ಆರೋಗ್ಯ: ಬೆಳಗ್ಗೆ ಯಾವ ಸಮಯದಲ್ಲಿ ಏಳೋದು ಸೂಕ್ತ? ಇಲ್ಲಿದೆ ಮಾಹಿತಿ

ಹಿರಿಯರು ಯಾವಾಗಲೂ ರಾತ್ರಿ, ಬೇಗ ಮಲಗಿ ಬೆಳಗ್ಗೆ ಬೇಗ ಎದ್ದೇಳಬೇಕು (Wakeup Early) ಎಂದು ಹೇಳುತ್ತಿರುತ್ತಾರೆ. ಆದ್ರೆ ಇಂದು ಅನೇಕರು ತಡವಾಗಿ ಮಲಗಿ ತಡವಾಗಿ ಎದ್ದೇಳುತ್ತಾರೆ. ಇನ್ನೂ ಕೆಲವರು ಕಡಿಮೆ ಸಮಯ ನಿದ್ದೆ (Sleep) ಮಾಡ್ತಾರೆ. ಈ ಎರಡೂ ಅಂಶ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ.

ಆರೋಗ್ಯ ಚೆನ್ನಾಗಿರಬೇಕೆಂದರೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವುದು ಎಷ್ಟು ಮುಖ್ಯವೋ, ಅದೇ ರೀತಿ ಬೆಳಗ್ಗೆ ಬೇಗ ಏಳುವುದು ಕೂಡ ಮುಖ್ಯ. ಬೆಳಗ್ಗೆ ಬೇಗ ಏಳಬೇಕು ಎಂದು ಎಲ್ಲರೂ ಹೇಳ್ತಾರೆ, ಆದ್ರೆ ಬೆಳಗ್ಗೆ ಯಾವ ಸಮಯದಲ್ಲಿ ಏಳೋದು ಸೂಕ್ತ ಎಂಬ ವಿಚಾರ ಗೊತ್ತಾ? ಆರೋಗ್ಯ ಮತ್ತು ಮನಸ್ಥಿತಿ ಇವೆರಡೂ ಚೆನ್ನಾಗಿರಬೇಕೆಂದರೆ ಬೆಳಗ್ಗೆ ಈ ಸಮಯದಲ್ಲಿ ಎದ್ದೇಳಬೇಕಂತೆ, ಇದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಳಗ್ಗೆ ಏಳಲು ಸರಿಯಾದ ಸಮಯ ಯಾವುದು?

ತಜ್ಞರ ಪ್ರಕಾರ, ಬೆಳಿಗ್ಗೆ 5 ಗಂಟೆಗೆ ಏಳುವುದು ಉತ್ತಮ ಸಮಯ. ಬೆಳಿಗ್ಗೆ 5 ಗಂಟೆಗೆ ಏಳಲು ಸಾಧ್ಯವಾಗದಿದ್ದರೆ, ಬೆಳಿಗ್ಗೆ 6 ರ ಒಳಗೆ ಎದ್ದೇಳಬೇಕಂತೆ. 5 ರಿಂದ 6 ರ ನಡುವೆ ಎಚ್ಚರಗೊಳ್ಳುವುದು ಉತ್ತಮ ಸಮಯ ಎಂದು ಪರಿಗಣಿಸಲಾಗಿದೆ. ಈ ಸಮಯ ಶಾಂತ ಮತ್ತು ಮಾಲಿನ್ಯ ಮುಕ್ತವಾಗಿರುವುದಲ್ಲದೆ, ಈ ಸಮಯದಲ್ಲಿ ಏಳುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟವು ಹೆಚ್ಚಾಗಿರುತ್ತದೆ. ಇದು ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ.

ತಡವಾಗಿ ಎದ್ದರೆ ಏನಾಗುತ್ತದೆ?

ತಜ್ಞರ ಪ್ರಕಾರ, ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ನಿದ್ರಿಸುವ ಜನರು ಹೆಚ್ಚಾಗಿ ಆಲಸ್ಯ, ಕಿರಿಕಿರಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಜೊತೆಗೆ ಅವರಿಗೆ ಯಾವುದೇ ಕೆಲಸದಲ್ಲಿ ಏಕಾಗ್ರತೆ ಅನ್ನೋದು ಕೂಡ ಇರುವುದಿಲ್ಲ. ಇದರಿಂದಾಗಿ, ಬೆಳಿಗ್ಗೆ ನೀವು ಪಡೆಯುವ ನೈಸರ್ಗಿಕ ಪೋಷಣೆಯನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ, ದೈಹಿಕ ಚಟುವಟಿಕೆಗಳನ್ನು ಮಾಡಲೂ ಸಾಧ್ಯವಾಗುವುದಿಲ್ಲ. ಇದು ಬೊಜ್ಜು, ಮಧುಮೇಹ, ಹೃದ್ರೋಗ ಸಮಸ್ಯೆಗಳಿಗೆ ಕಾರಣವಾಗಬಹುದು ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ಬೆಳಗ್ಗೆ ಬೇಗ ಏಳುವುದರ ಪ್ರಯೋಜನಗಳೇನು?

  • ಬೆಳಿಗ್ಗೆ ಬೇಗನೆ ಏಳುವುದರಿಂದ ಸಕಾರಾತ್ಮಕತೆ ಹೆಚ್ಚಾಗುತ್ತದೆ.
  • ತಾಜಾ ಗಾಳಿಯನ್ನು ಪಡೆಯಬಹುದು, ಇದು ಆರೋಗ್ಯಕ್ಕೆ ಪ್ರಯೋಜನಕಾರಿ.
  • ದಿನದ ಗುರಿಗಳನ್ನು ಸಾಧಿಸಲು ಹೆಚ್ಚಿನ ಸಮಯ ಸಿಗುತ್ತದೆ.
  • ಬೆಳಿಗ್ಗೆ ಬೇಗ ಏಳುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಾಗುತ್ತದೆ.
  • ಬೆಳಿಗ್ಗೆ ಬೇಗನೆ ಎದ್ದೇಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ.
  • ಬೆಳಿಗ್ಗೆ ಎದ್ದರೆ ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾಗುವುದಿಲ್ಲ.
  • ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.
  • ಆತ್ಮವಿಶ್ವಾಸ ಹೆಚ್ಚುತ್ತದೆ.
  • ಬೆಳಿಗ್ಗೆ ಬೇಗನೆ ಎದ್ದೇಳುವುದರಿಂದ ಬಿಪಿ, ಕೊಲೆಸ್ಟ್ರಾಲ್ ಮತ್ತು ಹೃದಯ ಸಮಸ್ಯೆಗಳು ಭಾದಿಸುವುದಿಲ್ಲವಂತೆ

Views: 28

Leave a Reply

Your email address will not be published. Required fields are marked *