Viral News: ಆಘಾತಕಾರಿ ಘಟನೆಯೊಂದರಲ್ಲಿ ಅತೀ ವೇಗವಾಗಿ ಸಾಗಿದ ಪಿಕ್‌ಅಪ್ ವಾಹನವೊಂದು ಸೈಕಲ್ ಸವಾರಿಗೆ ಗುದ್ದಿ ದೇಹವನ್ನು ಸುಮಾರು 2 ಕಿ.ಮೀ.ಯಷ್ಟು ದೂರು ರಸ್ತೆಯಲ್ಲಿ ಎಳೆದುಕೊಂಡು ಹೋಗಿದೆ. ಹರಿಯಾಣದ ರಾಷ್ಟ್ರೀಯ ಹೆದ್ದಾರಿ 9ರ ಪನ್ನಿವಾಲಾ ಮೋಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಿಕ್‌ಅಪ್ ಚಾಲಕನಿಗೆ ಸ್ಥಳೀಯರು ಥಳಿಸಿದ್ದು, ಆತನ ವಿರುದ್ಧ ದೂರು ದಾಖಲಾಗಿದೆ.
![](https://samagrasuddi.co.in/wp-content/uploads/2024/04/image-247.png)
ಚಂಡಿಗಢ: ಆಘಾತಕಾರಿ ಘಟನೆಯೊಂದರಲ್ಲಿ ಅತೀ ವೇಗವಾಗಿ ಸಾಗಿದ ಪಿಕ್‌ಅಪ್ ವಾಹನವೊಂದು ಸೈಕಲ್ ಸವಾರಿಗೆ ಗುದ್ದಿ ದೇಹವನ್ನು ಸುಮಾರು 2 ಕಿ.ಮೀ.ಯಷ್ಟು ದೂರು ರಸ್ತೆಯಲ್ಲಿ ಎಳೆದುಕೊಂಡು ಹೋಗಿದೆ. ಸದ್ಯ ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದ್ದು, ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ. ಹರಿಯಾಣದ ರಾಷ್ಟ್ರೀಯ ಹೆದ್ದಾರಿ 9ರ ಪನ್ನಿವಾಲಾ ಮೋಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಿಕ್‌ಅಪ್‌ನ ಹಿಂದಿದ್ದ ವಾಹನವೊಂದರಲ್ಲಿದ್ದ ವ್ಯಕ್ತಿಗಳು ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಬಳಿಕ ಪಿಕ್ ಅಪ್ ಅನ್ನು ನಿಲ್ಲಿಸಿ ಚಾಲಕ ಮತ್ತು ಸಹಾಯಕನಿಗೆ ಥಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಕರ್ಮ್ಘರ್ ಗ್ರಾಮದ 50 ವರ್ಷದ ಗುರ್‌ನಾಮ್ ಸಿಂಗ್ ಎಂದು ಗುರುತಿಸಲಾಗಿದೆ. ಪನ್ನಿವಾಲಾ ಮೋಟಾದಿಂದ ತನ್ನ ಗ್ರಾಮಕ್ಕೆ ಸೈಕಲ್‌ನಲ್ಲಿ ಹಿಂದಿರುಗುತ್ತಿದ್ದಾಗ ಹೆದ್ದಾರಿಯ ಪೊಲೀಸ್ ಚೆಕ್ ಪಾಯಿಂಟ್ ಬಳಿ ಪಿಕ್‌ಅಪ್ ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ವಾಹನದ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದರು. ಬಳಿಕ ಪಿಕ್‌ಅಪ್ ಅವರನ್ನು ಎಳೆದುಕೊಂಡು ವೇಗವಾಗಿ ಸಾಗಿದೆ. ಪಿಕ್‌ಅಪ್‌ನ ಹಿಂದಿನ ಟ್ರಕ್ ಚಾಲಕ ಸಿಗ್ನಲ್ ಮಾಡಿದರೂ ನಿಲ್ಲಿಸಿಲ್ಲ.
ಅಂತಿಮವಾಗಿ ಟ್ರಕ್ ಚಾಲಕ ಪಿಕ್‌ಅಪ್ ಮುಂದೆ ಅಡ್ಡಲಾಗಿ ನಿಲ್ಲಿಸಬೇಕಾಯಿತು. ಈ ಮೂಲಕ ಪಿಕ್‌ಅಪ್ ಅನ್ನು ತಡೆಯುವಲ್ಲಿ ಯಶಸ್ವಿಯಾದರು. ನಂತರ ಅವರು ಗಾಯಗೊಂಡ ಸೈಕಲ್ ಸವಾರನನ್ನು ಪಿಕ್‌ಅಪ್ ಅಡಿಯಿಂದ ಹೊರಗೆ ಎಳೆದರು. ಈ ವೇಳೆ ಗುರ್‌ನಾಮ್ ಸಿಂಗ್ ವೈಯೆಲ್ಲ ರಕ್ಷಸಿಕ್ತವಾಗಿತ್ತು. ಏತನ್ಮಧ್ಯೆ ಸ್ಥಳದಲ್ಲಿದ್ದವರು ಕೋಪಗೊಂಡ ಪಿಕ್‌ಅಪ್ ಚಾಲಕ ಹೊಡೆದಿದ್ದಾರೆ. ಈ ದೃಶ್ಯಗಳೆಲ್ಲ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಕೂಡಲೇ ಗಂಭೀರವಾಗಿ ಗಾಯಗೊಂಡಿದ್ದ ಗುರ್‌ನಾಮ್ ಸಿಂಗ್ ಅವರನ್ನು ಆಂಬ್ಯುಲೆನ್ಸ್ ಮೂಲಕ ಸಮೀಪದ ಆಸ್ಪತ್ರಗೆ ದಾಖಲಿಸಲಾಯಿತು. ಆದರೆ ಅವರ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಗುರ್‌ನಾಮ್ ಸಿಂಗ್ ಅವರ ಸಂಬಂಧಿಕರ ಹೇಳಿಕೆ ಆಧಾರದಲ್ಲಿ ಪಿಕ್‌ಅಪ್ ಚಾಲಕನ ವಿರುದ್ಧ ಕೊಲೆಯ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1