Horoscope Today 03 May: ಈ ರಾಶಿಯವರಿಗೆ ಹಿರಿಯರ ಕಾರಣದಿಂದ ಬದುಕಿನ ದೃಷ್ಟಿ ಬದಲಾಗಬಹುದು.

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಶುಕ್ಲ ಪಕ್ಷದ ಷಷ್ಠೀ ತಿಥಿ, ಶನಿವಾರ ಪರೋಕ್ಷ ನಿಂದನೆ, ಸಂಗಾತಿಯ ಮಾತಿಗೆ ವಿರೋಧ, ಮಾತನಾಡಲು ಮುಜಿಗರ ಇವೆಲ್ಲ ಈ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

Horoscope Today 03 May: ಈ ರಾಶಿಯವರಿಗೆ ಹೊರ ದೇಶದಿಂದ ಆತಂಕ

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಶನಿ, ತಿಥಿ : ಷಷ್ಠೀ ನಿತ್ಯನಕ್ಷತ್ರ : ಪುನರ್ವಸು, ಯೋಗ: ಧೃತಿ, ಕರಣ: ಬಾಲವ, ಸೂರ್ಯೋದಯ – 06 : 10 am, ಸೂರ್ಯಾಸ್ತ – 06 : 48 pm, ಇಂದಿನ ಶುಭಾಶುಭಕಾಲ: ರಾಹು ಕಾಲ 09:20 – 10:55, ಯಮಘಂಡ ಕಾಲ 14:04 – 15:39, ಗುಳಿಕ ಕಾಲ 06:10 – 07:45

ಮೇಷ ರಾಶಿ: ಮರದ ಕೆಲಸ ಮಾಡುವವರಿಗೆ ಲಾಭ. ಇಂದು ನೀವು ಮಾಡಿದ ಸಾಲವನ್ನು ಮರುಪಾವತಿಸಿ ಸಮಾಧಾನಗೊಳ್ಳುವಿರಿ. ದೀರ್ಘಕಾಲದಿಂದ ಮಾಡುತ್ತಿದ್ದ ಕೆಲಸಗಳು ಮುಕ್ತಾಯವಾಗುವುವು. ಸೌಂದರ್ಯ ವರ್ಧನೆಗೆ ಸಮಯವನ್ನು ಇಡುವಿರಿ‌. ಸಂಬಂಧಿಕರ ಸಹವಾಸ, ಸಹಾಯಗಳು ಸಿಗಲಿವೆ. ನಿಮ್ಮ ಅಂತಸ್ಸತ್ತ್ವ ಗಟ್ಟಿ ಇರುವುರಿಂದ ಯಾರ ಮಾತಿಗೂ ಕಿವಿಗೊಡದೆ ನೀವು ನಿರ್ಧರಿಸಿದ ಕೆಲಸದಲ್ಲಿ ಮುಂದುವರಿಯುತ್ತೀರಿ. ನೀವು ಮನೋರಂಜನೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವಿರಿ. ವಿದ್ಯಾರ್ಥಿಗೆಳಿಗೆ ಶೈಕ್ಷಣಿಕವಾಗಿ ಸರಿಯಾದ ಮಾರ್ಗದರ್ಶನ ಅಗತ್ಯವಿರುವುದು. ವಾಹನ ಚಾಲನೆಯನ್ನು ಎಚ್ಚರಿಕೆಯಿಂದ ಮಾಡಿ. ಯಾರಾದರೂ ಶ್ರೇಷ್ಠ ವ್ಯಕ್ತಿಗಳ ಭೇಟಿಯು ಆಗಸ್ಮಿಕವಾಗಿ ಆಗಲಿದೆ. ಅವರ ಒಡನಾಟವನ್ನು ಇಟ್ಟುಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳ ಒತ್ತಡಕ್ಕೆ ಕೊನೆಗೂ ಶರಣಾಗಬೇಕಾಗುವುದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ. ಕಳೆದುಕೊಂಡ ವಸ್ತುವನ್ನು ಮರಳಿ ಪಡೆಯಬೇಕಾದ ಸ್ಥಿತಿ ಬರಬಹುದು.

ವೃಷಭ ರಾಶಿ: ಕಾರ್ಯವು ವಿಳಂಬವಾದರೂ ಆಗುವಂತೆ ಆದರೆ ಚೆನ್ನ. ಹಣವನ್ನು ಉಳಿಸಿಕೊಳ್ಳಬೇಕು ಎಂದು ಪ್ರಯತ್ನಿಸಿದರೂ ನಿಮ್ಮ ಕೈ ಮೀರಿ ಹೋಗುವ ಸಂದರ್ಭವೇ ಇರುವುದು. ಪ್ರಯಾಣವನ್ನು ಅತಿಯಾಗಿ ಮಾಡಬೇಡಿ.‌ ಹಣದ ವಿಚಾರವಾಗಿ ಮನೆಯಲ್ಲಿ ಜಗಳವಾಹಬಹುದು. ಪರರ ಆಕರ್ಷಣೆಯಿಂದ ಮನಸ್ಸು ಅರಳುವುದು. ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹೋಗಬೇಡಿ.‌ ಸಮಯ ವ್ಯರ್ಥವಾಗುತ್ತಿದೆ ಎಂದು ತಿಳಿದಿದ್ದರೂ ಅನ್ಯ ಮಾರ್ಗವಿಲ್ಲದೇ ಇರಬೇಕಾದೀತು. ಅಧ್ಯಾತ್ಮದಿಂದ ನಿಮಗೆ ನೆಮ್ಮದಿ ಸಿಗಲಿದೆ. ನಿಮ್ಮ ಇಂದಿನ ಕಾರ್ಯದಲ್ಲಿ ಸಾವಧಾನತೆ ಇರಲಿದೆ. ನಿಜವಾದ ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಿ ಪ್ರಯೋಜನವಾಗದು. ಯಾರದೋ ಸುದ್ದಿಯನ್ನು ಮತ್ಯಾರಿಗೋ ಹೇಳುತ್ತ ಸಮಯವನ್ನು ಕಳೆಯುವಿರಿ. ಮಕ್ಕಳಲ್ಲಿ ಸ್ಪರ್ಧಾಮನೋಭಾವವನ್ನು ಹೆಚ್ಚಿಸುವಿರಿ. ಕುಮಾರ್ಗದಿಂದ ಆದಾಯವನ್ನು ಪಡೆಯುವಿರಿ. ಭೂಮಿಯ ಖರೀದಿಗೆ ಮನಸ್ಸಾಗುವುದು.

ಮಿಥುನ ರಾಶಿ: ಪರೋಕ್ಷವಾಗಿ ನಿಂದೆನೆಯಾಗುವುದು ಗೊತ್ತಾಗದೇ ಹೋಗಬಹುದು. ಇಂದು ಉದ್ಯೋಗದ ಚಿಂತೆಯಿಂದ ಯಾವ ಪ್ರಯೋಜನವಾಗದು. ಚಿಂತನೆಯಿಂದ ಮಾತ್ರ ಬಂದಿರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಬಗೆ ಅರಿಯದಾದೀತು. ನಿಮ್ಮ ವಿವಾಹದ ಮಾತುಕತೆಗಳಿಂದ ಬಹಳ ನೆಮ್ಮದಿ ನೀಡುವುದು. ವಿವಾಹದ ಬಹು ನಿರೀಕ್ಷೆ ಹುಸಿಯಾಗಲಿದೆ. ಅಪರೂಪದ ಸ್ನೇಹಿತನ‌ ಜೊತೆ ಸುತ್ತಾಟ. ವ್ಯರ್ಥವೆನಿಸಿದರೂ ನಿಮಗೆ ಬೇಕಾದ ಅಂಶಗಳು ಅವನಿಂದ ಸಿಗಲಿದೆ. ನಿಮ್ಮ ಗೊಂದಲಗಳಿಗೆ ತೆರೆ ಬೀಳಲಿದೆ. ವೈದ್ಯರಿಗೆ ಇಂದು ಉತ್ತಮದಿನವಾಗಿಲ್ಲ. ನೀವೂ ದೈವಕ್ಕೆ ಶರಣಾಗಲೇ ಬೇಕು. ಆಪ್ತರು ನೀಡಿದ ವಸ್ತುವನ್ನು ಕಳೆದುಕೊಳ್ಳುವಿರಿ. ಮನೆಯಲ್ಲಿ ಹಿರಿಯರ ಮಾತಿಗೆ ಬೆಲೆ ಕೊಡುವುದನ್ನು ಮರೆಯುವುದು ಬೇಡ. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಆಸಕ್ತಿ ಇರುವುದು. ಸದಾಕಾಲ ಸಂತೋಷದಿಂದ ಇರಲು ನೀವೇ ಏನಾದರೂ ಕ್ರಮವನ್ನು ಅನುಸರಿಸುವಿರಿ. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು. ಆಕಸ್ಮಿಕ ಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ. ಬೇಕಾದಷ್ಟು ಮಾತ್ರ ಮಾತುಗಳನ್ನಾಡಿ.

ಕರ್ಕಾಟಕ ರಾಶಿ: ಸಂಗಾತಿಯ ಮಾತುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗದು. ಇಂದು ಪ್ರಭಾವೀ ವ್ಯಕ್ತಿಗಳ ಸಹವಾಸದಿಂದ ಯಾವುದಾದರೂ ಸ್ಥಾನವು ಪ್ರಾಪ್ತಿಯಾಗಲಿದೆ. ಪುಣ್ಯಸ್ಥಳದ ದರ್ಶ‌ನಕ್ಕೆಂದು ಪ್ರಯಾಣ ಮಾಡುವಿರಿ. ವಾಹನದಿಂದ‌ ಬಿದ್ದು ಪೆಟ್ಟು ಮಾಡಿಕೊಳ್ಳುವಿರಿ. ಮಾತನ್ನು ಸರಿಯಾಗಿ ಆಡಿ. ಇಲ್ಲವಾದರೆ ಅನೇಕ ಶುಭಕಾರ್ಯಗಳಿಂದ, ಉತ್ತಮ ಕಾರ್ಯಗಳಿಂದ ವಂಚಿತರಾಗುವಿರಿ. ಮಕ್ಕಳ ವಿಚಾರವಾಗಿ ದಂಪತಿಗಳ ಮಧ್ಯದಲ್ಲಿ ವೈಮನಸ್ಯವು ಉಂಟಾಗಬಹುದು. ಸಹೋದರರಿಗೆ ಆರ್ಥಿಕ ಸಹಾಯ ಮಾಡುವಿರಿ. ನಿಮ್ಮಿಬ್ಬರ ಮಾತಿನ‌ ಚಕಮಕಿಯಲ್ಲಿ ಕೂಸು ಬಡವಾದೀತು. ಮನೆಯಲ್ಲಿ ಆಸ್ತಿಯ ವಿಚಾರವಾಗಿ ಸಣ್ಣ ಬಿರುಸಿನ ಮಾತುಗಳು ಕೇಳಿಬರಬಹುದು. ಅಗತ್ಯದ ವಸ್ತುಗಳನ್ನು ಖರೀದಿಸಿದಾಗ ಅಗತ್ಯತೆ ಮುಗಿದುಹೋಗಿರಬಹುದು. ಕತ್ತಲೆಯನ್ನು ಶಪಿಸುವುದಕ್ಕಿಂತ ಬೆಳಕನ್ನು ಹುಡುಕುವುದು ಉತ್ತಮ. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ಕೋಪವನ್ನು ಬಲವಂತವಾಗಿ ತಡೆಯುವಿರಿ. ನಿಮ್ಮ ವಿಚಾರವನ್ನು ನೀವು ಗುಪ್ತವಾಗಿ ತಿಳಿದುಕೊಳ್ಳುವಿರಿ. ಸಿಟ್ಟಿನ ಕೈಗೆ ನಿಮ್ಮನ್ನು ಕೊಡುವುದು ಬೇಡ.

ಸಿಂಹ ರಾಶಿ: ಉದ್ಯಮದ ಮೇಲಿಂದ ಹೂಡಿಕೆ ಸಾಧ್ಯವಾಗುವುದು. ಇಂದು ವಿವಾಹಕ್ಕೆ ಸಂಬಂಧಿಸಿದ ಮಾತುಕತೆಗಳಿಂದ ಸಂತೋಷವಾಗಲಿದೆ. ಇಂದು ದಿನವಿಡೀ ದೇಹದ ಆಲಸ್ಯ, ಮನಸ್ಸಿನಲ್ಲಿ ಇರುವ ಜಾಡ್ಯದಿಂದ ಯಾವ ಕಾರ್ಯಗಳೂ ಆಗದು. ನಿಮ್ಮ ವೇಗವನ್ನು ನಿಯಂತ್ರಿಸಲು ಅನ್ಯರ ಹಸ್ತಕ್ಷೇಪ ಹೆಚ್ಚಾಗುವುದು. ದಿವಸ ಚಟುವಟಿಕೆಗಳಿಗಿಂತ ಭಿನ್ನವಾದ ಯಾವುದಾದರೂ ಆಸಕ್ತಿಯಿರುವ ಕೆಲಸಗಳ ಬಗ್ಗೆ ಗಮನಹರಿಸಿ. ಪ್ರಯಾಣದಲ್ಲಿ ಯಾರಾದರೂ ನಿಮ್ಮನ್ನು ಕೆಣಕಿ, ನಿಮ್ಮ ಬಾಯಿ ತೆರೆಸಬಹುದು. ನಿಮಗೆ ಗೌರವಕ್ಕೆ ತೊಂದರೆ ಆಗಬಹುದು. ಆರೋಗ್ಯವು ಕೆಡಲಿದ್ದು ಹತ್ತಾರು ಆಲೋಚನೆಗಳು ಬರಬಹುದು. ಕೃಷಿಯಲ್ಲಿ ತೊಡಗಿಕೊಳ್ಳುವಿರಿ. ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿಹಾಕಬಹುದು. ವಿರೋಧಿಗಳ ಮಾತಿನ ಭರದಲ್ಲಿ ನಿಮ್ಮ ಮಾತು ಗೌಣವಾಗಬಹುದು. ನಿಮ್ಮನ್ನು ನಿಂದಿಸುವವರನ್ನು ನೀವು ದೂರವಿರಿಸುವಿರಿ. ಪ್ರಯಾಣದಿಂದ ಆಯಾಸವಾಗಲಿದೆ. ಮಕ್ಕಳಿಲ್ಲದೇ ಬೇಸರವಾಗಲಿದೆ. ಏಕಾಂಗಿಯಾಗಿ ಇರುವುದು ಕಷ್ಟವಾಗುವುದು.

ಕನ್ಯಾ ರಾಶಿ: ಅಹಂಕಾರದ ಮಾತುಗಳಿಂದ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಕಾರ್ಯಕ್ಷೇತ್ರವನ್ನು ಉತ್ತಮ ಮಾಡಿಕೊಳ್ಳುವುದು ನಿಮ್ಮದಾಗಿರಲಿದೆ. ಉನ್ನತಸ್ಥಾನದ ಪ್ರಸ್ತಾಪವೂ ಆಗಬಹುದು. ನಿಮ್ಮ ಯೋಜನೆಗೆ ನಿರೀಕ್ಷೆಗೆ ತಕ್ಕ ಪ್ರತಿಕ್ರಿಯೆ ಸಿಗದು. ಕೂಡಲೇ ವಿರುದ್ಧದ ಆಲೋಚನೆ ಬೇಡ, ಯಥಾಸ್ಥಿತಿ ಇರಲಿ. ನಿಮ್ಮ ಜೀವನದಲ್ಲಿ ಪ್ರಮುಖರು ಯಾರೆಂಬ ಸರಿಯಾದ ಚಿತ್ರಣವು ನಿಮಗೆ ಸಿಗಲಿದೆ. ಪಿತ್ತರೋಗದಿಂದ ಬಳಲುವ ಸಾಧ್ಯತಯಿದೆ. ಮನೆಯಲ್ಲಿಯೇ ಉಂಟಾದ ಜಗಳವನ್ನು ಅಲ್ಲಿಯೇ ಪರಿಹರಿಸಿಕೊಳ್ಳಿ. ಯಾರಿಗೂ ಹೇಳಿಕೊಳ್ಳದೇ ನೀವೊಬ್ಬರೇ ರೋಗವನ್ನು ಅನುಭವಿಸುವಿರಿ. ಆಸ್ತಿಯ ಸಂಪಾದನೆಯಿಂದ ಪೂರ್ಣ ತೃಪ್ತಿ ಇಲ್ಲ. ಕೆಲವರ ಸಹವಾಸದಿಂದ ನಿಮ್ಮ ದಿಕ್ಕು ತಪ್ಪಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಉತ್ತಮಸ್ಥಾನವು ಸಿಗಲಿದೆ. ವಿದೇಶೀಯ ವ್ಯಾಪಾರವು ಹೆಸರಿಗಷ್ಟೇ ಇರುವುದು. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು. ನಿಮ್ಮನ್ನು ಪರೋಕ್ಷವಾಗಿ ಯಾರದರೂ ನಿಂದಿಸಬಹುದು. ಮನಸ್ಸಿನಲ್ಲಿ ಸಾವಧಾನತೆ ಇರದು. ವಾಹನದಲ್ಲಿ ಸಂಚಾರಕ್ಕೆ ತಡೆಯಾಗಲಿದೆ.

ತುಲಾ ರಾಶಿ: ಹೊರ ದೇಶದಲ್ಲಿ ಇರುವವರಿಗೆ ಆತಂಕದ ಸನ್ನಿವೇಶಗಳು ಎದುರಾಗಲಿವೆ. ಮಕ್ಕಳ ಭವಿಷ್ಯದ ಬಗ್ಗೆ ಅತಿಯಾದ ಭಯವು ನಿಮ್ಮನ್ನು ಕಾಡಯವುದು. ಪ್ರೀತಿಯನ್ನು ಮನೆಯವರ ಮೇಲೂ ತೋರಿಸಬಹುದು. ಕೇವಲ ಅನ್ಯಲಿಂಗಿಯರ ಮೇಲೆ ಮಾತ್ರವಲ್ಲ. ನಿಮ್ಮಿಂದ ನಿಮ್ಮ ತಂದೆ, ತಾಯಿಯರು ಸಂಕಟಪಡಬಹುದು. ವಿವಾಹಯೋಗವು ನಿಮಗಿದೆ. ಯಾವುದಾದರೂ ಉಪಯೋಗಕ್ಕೆ ಬರುವ ಕೆಲಸಕ್ಕೆ ಕೈ ಹಾಕಿ.‌‌ ನಿಮ್ಮ ಮುಂದಿನ ಮಾರ್ಗಕ್ಕೆ ಉತ್ತಮ ಸಹಾಯಕನಾದೀತು. ನಿಮ್ಮದಾದ ಕೆಲವು ಜವಾಬ್ದಾರಿಯನ್ನು ಬಿಡುವುದು ಬೇಡ. ಯಾರಿಂದಲೋ ಪ್ರೇರಿತರಾಗಿ ಆಸ್ತಿಯನ್ನು ಪಡೆಯುವ ಹುನ್ನಾರ ನಡೆಸುವಿರಿ. ಮನೋವಾಂಛೆಗೆ ಸಣ್ಣವರು ಬಲಿಯಾಗಬಹುದು. ರಾಜಕೀಯದಲ್ಲಿ ವಿವಾದಸ್ಪದ ಮಾತುಗಳು ಆಡಿ ಎಲ್ಲರ ಕೆಂಗಣ್ಣಿಗೆ ಸಿಲುಕುವಿರಿ. ಮುಖಂಡರ ಜೊತೆ ಗುರುತಿಸಿಕೊಳ್ಳಲು ಇಷ್ಟಪಡುವಿರಿ. ಅಮೂಲ್ಯವಾದ ವಸ್ತುಗಳು ಪಡೆದುಕೊಳ್ಳುವಿರಿ. ಇಂದು ನಿಮ್ಮ ಮಾತಿನ ಆರಂಭವೇ ನೀವು ಎಂತಹವರು ಎನ್ನುವುದನ್ನು ತಿಳಿಸುತ್ತದೆ. ನೀವಾಡುವ ಸುಳ್ಳಿನಿಂದ ನಂಬಿಕೆ ದೂರಾಗುವುದು.

ವೃಶ್ಚಿಕ ರಾಶಿ: ಹಿರಿಯರ ಕಾರಣದಿಂದ ಬದುಕಿನ ದೃಷ್ಟಿ ಬದಲಾಗಬಹುದು. ನಿಮ್ಮ‌ ಮನಸ್ಸನ್ನು ಕಲಕಲೆಂದೇ ಕೆಲವರು ಹೊಂಚುಹಾಕುವ ಸಾಧ್ಯತೆ ಇದೆ. ಅವುಗಳಿಗೆ ಕಿವಿಗೊಡಬೇಡಿ. ಎಲ್ಲಿಗೆ ಹೋಗಬೇಕು ಎನ್ನುವ ಸಂಕಲ್ಪ ಒಂದು ಸಾಲದು, ಹೋಗಲು ಪ್ರಯತ್ನವೂ ಬೇಕು. ಆರ್ಥಿಕವಾಗಿ ಇಂದು ಸಬಲರಾಗುವಿರಿ.‌ ಪ್ರೀತಿಪಾತ್ರರಾದವರ ಭೇಟಿಯು ಸಂತೋಷವನ್ನು ಹೆಚ್ಚಿಸೀತು. ಹಿರಿಯರ ಮಾತುಗಳು ನಿಮ್ಮ ಮನಸ್ಸಿಗೆ ನಾಟಿ ಇಲ್ಲಿಯವರೆಗಿನ ಕಾರ್ಯಕ್ಕೆ ಪಾಶ್ಚಾತ್ತಾಪವನ್ನು ಅನುಭವಿಸುವಿರಿ. ನಿಮ್ಮ ಮಾತು ಮತ್ತೆ ಕೇಳಬೇಕು ಎನ್ನುವಂತೆ ಇರಲಿ. ಸುಲಭವಾದುದನ್ನು ಕ್ಲಿಷ್ಟ ಮಾಡಿಕೊಳ್ಳುವಿರಿ. ತಾಯಿಯಿಂದ‌ ನಿಮ್ಮ ಕಾರ್ಯಕ್ಕೆ ಅನುಕೂಲವು ಒದಗಿಬರುವುದು. ಚಾಲಕರು ಸ್ವಲ್ಪ ಎಚ್ಚರಿಕೆಯಿಂದ ಚಲಾಯಿಸಿ. ಮಕ್ಕಳ‌ ಜೊತೆ ಅನ್ಯೋನ್ಯ ಸಂಬಂಧವು ಕಾಣಿಸಿಕೊಂಡೀತು. ನಿಮ್ಮ ಕಷ್ಟವನ್ನು ಕುಟುಂಬಕ್ಕೆ ದಾಟಿಸಲಾರಿರಿ. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು. ಸ್ನೇಹಿತರಿಗೆ ಬೇಸರವಾಗಬಾರದೆಂದು ಅವರ ಜೊತೆ ಸಮಸ್ಯೆ ಕಳೆಯುವಿರಿ. ಅಧಿಕಾರಿಗಳು ನಿಮಗೆ ತೊಂದರೆ ಕೊಡಬಹುದು. ಯಾರನ್ನೂ ಮೀರಿಸುವ ಹಂಬಲದಿಂದ ಕೆಲಸ ಮಾಡುವುದು ಬೇಡ.

ಧನು ರಾಶಿ: ಹೊಸ ಪ್ರಯೋಗಗಳನ್ನು ಆಹಾರದಲ್ಲಿ ಮಾಡಿ, ಯಶಸ್ಸು ಕಾಣುವಿರಿ. ಯಾವುದಕ್ಕೂ ದುಡುಕುವ ಅಗತ್ಯ ಇರದು. ಅಂತಹ ಸಂದರ್ಭವನ್ನು ನಿರ್ಲಕ್ಷಿಸುವುದು ಉತ್ತಮ. ನಿಮ್ಮನ್ನು ಕಂಡು ಅಸೂಯೆ ಪಡುವ ಜನರಿರುತ್ತಾರೆ ನಿಮ್ಮ ಸುತ್ತ. ನಿಮ್ಮ ಚಿಂತನೆಯ ಜಗತ್ತು ಎಲ್ಲದಕ್ಕಿಂತ ಭಿನ್ನವಾಗಿರಲಿದೆ. ಅವರನ್ನು ನಗಣ್ಯ ಮಾಡಬೇಡಿ. ನಿಮ್ಮ ಮೇಲೆ ಸಲ್ಲದ ಪಿತೂರಿಗಳನ್ನು ಮಾಡಿಯಾರು.‌ಅವರ ಮೇಲೆ ಒಂದು ಕಣ್ಣಿರಲಿ. ಸ್ನೇಹಿತರ ಜೊತೆ ಮನಸ್ಸು ಬಿಚ್ಚಿ ಮಾತನಾಡಿ. ಶುಭಸಮಾಚಾರ ನಿಮಗೆ ಗೊತ್ತಾಗಲಿದೆ. ಕುಟುಂಬದಲ್ಲಿ ನಿಮ್ಮ ಪ್ರಾಮುಖ್ಯವು ಅರಿವಿಗೆ ಬರಬಹುದು. ಬೇಡದ ಆಲೋಚನೆಯನ್ನು ದೂರಮಾಡಿಕೊಳ್ಳಿ. ನಿಮ್ಮ ದಿನವನ್ನು ಬೇರೆಯವರು ಕಿತ್ತುಕೊಳ್ಳಬಹುದು. ನಿಮ್ಮ ದಿನದ ಅನುಕೂಲತೆಯನ್ನು ನೋಡಿ ಕಾರ್ಯಕ್ಕೆ ಒಪ್ಪಿಗೆ ನೀಡಿ. ಪ್ರೇಮಕ್ಕಾಗಿ ಹೆಚ್ಚು ಖರ್ಚನ್ನು ಮಾಡಬೇಕಾದೀತು. ಹಿತಶತ್ರುಗಳ ಬಗ್ಗೆ ನಿಮ್ಮ ಊಹೆಯು ಸುಳ್ಳಾಗಬಹುದು. ಆರೋಗ್ಯವು ಬಡವಾದಂತೆ ತೋರುವುದು. ಸೋಲಿನ ಚಿಂತೆಯನ್ನು ಬಿಟ್ಟು ಸ್ಪರ್ಧೆಯಲ್ಲಿ ತೊಡಗಿ.

ಮಕರ ರಾಶಿ: ನಿಮ್ಮ ಬಗ್ಗೆ ಹೇಳಿಕೊಳ್ಳಲು ಮುಜುಗರ ಸಹಜ. ಆದರೆ ಹೇಳಿಕೊಳ್ಳದೇ ಮುಂದಿನ ಬದುಕು ಕಷ್ಟ. ಇಂದು ಸಂಗಾತಿಗೆ ಪ್ರಿಯವಾದುದನ್ನೇ ಮಾಡುವಿರಿ. ಸರ್ಕಾರಿ ಕೆಲಸಗಳು ನಿಧಾನವಾಗಿ ಮುಂದುವರಿಯುವುದು. ಮಾತಿನಿಂದ ಮಾತ್ರ ಎಲ್ಲವೂ ಸರಿಯಾಗುವುದು ಎನ್ನುವ ಭ್ರಮೆಯಿಂದ ಹೊರಬನ್ನಿ. ಹಣವೊಂದು ನೆಮ್ಮದಿಗೆ ಕಾರಣವಾಗದು. ಒಳ್ಳೆಯ ಸ್ವಭಾವವೇ ಮುಖ್ಯವಾಗಿ ಇರುವುದು. ಭವಿಷ್ಯದ ಯೋಚನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನಿಮ್ಮ ವ್ಯವಹಾರವನ್ನು ಯಾರೋ ನಿಯಂತ್ರಿಸಿದಂತೆ ಅನ್ನಿಸುವುದು. ಯಾವ ಬಲವನ್ನು ನಂಬದೇ ಸ್ವಪ್ರಯತ್ನದಿಂದ ಎಲ್ಲವನ್ನೂ ಮಾಡಲು ಬಯಸುವಿರಿ. ಮುರಿದ ಸಂಬಂಧಗಳು ಎಷ್ಟೇ ಆದರೂ ಸರಿಯಾಗಿ ಕೂಡಿಕೊಳ್ಳುವುದು ಕಷ್ಟವಾದೀತು. ಯಾವ ಭಯವೂ ನಿಮ್ಮನ್ನು ನಲುಗಿಸಲಾಗದು. ಇಂದಿನ ಕಾರ್ಯಗಳಲ್ಲಿ ತೊಂದರೆಗಳು ಎದ್ದು ಕಾಣಿಸುವುದು. ಜಾಣ್ಮೆಯನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ. ನಿಮ್ಮ ಗುಟ್ಟನ್ನು ಬಿಟ್ಟಕೊಡುವುದು ಬೇಡ. ಮಕ್ಕಳಲ್ಲಿ ಪ್ರೀತಿ ಅಧಿಕವಾಗುವುದು.

ಕುಂಭ ರಾಶಿ: ಉದ್ಯಮದಲ್ಲಿ ಸ್ವತಂತ್ರರಾಗಲು ಯೋಚಿಸುವಿರಿ. ಹೂಡಿಕೆಗಳು ನಿಮಗೆ ಪ್ರಯೋಜನಕಾರಿಯಾಗಲಿವೆ. ಆರ್ಥಿಕ ಸುಧಾರಣೆಯು ತಕ್ಕಮಟ್ಟಿಗೆ ಇರಲಿದೆ. ಯಾರೊಂದಿಗೂ ಸಂಪೂರ್ಣ ನಿಜವನ್ನು ಹೇಳಿಬಿಡಬೇಡಿ. ಅಪರೂಪದ ವ್ಯಕ್ತಿಗಳ ಭೇಟಿಯಾಗುವ ಸಾಧ್ಯತೆ ಇದೆ. ನೀವೇ ಆರಂಭಿಸಿದ ಕಾರ್ಯದ ಯಶಸ್ಸನ್ನು ಪರರಿಗೆ ಕೊಡಬೇಕಾಗುವುದು. ಜಯವೃತ್ತಿಗೆ ಸಂಬಂಧಿಸಿದಂತೆ ಶುಭದಿನವಾಗಿದೆ. ಇನ್ನೊಬ್ಬರನ್ನು ನೋಡಿ ನಿಮ್ಮ ಅಸೂಯೆಪಡಬೇಡಿ. ನಿಮ್ಮ ಇಂದಿನ ಶ್ರಮಕ್ಕೆ ತಕ್ಕುದಾದ ಫಲವು ಸಿಗಬಹುದು. ಇಂದು ಸರ್ಕಾರಿ ಕೆಲಸಕ್ಕೆ ಓಡಾಟ ಮಾಡುವಿರಿ. ದೂರದ ಪ್ರಯಾಣವನ್ನು ಮಾಡಲಿದ್ದೀರಿ. ಒಂಟಿತನವು ಕಾಡಬಹುದು. ಅಪರಿಚಿತರ ಜೊತೆ ವೃಥಾ ಕಲಹವಾಗಬಹುದು. ನಿಮ್ಮ ಇಂದಿನ ನಡೆಯು ಅನೂಹ್ಯವಾಗಿರುವುದು. ಸಾಮಾಜಿಕವಾದ ಸ್ಥಾನಮಾನ ಹೆಚತಚಾಗುವುದು. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಇರಲಿದೆ. ಕೆಲವು ಗೊಂದಲವು ಪರಿಹಾರವಾಗದೇ ಹಾಗೆಯೇ ಇರುವುದು. ನಿಮ್ಮ ಕೆಲಸಕ್ಕೆ ಅಧಿಕಾರಿಗಳು ಪ್ರಶಂಸಿಸುವರು.

ಮೀನ ರಾಶಿ: ನಿಮ್ಮ ಪರಾಕ್ರಮವನ್ನು ಸಬಲರ ಮೇಲೆ ತೋರಿಸಿ, ಆಗ ನಿಮ್ಮ ಬಲಸ ಅರಿವಾಗುತ್ತದೆ. ನಿಮ್ಮ ಬೆಲೆಯುಳ್ಳ ಯಾವುದಾದರೂ ವಸ್ತುವು ಕೈ ತಪ್ಪಿ ಹೋಗಬಹುದು. ಆಲೋಚಿಸದೇ ಯಾವುದೇ ಸಾಹಸದ ಕಾರ್ಯವನ್ನು, ಕೆಲಸವನ್ನು ಮಾಡಬೇಡಿ. ಬಯಸದೇ ಬಂದಿದ್ದನ್ನು ಉಳಿಸಿಕೊಳ್ಳುವುದು ಕಷ್ಟ. ಅನಾರೋಗ್ಯವು ನಿಮ್ಮನ್ನು ಕಾಡಲಿದೆ. ಪಿತ್ರಾರ್ಜಿತ ಭೂಮಿಯ ವ್ಯವಹಾರದಲ್ಲಿ ದ್ವೇಷ ಸಾಧಿಸಿ ಪ್ರಯೋಜನವಾಗದು. ವೃತ್ತಿಯಲ್ಲಿ ಅನಿರೀಕ್ಷಿತ ಬೆಳವಣಿಗೆಯಿಂದ ಬೇಸರಬಾಗಬಹುದು. ಮಧ್ಯವರ್ತಿಗಳ ಜೊತೆ ನಿಮ್ಮ ಸಂಬಂಧ ಕೆಡಬಹುದು. ಹಣದ ವಿಷಯದಲ್ಲಿ ಮೋಸ ಹೋಗುವ ಸಂದರ್ಭವಿದೆ. ಹಳೆಯ ಬಾಂಧವ್ಯ ಮತ್ತೆ ಕೂಡಿಕೊಳ್ಳುವುದು. ನಿಮ್ಮನ್ನು ನೌಕರರು ಹೋಗಳುವರು. ಎದರುರಾಗು ಅಡ್ಡಿ, ಆತಂಕಗಳನ್ನು ನೀವು ಅನಾಯಾಸವಾಗಿ ದೂರ ಸರಿಸುವಿರಿ. ಸಹನೆಯ ಪರೀಕ್ಷೆಯಲ್ಲಿ ನೀವು ಗೆಲ್ಲುವಿರಿ. ನಿಮ್ಮನ್ನು ನಗಿಸುವ ಪ್ರಯತ್ನ ಮಾಡಿದರೂ ನೀವು ಯಾವುದೋ ಆಲೋಚನೆಯಲ್ಲಿಯೇ ಇರುವಿರಿ.

Source: TV9

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *