ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ : ಭಾನು, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ಸಾಧ್ಯ, ಕರಣ : ನಾಗವಾನ್, ಸೂರ್ಯೋದಯ ಬೆಳಗ್ಗೆ 06 ಗಂಟೆ 44 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 41 ನಿಮಿಷಕ್ಕೆ, ರಾಹು ಕಾಲ ಸಂಜೆ 05:12 ರಿಂದ 06:41ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:43 ರಿಂದ 02:12ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:42 ರಿಂದ 05:12ರ ವರೆಗೆ.
ಮೇಷ ರಾಶಿ: ನಿಮ್ಮ ಆರ್ಥಿಕ ಚೇತರಿಕೆಯ ಕಾರಣ ದುರ್ಬಲವಾದ ಮನಸ್ಸು ಸಬಲವಾಗುವುದು. ನಿಮಗೆ ಯಾರಿಂದಲಾದರೂ ವಂಚನೆಯಾಗಬಹುದು. ಮನೆಯಲ್ಲಿಯೇ ಇದ್ದು ಆಗಬೇಕಾದ ಕಾರ್ಯವನ್ನು ಮಾಡುವಿರಿ. ವಿದ್ಯಾರ್ಥಿಗಳ ಗುಣಮಟ್ಟವು ಕ್ಷೀಣಿಸುವುದು ನಿಮ್ಮ ಅರಿವಿಗೆ ಬರಲಿದೆ. ಸಾಮಾಜಿಕ ಗೌರವವನ್ನು ಪಡೆಯುವುದರಿಂದ ನಿಮ್ಮ ಸ್ಥೈರ್ಯ ಹೆಚ್ಚಾಗುತ್ತದೆ. ಕುಟುಂಬದ ಜೊತೆ ಹಾಸ್ಯ ಮತ್ತು ಸಂತೋಷ ಕಾಲವನ್ನು ಕಳೆಯುವಿರಿ. ಮನಸ್ಸಿನಲ್ಲಿ ನಾನಾ ಬಗೆಯ ಗೊಂದಲವು ಇರುವುದು. ವಿದೇಶ ಪ್ರಯಾಣಕ್ಕೆ ಮಿತ್ರನ ಸಹಕಾರವು ಸಿಗಬಹುದು. ದೂರ ಪ್ರಯಾಣಕ್ಕೆ ವೈದ್ಯರು ನಿರ್ಬಂಧ ಹಾಕಬಹುದು. ಕೃಷಿಯ ಬಗ್ಗೆ ಸ್ವಲ್ಪ ಆಸಕ್ತಿಯು ಇರುವುದು. ಬಂಧುಗಳ ನಡುವೆ ಆರ್ಥಿಕ ವ್ಯವಹಾರಕ್ಕೆ ವಾಗ್ವಾದವಾಗಬಹುದು.
ವೃಷಭ ರಾಶಿ: ನೀವು ಅದೃಷ್ಟದ ನಿರೀಕ್ಷೆಯಲ್ಲಿ ಇರುವಿರಿ. ನೀವು ಯಾರನ್ನಾದರೂ ಮೆಚ್ಚಿಸಿ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳಬೇಕಾಗುವುದು. ಮಾಡಿದ ತಪ್ಪನ್ನು ಸರಿ ಮಾಡಿಕೊಳ್ಳಲು ಸತತ ಪ್ರಯತ್ನ ಮಾಡುವಿರಿ. ನಿಮ್ಮ ಕುಟುಂಬ ಸದಸ್ಯರಿಗೆ ನೀವು ವಿಶ್ವಾಸದ್ರೋಹಿ ಆಗುವ ಸಾಧ್ಯತೆಯಿದೆ. ಹಳೆಯ ಸ್ನೇಹಿತನನ್ನು ಯಾವುದಾದರೂ ರೀತಿಯಲ್ಲಿ ಭೇಟಿಯಾಗುವಿರಿ. ಕುಟುಂಬ ವ್ಯವಸ್ಥೆ ಸರಿಯಾಗಲು ಕೆಲವನ್ನು ಬಿಟ್ಟುಕೊಡಬೇಕಾದೀತು. ಮನೆಯನ್ನು ಬಿಟ್ಟು ಹೋಗಲು ಚೋರ ಭಯವು ಕಾಡಬಹುದು. ಶಾರೀರಿಕ ಆಯಾಸದಿಂದ ಆರೋಗ್ಯವು ಕುಗ್ಗೀತು. ಕೃತಜ್ಞತೆಯನ್ನೂ ತೋರದಷ್ಟು ನಿಷ್ಕರುಣೆ ಇರುವುದು. ನಿಮ್ಮ ಮನಸ್ಸಿಗೆ ಹಿಡಿಸದ ವಿಚಾರಗಳ ಚರ್ಚೆಯಿಂದ ನೀವು ದೂರ ಇರುವಿರಿ. ನಿಮ್ಮ ಸ್ವಭಾವದಲ್ಲಿ ಬದಲಾವಣೆ ಇರಲಿದ್ದು ಇತರರಿಗೆ ಇದು ಅನಿರೀಕ್ಷಿತವೂ ಆಗಬಹುದು.
ಮಿಥುನ ರಾಶಿ: ನಿಮಗೆ ಅಪರಿಚಿತರ ಬಗ್ಗೆ ಭಯವಿರುವುದು. ನೀವು ವಿದ್ಯಾರ್ಥಿಯಾಗಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿನ್ನಡೆಯಾಗಲಿದೆ. ಮಕ್ಕಳ ಸ್ವಾಸ್ಥ್ಯದ ಬಗ್ಗೆ ಜಾಗರೂಕತೆ ಇರಲಿ. ಹಲವು ಕಾರ್ಯಗಳನ್ನು ಮಾಡುವ ಸನ್ನಿವೇಶವು ಬರುವ ಕಾರಣ ಸಮಯವನ್ನು ಸರಿಯಾಗಿ ಮಾಡಿಕೊಳ್ಳಿ. ನಿಮ್ಮ ವ್ಯವಹಾರದಲ್ಲಿಯೂ ಸಹ ನೀವು ಭಾಗವಹಿಸುವಿರಿ ಮತ್ತು ಕೆಲಸ ಪೂರ್ಣಗೊಳ್ಳುತ್ತದೆ. ಸಾಲವನ್ನು ಹಿಂಪಡೆಯಲು ಇಂದು ತಿರುಗಾಟ ಮಾಡುವಿರಿ. ಭೂಮಿಯ ವ್ಯವಹಾರದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ಇನ್ನೊಬ್ಬರು ಕೊಡುವ ತೊಂದರೆಯಿಂದ ನೀವು ಬೇಸತ್ತುಹೋಗಬಹುದು. ಹೂಡಿಕೆ ಮಾಡಲು ಯಾರಿಂದಲಾದರೂ ಒತ್ತಡವು ಬರಬಹುದು. ಅವಿವಾಹಿತರು ತಮ್ಮ ದುಃಖವನ್ನು ಹೇಳಿಕೊಂಡು ಸಮಾಧಾನವಾಗುವುದು.
ಕಟಕ ರಾಶಿ: ನಿಮಗೆ ಅಪರಿಚಿತ ಕರೆಗಳು ಕೆಲವು ಗೊಂದಲವನ್ನು ಸೃಷ್ಟಿಸುವುದು. ವಿಶ್ವಾಸವನ್ನು ನೀವು ಉಳಿಸಿಕೊಳ್ಳದೇ ಇರುವ ಕಾರಣ ಎಲ್ಲವೂ ಅಸ್ತವ್ಯಸ್ತವಾಗಬಹುದು. ಯಾರನ್ನೋ ನೋಯಿಸಿ ಖುಷಿಯಾಗಿರುವುದು. ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಸೂಕ್ತ. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಹೊಟ್ಟೆಯ ಸ್ವಾಸ್ಥ್ಯವು ಕೆಡುವ ಸಾಧ್ಯತೆಯಿದೆ. ಹಿರಿಯರ ವಿಚಾರದಲ್ಲಿ ಅನಾದರ ತೋರಿದಂತೆ ಕಾಣಿಸುವುದು. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮನ್ನಣೆ ಸಿಗುವುದು. ಸಂಗಾತಿಯನ್ನು ನೀವು ಮರೆತು ವ್ಯವಹರಿಸುವಿರಿ. ಯಂತ್ರಗಳ ವಿಚಾರದಲ್ಲಿ ನಿಮಗೆ ಹೆಚ್ಚಿನ ಆಸಕ್ತಿಯು ಇರಲಿದ್ದು ವಿದ್ಯಾಭ್ಯಾಸಕ್ಕೆ ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಿರಿ. ಇಂದಿನ ನಿಮ್ಮ ಕೆಲಸವು ನಿಮಗೇ ಇಷ್ಟವಾಗದು. ಖರೀದಿಸಿದ ಹೊಸ ಯಂತ್ರಗಳೂ ಕೆಡಬಹುದು.
ಸಿಂಹ ರಾಶಿ: ಇಂದು ಹಲವು ಒತ್ತಡಗಳ ನಡುವೆಯೂ ಅಧ್ಯಾತ್ಮಕ್ಕೆ ಸಮಯವನ್ನು ಕೊಡುವಿರಿ. ಇನ್ಮೊಬ್ಬರನ್ನು ನಿಂದಿಸುವ ಬಗ್ಗೆ ಯೋಚಿಸುವುದು ಬೇಡ. ಸಾಲದ ಚಿಂತಯನ್ನು ಅನಾಮತ್ತಾಗಿ ತಳ್ಳಿಹಾಕುವಿರಿ. ನಿಮ್ಮ ಇಂದಿನ ವ್ಯವಹಾರ ಮತ್ತು ವ್ಯಾಪಾರಗಳನ್ನು ಶಾಂತಿಯಿಂದ ನಡೆಸಬೇಕು ಎಂಬ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಹಣದ ಬಗ್ಗೆ ನಿಮ್ಮ ಚಿಂತೆ ದೂರವಾಗಬಹುದು. ನೀವು ದೇಶದಿಂದ ಹೊರಗೆ ಹೋಗುವ ಬಗ್ಗೆ ಯೋಚಿಸಬಹುದು. ಸ್ಥಿರಾಸ್ತಿಯ ಆಧಾರದ ಮೇಲೆ ಸಾಲವನ್ನು ಮಾಡಬೇಕಾಗಬಹುದು. ತಾಳ್ಮೆ ಮತ್ತು ಪ್ರತಿಭೆಯಿಂದ ಶತ್ರು ಗೆಲ್ಲುವಲ್ಲಿ ನೀವು ಯಶಸ್ಸನ್ನು ಗಳಿಸುವಿರಿ. ನಿಮ್ಮದಾದ ಚಿಂತನೆ, ಕಾರ್ಯದಿಂದ ಯಶಸ್ಸನ್ನು ಪಡೆಯಲು ನೀವು ಬಹಳ ಸಮಯ ಕಾಯಬೇಕಾಗಬಹುದು. ನಿಮ್ಮ ಅಹಂಕಾರಕ್ಕೆ ಪೆಟ್ಟುಬೀಳಬಹುದು.
ಕನ್ಯಾ ರಾಶಿ: ನಿಮ್ಮ ಮನೋನಿಗ್ರಹದ ಬಗ್ಗೆ ಯಾರಿಂದಲಾದರೂ ತಿಳಿವಳಿಕೆ ಬರಬಹುದು. ಸಂಗಾತಿಯ ಜೊತೆಗಿನ ಮನಸ್ತಾಪನ್ನು ಯಾವುದೋ ವಿಧಾನದಿಂದ ಶಮನ ಮಾಡಿಕೊಳ್ಳುವಿರಿ. ನಿಮ್ಮ ಅದೃಷ್ಟವು ಕೈ ಹಿಡಿಯುವುದು ಕಷ್ಟ. ನಿಮ್ಮ ಗುರಿಯ ಬಗ್ಗೆ ನಿಮಗೆ ಇರಬೇಕಾದ ಬದ್ಧತೆಯ ಕೊರತೆ ಇರಲಿದೆ. ಆದಾಯ ಹೆಚ್ಚಿಸುವ ಪ್ರಯತ್ನಗಳು ಸಫಲವಾದಂತೆ ಕಾಣುತ್ತದೆ. ಅದನ್ನು ಸರಿಯಾಗಿ ಮುಂದುವರಿಸುವುದು ನಿಮ್ಮ ಕೈಯಲ್ಲಿದೆ. ಸಂತಾನ ಬಗ್ಗೆ ಕುಟುಂಬದಿಂದ ಒತ್ತಡ ಬರಬಹುದು. ನೀವು ಹೊಸ ಹೂಡಿಕೆ ಮಾಡಬೇಕಾದರೆ ಅದು ಶುಭವಾಗುತ್ತದೆ. ಕುಟುಂಬದಲ್ಲಿಯೂ ಶಾಂತಿ ಮತ್ತು ಸಂತೋಷ ಇರುತ್ತದೆ. ನಿಮಗಿಂತ ಭಿನ್ನವಾದ ವ್ಯಕ್ತಿಗಳ ಬಗ್ಗೆ ಯೋಚಿಸದೇ ನಿಮ್ಮ ನಿಲುವೇ ಸರಿ ಎಂಬಂತೆ ವರ್ತಿಸುವಿರಿ. ಹಿರಿಯರ ಸೇವೆಯಿಂದ ಆತ್ಮಸಂತೋಷವಿರುವುದು.
ತುಲಾ ರಾಶಿ: ಇಂದು ತಿಳಿದೂ ಹಳ್ಳಕ್ಕೆ ಬೀಳುವ ಸಾಧ್ಯತೆ ಇದೆ. ಸಣ್ಣ ವಿಚಾರವನ್ನು ದೊಡ್ಡ ಮಾಡುವಿರಿ. ಹಳೆಯ ಅಸಂಬದ್ಧ ವಿಚಾರಗಳು ಬಯಲಿಗೆ ಬರಬಹುದು. ಯಾರ ಜೊತೆಗಾರರೂ ಸ್ಪರ್ಧಿಸುವ ಮನೋಭಾವವಿರುವುದು. ಸಂಗಾತಿಯ ಈಡೇರಿಕೆಯನ್ನು ನೀವು ಪೂರ್ಣ ಮಾಡುವಿರಿ. ಸಮಾಜವು ನಿಮ್ಮನ್ನು ಸ್ವಾರ್ಥಿಯಂತೆ ನೋಡಬಹುದು. ಮನೆಯ ಕೆಲಸವು ಆಗಿಲ್ಲವೆಂದು ಕೋಪವು ಇರಲಿದ್ದು ಅದನ್ನು ಪ್ರಕಟಿಸುವಿರಿ. ನಿಮ್ಮ ರಕ್ಷಣೆಯ ಬಗ್ಗೆ ಕಾಳಜಿ ಇರಲಿ. ಕೋಪವು ನಿಮ್ಮ ಇಂದಿನ ಕೆಲಸವನ್ನು ಕೆಡಿಸಬಹುದು. ನಿಮ್ಮ ಪ್ರಾಮಾಣಿಕತೆಯು ಇತರರಿಗೆ ಇಷ್ಟವಾಗುವುದು. ಪಡೆದುದನ್ನು ನಿಯತ್ತಿನಿಂದ ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಇರುವಿರಿ. ಉದ್ಯೋಗವನ್ನು ಕೊಡಿಸಲು ನಿಮಗೆ ಹಣವನ್ನು ಕೇಳಬಹುದು. ಸತ್ಯವನ್ನು ಹೇಳುವ ಮನಸ್ಸಿದ್ದರೂ ಬೇರೆಯವರ ಒತ್ತಡದಿಂದಾಗಿ ಅದನ್ನು ಮುಚ್ಚಿಡಬೇಕಾದೀತು.
ವೃಶ್ಚಿಕ ರಾಶಿ: ಇಂದು ಭವಿಷ್ಯದ ಯೋಜನೆಯ ಬಗ್ಗೆ ಆಪ್ತವಲಯದಲ್ಲಿ ಕುಳಿತು ಚರ್ಚೆ ಮಾಡುವಿರಿ. ಸಂಗಾತಿಯನ್ನು ಮೆಚ್ಚಿಸಲು ಏನಾದರೂ ಮಾಡುವ ಮನಸ್ಸಾಗುವುದು. ಸಾಮಾಜಿಕ ವಲಯದಿಂದ ನಿಮಗೆ ಉತ್ತಮ ಸ್ಪಂದನೆ ಸಿಗಬಹುದು. ನಿಮ್ಮ ವ್ಯಾಪಾರವು ಗುಣಮಟ್ಟದಿಂದ ಕೂಡಿರಲಿದೆ. ನಿರ್ಮಾಣದ ಕಾರ್ಯಗಳನ್ನು ನೀವು ವಹಿಸಿಕೊಳ್ಳುವ ಸಾಧ್ಯತೆ ಇದೆ. ಆತಂಕ ಮತ್ತು ನಿರಾಸಕ್ತಿಯಿಂದ ನಿಮ್ಮ ಮೇಲೆ ನಿಮಗೆ ಹಿಡಿತ ಸಾಲದು. ವಿವಿಧ ಮೂಲಗಳಿಂದ ನಿಮಗೆ ಆದಾಯವು ಬರಲಿದ್ದು ಹೂಡಿಕೆಯ ಕಡೆ ನಿಮ್ಮ ಗಮನ ಇರುವುದು. ನಿಮ್ಮ ಕೆಲಸವಾಗಲು ಯಾರನ್ನಾದರೂ ದೂರ ಮಾಡುವಿರಿ. ನಿಮ್ಮ ಆಲಸ್ಯವನ್ನು ಹಿತಶತ್ರುಗಳು ಅವಕಾಶವಾಗಿ ತೆಗೆದುಕೊಳ್ಳುವರು. ಭೂಮಿಯಿಂದ ಇಂದು ಸಂಪತ್ತು ಸಿಗಬಹುದು. ಹಿರಿಯರ ಮಾತುಗಳು ಪೂರ್ಣವಾಗಿ ಇಷ್ಟವಾಗದು. ಬೇಡವೆಂದು ಬಿಟ್ಟ ವ್ಯಕ್ತಿಯನ್ನು ಮತ್ತೆ ಸ್ವೀಕರಿಸುವುದು ಯೋಗ್ಯವಾಗದು.
ಧನು ರಾಶಿ: ಇಂದು ಮಾಡುವ ಆರ್ಥಿಕ ವ್ಯವಹಾರದ ಜೊತೆ ಆಪ್ತರನ್ನು ಇಟ್ಟುಕೊಳ್ಳಿ. ಕೆಲವರು ಪ್ರೀತಿಯಿಂದ ಸಂಕಟಪಡಬಹುದು. ಭಾವನೆಗಳನ್ನು ಯಾರ ಬಳಿಯೂ ವ್ಯಕ್ತಪಡಿಸಲಾಗದೇ ಇರುವಿರಿ. ನಿಮ್ಮನ್ನು ದುರಭ್ಯಾಸಗಳಿಗೆ ಪ್ರಚೋದಿಸಬಹುದು. ಮಕ್ಕಳಿಂದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ನಿಮ್ಮ ಕಠಿಣ ಪರಿಶ್ರಮದಿಂದ ನೀವು ಉತ್ತಮ ಫಲಿತಾಂಶವನ್ನು ಪಡೆಯುವಿರಿ. ಇಂದು ತಾಯಿಯ ಕಡೆಯಿಂದ ಪ್ರೀತಿ ಮತ್ತು ವಿಶೇಷ ಬೆಂಬಲದ ಸಾಧ್ಯತೆಯಿದೆ. ಇದು ನಿಮ್ಮ ಶತ್ರುಗಳನ್ನು ಅಸಮಾಧಾನಗೊಳಿಸುತ್ತದೆ. ಇಂದು ಪೋಷಕರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅಪರಿಚಿತರ ಮಾತನ್ನು ನೀವು ನಂಬುವಿರಿ. ಪರೀಕ್ಷೆಯ ಸಿದ್ಧತೆಯಲ್ಲಿ ವಿದ್ಯಾರ್ಥಿಗಳಿಗೆ ಗೊಂದಲವಾಗಬಹುದು. ಆದಾಯದಲ್ಲಿ ಪೂರ್ಣತೃಪ್ತಿಯು ನಿಮಗೆ ಇರದು. ಅನಿರೀಕ್ಷಿತವಾಗಿ ಬಂಧುವಿನ ವಿಯೋಗವೂ ಆಗಬಹುದು.
ಮಕರ ರಾಶಿ: ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಲಿದ್ದು, ಕೆಲವು ಸಮಸ್ಯೆಯನ್ನು ಎದುರಿಸಬೇಕಾಗುವುದು. ಒಮ್ಮೆ ಮಾಡಿದ ತೀರ್ಮಾನವನ್ನು ಮತ್ತೆ ಮತ್ತೆ ಬದಲಿಸುತ್ತ ಇರುವುದು ಬೇಡ. ಹಿತಶತ್ರುಗಳು ನಿಮ್ಮ ದಿಕ್ಕನ್ನು ತಪ್ಪಿಸಬಹುದು. ರಾಜಕೀಯವು ನಿಮ್ಮನ್ನು ಪ್ರಭಾವಿಸುವ ಸಾಧ್ಯತೆಯೂ ಇದೆ. ಕಠಿಣ ಪರಿಶ್ರಮವು ನಿಷ್ಫಲವೆಂದು ಬೇಸರಿಸುವುದು ಬೇಡ. ಯಾವುದೂ ನಿಷ್ಪ್ರಯೋನವಾಗದು. ಸಮಯ ಬೇಕಷ್ಟೇ. ಇಂದು ಅನಗತ್ಯ ವಸ್ತುಗಳಿಗಾಗಿ ವ್ಯರ್ಥವಾಗಿ ಖರ್ಚಾಗಬಹುದು. ಅದನ್ನು ತಪ್ಪಿಸಿಕೊಳ್ಳುವುದು ಉತ್ತಮ. ನೀವು ದೈಹಿಕಪೀಡೆಯಿಂದ ಬಳಲುತ್ತಿದ್ದರೆ ದುಃಖವು ಹೆಚ್ಚಾಗಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ಅಡಚಣೆ ಇರುವುದು. ಹೆಣ್ಣು ಮಕ್ಕಳ ಕಡೆಯಿಂದ ಸಂತೋಷದ ಸುದ್ದಿ ಇರುತ್ತದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಸರಿಯಾಗಿ ಗೊತ್ತಿಲ್ಲದೇ ಹೋಗಬಹುದು.
ಕುಂಭ ರಾಶಿ: ಇಂದು ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿಕೊಳ್ಳಬಹುದು. ಪಾಲುದಾರಿಕೆಯಲ್ಲಿ ವೈಷಮ್ಯ ಉಂಟಾಗುವ ಸಾಧ್ಯತೆ ಇದೆ. ಆದಾಯವನ್ನು ಖರ್ಚು ಮೀರಿಸಬಹುದು. ಕೌಟುಂಬಿಕ ವಿಚಾರದಲ್ಲಿ ಪೂರ್ಣವಾಗಿ ತೊಡಗಿಕೊಳ್ಳುವುದು ಆಗದೇ ಇರಬಹುದು. ನಿಮ್ಮೊಳಗೆ ಅಡಗಿರುವ ಶಕ್ತಿಯನ್ನು ಹೊರತಂದು ಪೂರ್ಣವಾಗಿ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಒಂದು ಯೋಜನೆಯನ್ನು ಬೇರೆ ಬೇರೆ ದೃಷ್ಟಿಯಿಂದ ನೋಡುವ ಅವಶ್ಯಕತೆ ಇದೆ. ಯಾರೂ ಇರದ ಪ್ರದೇಶದಲ್ಲಿ ನೀವೇ ದೊಡ್ಡವರಾಗುವಿರಿ. ಎಂದೋ ಸ್ಥಗಿತಗೊಂಡ ಕೆಲಸವನ್ನು ಪೂರ್ಣ ಮಾಡುವಿರಿ. ಇಂದು ನಿಮ್ಮ ಕೆಲಸವನ್ನು ಬದಲು ಮಾಡಿಕೊಳ್ಳಲಿದ್ದೀರಿ. ಶುಭ ಸಮಾರಂಭದಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗುತ್ತದೆ. ಅಧಿಕಾರಕ್ಕೆ ಸಂಬಂಧಿಸಿದಂತೆ ಮಿತ್ರನಿಂದ ನಿಮಗೆ ವಂಚನೆಯಾಗಿರುವುದು ಗೊತ್ತಾಗುವುದು. ಕಳೆದುದ್ದು ಸಣ್ಣ ವಸ್ತುವೇ ಆದರೂ ಬಹಳ ಬೇಸರಗೊಳ್ಳುವಿರಿ.
ಮೀನ ರಾಶಿ: ಇಂದು ನೀವು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕಡೆ ಗಮನವನ್ನು ಕೊಡಬೇಕಾದೀತು. ನಿಮ್ಮ ನಿರಾಸಕ್ತಿಯನ್ನು ಹೋಗಲಾಡಿಸಲು ಯಾವುದಾದರೂ ಚಟುವಟಿಕೆಗಳನ್ನು ಮಾಡಿ. ಭವಿಷ್ಯದ ಬಗ್ಗೆ ಅತಿಯಾದ ಚಿಂತೆ ಬೇಡ. ನಿಮ್ಮಿಂದ ಅದನ್ನು ಬದಲಿಸಲಾಗದು. ಅದನ್ನು ಅನುಸರಿಸುವುದು ಒಳ್ಳೆಯದು. ನಿಮಗೆ ಅರಿವಿಲ್ಲದೇ ಪರರಿಗೆ ಹಿತವನ್ನು ಬಯಸುತ್ತಿರುತ್ತೀರಿ. ಇಂದು ನೀವು ಸರ್ಕಾರದಿಂದ ಬರುವ ಹಣವನ್ನು ಪಡೆದುಕೊಳ್ಳಬಹುದು. ಅನಪೇಕ್ಷಿತ ಮಾತುಗಳನ್ನು ನೀವು ಯಾರ ಜೊತೆಯೂ ಆಡುವುದು ಬೇಡ. ಇಂದಿನ ಕಾರ್ಯವನ್ನು ಸಾಧನೆ ಮಾಡಲು ಹೆಚ್ಚಿನ ಓಡಾಟವು ಬರಬಹುದು. ಧಾರ್ಮಿಕ ಆಚರಣೆಯಿಂದ ಸಂಕಷ್ಟಗಳು ದೂರಾಗುವ ನಂಬಿಕೆ ಇರಲಿದೆ. ರಾಜಕಾರಣಿಗಳು ಸಮಾರಂಭಗಳಿಗೆ ಭಾಗವಹಿಸುವರು. ಸರ್ಕಾರದ ಕಡೆಯಿಂದ ಆಗುವ ನಿಮ್ಮ ಕೆಲಸವನ್ನು ಪ್ರಭಾವಿ ವ್ಯಕ್ತಿಗಳ ಮೂಲಕ ಮುನ್ನಡೆಸುವಿರಿ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1