Horoscope 31 March: ದಿನಭವಿಷ್ಯ; ಸೃಜನಾತ್ಮಕ ಕೆಲಸದಿಂದ ಹೆಚ್ಚಿನ ಯಶಸ್ಸನ್ನು ಸಾಧಿಸುವಿರಿ.

ಮೇಷ ರಾಶಿ: ಇಂದು ನಿಮಗೆ ಸಿಕ್ಕ ಸಮಯವನ್ನು ಇನ್ನೊಬ್ಬರ ಟೀಕೆಗೆ ಬಳಸಿಕೊಳ್ಳುವಿರಿ. ಸುಳ್ಳನ್ನು ಸತ್ಯ ಮಾಡುವುದು ಸುಲಭದ್ದಲ್ಲ. ಇಂದು ನಿಮ್ಮ ವ್ಯಾಪಾರದಿಂದ ಖ್ಯಾತಿಯು ಹೆಚ್ಚಾಗಬಹುದು. ವೈವಾಹಿಕ ಸುಖವನ್ನು ಆನಂದದಿಂದ ಅನುಭವಿಸುವಿರಿ. ಸ್ನೇಹಿತರ ಜೊತೆ ಮೋಜಿನ ಸಮಯವನ್ನು ಕಳೆಯುವಿರಿ. ಧಾರ್ಮಿಕ ಕಾರ್ಯಗಳಲ್ಲಿ ತೋರ್ಪಡಿಕೆ ಬೇಡ. ಜಾಣ್ಮೆಯ ವ್ಯವಹಾರದಿಂದ ಇಂದು ವ್ಯಾಪಾರದಲ್ಲಿ ಲಾಭ ಪಡೆಯುವಿರಿ. ಅನಿರೀಕ್ಷಿತವಾಗಿ ಸಿಕ್ಕ ಸಂಪತ್ತನ್ನು ಯಾರಿಗಾದರೂ ಕೊಡುವಿರಿ. ಕೃಷಿಯಲ್ಲಿ ಆಸಕ್ತಿಯು ಬೆಳೆಯುವುದು. ಬಹಳಷ್ಟು ಕಾರ್ಯಗಳಿದ್ದರೂ ಎಲ್ಲವನ್ನೂ ಬಿಟ್ಟು ಆರಾಮಾಗಿ ಇರುವಿರಿ. ಕಳೆದ ಸಮಯವನ್ನು ನೀವು ಮೆಲುಕು ಹಾಕಿಕೊಂಡು ಸಂತೋಷಪಡುವಿರಿ. ಮನೆಗೆಲಸಕ್ಕೆ ಆಲಸ್ಯವಿರುವುದು.

ವೃಷಭ ರಾಶಿ: ಇಂದು ನಿಮಗೆ ಉದ್ಯೋಗಕ್ಕೆ ಸಂಬಂಧಿಸಿ ಕಿರಿಕಿರಿಯ ನೆನಪಾಗುವುದು. ಎಲ್ಲವನ್ನೂ ವಿರೋಧಿಸುವ ಭಾವವು ಇರಲಿದೆ. ಇಂದು ಯಾವುದೇ ಕಾರ್ಯದಲ್ಲಿ ನಿರತರಾಗಿದ್ದರೂ, ನಿಮ್ಮ ಮನಸ್ಸು ಮರ್ಯಾವುದರಮೇಲೋ ಇರಬಹುದು. ಯಾರೊಂದಿಗೂ ಅನಗತ್ಯ ವಿಚಾರಗಳನ್ನು ಚರ್ಚಿಸಬೇಡಿ. ಇತರರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದು ಬೇಡ. ವೈವಾಹಿಕ ಸುಖವು ಕ್ಷೀಣಿಸಬಹುದು. ಆರೋಪಗಳಿಂದ ಮುಕ್ತರಾಗುವುದು ಕಷ್ಟವಾಗುವುದು. ಇಂದು ಕುಟುಂಬದವರ ಮಾತುಗಳು ನಿಮ್ಮ ಮನಸ್ಸಿಗೆ ನಾಟಬಹುದು. ವಿದ್ಯಾರ್ಥಿಗಳು ಶುಭ ಫಲಿತಾಂಶದಿಂದ ಸಂತೋಷಗೊಳ್ಳುವರು. ನಿಮ್ಮ ಅಪೂರ್ಣ ಕಾರ್ಯಗಳನ್ನು ಇಂದು ಪೂರ್ಣಮಾಡಿಕೊಳ್ಳುವಿರಿ. ಪೂರ್ವಪುಣ್ಯವು‌ ನಿಮ್ಮನ್ನು ಕಾಪಾಡಲಿದೆ. ನಿಮ್ಮ ಬಗ್ಗೆ ಇರುವ ಯಾವ ಅಭಿಪ್ರಾಯವೂ ಇಷ್ಟವಾಗದು. ಸಮೂಹದಲ್ಲಿ ಇರುವುದು ಕಷ್ಟವಾದೀತು.

ಮಿಥುನ ರಾಶಿ: ಇಂದು ಹಳೆಯ ವಾಹನದ ಖರ್ಚಿನ ಬಗ್ಗೆ ಚಿಂತೆಯಾಗುವುದು. ಭಾಷಣಕಾರರು ಉತ್ತಮ ಅವಕಾಶವನ್ನು ಪಡೆಯುವರು. ಧಾರ್ಮಿಕ ಆಚರಣೆಯು ನಿಮಗೆ ಬಾಲಿಶ ಎನಿಸಬಹುದು. ಉನ್ನತ ಶಿಕ್ಷಣದಲ್ಲಿ ಸಾಧನೆ ಮಾಡುವಿರಿ. ಉದ್ಯಮವನ್ನು ಚುರುಕುಗೊಳಿಸುವ ಅಗತ್ಯವಿದೆ. ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗಬಹುದು. ಯಾರನ್ನೋ ದೂರುತ್ತ ನಿಮ್ಮ ಕೆಲಸದ ಅವಧಿಯನ್ನು ವ್ಯರ್ಥ ಮಾಡುವುದು ಬೇಡ. ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾ ಹಳೆಯದನ್ನು ನೆನಪಿಸಿಕೊಳ್ಳುವಿರಿ. ಶಿಸ್ತಿಗೆ ಹೆಚ್ಚು ಗಮನವನ್ನು ಇಂದು ಕೊಡುವಿರಿ. ಸಂಗಾತಿಯ ಮನೋರಥವನ್ನು ಈಡೇರಿಸುವುದು ಕಷ್ಟವಾಗುವುದು. ನಿಮ್ಮ ಪ್ರೇಮಪ್ರಕರಣವು ದುಃಖಾಂತವಾಗಲಿದೆ. ಸೃಜನಾತ್ಮಕ ಕೆಲಸದಿಂದ ಹೆಚ್ಚಿನ ಯಶಸ್ಸನ್ನು ಸಾಧಿಸುವಿರಿ. ಹಠದ ಸ್ವಭಾವದಿಂದ ಇತರರಿಗೆ ಕಷ್ಟವಾಗಬಹುದು.

ಕಟಕ ರಾಶಿ: ಇಂದು ನಿಮ್ಮ ಕೆಲಸಗಳೇ ತಪ್ಪಾಗಿ ಕಾಣಿಸಬಹುದು. ಪಶ್ಚಾತ್ತಾಪದಿಂದ ನಿಮಗೆ ಪ್ರಯೋಜನವಾಗದು. ಹೊರಟ ರೈಲನ್ನು ನಿಲ್ಲಿಸಲು ಸಾಧ್ಯವಿಲ್ಲ.‌ ಇಂದು ಪ್ರಯಾಣವು ಕಾರ್ಯಸಿದ್ಧಿಗೆ ಪೂರಕವಾದೀತು. ನಿಮ್ಮ ನಿರ್ಧಾರಗಳು ಇತರರಿಗೆ ಒಪ್ಪಿಗೆಯಾಗದೇ ಹೋಗಬಹುದು. ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಹೊಂದಿಸಬೇಕಾದೀತು. ನೀವು ಹೂಡಿಕೆಯಿಂದ ಆರ್ಥಿಕವಾಗಿ ಬಲವುಳ್ಳವರಾಗಲು ಯೋಚಿಸುವಿರಿ. ಎಲ್ಲರ ಜೊತೆ ಜಗಳವಾಡುತ್ತ ಇರುವುದು ನಿಮಗೆ ಇಷ್ಟವಾಗಬಹುದು. ಇದರಿಂದ‌ ನಿಮ್ಮ ಜೊತೆಗಾರ ಸ್ಥಿತಿಯೂ ಹದ ತಪ್ಪಬಹುದು. ಪ್ರೇಮ ಜೀವನದಲ್ಲಿ ಪ್ರೀತಿ ಹೆಚ್ಚಾಗಿ ಉತ್ಸಾಹದಿಂದ ಇರುವಿರಿ. ಯಾರಾದರೂ ತಪ್ಪು ತಿಳಿದಾರು ಎಂಬ ಭಾವವು ನಿಮ್ಮನ್ನು ಕಾಡಬಹುದು. ನೀವು ಹೊಸ ವಾಹನವನ್ನು ಸ್ನೇಹಿತರ ಒತ್ತಾಯಕ್ಕೆ ಖರೀದಿ ಮಾಡುವಿರಿ. ಏಕತಾನತೆಯಿಂದ ಇರುವ ಜೀವನವು ನಿಮಗೆ ಬೇಸರವಾಗುವುದು.

ಸಿಂಹ ರಾಶಿ: ನಿಮಗೆ ಇಂದು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಕಾಡಬಹುದು. ಇದಕ್ಕಾಗಿ ತಂದೆ ಮಕ್ಕಳ‌ ನಡುವೆ ಕಲಹವಾಗುವ ಸಾಧ್ಯತೆ ಇದೆ. ತಾಯಿಯ ಜೊತೆ ಭಾವನಾತ್ಮಕ ಮಾತುಗಳನ್ನು ಆಡುವಿರಿ. ನಿಮ್ಮ ವಿರೋಧಿಗಳು ನಿಮ್ಮ ಸಾಹಸವನ್ನು ಮೆಚ್ಚಬಹುದು. ನೀವು ಇಂದು ನಿಮ್ಮ ಕುಟುಂಬದ ಜೊತೆ ಸಮಯ ಕಳೆಯಬೇಕು ಎಂದುಕೊಂಡವರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು, ಅವರ ಸಾಧನೆಗಾಗಿ ಸಮ್ಮಾನಿಸಬಹುದು. ಸಿಕ್ಕ ಯಶಸ್ಸನ್ನು ಲಾಭವಾಗಿಸಿಕೊಳ್ಳುವಿರಿ. ಸಂಗಾತಿಯ ಪ್ರೀತಿಯು ನಿಮಗೆ ಅಚ್ಚರಿಯನ್ನು ಉಂಟುಮಾಡೀತು. ತೆಗಳಿಕೆಗಳನ್ನು ನೀವು ಸಕಾರಾತ್ಮಕವಾಗಿ ಸ್ವೀಕರಿಸಿ. ಬಂಧುಗಳ ಚರಾಸ್ತಿಯು ಸಿಗಬಹುದು. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ ಕಾರಣ ಸಿಟ್ಟಾಗಬಹುದು. ಆದಾಯದ ಮೂಲಗಳ ಸಂಖ್ಯೆ ಹೆಚ್ಚಾಗುವುದು.‌ ಬಹಳ ದಿನಗಳಿಂದ ಮರೆತುಹೋಗಿದ್ದ ಸಂಗತಿಯನ್ನು ನೆನಪಿಸಿಕೊಳ್ಳುವಿರಿ.

ಕನ್ಯಾ ರಾಶಿ: ನಿಮ್ಮಿಂದ ತೀರಿಸಲಾಗದಷ್ಟು ಸಾಲದ ಬಗ್ಗೆ ಆಸಕ್ತಿ ಬೇಡ. ಪೂರ್ಣ ವಿಶ್ವಾಸವಿದ್ದಾಗ ಮಾತ್ರ ಪಾಲುದಾರಿಕೆಯಲ್ಲಿ ಕೈಜೋಡಿಸಿ. ಇಲ್ಲವಾದರೆ ಭವಿಷ್ಯದಲ್ಲಿ ಕಷ್ಟವಾಗುವುದು. ಅನುಮಾನದಿಂದಲೇ‌ ಬದುಕಬೇಕಾಗುವುದು. ಈ ದಿನದ ಆರಂಭವು ನಿಮಗೆ ನಕಾರತ್ಮಕ ಮಾತಿನಿಂದ ಅಸರಂಭವಾಗಬಹುದು. ಇಂದು ಯಾವುದಾದರೂ ಪ್ರಮುಖ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಂಡು ನಿಶ್ಚಿಂತರಾಗಿ. ನಿಮ್ಮಿಂದ‌ ಕುಟುಂಬಕ್ಕೆ ಯಾವುದೇ ಸಲಹೆಯು ಇಲ್ಲದಂತೆ ಅನ್ನಿಸಬಹುದು. ಕೋಪದಿಂದ ಶಾಂತವಾಗಲು ಹಲವಾರು ದಾರಿಗಳನ್ನು ಕಂಡುಕೊಳ್ಳುವಿರಿ. ಬಂಧುಗಳ ಜೊತೆ ಆತ್ಮೀಯ ಒಡನಾಟ ಮಾಡುವಿರಿ. ಇನ್ನೊಬ್ಬರ ಅಹಂಕಾರಕ್ಕೆ ಸೊಪ್ಪು ಹಾಕುವುದು ಬೇಡ. ನಿರ್ಲಕ್ಷ್ಯದಿಂದ ಎಲ್ಲವೂ ಸಾಧ್ಯ. ಹೂಡಿಕೆಯ ವಿಚಾರವಾಗಿ ಚರ್ಚಿಸುವಿರಿ. ಮಿತ್ರರನ್ನು ಅನುಮಾನದಿಂದ ಕಾಣಬೇಕಾಗುವುದು.

ತುಲಾ ರಾಶಿ: ನಿಮ್ಮ ಇಂದಿನ ನಡೆಯಲ್ಲಿ ಒಂದೊಂದು ಅಭಿಪ್ರಾಯವು ಒಬ್ಬೊಬ್ಬರಿಂದ ಬರುವುದು. ಹೊಸ ಪ್ರೇಮವು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ನೀವು ಯಾರ ಅಸಹಕಾರವನ್ನೂ ಗಂಭೀರವಾಗಿ ಪರಿಗಣಸದೇ ನಿಮ್ಮಷ್ಟಕ್ಕೆ ನೀವು ಕಾರ್ಯವನ್ನು ಮುಂದುವರಿಸುವಿರಿ. ನಿಮ್ಮ ಇಚ್ಛೆಯನ್ನು ಅನ್ಯರ ಮೂಲಕ ಪೂರ್ಣ ಮಾಡಿಕೊಳ್ಳುವಿರಿ. ರಂಗಭೂಮಿಗೆ ಸಂಬಂಧಿಸಿದ ಕೆಲವು ಪ್ರಮುಖ ಅವಕಾಶಗಳು ಆಸಕ್ತರಿಗೆ ಸಿಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ನಿಮ್ಮ ತಪ್ಪನ್ನು ಎಲ್ಲರೆದು ಒಪ್ಪಿಕೊಳ್ಳಲು ಆಗದು. ಅಧಿಕ ಆಸ್ತಿಯೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ಕಲಾವಿದರ ಜೊತೆ ನಿಮ್ಮ ನಂಟು ಬೆಳೆಯಬಹುದು. ನಿದ್ರೆಯಿಲ್ಲದೇ ಚಿಂತೆ ಆರಂಭವಾಗುವುದು. ಮಾತನ್ನು ಕಡಿಮೆ ಮಾಡಿ ಕಾರ್ಯದಲ್ಲಿ ತೋರಿಸಿ. ಅನಪೇಕ್ಷಿತ ವಿಚಾರದ ಬಗ್ಗೆ ಚರ್ಚೆ ಬೇಡ. ಸುಮ್ಮನೇ ಬೇಡದ ವಿಚಾರದ ಬಗ್ಗೆ ಚರ್ಚಿಸಿ ಸಮಯವನ್ನು ಹಾಳು ಮಾಡಿಕೊಳ್ಳುವಿರಿ.

ವೃಶ್ಚಿಕ ರಾಶಿ: ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಒಳ್ಳೆಯದಲ್ಲ. ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಅವಶ್ಯಕ. ರಾಜಕೀಯದಲ್ಲಿ ಆದ ಬದಲಾವಣೆಯು ನಮಗೆ ಹಿಡಿಸದೇಹೋಗಬಹುದು. ಸಿಟ್ಟಿನಿಂದ ಏನನ್ನಾದರೂ ಮಾತನಾಡುವುದು ಬೇಡ. ಇಂದು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯವಾಗಿರುವುದು. ನಿಮ್ಮ ಆದಾಯದ ಮೂಲಗಳಿಂದ ಆದಾಯವು ಕಡಿಮೆಯಾಗಬಹುದು. ಆತುರದಲ್ಲಿ ಯಾವುದೇ ದೊಡ್ಡ ಮೊತ್ತದ ಹೂಡಿಕೆಯನ್ನು ಮಾಡುವುದು ಬೇಡ. ಅನಗತ್ಯ ಚಟುವಟಿಕೆಗಳಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಸಂತಾನದ ಬಗ್ಗೆ ನಿಮಗೆ ಅತಿಯಾದ ಆಸೆಯಾಗುವುದು. ಆಪ್ತರ ವಿಯೋಗವು ನಿಮ್ಮನ್ನು ಕುಗ್ಗಿಸಬಹುದು. ಅಧಿಕ ಖರ್ಚಿನಂತೆ ಕಾಣುವ ವ್ಯವಹಾರವನ್ನು ನೀವು ಬಿಡುವಿರಿ. ನೀವು ಕಷ್ಟದಲ್ಲಿ ಸುಖವನ್ನು ಕಾಣುವ ಮಾರ್ಗವನ್ನು ಹುಡುಕಿಕೊಳ್ಳುವಿರಿ. ಕಳೆದ ವಸ್ತುವನ್ನು ಯಾರದೋ ಮೂಲಕ ಪಡೆದುಕೊಳ್ಳುವಿರಿ.

ಧನು ರಾಶಿ: ನಿಮಗೆ ಇಂದು ಆರ್ಥಿಕತೆಯ ಬಗ್ಗೆ ಹೆಚ್ಚು ಉತ್ತವಾಗುವ ಅವಕಾಶಗಳು ಇದ್ದರೂ ಅದನ್ನು ಬಿಡುವಿರಿ. ಸಂಗಾತಿಯ ಮಾತಿನಿಂದ ನಿಮಗೆ ಪ್ರೇರಣೆ ಸಿಗಬಹುದು. ಇಂದು ಅವಿವಾಹಿತರು ವಿವಾಹದ ಬಗ್ಗೆ ಅಧಿಕ ಚಿಂತಿತರಾಗುವರು. ನಿಮ್ಮ ವೇತನದ ಬಗ್ಗೆ ಮೇಲಧಿಕಾರಿಗಳ ಜೊತೆ ಚರ್ಚೆ ಮಾಡುವಿರಿ. ನಿಮ್ಮ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಿ ಸಂತೋಷಪಡುವಿರಿ. ಉದ್ಯಮದ ವಿಚಾರವು ಕುಟುಂಬದವರೆಗೂ ಬರಬಹುದು. ಆರ್ಥಿಕವಾದ ಸಂತೃಪ್ತಿಯು ನಿಮ್ಮ ಮುಖದಲ್ಲಿ ಇರಲಿದೆ. ಅನ್ಯರು ನಿಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದು ನಿಮಗೆ ಇಷ್ಟವಾಗದು. ನೀವು ಬೇಕಾದ ಸಹಾಯವು ಸರಿಯಾದ ಸಮಯಕ್ಕೆ ಸಿಗುವುದು. ನಿಮ್ಮ ಮಾತಿಗೆ ಬೆಂಬಲವಿರುವುದು. ಹಳೆಯ ನೆನಪುಗಳು ನಿಮ್ಮ ಕಾಡುವುವು. ಇಂದು ನೀವು ಆಕರ್ಷಕ ವ್ಯಕ್ತಿಗಳಾಗಿ ಕಾಣುರುವಿರಿ.

ಮಕರ ರಾಶಿ: ಇಂದು ನೀವು ದೈನಂದಿನ ಚಟುವಟಿಕೆಯಿಂದ ಮುಕ್ತರಾಗಿ ಬಹಳ ಸಂತೋಷದಿಂದ ಇರುವಿರಿ. ಕ್ರೀಡೆಯಲ್ಲಿ ಆಸಕ್ತಿ ಹೆಚ್ಚಿರುವುದು. ನಿಮ್ಮ ಕಾರ್ಯವನ್ನು ಅಸಹಜವಾಗಿ ಪೂರ್ಣ ಮಾಡುವಿರಿ. ನಿಮ್ಮ ವೈಯಕ್ತಿಕ ಸಂಬಂಧಗಳಲ್ಲಿ ಆಪ್ತತೆಯು ದೂರವಾಗಬಹುದು. ನಿಮ್ಮ ಬಗ್ಗೆ ನೀವು ಹೆಚ್ಚು ಗಮನ ಕೊಡುವಿರಿ. ಅಪರಿಚಿತರ ಮಾತು ನಿಮಗೆ ಸಮಾಧಾನವನ್ನು ಕೊಡಬಹುದು. ಯಾರ ಮಾತನ್ನೂ ನೀವು ಕೇಳಲಾರಿರಿ. ಸಂಶೋಧನೆಯಲ್ಲಿ ಹೊಸ ಮಾರ್ಗವು ಕಾಣಿಸಿಕೊಳ್ಳುವುದು. ಸಮಯವೂ ಬದಲಾಗಲಿದ್ದು ಹೊಂದಿಕೊಳ್ಳುವುದು ಕಷ್ಟವಾದೀತು. ಆತ್ಮಿಯರ ಜೊತೆ ಮಾತುಕತೆಗೆ ಇಳಿಯುವಿರಿ. ದಾಂಪತ್ಯದಲ್ಲಿ ಸ್ವಪ್ರತಿಷ್ಠೆಯು ಕಾಣಿಸಿಕೊಳ್ಳಬಹುದು. ರಾಜಕೀಯ ವ್ಯಕ್ತಿಗಳ ಸಂಪರ್ಕ ಆಗಬಹುದು.

ಕುಂಭ ರಾಶಿ: ನೀವು ಇಂದು ಸ್ನೇಹಿತರ ಸಹಾಯಕ್ಕೆ ಹೋಗುವುದು ನಿಮ್ಮ ಬಗ್ಗೆ ಇರುವ ಭಾವವು ಬದಲಾಗುವುದು. ಇಂದಿನ ದೂರ ಪ್ರಯಾಣವು ನಿಮಗೆ ಆಯಾಸವನ್ನು ಕೊಡದೇಹೋಗಬಹುದು. ಆರ್ಥಿಕತೆಯಲ್ಲಿ ದುಡುಕಿ ನಿರ್ಧಾರ ತೆಗೆದುಕೊಳ್ಳಬೇಕಾಗುವುದು. ಭೂವ್ಯವಹಾರವು ನೀವಂದುಕೊಂಡಷ್ಟು ವೇಗವಾಗಿ ಮುನ್ನಡೆಯದು. ನಿಮ್ಮ ಪ್ರಮುಖ ವ್ಯಾಪಾರ ಸಂಪರ್ಕಗಳನ್ನು ಅಭಿವೃದ್ಧಿ ಮಾಡಿಕೊಳ್ಳುವಿರಿ. ಉದ್ಯೋಗದ ಸ್ಥಳದಲ್ಲಿ ನಿಮ್ಮ ವರ್ತನೆಯು ಇತರರಿಗೆ ಅಸಮಾಧಾನಗೊಳಿಸಬಹುದು. ನಿಮ್ಮ ತಂದೆಯ ಜೊತೆ ಸ್ನೇಹದ ಸಂಬಂಧವನ್ನು ಇಟ್ಟುಕೊಳ್ಳುವಿರಿ. ನೀವು ಕೇಳಿದ ಸಾಲವು ನಿಮಗೆ ದೊರೆಯಬಹುದು. ಆಡಿದ ಮಾತಿಗೆ ಪಶ್ಚಾತ್ತಾಪಪಡಬೇಕಾದೀತು. ಖರ್ಚಿನ ವಿಚಾರದಲ್ಲಿ ಕೈ ಹಿಂದೆ ಮಾಡುವುದು ಒಳ್ಳೆಯದು. ಜವಾಬ್ದಾರಿಗಳಿಂದ ನೀವು ಮುಕ್ತರಾಗಿ ಸಂತೋಷಿಸುವಿರಿ. ಅಪರಿಚಿತರು ನಿಮಗೆ ಸಮಸ್ಯೆಯನ್ನು ಕೊಡುವರು.

ಮೀನ ರಾಶಿ: ಇಂದು ನಿಮ್ಮ ನಿರೀಕ್ಷಿತ ಲಾಭವು ವ್ಯಾಪಾರದಲ್ಲಿ ಕಾಣಿಸದೇ ಇರುವುದು ಬೇಸರವಾಗುವುದು. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗುವುದು. ಧಾರ್ಮಿಕ‌ ಕಾರ್ಯಕ್ಕೆ ಖರ್ಚು ಮಾಡುವುದು ನಿಮಗೆ ಇಷ್ಟದ ಸಂಗತಿಯಾಗಲಿದೆ. ನೀವು ಇಂದು ನಿಮ್ಮ ಪ್ರತಿಸ್ಪರ್ಧಿಗಳ ಎದುರು ಬಹಳ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು. ಇಂದಿನ ನಿಮ್ಮ ಆಲಸ್ಯದಿಂದ ಪ್ರಮುಖ ಕಾರ್ಯಗಳು ಪೂರ್ಣವಾಗದೇ ಹಾಗೆಯೇ ಉಳಿದುಕೊಳ್ಳಬಹುದು. ನಿಮ್ಮ ತಾಯಿಯ ಕಡೆ ಯಾರಿಗಾದರೂ ಅನಾರೋಗ್ಯವು ಅಧಿಕವಾಗಬಹುದು. ವಾಹನಕ್ಕಾಗಿ ಖರ್ಚು ಮಾಡಬೇಕಾಗುವುದು. ತಿರುಗಾಟದಲ್ಲಿರುವ ನಿಮ್ಮನ್ನು ಕಂಡು ಮನೆಯಲ್ಲಿ ಬೇಸರ ವ್ಯಕ್ತಪಡಿಸಬಹುದು. ನಿಮಗೆ ಅಧಿಕ‌ ಖರ್ಚು ಎಂದು ಕಂಡರೆ ಅದನ್ನು ಮಾಡದೇ ಇರುವುದು ಉತ್ತಮ. ಇಷ್ಟವಿಲ್ಲದಿದ್ದರೂ ನೀವು ಹಿರಿಯರ ಮಾತನ್ನು ಕೇಳಬೇಕಾಗುವುದು. ಪ್ರೇಮಜೀವನವು ನಿಮಗೆ ಬಂಧನದಂತೆ ಅನ್ನಿಸಬಹುದು.

Source : https://tv9kannada.com/horoscope/astrology-aries-to-pisces-2024-march-31th-rashi-bhavishya-in-kannada-ggs-808942.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *