Home Remedies For Nail Fungus: ಕೆಲವರಿಗೆ ಉಗುರು ಬಿಡುವ ಅಭ್ಯಾಸ ವಿರುತ್ತದೆ. ಮೊದಲು ನಿಲ್ಲಿಸಬೇಕು ಕಾಲಿನಲ್ಲಿ ಉಗುರು ಬಿಡುವುದರಿಂದ ಅದರೊಳಗೆ ಕಸ ಸೇರಿ ಇನ್ನಷ್ಟು ಹಾಳಾಗುತ್ತದೆ. ಒಂದು ವೇಳೆ ಕೈಕಾಲಿನಲ್ಲಿ ಉಗುರು ಬಿಟ್ಟಿದ್ದರೇ ಆಗಾಗ ಸ್ವಚ್ಛವಾಗಿರಿಸುವುದು ಮುಖ್ಯವಾಗಿದೆ.

Lifestyle: ಇತ್ತೀಚೆಗೆ ಆರೋಗ್ಯ ಕಾಪಾಡಲು ಹಲವಾರು ರೀತಿಯ ಪ್ರಯೋಗಗಳನ್ನು ಮಾಡಲಾಗುತ್ತದೆ.ಅದರಲ್ಲೂ ಮಳೆಗಾಲ ಬಂತೆಂದರೆ ಆರೋಗ್ಯ ಇನ್ನಷ್ಟು ಹಾಳು ಆಗುತ್ತದೆ. ಈ ಸಮಯದಲ್ಲಿ ಗದ್ದೆ, ಹೊಲ ಕೆಲಸ ಮಾಡುವುದರಿಂದ ಉಗುರುಗಳು ಹಾಳು ಆಗೋದು ಸಹಜ. ಆದರೆ ಹಾಗೆ ಬಿಟ್ಟರೆ ಉಗುರು ಸುತ್ತಿ ಆಗಿ ಸಂಪೂರ್ಣ ಕಾಲಿನ ಲಕ್ಷಣ ಕೆಡಿಸುತ್ತದೆ.
ಹೀಗಾಗಿ ಉಗುರಿನಲ್ಲಿ ಫಂಗಲ್ ಆಗುವುದನ್ನು ಮೊದಲಿನಿಂದ ತಡೆಯುವುದು ಒಳಿತು.ಅದರ ಪರಿಹಾರಕ್ಕಾಗಿ ಇಲ್ಲಿದೆ ಸುಲಭ ಮನೆ ಮದ್ದು.
ಸೌಂದರ್ಯ ಬಯಸುವ ಮೊದಲು ಆರೋಗ್ಯ ಕಾಪಾಡಿಕೊಳ್ಳಬೇಕು. ಕೆಲವರಿಗೆ ಉಗುರು ಬಿಡುವ ಅಭ್ಯಾಸ ವಿರುತ್ತದೆ ಆದರೆ ಈ ಅಭ್ಯಾಸವನ್ನು ಮೊದಲು ನಿಲ್ಲಿಸಬೇಕು ಕಾಲಿನಲ್ಲಿ ಉಗುರು ಬಿಡುವುದರಿಂದ ಅದರೊಳಗೆ ಕಸ ಸೇರಿ ಇನ್ನಷ್ಟು ಹಾಳಾಗುತ್ತದೆ. ಒಂದು ವೇಳೆ ಕೈಕಾಲಿನಲ್ಲಿ ಉಗುರು ಬಿಟ್ಟಿದ್ದರೇ ಆಗಾಗ ಸ್ವಚ್ಛವಾಗಿರಿಸುವುದು ಮುಖ್ಯವಾಗಿದೆ.
ತೆಂಗಿನ ಎಣ್ಣೆ ಜೊತೆಗೆ ಚಿಟಿಕೆ ಅರಿಶಿನವನ್ನು ಮಿಶ್ರಣ ಮಾಡಿ ಹಚ್ಚುವುದರಿಂದ ಫಿಂಗರ್ಸ್ ಫಂಗಲ್ ಸಮಸ್ಯೆ ನಿಯಂತ್ರಿಸುತ್ತದೆ.
ನಿಯಮಿತವಾಗಿ ಉಗುರಿನ ಮೇಲೆ ಅಲೋವೆರಾ ಬಳಸುವುದರಿಂದ ಈ ಸೋಂಕು ದೂರವಾಗುತ್ತದೆ. ಸಾಮಾನ್ಯ ಮಟ್ಟದ ಬಿಸಿ ನೀರಿನಲ್ಲಿ ಕಾಲು ಇಡುವುದರಿಂದ ಪಾದಗಳಿಗೆ ಅಥವಾ ಉಗುರಿಗೆ ತಗುಲುವ ಸೋಂಕುಗಳನ್ನು ತಡೆಯಬಹುದಾಗಿದೆ.
Source : https://zeenews.india.com/kannada/lifestyle/cause-of-nail-fungus-home-remedies-for-its-remedy-148796