
ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ, (ಮಾ.29) : ಕೇಂದ್ರ ಚುನಾವಣಾ ಆಯೋಗ ರಾಜ್ಯದ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ವಿಧಾನಸಭಾ ಚುನಾವಣೆ ಘೋಷಣೆ ಹಾಗೂ ಮಾದರಿ ನೀತಿ ಸಂಹಿತೆ ಜಾರಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ಮತದಾರರ ಮಾಹಿತಿ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 13,95,641 ಮಂದಿ ಮತದಾರರಿದ್ದಾರೆ.
ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿದ್ದು, 1648 ಮತಗಟ್ಟೆಗಳಿವೆ. ಮತದಾರರ ಅಂತಿಮ ಪಟ್ಟಿ ಪ್ರಕಾರ ಜಿಲ್ಲೆಯಲ್ಲಿ 13,80,670 ಮತದಾರರಿದ್ದಾರೆ.
ಇಂದಿನವರೆಗೂ ಜಿಲ್ಲೆಯಲ್ಲಿ 13,95,641 ಮಂದಿ ಮತದಾರರಿದ್ದಾರೆ.
6,97,131 ಪುರುಷ ಮತದಾರರು ಹಾಗೂ 6,98,438 ಮಹಿಳಾ ಮತದಾರರಿದ್ದಾರೆ.
382-ಸೇವಾ ಮತದಾರರು,
35,722-ಯುವ ಮತದಾರರು,
833-ಲಿಂಗತ್ವ ಅಲ್ಪಸಂಖ್ಯಾತರು,
2,793-ಲೈಂಗಿಕ ಕಾರ್ಯಕರ್ತರು,
23,472-ಅಂಗವಿಕಲರು ಹಾಗೂ 31,073 ಮಂದಿ 80 ವರ್ಷ ಮೇಲ್ಪಟ್ಟ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
The post ಚಿತ್ರದುರ್ಗ ಜಿಲ್ಲೆಯ ಒಟ್ಟು ಮತದಾರರೆಷ್ಟು ? ಜಿಲ್ಲಾಧಿಕಾರಿಯವರು ನೀಡಿದ ಮಾಹಿತಿ ಇಲ್ಲಿದೆ…! first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/QHJ6EaD
via IFTTT
Views: 0