Health Tips: ಸಾಮಾನ್ಯವಾಗಿ ನಾಲ್ಕೈದು ಜನರು ನಿಂತಿದ್ದರೂ, ಸೊಳ್ಳೆ ಬಂದು ಪದೇ ಪದೇ ನಿಮ್ಮನ್ನೇ ಕಚ್ಚುವ ಅನುಭವ ಆಗಿರಲಿಕ್ಕೆ ಸಾಕು. ಆಗ ಉಳಿದವರು ನನಗೆ ಸೊಳ್ಳೆ ಕಚ್ಚುತ್ತಿಲ್ಲ, ಬಹುಶಃ ನಿನ್ನ ರಕ್ತ ಸಿಹಿ ಇರಬೇಕು ಎನ್ನುತ್ತಾರೆ. ಆದರೆ, ಇದು ನಿಜವಲ್ಲ. ಸೊಳ್ಳೆ ನಿಮ್ಮನ್ನೇ ಹುಡುಕಿ ಬರಲು ಬೇರೆಯದ್ದೇ ಕಾರಣವಿದೆ.
ಅದು ಯಾಕೆ ಎನ್ನುವ ವಿಷಯವನ್ನು ಇಲ್ಲಿ ವಿವರಿಸಲಾಗಿದೆ. ಹೆಚ್ಚಾಗಿ ಸೊಳ್ಳೆಗಳು ‘0’ ಗುಂಪಿನ ರಕ್ತದವರನ್ನು ಹೆಚ್ಚು ಆಕರ್ಷಿಸುತ್ತದೆ. ಈ ರಕ್ತದ ಗುಂಪು ಹೊಂದಿರುವವರಿಗೆ ಸೊಳ್ಳೆ ಕಚ್ಚುವುದು ಹೆಚ್ಚು.
ಆದರೆ, ಇದರ ಹೊರತಾಗಿಯೂ ಹಲವರಿಗೆ ಸೊಳ್ಳೆ ಕಚ್ಚುವುದು ಉಂಟು. ಅದಕ್ಕೆ ಕಾರಣ, ದೇಹದಿಂದ ಹೊರಸೂಸುವ ಕಾರ್ಬನ್ ಡೈಆಕ್ಸೈಡ್ ಮತ್ತು ವ್ಯಾಯಾಮ ಮಾಡುವಾಗ ಬೆವರಿದಾಗ ಹೊರಬರುವ ಲ್ಯಾಕ್ಟಿಕ್ ಆಮ್ಲ. ದೇಹದ ಉಷ್ಣತೆ ಮತ್ತು ಮದ್ಯಪಾನ ಮಾಡುವವರತ್ತ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ ಎಂದು ಅಧ್ಯಯನಗಳು ಹೇಳಿವೆ. ಆಯಸಿಡಿಟಿ ಹೆಚ್ಚಾಗಿ ಇದ್ದವರಿಗೆ ಸೊಳ್ಳೆ ಹೆಚ್ಚು ಕಡಿಯುತ್ತದೆ ಎಂದು ಸಾಮಾನ್ಯವಾದ ನಂಬಿಕೆ ಇದ್ದರೂ ಆಯಸಿಡಿಟಿಗೂ ಸೊಳ್ಳೆ ಕಡಿತಕ್ಕೂ ನೇರ ಸಂಬಂಧವಿಲ್ಲ. ಆದರೆ ಬೆವರು, ದೇಹದ ಉಷ್ಣತೆ ಮತ್ತು ನಿರ್ದಿಷ್ಟ ಆಹಾರ ಸೇವನೆಯಿಂದ ದೇಹದಲ್ಲಿ ಆಯಸಿಡಿಟಿ ಹೆಚ್ಚುವ ಸಾಧ್ಯತೆ ಇರುತ್ತದೆ. ಇದು ಸೊಳ್ಳೆಗಳಿಗೆ ಪಂಚ ಪ್ರಾಣವಾಗಿದೆ.
ರಕ್ತದ ಗುಂಪಿನ ಅಧ್ಯಯನ
ಮೊದಲೇ ಹೇಳಿದಂತೆ, ‘O’ ಗುಂಪಿನ ರಕ್ತ ಹೊಂದಿರುವವರನ್ನು ಸೊಳ್ಳೆಗಳು ‘A’ ಗುಂಪಿನವರಕ್ಕಿಂತ ಎರಡು ಪಟ್ಟು ಹೆಚ್ಚು ಕಚ್ಚುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಗಾಳಿಯಲ್ಲಿ ಹೆಚ್ಚು ಇಂಗಾಲದ ಡೈಆಕ್ಸೈಡ್ ಹೊರಸೂಸುವ ವ್ಯಕ್ತಿಗಳತ್ತ ಸೊಳ್ಳೆಗಳು ಆಕರ್ಷಿತವಾಗುತ್ತವೆ. ಬೆವರಿನಲ್ಲಿ ಉತ್ಪತ್ತಿಯಾಗುವ ಲ್ಯಾಕ್ಟಿಕ್ ಆಮ್ಲ ಸೊಳ್ಳೆಗಳನ್ನು ಆಕರ್ಷಿಸುತ್ತದೆ. ಆದ್ದರಿಂದ, ವ್ಯಾಯಾಮ ಮಾಡುವವರನ್ನು ಹೆಚ್ಚು ಕಚ್ಚಬಹುದು. ಸೊಳ್ಳೆಗಳು ಹೆಚ್ಚಿನ ದೇಹದ ಉಷ್ಣತೆ ಹೊಂದಿರುವ ವ್ಯಕ್ತಿಗಳತ್ತ ಆಕರ್ಷಿತವಾಗುತ್ತವೆ, ಇದು ಅನುವಂಶಿಕ ಅಥವಾ ಶಾರೀರಿಕ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿರುತ್ತದೆ. ದ್ಯಪಾನ ಮಾಡಿದವರ ದೇಹದಿಂದ ಹೊರಬರುವ ಹೆಚ್ಚು ಸುಲಭವಾದ ವಾಸನೆಯಿಂದಾಗಿ ಸೊಳ್ಳೆಗಳು ಅವರನ್ನು ಹೆಚ್ಚು ಸುಲಭವಾಗಿ ಪತ್ತೆಹಚ್ಚುತ್ತವೆ.
ಇನ್ನು ಗರ್ಭಿಣಿಯರಿಗೆ ಸೊಳ್ಳೆ ಹೆಚ್ಚು ಕಚ್ಚುತ್ತದೆ. ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ಮೆಟಾಬಾಲಿಕ್ ರೇಟ್ ಹೆಚ್ಚು ಹೊಂದಿರುವವರನ್ನು ಕಂಡರೆ ಸೊಳ್ಳೆಗಳಿಗೆ ಬಹಳ ಪ್ರೀತಿ. ಗರ್ಭಿಣಿಯರು ಹೆಚ್ಚಿನ ಚಯಾಪಚಯ ದರವನ್ನು ಹೊಂದಿರುತ್ತಾರೆ, ಆದ್ದರಿಂದ ಅವರು ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುತ್ತಾರೆ. ಹೆಚ್ಚು ಬ್ಯಾಕ್ಟೀರಿಯಾ ಇರುವ ಕಡೆ ಸೊಳ್ಳೆಗಳು ಹೆಚ್ಚಾಗಿರುತ್ತವೆ. ಕೊಳಕು ಇರುವ ಸ್ಥಳಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಲು ಇದೇ ಕಾರಣ. ಒಂದು ಸಂಶೋಧನೆಯ ಪ್ರಕಾರ, ಸೊಳ್ಳೆಗಳು ನಮ್ಮ ಪಾದಗಳ ಮೇಲೆ ಹೆಚ್ಚು ಕಚ್ಚುತ್ತವೆ ಏಕೆಂದರೆ ಪಾದಗಳಲ್ಲಿ ಬ್ಯಾಕ್ಟೀರಿಯಾಗಳು ಬರುವ ಸಾಧ್ಯತೆ ಹೆಚ್ಚು ಎನ್ನುವ ಕಾರಣಕ್ಕೆ.
Views: 31