ವಿಶೇಷ. ಅಂದು ಕೊರೋನಾ ವಾರಿಯರ್ಸ್​ಗೆ ಗೌರವ ಸೂಚಿಸುವ ಸಲುವಾಗಿ ಆರ್​ಸಿಬಿ ಪಿಪಿಐ ಕಿಟ್​ ಬಣ್ಣದ ಜೆರ್ಸಿಯಲ್ಲಿ ಕೆಕೆಆರ್ ವಿರುದ್ಧ ಪಂದ್ಯವಾಡಿತ್ತು.ಇದೀಗ 4 ವರ್ಷಗಳ ಬಳಿಕ ಮತ್ತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ತಂಡವು ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದ್ದು, ಈ ಬಾರಿ ಫಾಫ್ ಡುಪ್ಲೆಸಿಸ್ ಪಡೆಯ ಎದುರಾಳಿ ರಾಜಸ್ಥಾನ್ ರಾಯಲ್ಸ್ ಎಂಬುದಷ್ಟೇ ವ್ಯತ್ಯಾಸ.

source https://tv9kannada.com/photo-gallery/cricket-photos/ipl-2023-rcbs-green-game-will-be-played-on-the-23rd-of-april-au50-555479.html

Leave a Reply

Your email address will not be published. Required fields are marked *