ಇತಿಹಾಸ ನಿರ್ಮಿಸಿದ ಜಪಾನ್ ‘ಮೂನ್ ಸ್ನೈಪರ್’ : ಚಂದ್ರನ ‘ಪಿನ್-ಪಾಯಿಂಟ್’ ಮೇಲೆ ಯಶಸ್ವಿ ಲ್ಯಾಂಡಿಂಗ್.

ನವದೆಹಲಿ : ಜಪಾನಿನ ಸ್ನೈಪರ್ ಚಂದ್ರನ ಮೇಲೆ ಯಶಸ್ವಿ ಲ್ಯಾಂಡಿಂಗ್ ಮಾಡಿದ್ದು, ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನ ಇಳಿಸಿದ ಐದನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಜಪಾನ್ ಶುಕ್ರವಾರ ಪಾತ್ರವಾಗಿದೆ. ಅಮೆರಿಕ, ಸೋವಿಯತ್ ಒಕ್ಕೂಟ, ಚೀನಾ ಮತ್ತು ಭಾರತ ಮಾತ್ರ ಈ ಸಾಧನೆ ಮಾಡಿದ ಇತರ ರಾಷ್ಟ್ರಗಳಾಗಿವೆ.

“ಮೂನ್ ಸ್ನೈಪರ್” ಎಂದು ಕರೆಯಲ್ಪಡುವ ಜಪಾನ್ ಏರೋಸ್ಪೇಸ್ ಎಕ್ಸ್ಪ್ಲೋರೇಶನ್ ಏಜೆನ್ಸಿಯ ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಷನ್ ಮೂನ್ (Slim) ಶೋಧಕವು “ಪಿನ್ಪಾಯಿಂಟ್ ತಂತ್ರಜ್ಞಾನ” ಬಳಸಿ ಚಂದ್ರನ ಸಮಭಾಜಕದ ದಕ್ಷಿಣಕ್ಕೆ ಕುಳಿಯ ಇಳಿಜಾರಿನಲ್ಲಿ ಇಳಿಯಿತು.

ನೌಕೆಯ ಲ್ಯಾಂಡಿಂಗ್ ಸೈಟ್ ಮೇಲ್ಮೈಯಲ್ಲಿ ಒಂದು ಸ್ಥಳದಿಂದ 100 ಮೀಟರ್ (330 ಅಡಿ) ಒಳಗಿನ ಪ್ರದೇಶವಾಗಿದ್ದು, ಹಲವಾರು ಕಿಲೋಮೀಟರ್ಗಳ ಸಾಮಾನ್ಯ ಲ್ಯಾಂಡಿಂಗ್ ವಲಯಕ್ಕಿಂತ ತುಂಬಾ ಬಿಗಿಯಾಗಿದೆ.

ಬೇರೆ ಯಾವ ರಾಷ್ಟ್ರವೂ ಇದನ್ನು ಸಾಧಿಸಿಲ್ಲ. ಜಪಾನ್ ಈ [ಪಿನ್ಪಾಯಿಂಟ್] ತಂತ್ರಜ್ಞಾನವನ್ನ ಹೊಂದಿದೆ ಎಂದು ಸಾಬೀತುಪಡಿಸುವುದು ಆರ್ಟೆಮಿಸ್ನಂತಹ ಮುಂಬರುವ ಅಂತರರಾಷ್ಟ್ರೀಯ ಕಾರ್ಯಾಚರಣೆಗಳಲ್ಲಿ ನಮಗೆ ದೊಡ್ಡ ಪ್ರಯೋಜನವನ್ನ ತರುತ್ತದೆ” ಎಂದು ಜಾಕ್ಸಾದ ಎಸ್‌ಎಲ್‌ಐಎಂ ಯೋಜನಾ ವ್ಯವಸ್ಥಾಪಕ ಶಿನಿಚಿರೊ ಸಕೈ ಹೇಳಿದರು. ಪಿನ್ಪಾಯಿಂಟ್ ತಂತ್ರಜ್ಞಾನವನ್ನು ಈ ಹಿಂದೆ ಜಪಾನ್ ಎರಡು ಕ್ಷುದ್ರಗ್ರಹಗಳ ಮೇಲೆ ಶೋಧಕಗಳನ್ನ ಯಶಸ್ವಿಯಾಗಿ ಇಳಿಸಲು ಬಳಸಿದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *