Horoscope Today 02 June: ಈ ರಾಶಿಯವರ ಆದಾಯದ ಮೂಲಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಆಸ್ತಿಯಿಂದ ಲಾಭ ಉಂಟಾಗಲಿದೆ.

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಶುಕ್ಲ ಪಕ್ಷದ ಸಪ್ತಮೀ ತಿಥಿ, ಸೋಮವಾರ ಪಾರದರ್ಶಕತೆ, ಅಸಮಾಧಾನ, ನಂಬಿಕಸ್ಥರ ಮೇಲೆ ಗುಮಾನಿ, ಅಸಹಿಷ್ಣುತೆ ಇವೆಲ್ಲ ಇರಲಿದೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

Horoscope Today 02 June: ಈ ರಾಶಿಯವರು ಎಲ್ಲದಕ್ಕೂ ಮುಖ್ಯ, ಆದರೆ ಎಲ್ಲರಿಗಿಂತ ಹಿಂದೆ

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ವೃಷಭ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಮಘಾ, ಯೋಗ: ಧ್ರುವ, ಕರಣ: ಕೌಲವ, ಸೂರ್ಯೋದಯ – 06 : 03 am, ಸೂರ್ಯಾಸ್ತ – 06 : 57 pm, ಇಂದಿನ ಶುಭಾಶುಭಕಾಲ: ರಾಹು ಕಾಲ 07:41 – 09:17, ಯಮಘಂಡ ಕಾಲ 10:54 – 12:31, ಗುಳಿಕ ಕಾಲ 14:07 – 15:44

ಮೇಷ ರಾಶಿ: ವಿಷಯ ತಜ್ಞರಿಂದ ಪೂರಕ ಮಾಹಿತಿ ಪಡೆಯಿರಿ. ನೀವು ಗಣ್ಯರೊಂದಿಗೆ ಇಂದಿನ ಒಡನಾಡವಿರಲಿದೆ. ಮೋಸ ಹೋಗುವ ಸಾಧ್ಯತೆ ಇದೆ. ಆತುರದ ತೀರ್ಮಾನ ಮತ್ತು ಒತ್ತಡಗಳಿಗೆ ಸಿಕ್ಕಿಹಾಕಿಕೊಳ್ಳದೇ ಎಚ್ಚರಿಕೆಯಿಂದಿರಿ. ಕೊಟ್ಟ ಸಾಲ ಮರಳಿಬರಹುದು. ಆದಾಯದ ಮೂಲಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಆಸ್ತಿಯಿಂದ ಲಾಭ ಉಂಟಾಗಲಿದೆ. ಏಕಾಭಿಪ್ರಾಯದಿಂದ ಒಂಟಿಯಾಗಬೇಕಾಗುವುದು. ಹಣದ ವಿಷಯಗಳಲ್ಲಿ ಯಾರನ್ನೂ ಹೆಚ್ಚು ನಂಬಬೇಡಿ. ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತೀರಿ, ಆದರೆ ತಾಳ್ಮೆಯೇ ನಿಮ್ಮ ಅಸ್ತ್ರವಾಗಬೇಕು. ನಿಮ್ಮ ಆಳ ಮತ್ತು ಅಗಲದ ಬಗ್ಗೆ ಗೊತ್ತಿರಲಿ. ಉತ್ತರಿಸಲು ಹೋಗದೇ ಅಲೆಗಳು ಶಾಂತವಾಗುವವರೆಗೆ ಸುಮ್ಮನಿರಿ. ವ್ಯವಹಾರದಲ್ಲಿ ಸಹನೆಯಿಂದ ವರ್ತಿಸಿ ಲಾಭ ಮಾಡಿಕೊಳ್ಳುವಿರಿ. ನಿಮ್ಮ ಮಾತು ಮಿತಿಯನ್ನು ಮೀರಬಹುದು. ಅಧಿಕ ವೇತನದ ಉದ್ಯೋಗಕ್ಕೆ ಅವಕಾಶವು ಬರಬಹುದು. ನಿಮ್ಮ ಅಳತೆ ಮೀರಿ ವರ್ತಿಸುವುದು ಬೇಡ. ನಿಮ್ಮನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗುವುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧಾನ ಆಗುವುದು. ನಿಮ್ಮನ್ನು ಇಷ್ಟಪಡುವವರಿಗೆ ಸಮಯವನ್ನು ಕೊಡದೇ ಅಹಂಕಾರ ತೋರಿಸುವಿರಿ.

ವೃಷಭ ರಾಶಿ: ಮುಖ್ಯಸ್ಥರಾದರಮೇಲೆ ಪಾರದರ್ಶಕ ಅತಿಮುಖ್ಯ. ಹುಂಬುತನ ಹೆಚ್ಚು ಕಾಲ ಉಳಿಯದು. ನಿಮ್ಮ ಬಗ್ಗೆ ಅಪವಾದವನ್ನು ಶತ್ರುಗಳು ಮಾಡುವರು. ಸ್ನೇಹಿತರು ನಿಮ್ಮ ಜೊತೆಗೇ ಇದ್ದು ನಿಮ್ಮ ಎಲ್ಲ ಆಗುಹೋಗುಗಳಿಗೂ ಜೊತೆಯಾಗುವರು. ಉದ್ವಿಗ್ನಗೊಳ್ಳದೇ ಸಮಾಧಾನದಿಂದ ಇರಬೇಕಾದ ಅವಶ್ಯಕತೆಯಿದೆ. ಕೆಲಸ ಚುರುಕುಗೊಳ್ಳಬೇಕು ಮತ್ತು ಇದರಿಂದ ನಿಮಗೆ ಬೆಂಬಲವೂ ಸಿಗುತ್ತದೆ. ನಿಮ್ಮ ಮಾತಿಗೆ ಅಪಾರ್ಥದ ಲೇಪ ಅಂಟಿಕೊಳ್ಳಬಹುದು. ದೂರ ಪ್ರಯಾಣದ ಸಾಧ್ಯತೆ ಇರಬಹುದು. ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ. ಅಧಿಕಾರಿಗಳೂ ನಿಮಗೆ ಬೆಂಬಲ ನೀಡುತ್ತಾರೆ. ಮಾಡದೇ ಉಳಿದ ಕೆಲಸ ಕಾರ್ಯಗಳತ್ತ ಗಮನಹರಿಸಿ. ವ್ಯಾಪರದಲ್ಲಿ ಲಾಭವಾಗಲಿದೆ. ವಿದ್ಯಾರ್ಥಿಗಳು ಪರಿಶ್ರಮದ ಓದಿಗೆ ಫಲವು ಸಿಗಬಹುದು. ಕಾರ್ಯಸ್ಥಾನದಲ್ಲಿ ಗೊಂದಲದ, ಹತಾಶೆಯ ವಾತಾವರಣ ಇರಬಹುದು. ಆಸ್ತಿಯ ವಿಚಾರದಲ್ಲಿ ನಿಮಗೆ ಅಪಕ್ವತೆಯು ಕಾಣುತ್ತದೆ. ಹಣವನ್ನು ಕೊಡಲು ಯಾರಾದರೂ ಪೀಡಿಸಬಹುದು. ಮಕ್ಕಳಿಗೆ ಧೈರ್ಯವನ್ನು ಹೇಳುವಿರಿ. ನಿಮ್ಮ ತಪ್ಪಿಗೆ ಯಾರನ್ನು ದೂಷಿಸಿದರೂ ಆಗದು.

ಮಿಥುನ ರಾಶಿ: ತಪ್ಪುಗಳು ಒಂದೇ ಆದರೂ ಒಂದೇ ಪ್ರಾಯಶ್ಚಿತ್ತವಿರದು. ಅವರ ವ್ಯಕ್ತಿತ್ವದ ಮೇಲೆ ನಿರ್ಧಾರವಾಗಲಿದೆ. ಭೂಮಿಯ ಪಾಲನೆಯನ್ನು ಮಾಡಿಕೊಕೊಂಡು ಹೋಗುವುದು ನಿಮಗೆ ಕಷ್ಟವಾಗುವುದು. ಅನಿವಾರ್ಯ ಕಾರಣಗಳಿಂದ ಖರ್ಚಿಗೆ ನಾನಾ ಮಾರ್ಗಗಳು ತೆರದುಕೊಳ್ಳಬಹುದು. ಕೆಟ್ಟ ಕೆಲಸವನ್ನು ಮಾಡಿ ಸಂಭಾವಿತರಂತೆ ತೋರಿಸಿಕೊಳ್ಳುವಿರಿ. ವೃತ್ತಿಪರ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಕೆಲಸದಲ್ಲಿಯೂ ಅತ್ಯುತ್ತಮ ಸಾಧನೆ ಇರುತ್ತದೆ. ದಿನವು ಅನುಕೂಲಕರವಾಗಿದೆ. ಈ ಸಮಯ ಲಾಭ ಮತ್ತು ಯಶಸ್ಸನ್ನು ತರುತ್ತದೆ. ನಿಮ್ಮ ಸ್ವಂತ ಪ್ರಯತ್ನದಿಂದ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಯು ನಿಮಗೆ ಅನುಕೂಲವನ್ನು ಕಲ್ಪಿಸುವವಳೇ ಆಗಿದ್ದಾಳೆ. ವಾಗ್ವಾದದಲ್ಲಿ ಸೋಲಾಗುವುದು. ನಿಮ್ಮ ಪ್ರಗತಿಗೆ ಅವಶ್ಯಕವಾದ ಮಾರ್ಗಗಳನ್ನು ತೆರೆಯಬಹುದು. ನೀವು ಉತ್ತಮ ವ್ಯವಹಾರದಿಂದ ಯಶಸ್ವಿಯಾಗುತ್ತೀರಿ. ಕಾಲಹರಣಕ್ಕಾಗಿ ಯಾರ ಜೊತೆಗಾದರೂ ಮಾತನಾಡುತ್ತಾ ಇರುವಿರಿ. ಅತಿಯಾದ ಆಸೆಯು ನಿಮ್ಮ ದಿಕ್ಕನ್ನು ತಪ್ಪಿಸುವುದು.

ಕರ್ಕಾಟಕ ರಾಶಿ: ಕೆಲಸದಿಂದ ವಿಮುಖರಾಗಿ ಖಷಿಪಡಲಾರಿರಿ. ಯಾರೂ ಏನೂ ಹೇಳದಿದ್ದರೂ ನಿಮ್ಮೊಳಗೇ ಅಪಮಾನ‌ ಪ್ರಜ್ಞೆ ಕಾಡುವುದು. ಇಂದು ಯಾವುದೇ ವಾದ ವಿವಾದಗಳಿಗೆ ಕಿವಿಯನ್ನು ಕೊಡಬೇಡಿ. ಖರ್ಚುಗಳಿಗೆ ಸ್ವಂತ ಹಣವನ್ನು ಬಳಸಿ. ಸ್ಥಾನಮಾನಕ್ಕಾಗಿ ಮುಸುಕಿನ ಗುದ್ದಾಟ ನಡೆಯಬಹುದು. ನಿಮ್ಮ ಮೇಲೆ ನಿಮಗೆ ವಿಶ್ವಾಸವಿದ್ದರೆ, ನೀವು ಉತ್ತಮ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಕುಟುಂಬದಿಂದ ನಿಮಗೆ ಬೆಂಬಲ ಸಿಗುತ್ತದೆ ಮತ್ತು ನಿಮ್ಮ ಶತ್ರುಗಳನ್ನು ಸೋಲಿಸುವಲ್ಲಿ ಯಶಸ್ವಿಯಾಗುತ್ತೀರಿ. ಸಂಜೆಯ ವೇಳೆಗೆ ಸುಧಾರಣೆ ಕಂಡುಬರಲಿದೆ. ಕಛೇರಿ ಹಾಗೂ ಕುಟುಂಬದ ವಿಚಾರಗಳನ್ನು ನೀವು ಏಕಕಾಲದಲ್ಲಿ ಚಿಂತಿಸಿ ತಲೆಯನ್ನು ಹಾಳು ಮಾಡಿಕೊಳ್ಳುವಿರಿ. ಎಲ್ಲವೂ ವಿಧಿಯಂತೆ ಆಗುತ್ತದೆ ಎಂಬ ಸತ್ಯವನ್ನು ನೀವು ಅರಿತರೂ ದುಃಖಿಸುವಿರಿ. ನಡೆದಂತೆ ನುಡಿಯುವುದು ನಿಮಗೆ ಕಷ್ಟವಾಗುವುದು. ಬೇಡವೆಂದರೂ ನಕಾರಾತ್ಮಕ ಚಿಂತನೆಗಳೇ ನಿಮ್ಮ ಮನಸ್ಸಿಗೆ ಬರುವುದು.

ಸಿಂಹ ರಾಶಿ: ವಿವೇಕ ಇದ್ದರೆ ಜನಾನುರಾಗವೂ ಇರುವುದು. ಇಂದು ಮಾತು ಕಡಿಮೆ ಮತ್ತು ಕಾರ್ಯ ಹೆಚ್ಚು ಮಾಡುವತ್ತ ಗಮನ ಹರಿಸಿದರೆ ಮನೆಯ ಕೆಲಸವಾಗುವುದು. ಪ್ರಭಾವೀ ವ್ಯಕ್ತಿಗಳ ಭೇಟಿ ನಿಮ್ಮ ಮನೋಬಲವನ್ನು ಹೆಚ್ಚಿಸುತ್ತದೆ. ಕುಂಟುವ ಕುದುರೆ ವೇಗವಾಗಿ ಸಾಗದು. ಕೆಲಸದಲ್ಲಿನ ಅಡೆತಡೆಗಳು ಕೊನೆಗೊಳ್ಳುತ್ತವೆ. ನೀವು ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುತ್ತೀರಿ ಮತ್ತು ನಿಮ್ಮ ಆದಾಯವು ಸುಧಾರಿಸುತ್ತದೆ. ಭೂಮಿಗೆ ಸಂಬಂಧಿಸಿದ ಪ್ರಯೋಜನಗಳ ಸಾಧ್ಯತೆ ಇದೆ. ವ್ಯವಹಾರದಲ್ಲಿ ನೀವು ಸ್ಪರ್ಧಿಗಳ ಬಗ್ಗೆ ತಿಳಿಯಿರಿ. ನಿಮ್ಮ ಕಾನೂನು ಬಾಹಿರ ಕಾರ್ಯಕ್ಕೆ ತೆರೆ ಬೀಳುವುದು. ಹಣಕಾಸಿನ ವಿಷಯಗಳಲ್ಲಿ, ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದು ಹೆಚ್ಚಾಗುವುದು. ಸಹೋದರರ ನಡುವೆ ಪ್ರೀತಿ ಇರುತ್ತದೆ. ಉದ್ಯೋಗದಲ್ಲಿ ನಿಮ್ಮ ಬದಲಾವಣೆ ಆಗಲಿದ್ದು ಆಶ್ಚರ್ಯದ ಸಂಗತಿಯಾದೀತು. ಆದಾಯಕ್ಕಾಗಿ ಅನ್ಯ ಮಾರ್ಗವನ್ನೂ ನೀವು ಅವಲಂಬಿಸಬಹುದು. ಕೋಪದ ಕಾರಣಕ್ಕೆ ಕೆಲವು ಅವಕಾಶಗಳು ಇಲ್ಲವಾಗುವುದು.

ಕನ್ಯಾ ರಾಶಿ: ಒಬ್ಬರೇ ಎಲ್ಲ ಕಡೆಗೂ ನೋಡಿಕೊಳ್ಳುವುದು ಕಷ್ಟ. ನಂಬಿಕಸ್ಥರೂ ಸುಲಭಕ್ಕೆ ಸಿಗಲಾರರು. ನೀವು ಜೀವನದಲ್ಲಿ ಆಸಕ್ತಿದಾಯಕ ವಿಷಯಗಳಿಗೆ ಮಾತ್ರ ಉತ್ತರಿಸುವಿರಿ. ಕೋಪವನ್ನು ಹತೋಟಯಲ್ಲಿ ಇಟ್ಟುಕೊಳ್ಳಿ. ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ಇಂದು ನಿಮ್ಮ ಲಾಭದ ಸಮಯ ಉರುಳಿಹೋಗಬಹುದು. ನೀವು ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸುತ್ತೀರಿ ಮತ್ತು ಸಕಾರಾತ್ಮಕವಾಗಿ ಉಳಿಯುತ್ತೀರಿ. ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸುತ್ತೀರಿ. ಹೆಚ್ಚು ಪ್ರಯತ್ನ ಪಟ್ಟರೆ ನಿಮ್ಮ ಸನಸ್ಯೆಗೆ ಸ್ವಲ್ಪವಾದರೂ ಪರಿಹಾರ ದೊರಕುವುದು ಖಚಿತ. ಉದ್ಯೋಗ ಬದಲಾವಣೆಯ ಸಾಧ್ಯತೆ ಇದೆ. ನೀವು ತಾಳ್ಮೆಯಿಂದಿರಿ ಮತ್ತು ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಿ. ಯಾವ ಉದ್ಯಮವನ್ನೂ ನೀವು ಹಗುರಾಗಿ ಕಾಣುವುದು ಬೇಡ. ಕಲಿಕೆಯ ವಿಚಾರದಲ್ಲಿ ನೀವು ಹಿಂದುಳಿಯುವಿರಿ. ಪ್ರೀತಿಯ ಕಾರಣದಿಂದ ನಿಮಗೆ ದುಃಖವಾಗುವ ಸಂದರ್ಭವಿದೆ.‌ ನಿಮ್ಮನ್ನು ನಿಂದಿಸುವವರ ವಿರುದ್ಧ ಅತಿಯಾದ ಕೋಪ ಬರಬಹುದು.

ತುಲಾ ರಾಶಿ: ಸರಿಯಾದ ವ್ಯವಸ್ಥೆಯನ್ನು ಹಾಳುಮಾಡದೇ ಮೇಲುಸ್ತುವಾರಿಯನ್ನು ಮಾತ್ರ ನೋಡಿಕೊಳ್ಳಿ. ಇಂದು ನಿಮ್ಮ ಒರಟುತನದಿಂದ ದಾಂಪತ್ಯದ ನಡುವೆ ಕಲಹ ಬರುವುದು. ನೀವು ಒಳ್ಳೆಯ ಅಭಿವೃದ್ಧಿ ಸಾಧಿಸುತ್ತಿದ್ದ ಹಾಗೆ ಪ್ರೇಮ ಜೀವನ ಒಳ್ಳೆಯ ತಿರುವು ತೆಗೆದುಕೊಳ್ಳುತ್ತದೆ. ಪರರನ್ನು ನೋಡಿ ಇರುವ ವಸ್ತುವಿನಲ್ಲಿ ಸುಖಪಡಲಾರಿರಿ. ನಿಮ್ಮ ಸಂಗಾತಿಯೊಂದಿಗಿನ ವಿವಾದಗಳು ಕೊನೆಗೊಳ್ಳುತ್ತವೆ. ಚಿಂತೆಗಳು ಕೊನೆಗೊಳ್ಳುತ್ತವೆ ಮತ್ತು ಹಣ ಸಿಗುತ್ತದೆ. ಯೋಜನೆಗಳು ಯಶಸ್ವಿಯಾಗುತ್ತವೆ ಮತ್ತು ಹೊಸ ಕೆಲಸಗಳು ದೊರೆಯುತ್ತವೆ. ನಿಮ್ಮ ಗುರಿಯನ್ನು ಸಾಧಿಸುವಲ್ಲಿ ನೀವು ನಿಸ್ಸೀಮರು. ವಿದ್ಯಾರ್ಥಿಗಳು ವೃತ್ತಿಯ ಬಗ್ಗೆ ಹೆಚ್ಚು ಚಿಂತೆ ಮಾಡಬಹುದು. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಕೆಲವು ಯೋಜನೆಗಳನ್ನು ಸಹ ಮಾಡಬಹುದು. ಅನಿರೀಕ್ಷಿತ ವಾರ್ತೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ. ಉದ್ಯೋಗದಿಂದ ತೆಗೆದುಹಾಕುವ ಭೀತಿಯು ನಿಮ್ಮನ್ನು ಕಾಡಬಹುದು. ವಿನಾಕಾರಣ ಸಾಲದ ಸುಳಿಯಲ್ಲಿ ಸಿಕ್ಕಿಕೊಳ್ಳುವುದು ಬೇಡ.

ವೃಶ್ಚಿಕ ರಾಶಿ: ಒಂದೇರೀತಿ ಇರುವುದು ಕಷ್ಟವಾದರೂ ಅದರಿಂದ ಹೊರಬರಲು ಭಯವಾಗಬಹುದು. ಪೂರ್ವಜರ ಆಸ್ತಿಯ ಅನ್ವೇಷಣೆಯಲ್ಲಿ ನೀವು ತೊಡಗುವಿರಿ. ಮಾತು ಕಡಿಮೆ ಇದ್ದಷ್ಟೂ ಒಳ್ಳೆಯದು. ಇಲ್ಲದಿದ್ದರೆ ಚಿತ್ರಣದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ವಿದೇಶಕ್ಕೆ ಪ್ರಯಾಣಕ್ಕೆ ಸಂಬಂಧಿತ ಸಮಸ್ಯೆಗಳು ಬಗೆಹರಿಯುತ್ತವೆ. ಅಪಾಯದ ಮುನ್ಸೂಚನೆಯನ್ನು ಅಲ್ಲಗಳೆಯುವುದು ಬೇಡ. ಆದಾಯವಿಲ್ಲದೇ ಮಂಕಾದ ನಿಮಗೆ ದಿನಾಂತ್ಯಕ್ಕೆ ಆದಾಯ ಹೆಚ್ಚಾಗುತ್ತದೆ. ಸಂತೋಷ ಇರುತ್ತದೆ. ಕೆಲಸದಲ್ಲಿನ ಅಡೆತಡೆಗಳು ಕೊನೆಗೊಳ್ಳುತ್ತವೆ. ಹೂಡಿಕೆಯಿಂದ ಲಾಭ. ಹಳೆಯ ಸ್ನೇಹಿತ ನಿಮ್ಮನ್ನು ಭೇಟಿಯಾಗಬಹುದು. ಮನೆಯಲ್ಲಿ ಇಂದು ಸಂಭ್ರಮದ ವಾತಾವರಣ ಇರುವುದು. ಸಹೋದರಿಯರ ಭೇಟಿಯು ನಿಮಗೆ ಸಂತೋಷ ಕೊಡುವುದು. ಕೆಲವೊಮ್ಮೆ ನೀವೇ ಸಮಸ್ಯೆಯನ್ನು ತಂದುಕೊಂಡು ಕಷ್ಟಪಡುವಿರಿ. ಸಂಗಾತಿಯ ಒತ್ತಡವನ್ನು ನೀವು ಕಡಿಮೆ ಮಾಡುವಿರಿ.

ಧನು ರಾಶಿ: ಸಂಬಂಧವು ತುಂಡಾಗದೇ ಇರುವಂತೆ ಮಾಡಿಕೊಳ್ಳಿ. ನಿಮ್ಮ ಅನವರತ ಕಾರ್ಯದಿಂದ ವಿಶ್ರಾಂತಿ ಬೇಕೆನಿಸಬಹುದು. ಆರ್ಥಿಕ ವಿಚಾರದಲ್ಲಿ ಲೆಕ್ಕಾಚಾರದ ಗಟ್ಟಿತನವೇ ನಿಮಗೆ ಧೈರ್ಯ. ಆರ್ಥಿಕ ನೆಲೆ ಬಲವಾಗಿ ಉಳಿಯುತ್ತದೆ. ವಿಶೇಷ ಆತಿಥ್ಯವನ್ನು ನೀವಿಂದು ಪಡೆದು ಖುಷಿಪಡುವಿರಿ. ಯೋಜನೆಗಳು ಯಶಸ್ವಿಯಾಗುತ್ತವೆ, ಚಿಂತನಶೀಲವಾಗಿ ಕೆಲಸ ಮಾಡಿ ಮತ್ತು ತಾಳ್ಮೆಯಿಂದ ಕೆಲಸ ಮಾಡಿ. ನಿಮ್ಮ ಪ್ರತಿಭೆಗೆ ಸ್ಥಳ ಹುಡುಕುವಿರಿ. ವಾಹನದ ವಿಚಾರದಲ್ಲಿ ನಿಮಗೆ ಗೊಂದಲ ನಿವಾರಣೆಯಾಗದು. ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ ಮೇಲುಗೈ ಸಾಧಿಸುತ್ತದೆ. ಕೆಲಸ ಕಾರ್ಯಗಳು ಫಲಿಸಲಿವೆ. ಕೆಲವು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಪ್ರಯೋಜನಗಳನ್ನು ಪಡೆಯಬಹುದು. ಸಂಗಾತಿಯ ಆರೋಗ್ಯ ಸ್ವಲ್ಪ ಚಿಂತಾಜನಕವಾಗಿರುತ್ತದೆ. ತಾಯಿಯ ಬಂಧುಗಳು ನಿಮಗೆ ಸಹಕಾರವನ್ನೂ ಕೊಡುವರು. ಹಳೆಯ ರೋಗವೇ ಪುನಃ ಕಾಣಸಿಕೊಳ್ಳುವುದು. ಬಾಡಿಗೆ ಮನೆಯವರು ಮನೆಯನ್ನು ಬದಲಾಯಿಸುವರು.

ಮಕರ ರಾಶಿ: ನಿಮ್ಮ ಕುಟುಂದಲ್ಲಿ ಮಾಡಬೇಕಾದ ಕೆಲಸವೂ ಕರ್ತವ್ಯವಾಗಲಿದೆ ಎನ್ನುವುದು ಗೊತ್ತಾಗುವುದು. ಇಂದು ನಿಮ್ಮ ಖಾಸಗಿ ವ್ಯವಹಾರವು ಬಯಲಾಗುವುದು. ಇದಕ್ಕಾಗಿ ನೀವು ತರ್ತು ಪ್ರಯಾಣವನ್ನು ಮಾಡಬೇಕಾಗಬಹುದು. ಆ ಸಮಯದಲ್ಲಿ ಅಧಿಕ ಖರ್ಚು ಆಗಲಿದೆ. ಮಾನಸಿಕವಾದ ಉಲ್ಲಾಸವಿರಲಿದೆ. ಆರ್ಥಿಕ ಸಂಕಷ್ಟದಿಂದ ಕೆಲವು ಕೆಲಸವನ್ನು ಮುಂದೂಡುವಿರಿ. ಕಠಿಣ ಪರಿಶ್ರಮದಿಂದ ನೀವು ಎಲ್ಲರಿಗಿಂತ ಮುಂದೆ ಸಾಗುತ್ತೀರಿ. ನಿಮ್ಮ ಯೋಜನೆ ಉತ್ತಮವಾಗಿರುತ್ತದೆ. ಹೊಸ ಅವಕಾಶ ಸಿಗುವ ಸಾಧ್ಯತೆ ಇದೆ. ನೀವು ತಾಳ್ಮೆ ಮತ್ತು ತಿಳುವಳಿಕೆಯಿಂದ ವರ್ತಿಸಬೇಕಾಗುತ್ತದೆ. ಪ್ರತಿಯೊಂದು ಕೆಲಸದಲ್ಲೂ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಕೆಲವು ಸಾಮಾಜಿಕ ಕಾರ್ಯಗಳನ್ನು ಮಾಡಲು ಬಯಸಿದರೆ ಸಾಮಾಜಿಕ ಸಂಸ್ಥೆಗೆ ಸೇರಬಹುದು. ಭೂಮಿಯ ಮೇಲೆ ಹೂಡಿಕೆ‌ ಮಾಡಲು ನಿಮಗೆ ಅವಕಾಶ ಸಿಗಬಹುದು. ಉದ್ಯೋಗವನ್ನು ಬದಲಿಸುವ ಆಲೋಚನೆ ಮಾಡಬೇಕಾದೀತು.

ಕುಂಭ ರಾಶಿ: ಅಪೂರ್ಣ ಕಾರ್ಯದಿಂದ ಅಸಮಾಧಾನವಾಗಲಿದ್ದು, ನಿದ್ರೆ, ಆಹಾರ ಸೇವನೆಗೆ ಮನಸ್ಸೂ ಆಗದು. ಇಂದು ನಿಮ್ಮ ವ್ಯಾವಹಾರಿಕ ನಡೆಯಿಂದ ನಿಮಗೆ ಹಿನ್ನಡೆ. ಸಂಗಾತಿಯ ಜೊತೆ ಆಪ್ತವಾಗಿ ಮಾತನಾಡಲು ಇಷ್ಟವಾಗದು. ಕೆಲಸದ ಮೇಲೆ ಗಮನ ಕೇಂದ್ರೀಕರಿಸಿದರೆ ಫಲಿತಾಂಶ ಉತ್ತಮ. ಸೌಹಾರ್ದ ಮಾತುಕತೆಗಳಿಂದ ವಿವಾದ ಇತ್ಯರ್ಥವಾಗಲಿದೆ. ಮನೆಯವರ ಜೊತೆ ಸಮಯ ಕಳೆಯುವ ಅವಕಾಶ ಸಿಗಬಹುದು. ಆರ್ಥಿಕವಾಗಿ ಸ್ಥಿರತೆ ಇದೆ, ಆದರೆ ಅಪರೂಪದ ಖರ್ಚುಗಳಿಗೆ ಸಿದ್ಧರಾಗಿ. ನಿಮ್ಮನ್ನು ನೀವು ನಂಬಿಕೊಳ್ಳುವುದು ಉತ್ತಮ. ಯಾವುದನ್ನಾದರೂ ಕಳೆಯುವುದಕ್ಕಿಂತ ಕಷ್ಟ ಕೂಡಿಸುವುದು. ಪೂರ್ವ ವೈರವು ಪುನಃ ಕಾಣಿಸಿಕೊಳ್ಳಬಹುದು. ಖಾಸಗಿ ಕೆಲಸಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಗೆ ಇಂದು ಬಹಳ ಮುಖ್ಯವಾಗಿರುತ್ತದೆ. ಇನ್ನೊಬ್ಬರ ಮೇಲೆ ನಿಮಗರ ಪಶ್ಚಾತ್ತಾಪ‌ಭಾವ ಬರುವುದು. ಸಮಯಕ್ಕೆ ಯಾವುದೇ ಸಲಹೆಯು ನಿಮಗೆ ಸಂತೋಷವನ್ನು ನೀಡುತ್ತದೆ. ಹೂಡಿಕೆ ಲಾಭದಾಯಕವಾಗಲಿದೆ.

ಮೀನ ರಾಶಿ: ಅಸಹಿಷ್ಣುತೆಯನ್ನು ತೋರಿಸಲು ಹೋಗಿ ಮುಖಭಂಗವಾಗಬಹುದು. ಇಂದು ದಾಂಪತ್ಯದಲ್ಲಿ ಅನ್ಯೋನ್ಯತೆಯನ್ನು ಸಾಧಿಸಿಕೊಳ್ಳುವ ಅನಿವಾರ್ಯತೆ ಇರಲಿದೆ. ನಿಮ್ಮ ಕೆಲಸದ ಮೇಲೆ ಮಾತ್ರ ನೀವು ಗಮನಹರಿಸಿದರೆ ಉತ್ತಮ. ಒತ್ತಡದಲ್ಲಿ ಅನ್ವೇಷಣೆ ಆಗಿರಬರದು. ಕೆಲವೊಂದು ಗಾಢ ನಿರ್ಧಾರಗಳು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬರುವ ಸಾಧ್ಯತೆ ಇದೆ. ತಾಳ್ಮೆಯೊಂದಿಗೆ ನಿರ್ಧಾರ ಮಾಡಿ, ತಕ್ಷಣದ ಪ್ರತಿಕ್ರಿಯೆ ಬೇಡ. ಕೆಲವೊಂದು ಸ್ನೇಹಿತರು ನಿಮ್ಮಿಂದ ಸಹಾಯ ಅಪೇಕ್ಷಿಸಬಹುದು, ಹಿರಿಯರ ಸಲಹೆಯನ್ನು ಒಡೆಯಿರಿ. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ನೀವು ನಿರಾಸೆಯನ್ನು ಅನುಭವಿಸುತ್ತೀರಿ. ಭಿನ್ನಮತಗಳಿಗೆ ಸೊಪ್ಪು ಹಾಕುವುದು ಬೇಡ. ಆಸ್ತಿಯ ವಿಚಾರದಲ್ಲಿ ನಿಮಗೆ ಕೆಲವು ಸಮಸ್ಯೆಗಳು ಎದುರಾಗಬಹುದು. ಮಕ್ಕಳ‌ ಮೇಲೆ ನಿಮಗೆ ಅತಿಯಾದ ಮೋಹ ಬೇಡ. ವಿದ್ಯಾಭ್ಯಾಸದ ವಿಚಾರದಲ್ಲಿ ಯಾವ ಸಡಿಲಿಕೆಯನ್ನೂ ಮಾಡಿಕೊಳ್ಳದಿರಿ.

TV9 Kannada

Leave a Reply

Your email address will not be published. Required fields are marked *