ಹಿರೇಕಬ್ಬಿಗೆರೆ ಹಾಲು ಉತ್ಪಾದಕರ ಸಂಘದಲ್ಲಿ ಅಕ್ರಮ ವ್ಯವಹಾರ ಆರೋಪ: ಕ್ರಮಕ್ಕೆ ಕರ್ನಾಟಕ ಜನಶಕ್ತಿ ಆಗ್ರಹ.

ಚಿತ್ರದುರ್ಗ ಸೆ. 07

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಹಿರೇಕಬ್ಬಿಗೆರೆ ಹಾಲು ಉತ್ಪಾದಕರ ಸಂಘದಲ್ಲಿ ಅಕ್ರಮ ವ್ಯವಹಾರ ಮಾಡುವುದರ ಮೂಲಕ ಸರ್ಕಾರಕ್ಕೆ ಹಾಗೂ ಸಂಘಕ್ಕೆ ಕೋಟ್ಯಾಂತರ ರೂಪಾಯಿಗಳ ವಂಚನೆ ಮಾಡಲಾಗಿದೆ. ಅಕ್ರಮಗಳಿಗೆ ನೆರವು ನೀಡಿರುವ ಒಕ್ಕೂಟದ ಅಧಿಕಾರಿಗಳಿಗೆ ದೂರು ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಡಲಿತಕ್ಕೆ ಕರ್ನಾಟಕ ಜನಶಕ್ತಿ ಜಿಲ್ಲಾ ಸಮಿತಿ ಸೋಮವಾರ ಮನವಿಯನ್ನು ಸಲ್ಲಿಸಿದೆ.

ಈ ಬಗ್ಗೆ ಅಪರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ ಕರ್ನಾಟಕ ಜನಶಕ್ತಿ ಜಿಲ್ಲಾ ಸಮಿತಿ ಜಿಲ್ಲಾ ಸಂಚಾಲಕರಾದ ಟಿ.ಶಫೀವುಲ್ಲಾರವರು ಹಿರೇಕಬ್ಬಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಾರ್ಯದರ್ಶಿಗಳಾದ ಎಸ್.ಶೇಖರಪ್ಪ ಇವರು ತಮ್ಮ ಕುಟುಂಬದ ಸದಸ್ಯರುಗಳ ನಕಲಿ ಖಾತೆಗಳನ್ನು ಸೃಷ್ಟಿಮಾಡಿಕೊಂಡು ಸಂಘಕ್ಕೆ ಹಾಲನ್ನು ಸರಬರಾಜು ಮಾಡದೇ ಹಾಲಿನ ಬಟವಾಡೆ ಮಾಡಿಕೊಂಡಿರುತ್ತಾರೆ ಹಾಗೂ ಅವರ ಸಂಬಂಧಿಗಳು ಬೇರೆ ಊರಿನಲ್ಲಿ ವಾಸವಾಗಿದ್ದರೂ ಅವರ ಹೆಸರಿಗೂ ಕೂಡ ಹಾಲಿನ ಬಟವಾಡೆ ಮಾಡಿದ್ದು, ಸಹಕಾರಿ ಕಾಯ್ದೆಯನ್ನು ಉಲ್ಲಂಘನೆ ಮಾಡಿರುತ್ತಾರೆ. ಹಾಗೂ ಅಕ್ರಮ ಹಣ ವರ್ಗಾವಣೆ ಮಾಡುವುದರ ಮೂಲಕ ಸಂಘಕ್ಕೆ ವಂಚನೆ ಮಾಡಿರುತ್ತಾರೆ ಮತ್ತು ಸರ್ಕಾರದಿಂದ ನೀಡಲಾಗುವ ಲೀ. 5ರೂ ಸಹಾಯ ಧನವನ್ನು ನಕಲಿ ಖಾತೆಗಳಿಗೆ ಜಮಾ ಆಗುವಂತೆ ಮಾಡಿದ್ದು, ಸರ್ಕಾರಕ್ಕೆ ಮೋಸ ಮಾಡಿರುತ್ತಾರೆ. ಹಾಲಿಗೆ ನೀರನ್ನು ಬೆರೆಸಿ ತೂಕದಲ್ಲಿ ಮೋಸ ಮಾಡಿರುತ್ತಾರೆ. ಅಕ್ರಮ ವ್ಯವಹಾರ ಮಾಡುವುದರ ಮೂಲಕ ಸರ್ಕಾರಕ್ಕೆ ಹಾಗೂ ಸಂಘಕ್ಕೆ ಕೋಟ್ಯಾಂತರ ರೂಪಾಯಿಗಳ ವಂಚನೆ ಮಾಡಿರುತ್ತಾರೆ. ಇದೊಂದು ಗಂಭೀರವಾದ ಪ್ರಕರಣವಾಗಿದ್ದು, ಇವರಿಗೆ ಅಕ್ರಮಗಳಿಗೆ ನೆರವು ನೀಡಿರುವ ಒಕ್ಕೂಟದ ಅಧಿಕಾರಿಗಳಿಗೆ ದೂರು ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು.

ಎಸ್.ಶೇಖರಪ್ಪ ಹಾಗೂ ಅವರ ಕುಟುಂಬ ಸದಸ್ಯರಿಗೆ ಅಕ್ರಮವಾಗಿ ಹಾಲಿನ ಬಟವಾಡೆ ಮಾಡಿ ಸರ್ಕಾರಿ ಕಾಯ್ದೆ ಉಲ್ಲಂಘನೆ ಮಾಡಲಾಗಿದೆ. ನಕಲಿ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ, ಸರ್ಕಾರದ ಸಹಾಯಧನ ನಕಲಿ ಖಾತೆಗಳಿಗೆ ಜಮೆ, ಸರ್ಕಾರಕ್ಕೆ ವಂಚನೆ. ಹಾಲಿಗೆ ನೀರನ್ನು ಬೆರೆಸಿ, ಕಲಬೆರಕೆ ಆಹಾರ ಕಾಯ್ದೆ ಉಲ್ಲಂಘನೆ ಹಾಗೂ ಹಾಲಿನ ತೂಕದಲ್ಲಿ ಮೋಸಮಾಡಿ ನಕಲಿ ಖಾತೆಗಳ ಸೃಷ್ಟಿ, ತೂಕ ಮತ್ತು ಮಾಪನ ನಿಯಮಗಳನ್ನು ಉಲ್ಲಂಘನೆ ಮಾಡಿರುತ್ತಾರೆ. ಈ ಎಲ್ಲಾ ಅಕ್ರಮ ಅವ್ಯವಹಾರಗಳ ಮೇಲೆ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಹಾಲೇಶ್, ರಾಜಣ್ಣ, ಅಜಗರ್, ಎಂ ತಿಪ್ಪೇಸ್ವಾಮಿ, ಪುರುಷೋತ್ತಮ ತೋರಣಘಟ್ಟ ಸೇರಿದಂತೆ ಹಲವರು ಹಾಜರಿದ್ದರು

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *