Hockey World Cup 2023: ಹಾಕಿ ವಿಶ್ವಕಪ್​ 2023: ಬಲಿಷ್ಠ ಭಾರತ ತಂಡ ಪ್ರಕಟ

Hockey Men's World Cup 2023

Hockey World Cup 2023: ಭಾರತದಲ್ಲಿ ಜನವರಿ 13 ರಿಂದ ಆರಂಭವಾಗಲಿರುವ ಎಫ್‌ಐಎಚ್‌ ಪುರುಷರ ಹಾಕಿ ವಿಶ್ವಕಪ್‌ಗಾಗಿ 18 ಸದಸ್ಯರ ಟೀಮ್ ಇಂಡಿಯಾವನ್ನು (India Squad) ಪ್ರಕಟಿಸಲಾಗಿದೆ. ಈ ತಂಡವನ್ನು ರಕ್ಷಣಾತ್ಮಕ ಆಟಗಾರ ಹರ್ಮನ್‌ಪ್ರೀತ್ ಸಿಂಗ್ ಮುನ್ನಡೆಸಲಿದ್ದು, ಉಪನಾಯಕರಾಗಿ ಅಮಿತ್ ರೋಹಿದಾಸ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡವನ್ನು ಮಿಡ್‌ಫೀಲ್ಡರ್ ಆಟಗಾರ ಮನ್‌ಪ್ರೀತ್ ಸಿಂಗ್ ಮುನ್ನಡೆಸಿದ್ದರು. ಇದೀಗ ನಾಯಕತ್ವ ಬದಲಾವಣೆಯೊಂದಿಗೆ ಭಾರತ ತಂಡ ವಿಶ್ವಕಪ್​ನಲ್ಲಿ ಕಣಕ್ಕಿಳಿಯುತ್ತಿರುವುದು ವಿಶೇಷ.

ಇನ್ನು ತಂಡದ ಮುನ್ಪಡೆ ಆಟಗಾರರಾಗಿ ಮನ್​ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಭಿಷೇಕ್ ಹಾಗೂ ಸುಖಜೀತ್ ಆಯ್ಕೆಯಾಗಿದ್ದಾರೆ. ಹಾಗೆಯೇ ಗೋಲ್​ ಕೀಪರ್​ಗಳಾಗಿ ಕೃಷ್ಣ ಬಹದ್ದೂರ್ ಪಾಠಕ್ ಹಾಗೂ ಪಿಆರ್ ಶ್ರೀಜೇಶ್ ತಂಡದಲ್ಲಿದ್ದಾರೆ.
ರಕ್ಷಣಾತ್ಮಕ ವಿಭಾಗದಲ್ಲಿ ಭಾರತ ತಂಡವು ಬಲಿಷ್ಠವಾಗಿದ್ದು, ನಾಯಕ ಹರ್ಮನ್ ಪ್ರೀತ್ ಸಿಂಗ್, ಉಪನಾಯಕ ಅಮಿತ್ ರೋಹಿದಾಸ್ ಜೊತೆಗೆ ಜರ್ಮನ್​ಪ್ರೀತ್ ಸಿಂಗ್ ಹಾಗೂ ಸುರೇಂದರ್ ಕುಮಾರ್ ಡಿಫೆಂಡರ್​ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಮಿಡ್​ಫೀಲ್ಡರ್​ಗಳಾಗಿ ಮನಪ್ರೀತ್ ಸಿಂಗ್ ಹಾಗೂ ಹಾರ್ದಿಕ್ ಸಿಂಗ್ ತಂಡದ ಬಲವನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ. ಹೀಗಾಗಿಯೇ ಈ ಬಾರಿ ವಿಶ್ವಕಪ್​ ಗೆಲ್ಲುವ ವಿಶ್ವಾಸದಲ್ಲಿದೆ ಭಾರತ ತಂಡ.

ಹಾಕಿ ವಿಶ್ವಕಪ್​​ನಲ್ಲಿ ಭಾರತದ ಸಾಧನೆ:

ಹಾಕಿ ವಿಶ್ವಕಪ್‌ನಲ್ಲಿ ಭಾರತ ತಂಡವು ಮೂರು ಬಾರಿ ಪದಕಗಳನ್ನು ಗೆದ್ದುಕೊಂಡಿದೆ. 1971 ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡವು, 1973 ರಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿತ್ತು. ಹಾಗೆಯೇ 1975 ರಲ್ಲಿ ಜರ್ಮನಿಯಲ್ಲಿ ನಡೆದ ವಿಶ್ವಕಪ್​ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಭಾರತ ತಂಡವು ಆ ಬಳಿಕ ಪ್ರಶಸ್ತಿ ಗೆದ್ದಿಲ್ಲ. ಇದೀಗ ತವರಿನಲ್ಲೇ ಟೂರ್ನಿ ನಡೆಯುತ್ತಿರುವುದರಿಂದ ಭಾರತದ ಮೇಲಿನ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: Team India: ಟೀಮ್ ಇಂಡಿಯಾ ಟಿ20 ತಂಡದಿಂದ 9 ಆಟಗಾರರು ಔಟ್..!

ಭಾರತ ತಂಡದ ವೇಳಾಪಟ್ಟಿ:

ಈ ಬಾರಿಯ ವಿಶ್ವಕಪ್​ನಲ್ಲಿ ಭಾರತ ತಂಡವು ಪೂಲ್ ಡಿ ಯಲ್ಲಿ ಸ್ಥಾನ ಪಡೆದಿದ್ದು, ಇಂಗ್ಲೆಂಡ್, ಸ್ಪೇನ್ ಮತ್ತು ವೇಲ್ಸ್​ ತಂಡಗಳ ವಿರುದ್ಧ ಭಾರತೀಯರು ಕಣಕ್ಕಿಳಿಯಲಿದ್ದಾರೆ.

  • ಜನವರಿ 13: ಭಾರತ vs ಸ್ಪೇನ್ (ರಾತ್ರಿ 7 ಗಂಟೆಗೆ)
  • ಜನವರಿ 15: ಭಾರತ vs ಇಂಗ್ಲೆಂಡ್ (ರಾತ್ರಿ 7 ಗಂಟೆಗೆ)
  • ಜನವರಿ 19: ಭಾರತ vs ವೇಲ್ಸ್ (ಸಂಜೆ 7 ಗಂಟೆಗೆ)

ಭಾರತ ತಂಡ ಹೀಗಿದೆ:

ಗೋಲ್​ ಕೀಪರ್​ಗಳು:-

  • ಕೃಷ್ಣ ಬಹದ್ದೂರ್ ಪಾಠಕ್
  • ಪಿಆರ್ ಶ್ರೀಜೇಶ್

ರಕ್ಷಣಾತ್ಮಕ ಆಟಗಾರರು:-

  • ಜರ್ಮನ್‌ಪ್ರೀತ್ ಸಿಂಗ್
  • ಸುರೇಂದರ್ ಕುಮಾರ್
  • ಹರ್ಮನ್‌ಪ್ರೀತ್ ಸಿಂಗ್ (ನಾಯಕ)
  • ವರುಣ್ ಕುಮಾರ್
  • ಅಮಿತ್ ರೋಹಿದಾಸ್ (ಉಪ ನಾಯಕ)
  • ನಿಲಮ್ ಸಂಜೀಪ್

ಮಿಡ್‌ಫೀಲ್ಡರ್‌ಗಳು:-

  • ಮನಪ್ರೀತ್ ಸಿಂಗ್
  • ಹಾರ್ದಿಕ್ ಸಿಂಗ್
  • ನೀಲಕಂಠ ಶರ್ಮ
  • ಶಂಶೇರ್ ಸಿಂಗ್
  • ವಿವೇಕ್ ಸಾಗರ್ ಪ್ರಸಾದ್
  • ಆಕಾಶದೀಪ್ ಸಿಂಗ್

ಮುನ್ಪಡೆ ಆಟಗಾರರು:-

  • ಮನದೀಪ್ ಸಿಂಗ್
  • ಲಲಿತ್ ಕುಮಾರ್ ಉಪಾಧ್ಯಾಯ
  • ಅಭಿಷೇಕ್
  • ಸುಖಜೀತ್ ಸಿಂಗ್

ಪರ್ಯಾಯ ಆಟಗಾರರು:-

  • ರಾಜಕುಮಾರ್ ಪಾಲ್
  • ಜುಗರಾಜ್ ಸಿಂಗ್.

 

 

 

source https://tv9kannada.com/sports/hockey-mens-world-cup-2023-indian-hockey-team-kannada-news-zp-au50-492399.html

Leave a Reply

Your email address will not be published. Required fields are marked *