Herbal teas for Lungs Health: ಹರ್ಬಲ್ ಟೀಗಳು ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸಾಮಾನ್ಯ ಚಹಾ, ಕಾಫಿಗಿಂತ ಗಿಡಮೂಲಿಕೆ ಚಹಾಗಳನ್ನು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

Healthy Herbal Teas for Lungs Health: ಬಹುತೇಕರು ತಮ್ಮ ದಿನವನ್ನು ಚಹಾ ಅಥವಾ ಕಾಫಿಯೊಂದಿಗೆ ಆರಂಭಿಸುತ್ತಾರೆ. ಕೆಲವರು ಇವುಗಳನ್ನು ದಿನಕ್ಕೆ ಹಲವಾರು ಬಾರಿ ಕುಡಿಯುತ್ತಾರೆ. ಚಹಾ, ಕಾಫಿಯನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ.
ಸಾಮಾನ್ಯ ಚಹಾದ ಬದಲು ಹರ್ಬಲ್ ಚಹಾಗಳನ್ನು ಕುಡಿಯುವುದು ಉತ್ತಮ ಆಯ್ಕೆ ಎಂದು ತಜ್ಞರು ತಿಳಿಸುತ್ತಾರೆ. ಹರ್ಬಲ್ ಟೀನಲ್ಲಿ ಕಾಫಿ ಮತ್ತು ಚಹಾದಲ್ಲಿ ಕಂಡು ಬರುವ ಕೆಫೀನ್ ಇರುವುದಿಲ್ಲ. ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಹಾಗೂ ಖನಿಜಗಳು ಶ್ವಾಸಕೋಶವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದೀಗ ಈ ರೀತಿ ಹರ್ಬಲ್ ಚಹಾಗಳ ಪ್ರಕಾರಗಳ ಬಗ್ಗೆ ತಿಳಿದುಕೊಳ್ಳೋಣ.

1. ಪುದೀನಾ ಚಹಾ: ಪುದೀನಾ ಚಹಾದ ಗುಣಲಕ್ಷಣಗಳು ಮೂಗಿನ ಹೊರಳೆ ಮತ್ತು ಉಸಿರಾಟದ ಪ್ರದೇಶವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದು ಶ್ವಾಸಕೋಶವನ್ನು ಆರೋಗ್ಯವಾಗಿಡುತ್ತದೆ. ಇದು ಹೆಚ್ಚಿನ ಉರಿಯೂತ ನಿವಾರಕ ಮತ್ತು ಆ್ಯಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ ಎಂದು ತಜ್ಞರು ತಿಳಿಸುತ್ತಾರೆ.

2. ಶುಂಠಿ ಚಹಾ: ಬಿಸಿ ಶುಂಠಿ ಟೀ ಕುಡಿಯುವುದರಿಂದ ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಶ್ವಾಸಕೋಶವನ್ನು ನಿರ್ವಿಷಗೊಳಿಸುತ್ತದೆ. ಶುಂಠಿ ಚಹಾವು ಉರಿಯೂತದ ಹಾಗೂ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಉರಿಯೂತ ಕಡಿಮೆ ಮಾಡಲು ಹಾಗೂ ಉಸಿರಾಟ ಸಮಸ್ಯೆಯನ್ನು ಸುಧಾರಿಸಲು ಉಪಯುಕ್ತವಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
3. ಥೈಮ್ ಚಹಾ: ಥೈಮ್ ಎಲೆ ಔಷಧೀಯ ಗುಣಗಳನ್ನು ಸಮೃದ್ಧವಾಗಿ ಹೊಂದಿದೆ. ಇವು ಶ್ವಾಸಕೋಶವನ್ನು ನಿರ್ವಿಷಗೊಳಿಸುತ್ತವೆ. ಇದು ‘ಜರ್ನಲ್ ಆಫ್ ಮೆಡಿಸಿನ್ ಅಂಡ್ ಲೈಫ್’ನಲ್ಲಿ ಪ್ರಕಟವಾಗಿದ್ದು, ಲೋಳೆಯನ್ನು ತೆಗೆದುಹಾಕುತ್ತದೆ, ಕೆಮ್ಮು ಮತ್ತು ಶೀತಗಳನ್ನು ನಿವಾರಿಸುವ ಮೂಲಕ ಶ್ವಾಸಕೋಶದ ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡುತ್ತದೆ.

4. ನೀಲಗಿರಿ ಚಹಾ: ನೀಲಗಿರಿ ಎಲೆಗಳು ನೈಸರ್ಗಿಕವಾಗಿ ಸಿನಿಯೋಲ್ ಅನ್ನು ಹೊಂದಿರುತ್ತವೆ. ಇದು ಕಫವನ್ನು ಕಡಿಮೆ ಮಾಡಲು ಮತ್ತು ಉಸಿರಾಟದ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಉಸಿರಾಟದ ಕಾಯಿಲೆಗಳಿಗೆ ನೀಲಗಿರಿ ಪರಿಣಾಮಕಾರಿ ಚಿಕಿತ್ಸೆಯಾಗಿದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ.
5. ಮುಲ್ಲೀನ್ ಟೀ: ಮುಲ್ಲೀನ್ ಅನ್ನು ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಈ ಮುಲ್ಲೀನ್ ಚಹಾ ಕುಡಿಯುವುದರಿಂದ ಶ್ವಾಸಕೋಶಗಳು ನಿರ್ವಿಷಗೊಳ್ಳುತ್ತವೆ. ಇದರೊಂದಿಗೆ ಲೋಳೆಯನ್ನು ಸಹ ತೆಗೆಯಲ್ಪಡುತ್ತದೆ.

6. ಅರಿಶಿನ ಚಹಾ: ಅರಿಶಿನದಲ್ಲಿರುವ ಆ್ಯಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿವೆ. ಇದರ ಉರಿಯೂತ ನಿವಾರಕ ಗುಣಗಳು ಶ್ವಾಸಕೋಶವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದು ಉಸಿರಾಟದ ಉರಿಯೂತವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ ಎಂದು ‘ಜರ್ನಲ್ ಆಫ್ ಕ್ಲಿನಿಕಲ್ ಮೆಡಿಸಿನ್’ನಲ್ಲಿ ಪ್ರಕಟಿಸಲಾಗಿದೆ. ಇದರ ನೈಸರ್ಗಿಕ ಗುಣಗಳಿಂದ ಇದು COPD (Chronic Obstructive Pulmonary Disease) ರೋಗಿಗಳಲ್ಲಿ ಉಸಿರಾಟದ ಕಾರ್ಯವನ್ನು ಸುಧಾರಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

7. ಲೈಕೋರೈಸ್ ರೂಟ್ ಟೀ: ಲೈಕೋರೈಸ್ ರೂಟ್ ಟೀ ನೈಸರ್ಗಿಕ ಚರ್ಮ ಶುದ್ಧೀಕರಣ ಗುಣಗಳನ್ನು ಹೊಂದಿದೆ. ಕಿರಿಕಿರಿಗೆ ಒಳಗಾದ ಅಂಗಾಂಶಗಳಿಂದ ಪರಿಹಾರವನ್ನು ನೀಡುತ್ತದೆ. ಉರಿಯೂತ ನಿವಾರಕ ಹಾಗೂ ಆ್ಯಂಟಿವೈರಲ್ ಗುಣಗಳನ್ನು ಹೊಂದಿದೆ ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ. ಇದು ಉಸಿರಾಟದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸುವಲ್ಲಿ ಇದು ಪರಿಣಾಮಕಾರಿ ಎಂದು ಸಂಶೋಧಕರು ತಿಳಿಸುತ್ತಾರೆ.
8. ಗ್ರೀನ್ ಟೀ: ಗ್ರೀನ್ ಟೀಯಲ್ಲಿ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳು ಇರುತ್ತವೆ. ಇದು ಶ್ವಾಸಕೋಶದಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿದಿನ ಗ್ರೀನ್ ಟೀ ಕುಡಿಯುವುದರಿಂದ ಶ್ವಾಸಕೋಶದ ಕಾರ್ಯ ಸುಧಾರಿಸುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಮತ್ತು ದೀರ್ಘಕಾಲದ ಉಸಿರಾಟದ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ.
9. ತುಳಸಿ ಚಹಾ: ಆಯುರ್ವೇದದಲ್ಲಿ ತುಳಸಿ ಚಹಾವನ್ನು ಜೀವನದ ಅಮೃತವೆಂದು ಪರಿಗಣಿಸಲಾಗಿದೆ. ಇದು ಉಸಿರಾಟದ ವ್ಯವಸ್ಥೆಗೆ ಹಲವು ಪ್ರಯೋಜನಗಳನ್ನು ಹೊಂದಿದೆ. ಉಸಿರಾಟದ ಉರಿಯೂತ ಕಡಿಮೆ ಮಾಡುತ್ತದೆ. ಶ್ವಾಸಕೋಶದ ಕಾರ್ಯವನ್ನು ಸುಧಾರಿಸುತ್ತದೆ ಎಂದು ‘ಜರ್ನಲ್ ಆಫ್ ಎಥ್ನೋಫಾರ್ಮಕಾಲಜಿ’ಯಲ್ಲಿ ಪ್ರಕಟವಾಗಿದೆ. ಈ ಚಹಾವು ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆ, ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.
Source : ETV Bharat
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1