
ಚಿತ್ರದುರ್ಗ: ಹೀರೋಷಿಮಾ ದಿನದ ಅಂಗವಾಗಿ ಚಿತ್ರದುರ್ಗ ವಿಜ್ಞಾನ ಕೇಂದ್ರದ ವತಿಯಿಂದ ವಿಶ್ವದಲ್ಲಿ ಶಾಂತಿ ನೆಲಸಲಿ ಎಂಬ ಆಶಯದಿಂದ ಮಲ್ಲಾಪುರದ ಕೆರೆಯಲ್ಲಿ ದೀಪವನ್ನು ತೇಲಿ ಬಿಡಲಾಯಿತು.

ಆಗಸ್ಟ್ 6 1945 ರಂದು ಬೆಳಿಗ್ಗೆ 8.15 ರ ಸುಮಾರಿಗೆ ಅಮೆರಿಕಾ, ಜಪಾನಿನ ಹೀರೋಷಿಮಾ ನಗರದ ಮೇಲೆ ಭೀಕರ ಅಣು ಬಾಂಬ್ ಹಾಕಿ ಸುಮಾರು ಒಂದೂವರೆ ಲಕ್ಷ ಅಮಾಯಕರು ಚಿತ್ರ -ವಿಚಿತ್ರ ರೀತಿಯಲ್ಲಿ ದಾರುಣ ಸಾವನ್ನಪ್ಪಿದರು. ಈ ಒಂದು ಘಟನೆ ಮನುಕುಲಕ್ಕಾದ ಮಾಯದ ಗಾಯ. ಪ್ರತಿಯೊಬ್ಬರ ಹೃದಯದಲ್ಲಿ ನೆಲೆ ನಿಂತ ಭಯ. ಅಣು ಬಾಂಬ್ ಗಳ ಸಂಗ್ರಹ ನಾಶವಾಗಿ ಎಲ್ಲರ ಹೃದಯದಲ್ಲಿ ಶಾಂತಿ, ನೆಮ್ಮದಿ ನೆಲಸಲಿ ಎಂಬ ಆಶಯದೊಂದಿಗೆ ವಿಜ್ಞಾನ ಕೇಂದ್ರದ ಅಧ್ಯಕ್ಷರಾದ ಜೆ.ಯಾದವರೆಡ್ಡಿ, ಉಪಾಧ್ಯಕ್ಷರಾದ ಎಂ.ಆರ್.ದಾಸೇಗೌಡ, ಕಾರ್ಯದರ್ಶಿ ಕೆ.ರಾಜಕುಮಾರ್, ಖಜಾಂಚಿ ಕೆ.ರಾಮಪ್ಪ, ಸದಸ್ಯರಾದ ವಿ.ಮೂರ್ತಚಾರ್, ಟಿ.ಶ್ರೀನಿವಾಸ್, ಎಚ್.ದಾದ ಖಲಂದರ್, ರಮೇಶ್ ಐನಳ್ಳಿ, ಬಿ.ವಿ.ನಾಥ್, ವಿ.ಎಂ.ಚಿರಂತ್, ಟಿ.ಪಿ.ಹರಿಣ್ಯ. ಉಪಸ್ಥಿತರಿದ್ದರು.