ಚಿತ್ರದುರ್ಗ : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “ಹಿಂದಿ ದಿವಸ್” ಅನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ ಬಿ.ವಿಜಯ್ ಕುಮಾರ್, “ಹಿಂದಿ ದಿವಸ್” ಆಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಮಾತನಾಡುತ್ತಾ ಎಲ್ಲಾ ಭಾಷೆಗಳ ಹಾಗೆ ಹಿಂದಿ ಭಾಷೆಯನ್ನು ಸಹ ನಾವು ಕಲಿಯಬೇಕು ನಮ್ಮ ಶಾಲೆಯಲ್ಲಿ 18 ಜನ ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿರುವುದು ನನಗೆ ತುಂಬಾ ಸಂತಸ ತಂದಿದೆ. ಮುಂದೆ ಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆಯಿರಿ ಎಂದರು. ಅಷ್ಟೇ ಅಲ್ಲದೇ ಉತ್ತರ ಭಾರತಕ್ಕೆ ಸೀಮಿತವಾಗಿದ್ದ ಭಾಷೆ ಇಂದು ಇಡೀ ಭಾರತಕ್ಕೆ ಹಬ್ಬಿದೆ, ಹಿಂದಿ ಭಾಷೆ ತಿಳಿದವರು ಭಾರತದ ಯಾವುದೇ ಮೂಲೆಯಲ್ಲಾದರೂ ಭೇಟಿ ನೀಡಿ ಸಂವಹನ ನಡೆಸಬಹುದು ಎಂದು ಹೇಳುತ್ತಾ ಹಿಂದಿ ಭಾಷೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು.

2023-24 ನೇ ಸಾಲಿನಲ್ಲಿ ಹಿಂದಿ ವಿಷಯದಲ್ಲಿ 100ಕ್ಕೆ 100ಅಂಕಗಳನ್ನು ಪಡೆದ ವೇದಿತಾ ಕೆ.ಜಿ, ಅಬ್ದುಲ್ ಮನ್ನಾನ್, ಅಭಯ್ ಸಿ ಐ, ಸಂತೋಷ್ ಕುಮಾರ್ ಪಿ, ವೆನ್ನೆಲ ಪಿ ಎಂ, ಮೃದು ಕೋಟ್ಲಾ ಡಿ. ಅಭಿನವ್ ಕೆ ಆರ್, ಜಗನ್ನಾಥ್ ಎಂ, ಯಶಸ್ವಿನಿ ಟಿ, ಗಾನವಿ ಹೆಚ್.ವಿ, ಮೋನಿಷಾ.ಪಿ, ಶ್ರ‍್ರಾವ್ಯ ಆರ್, ಪ್ರಣವ್ ಬಿ.ಹೆಚ್, ರಕ್ಷಾ.ಟಿ.ಎನ್, ರಮೀಜಾ ಅನ್ವರ್ ಎನ್ ಎ, ಶ್ರೇಯಾ ಹೆಚ್.ಎಂ.ಕೆ ಪ್ರ‍್ರಾರ್ಥನಾ ಸುರೇಶ್,ಅನಘ ಹೆಚ್ ಕಶ್ಯಫ್ ಸನ್ಮಾನ ಸ್ವೀಕರಿಸಿದರು.

ಸಂಸ್ಥೆಯ ನಿರ್ದೇಶಕರಾದ ಎಸ್.ಎಂ ಪೃಥ್ವೀಶ ಸಂಸ್ಥೆಯ ಮುಖ್ಯ ಶಿಕ್ಷಕರಾದ ಎನ್.ಜಿ.ತಿಪ್ಪೇಸ್ವಾಮಿ, ಪ್ರಾಚಾರ್ಯರಾದ ಬಸವರಾಜಯ್ಯ.ಪಿ, ಉಪ ಪ್ರಾಚಾರ್ಯರಾದ ಅವಿನಾಶ್.ಬಿ ಹಾಗೂ ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ತೃಷಾ.ಜಿ.ಆರ್ ಮತ್ತು ಧನ್ಯತಾ ಎಂ ಇವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮಸೀರಾ ನಾಜ್ ಖಾನ್, ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.