Horoscope Today 09 June: ಈ ರಾಶಿಯವರಿಗೆ ಅತೃಪ್ತಿ ಹೆಚ್ಚು, ಅಲ್ಪತೃಪ್ತರೂ ಅಲ್ಲ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ವೃಷಭ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ವಜ್ರ, ಕರಣ : ಕೌಲವ, ಸೂರ್ಯೋದಯ – 06 : 04 am, ಸೂರ್ಯಾಸ್ತ – 06 : 59 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 07:41 – 09:18, ಯಮಘಂಡ ಕಾಲ 10:55 – 12:32, ಗುಳಿಕ ಕಾಲ 14:09 – 15:46

ಮೇಷ ರಾಶಿ: ಏನನ್ನೇ ಮಾಡಿದರೂ ಸರ್ಜನಾತ್ಮಕವಾಗಿ ಮಾಡುವ ಬಯಕೆ ಇರಲಿದೆ. ಇಂದು ನೀವು ಮಾಡಿದ ಹೂಡಿಕೆಯಿಂದ ಲಾಭವಿದೆ. ದುರಭ್ಯಾಸದಿಂದ ಹಣವನ್ನು ಕಳೆದುಕೊಳ್ಳುವಿರಿ. ವ್ಯಾಪರದಲ್ಲಿ ಲಾಭವಾಗಲಿದೆ. ಹಣಕಾಸಿನ ಅಡಚಣೆಗಳಿಂದ ಹೊರಬರಲು ಸಾಧ್ಯವಿದೆ. ವ್ಯಾಪಾರಿಗಳಿಗೆ ಇದು ಶುಭಕರವಾದ ಸಮಯವಾಗಿದ್ದು, ಹೊಸ ಒಪ್ಪಂದಗಳು ಲಾಭ ತರಬಹುದು. ನಕಾರಾತ್ಮಕ ಸುದ್ದಿಗಳು ಬರುವ ಬಗ್ಗೆ ಗಮನ ಹೆಚ್ಚು. ಉದ್ಯೋಗದಲ್ಲಿ ನಿಮ್ಮ ಪ್ರತಿಭೆಯನ್ನು ತೋರಿಸಲು ಹೆಚ್ಚಿನ ಶ್ರಮ ಬೇಕಾಗುತ್ತದೆ. ಇಂದು ನೀವು ಕಾರ್ಯದ ಒತ್ತಡದಲ್ಲಿ ಇದ್ದರೂ ನೀವು ಕುಟುಂಬಕ್ಕಾಗಿ ಸಮಯವನ್ನು ಕೊಡುವಿರಿ. ಅತೃಪ್ತರಿಗೆ ತೃಪ್ತಿ ಕೊಡುವ ಪ್ರಯತ್ನ. ಸಂಗಾತಿಯು ನಿಮಗೆ ಸಂಪೂರ್ಣ ಬೆಂಬಲ ನೀಡುವರು. ತಾಯಿಯ ಕಡೆಯ ಬಂಧುಗಳು ನಿಮ್ಮನ್ನು ಭೇಟಿಯಾಗಲಿದ್ದಾರೆ. ಹೇಳಿದ ಸಮಯಕ್ಕೆ ಕೆಲಸವನ್ನು ಮಾಡಿಕೊಡಲಾಗುವುದು. ಹಿರಿಯರ ಸೇವೆಯಲ್ಲಿ ನೀವು ಇರುವಿರಿ. ನಕಾರಾತ್ಮಕ ಆಲೋಚನೆಗಳನ್ನು ತಲೆಯಿಂದ ತೆಗೆಯಿರಿ. ಕೋಪವನ್ನು ಯಾರೆದುರೂ ಪ್ರಕಟಿಸುವುದು ಬೇಡ.

ವೃಷಭ ರಾಶಿ: ಚಿಕಿತ್ಸೆಯ ವಿಚಾರದಲ್ಲಿ ಗೊಂದಲವಾಗಲಿದೆ. ಇಂದು ನೀವು ಒತ್ತಡಗಳಿಗೆ ಸಿಲಿಕದೇ ಎಚ್ಚರಿಕೆಯಿಂದ ಕಾರ್ಯವನ್ನು ನಿಭಾಯಿಸಲು ಕಲಿಯುವಿರಿ. ಹಣಕಾಸಿನ ಹರಿವು ಹೆಚ್ಚಾಗಲಿದೆ. ಕೊಟ್ಟ ಸಾಲ ಮರಳಿಬರಹುದು. ವೈಯಕ್ತಿಕ ಜೀವನದಲ್ಲಿ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಅನಿರೀಕ್ಷಿತ ಸವಾಲುಗಳು ಎದುರಾಗಲಿವೆ. ದಿನದ ಪ್ರಾರಂಭದಲ್ಲಿ ಸಂಕಷ್ಟಗಳು ಹೆಚ್ಚಿದ್ದರೂ ನಿವಾರಣೆಯಾಗುತ್ತವೆ. ವ್ಯಾಪಾರದಲ್ಲಿ ತಾತ್ಕಾಲಿಕ ಏರಿಳಿತಗಳು ಕಂಡುಬಂದರೂ, ದೈರ್ಯದಿಂದ ಮುಂದುವರಿಯುವುದು ಮುಖ್ಯ. ಹಳೆಯ ವಸ್ತುಗಳ ದುರಸ್ತಿಯಾಗಲಿದೆ. ಔಪಚಾರಿಕ ಭೇಟಿಯು ಮತ್ತೊಂದು ರೂಪವನ್ನು ಪಡೆಯುವುದು. ಯಂತ್ರೋದ್ಯಮಿಗಳು ಇಂದು ಉತ್ತಮ ಲಾಭವನ್ನು ಪಡೆಯುವರು. ಹಿರಿಯರ ಆಸೆಗಳನ್ನು ಪೂರ್ಣಗೊಳಿಸುವ ಒಮ್ಮನಸ್ಸು ಇರಲಿದೆ. ಇಂದು ಆಸ್ತಿಯ ವಿವಾದವು ಬಗೆಹರಿಯಲಿದೆ. ಯಾರಾದರೂ ನಿಮ್ಮನ್ನು ಕಂಡು ಅವಮಾನಿಸುವರು. ಉತ್ತರಿಸಿ ಇನ್ನಷ್ಟು ಹತಾಶರಾಗಬೇಡಿ. ಪ್ರಭಾವಿಗಳ ಭೇಟಿಯಿಂದ ಸಂತೋಷವಾಗಲಿದೆ.

ಮಿಥುನ ರಾಶಿ: ಸಣ್ಣ ಸ್ಥಳದಲ್ಲಿ ಸ್ವಾಬಲಂಬಿ ಉದ್ಯೋಗ ಆರಂಭವಾಗಲಿದೆ. ಇಂದು ನಿಮ್ಮ ವಾಹನದಲ್ಲಿ ದೀರ್ಘಪ್ರಯಾಣವು ಮಾಡುವುದು ಬೇಡ. ಅನಿವಾರ್ಯ ಕಾರಣಗಳಿಂದ ಖರ್ಚಿಗೆ ನಾನಾ ಮಾರ್ಗಗಳು ತೆರದುಕೊಳ್ಳಬಹುದು. ಕೆಲಸದ ಒತ್ತಡ ಹೆಚ್ಚಿದರೂ, ಎಲ್ಲ ಕೆಲಸಗಳು ಅಡೆತಡೆಯಿಲ್ಲದೇ ಪೂರ್ಣಗೊಳ್ಳುತ್ತವೆ. ಶೀತಬಾಧೆಯಿಂದ ಕೂಡಲೇ ಆರಾಮ ಸಿಗದು. ಉದ್ಯೋಗದಲ್ಲಿ ಬಡ್ತಿ ಅಥವಾ ಹೊಸ ಅವಕಾಶಗಳ ಕುರಿತು ವಿಷಯಗಳು ಕೇಳಿಬರಬಹುದು. ಆರೋಗ್ಯದ ಮೇಲೆ ಹೆಚ್ಚು ಗಮನಹರಿಸಿ. ಹೊರಗೆ ತಿನ್ನುವುದು ಮತ್ತು ಕುಡಿಯುವುದನ್ನು ತಪ್ಪಿಸಿ, ಇಲ್ಲದಿದ್ದರೆ ನಿಮ್ಮ ಆರೋಗ್ಯವು ಹದಗೆಡಬಹುದು. ಹಿರಿಯರ ಜೊತೆ ನೀವು ಅನುಭವವನ್ನು ಪಡೆಯುವಿರಿ. ನಿಮ್ಮವರಿಂದ ನಿಮಗೆ ಕಷ್ಟಗಳು ಬರಬಹುದು ಎಂಬ ನಿರೀಕ್ಷೆಯಲ್ಲಿ ಇರುವಿರಿ. ಆಸ್ತಿ ಖರೀದಿಯ ಬಗ್ಗೆ ಚಿಂತನೆ ಇರುವುದು. ಲಾಭಕ್ಕೋಸ್ಕರ ಕೆಲಸವನ್ನು ಮಾಡದೇ ಖುಷಿಗೆ ಉದ್ಯೋಗವನ್ನು ಪ್ರಾರಂಭಿಸುವ ಮನಸ್ಸು ಮಾಡುವಿರಿ.

ಕರ್ಕಾಟಕ ರಾಶಿ: ಸ್ಪೂರ್ತಿದಾಯಕ ಮಾತುಗಳಿಗೆ ಕಿವಿಯಾಗುವಿರಿ. ಅಹಂಕಾರದಿಂದ ಕೆಲವರನ್ನು ಕಳೆದುಕೊಳ್ಳುವಿರಿ. ಬಾಕಿಯಿರುವ ಗೃಹಕೃತ್ಯಗಳನ್ನು ಪೂರೈಸಲು ಒಂದು ಅನುಕೂಲಕರ ದಿನ. ಆದಾಯದಲ್ಲಿ ಏರಿಳಿತ ಕಾಣಬಹುದು ಮತ್ತು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಶುಭವಾರ್ತೆ ಕೇಳುವ ಸಾಧ್ಯತೆ ಇದೆ. ಅದು ನಿಮ್ಮ ಮನಸ್ಸಿಗೆ ಖುಷಿ ನೀಡಲಿದೆ. ಹೊಸತನಕ್ಕೆ ತಹತಹಿಸುವಿರಿ. ಉದ್ಯೋಗದಲ್ಲಿ ಬದಲಿ ಅಥವಾ ಸ್ಥಾನೋನ್ನತಿಗೆ ಸಂಭಾವ್ಯತೆ ಇರುವುದು. ವೈವಾಹಿಕ ಜೀವನದಲ್ಲಿ ಪ್ರೀತಿಯ ಬಾಂಧವ್ಯ ಹೆಚ್ಚಾಗುತ್ತದೆ. ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ಅದು ನಿಮ್ಮ ಮನಸ್ಸನ್ನು ಸಂತೋಷಪಡಿಸುತ್ತದೆ. ದುಂದು ವೆಚ್ಚಗಳನ್ನು ತಪ್ಪಿಸಿ. ಅವಶ್ಯಕತೆಯಿದ್ದಷ್ಟು ಮಾತ್ರ ಹಣವನ್ನು ಬಳಸಿ. ಸಂದರ್ಭದ ವರ್ತನೆಯನ್ನು ಕಂಡು ಯಾರ ಬಗ್ಗೆಯೂ ತೀರ್ಮಾನಕ್ಕೆ ಬರಬೇಡಿ. ಮನೆಯ ಸ್ಥಳವನ್ನು ಬದಲಾಯಿಸುವ ಅನಿವಾರ್ಯತೆ ಬಂದೀತು. ಅನ್ಯಾನ್ಯ ಮಾರ್ಗಗಳಿಂದ ಹಣವು ಬರಬಹುದು. ‌ಕಳೆದಕೊಂಡ ವಸ್ತುವಿಗೆ ತೀವ್ರ ಹುಡುಕಾಟ ಇರುವುದು.‌

ಸಿಂಹ ರಾಶಿ: ಸಹೋದ್ಯೋಗಿಗಳ ಜೊತೆ ಭಾವನಾತ್ಮಕ ಸಂಬಂಧ ಆರಂಭವಾಗಲಿದೆ. ಇಂದು ಕುಟುಂಬದ ಸದಸ್ಯ ನಿಮ್ಮ ಜೊತೆ ಸಮಯವನ್ನು ಕಳೆಯಲು ಒತ್ತಾಯಿಸಬಹುದು. ಮಾತು ಕಡಿಮೆ, ಕಾರ್ಯ ಹೆಚ್ಚು ಮಾಡುವತ್ತ ಗಮನ ಹರಿಸುವುದು ಉತ್ತಮ. ನಿರ್ಧರಿಸಿದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಮಹಿಳೆಯರು ತಮ್ಮನ್ನು ಅತಿಮಾನುಷ ರೀತಿಯಲ್ಲಿ ಅಂದುಕೊಳ್ಳಬಹುದು. ಬೇರೆಯವರು ನೀಡುವ ಒತ್ತಡದಿಂದ ದೂರವಿರಿ. ವ್ಯಾಪಾರದಲ್ಲಿ ಸ್ಥಿರತೆ ಕಾಣಬಹುದು, ಆದಾಯದಲ್ಲಿ ಬದಲಾವಣೆಗಳು ಸಹಜ. ಉದ್ಯೋಗದಲ್ಲಿ ಕೆಲವು ಸವಾಲುಗಳು ಎದುರಾದರೂ ತಾಳ್ಮೆಯಿಂದ ಪರಿಹರಿಸುವಿರಿ. ನಿಮ್ಮ ಮೇಲೆ ಸಹೋದ್ಯೋಗಿಗಳು ಕಿಡಿಕಾರಬಹುದು‌. ಉದ್ಯೋಗವನ್ನು ಬಿಡುವುದಾಗಿ ಬೆದರಿಸಿಯಾರು. ಮನೆಯ ಹಿರಿಯರ ಮಾರ್ಗದರ್ಶನದಲ್ಲಿ ಕುಟುಂಬ ವ್ಯವಹಾರವು ಮತ್ತೆ ಬೆಳೆಯುತ್ತದೆ. ನಿಮ್ಮ ಬುದ್ಧಿಯನ್ನು ಪ್ರದರ್ಶಿಸಬೇಡಿ. ನಿಮ್ಮ ವೈಯಕ್ತಿಕವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನೀವು ಇಂದು ಆರಂಭಿಸುವ ಕೆಲಸವು ಹೆಚ್ಚು ಸಮಯವನ್ನು ಪಡೆಯಬಹುದು.

ಕನ್ಯಾ ರಾಶಿ: ಕಛೇರಿಯ ಹೊರೆಯನ್ನು ಮೇಲಧಿಕಾರಿಗಳಿಗೆ ಹೇಳಿ ಕಡಿಮೆ ಮಾಡಿಸಿಕೊಳ್ಳುವಿರಿ. ಇಂದು ನೀವು ಕೋಪವು ಹತೋಟಯಲ್ಲಿ ಇರಲಿ. ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ವಿದೇಶದ ವ್ಯಕ್ತಿಗಳ ಸ್ನೇಹವಾಗಲಿದೆ. ಹಣಕಾಸಿನ ಲಾಭದ ಸೂಚನೆ ಇದೆ, ಆದರೆ ಖರ್ಚುಗಳ ಮೇಲೂ ನಿಯಂತ್ರಣ ಅಗತ್ಯ. ಉದ್ಯೋಗದಲ್ಲಿ ಕೆಲಸದ ಒತ್ತಡ ಜಾಸ್ತಿಯಾಗಬಹುದು. ನಿಮ್ಮ ವೈವಾಹಿಕ ಜೀವನದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಬೇಸರದ ನಿವಾರಣೆಗೆ ಒಳ್ಳೆಯ ಕೆಲಸದ ಕಡೆಗೆ ಗಮನಹರಿಸುವಿರಿ. ತುಂಬ ದಿನಗಳಿಂದ ನಡೆಯುತ್ತಿರುವ ಕುಟುಂಬದ ಕಲಹವು ನಿಮಗೆ ಬೇಸರ ತರಿಸೀತು‌. ಯಾರನ್ನಾದರೂ ವಹಿಸಿಕೊಂಡು ಹೋಗುವಿರಿ, ಅವರಿಂದ ನೋವಾಗಲಿದೆ. ನಿಮ್ಮ ಸಂಬಂಧಿಕರಿಂದ ಕೆಲವು ಉತ್ತಮ ಸಲಹೆಯನ್ನು ಪಡೆಯಬಹುದು. ಕಾನೂನು ಪ್ರಕರಣದಲ್ಲಿ ನೀವು ಗೆಲ್ಲುವ ಎಲ್ಲ ಸಾಧ್ಯತೆಗಳಿವೆ. ನಿಮ್ಮ ಉದ್ಯೋಗವನ್ನು ಅಪಹಾಸ್ಯ ಮಾಡಬಹುದು.

ತುಲಾ ರಾಶಿ: ಪ್ರೀತಿಯು ಅನಗತ್ಯ ವಿವಾದದಲ್ಲಿ ಸಿಕ್ಕಿ, ಒದ್ದಾಡಬಹುದು. ನೀವು ಒಳ್ಳೆಯ ಅಭಿವೃದ್ಧಿ ಸಾಧಿಸುತ್ತಿರುವ ನಿಮಗೆ ಪ್ರೇಮ ಜೀವನವು ಒಳ್ಳೆಯ ತಿರುವು ತೆಗೆದುಕೊಳ್ಳುತ್ತದೆ. ನೀವು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ನಿಮ್ಮ ಯೋಜನೆಗಳು ಯಶಸ್ವಿಯಾಗಿ ಮುಂದುವರೆಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಕೆಲವೊಂದು ತೊಂದರೆಗಳು ಎದುರಾಗಬಹುದು. ಆದರೆ ನೀವು ಅದರಲ್ಲಿಂದ ಹೊರಬಂದು ಗೆಲುವು ಸಾಧಿಸುವಿರಿ. ಯಾವುದೇ ಕಾರಣಕ್ಕೂ ವಿಷಾದಕ್ಕೆ ಆಸ್ಪದ ಬೇಡ. ನಿಮ್ಮ ಕಾರ್ಯಗಳಿಗೆ ಸಂಗಾತಿಯು ಸಹಕರಿಸಬಹುದು. ಸ್ವ ಉದ್ಯೋಗವನ್ನು ನಡೆಸುತ್ತಿದ್ದರೆ, ಕೆಲಸಕ್ಕೆ ಕೆಲವರನ್ನು ಸೇರಿಸಿಕೊಳ್ಳುವಿರಿ. ಸ್ನೇಹಿತರು ನಿಮ್ಮ ಜೊತೆ ಎಂದಿನಂತೆ ಇಲ್ಲವೆಂಬ ಬುದ್ಧಿಯು ತರ್ಕಿಸುವುದು. ಸಂತೋಷಕ್ಕೆ ಬೇಕಾದ ಎಲ್ಲ ಇದ್ದರೂ ಚಿಂತೆ ಇರಲಿದೆ. ಸಕಾರಾತ್ಮಕ ಆಲೋಚನೆ ಇರಲಿ. ವಿರಳ ಲಾಭದ ಅವಕಾಶಗಳ ಬಗ್ಗೆಯೂ ನೀವು ಗಮನ ಹರಿಸಬೇಕು. ಇದು ಜಾಣತನವೂ ಹೌದು. ಇಂದು ಹಣದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗುವುದು. ಇನ್ನೊಬ್ಬರ ಬಗ್ಗೆ ಆಡಿಕೊಳ್ಳುವುದು ಸರಿ ಎನಿಸದು.

ವೃಶ್ಚಿಕ ರಾಶಿ: ಮಾರುಕಟ್ಟೆಯ ತಂತ್ರಗಳು ನಿಮಗೆ ಗೊತ್ತಾಗುವುದು.‌ ವ್ಯಾವಹಾರಿಕ ಮಾತುಕತೆಗಳು ಫಲಿಸದೇ ಬೇಸರ. ಇಂದು ನೀವು ಮಾತನ್ನು ಕಡಿಮೆ ಮಾಡುವಿರಿ. ಇಲ್ಲದಿದ್ದರೆ ಚಿತ್ರಣದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ. ನಿಮ್ಮ ಸಹಾಯದಿಂದ ಸದುಪಯೋಗ ಪಡೆದು ನಿಮ್ಮನ್ನು ಬಿಟ್ಟುಹೋಗಿದವರು ಕಳಪೆ ನಡೆ ತೋರುತ್ತಾರೆ. ಕಾರ್ಯಕ್ಷೇತ್ರದಲ್ಲಿ ನೀವು ಉತ್ತಮ ಪ್ರದರ್ಶನ ನೀಡುವಿರಿ. ತಮ್ಮ ಕೆಲಸಗಳಲ್ಲಿ ಸ್ಪಷ್ಟತೆ ಮತ್ತು ನಿಷ್ಠೆ ಅಗತ್ಯ. ವೈಯಕ್ತಿಕ ಜೀವನದಲ್ಲಿ ಸಂತೋಷದ ಕ್ಷಣಗಳು ಕಾದಿರುತ್ತವೆ. ಇಲ್ಲದಿದ್ದರೆ ನಿಮ್ಮ ಸಂಬಂಧವು ಮುರಿದುಹೋಗುವುದು. ಆರ್ಥಿಕವಾಗಿ ಸಬಲರಾಗಲು ನಿಮಗೆ ಅನೇಕ ದಾರಿಗಳು ಕಾಣಿಸುವುವು. ನೀವು ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ, ಅದನ್ನು ಮರಳಿ ಪಡೆಯುವ ಸಾಧ್ಯತೆ ತುಂಬಾ ಕಡಿಮೆ. ಯಾರದೋ ಮಾತಿನಿಂದ ನಿಮ್ಮ ನೆಮ್ಮದಿಯನ್ನು ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ಇಂದು ನಿಮಗೆ ಪ್ರಶಂಸೆಯಿಂದ ಜವಾಬ್ದಾರಿಗಳೂ ಹೆಚ್ಚುವುದು.

ಧನು ರಾಶಿ: ಮುಂದಿನದಕ್ಕೆ ಹೋಗುವ ತಯಾರಿಯಲ್ಲಿ ವರ್ತಮಾನವನ್ನು ಹಾಳುಮಾಡಿಕೊಳ್ಳಬಹುದು. ಇಂದು ನೀವು ಉದ್ಯಮದ ಕಾರಣಕ್ಕೆ ಕೈಗೊಂಡ ಪ್ರಯಾಣವು ಪ್ರಯೋಜನಕಾರಿಯಾಗಲಿದೆ. ಅನಿರೀಕ್ಷಿತ ರೂಪದಲ್ಲಿ ವೈವಾಹಿಕ ಸಂಬಂಧಗಳು ಕೂಡಿ ಬರಲಿದೆ. ಆರ್ಥಿಕವಾಗಿ ಲಾಭದ ಸಾಧ್ಯತೆ ಇದೆ, ಆದರೆ ಸಂಯಮ ಅಗತ್ಯ. ಅಲಕ್ಷ್ಯದಿಂದ ನಿಗದಿತ ಕಾರ್ಯಗಳಲ್ಲಿ ವಿಳಂಬ ಸಂಭವಿಸಬಹುದು. ಭಯ ಅಥವಾ ಆತಂಕ ಕಡಿಮೆಯಾಗುತ್ತದೆ, ಶಾಂತಿಗೆ ದಾರಿ ತೆರೆಯುತ್ತದೆ. ವಾಹನ ಚಾಲನೆಗೆ ಹೆಚ್ಚಿನ ಎಚ್ಚರತೆ ಅಗತ್ಯ. ನೀವು ದೊಡ್ಡ ವ್ಯಕ್ತಿಗಳ ಭೇಟಿಯಾಗಲಿದೆ. ಒಟ್ಟಿಗೆ ಬದುಕುವ ಆನಂದವನ್ನು ಅನುಭವಿಸುವಿರಿ. ಅವಿವಾಹಿತರು ವಿವಾಹಕ್ಕೆ ಸಂಬಂಧಿಸಿದ ಶುಭ ಸುದ್ದಿಗಳನ್ನು ಪಡೆಯುವಿರಿ. ಸುಮ್ಮನಿರುವ ಶತ್ರುಗಳನ್ನು ತಟ್ಟಿ ಎಬ್ಬಿಸಬೇಡಿ. ನಿಮ್ಮ ಕಾರ್ಯವನ್ನು ಮೊದಲು ಪೂರ್ತಿ ಮಾಡಿಕೊಳ್ಳಿ. ವಿದೇಶಕ್ಕೆ ಬೇಕಾದ ತಯಾರಿಗಳನ್ನು ಮಾಡುವಿರಿ. ಸ್ನೇಹಿತನ ಮನೆಯಲ್ಲಿ ಇಂದು ಹಬ್ಬದ ವಾತಾವರಣವು ಇರಲಿದೆ. ನಂಬಿಕೆಯಿಂದ ಕೆಲಸವನ್ನು ಮಾಡುವಿರಿ.

ಮಕರ ರಾಶಿ: ಸ್ಥಿರಾಸ್ತಿಯನ್ನು ಕಳೆದುಕೊಳ್ಳುವ ಭೀತಿ. ಇಂದು ನೀವು ಜಾಗರೂಕತೆಯಿಂದ ಆಯೋಜಿಸಿ ಕಾರ್ಯವನ್ನು ಸಾಧಿಸಿ. ಸುತ್ತಲೂ ನಿಮ್ಮ ಪ್ರಿಯತಮೆಯ ಪ್ರೀತಿಯನ್ನು ಅನುಭವಿಸುತ್ತೀರಿ.‌ ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ಸಾಮಾಜಿಕ ಜೀವನ ಚಟುವಟಿಕೆಯಿಂದ ತುಂಬಿರುತ್ತದೆ. ಸ್ನೇಹಿತರೊಂದಿಗೆ ಸಮಯ ಕಳೆಯುವುದು ಸಂತೋಷ ನೀಡುತ್ತದೆ ಮತ್ತು ಹೊಸ ಸಂಪರ್ಕಗಳು ಉದಯಿಸುತ್ತವೆ. ಕೆಲಸದಲ್ಲಿ ಗಮನ ಕಡಿಮೆಯಾಗಬಹುದು. ನಿಮ್ಮ ಮಕ್ಕಳು ಪ್ರಗತಿಯತ್ತ ಸಾಗುತ್ತಿರುವರು. ನಿಮ್ಮ ಇಚ್ಛೆಗೆ ಪೂರಕವಾಗಿಲ್ಲವೆಂದು ಕೋಪಗೊಳ್ಳುವುದು ಬೇಡ. ನಿಮ್ಮ ಕೆಲಸವು ಅನೇಕರಿಗೆ ಇಷ್ಟವಾಗಲಿದೆ. ನಿಮ್ಮ ಸಹನೆಯನ್ನು ಪರೀಕ್ಷಿಸುವ ಸಂದರ್ಭಗಳು ಬರಬಹುದು. ಆಸ್ತಿಯ ಭಾಗವನ್ನು ಮಾರಾಟ ಮಾಡಬೇಕಾದೀತು. ಎಷ್ಟೋ ಕೆಲಸಗಳು ನಿಮ್ಮ ಬಳಿಯೇ ಬಾಕಿ ಇರುವುದು. ಆಲಸ್ಯದಿಂದ ಮುಖ್ಯ ಕೆಲಸವನ್ನೇ ಮರೆಯುವಿರಿ.

ಕುಂಭ ರಾಶಿ: ಅವಘಡದ ಸೂಚನೆಯನ್ನು ನಿರ್ಲಕ್ಷಿಸುವಿರಿ. ನೀವು ಸಂಗಾತಿಯ ಜೊತೆ ಸಂತೋಷವನ್ನು ಹಂಚಿಕೊಳ್ಳುವಿರಿ. ಆದರೆ ಅವರ ಸಮಸ್ಯೆಗಳ ಬಗ್ಗೆ ಮಾತನಾಡಿ ನಿಮ್ಮನ್ನು ಇನ್ನಷ್ಟು ತೊಂದರೆಗೊಳಿಸಬಹುದು. ಕಾನೂನಿನಲ್ಲಿ ನಿಮಗೆ ಸಿಗದೆಂಬ ಬೇಸರ. ತಂದೆಗೆ ಸಮಾನವಾದವರ ಬಳಿ ಹಿತೋಪದೇಶವನ್ನು ಆಲಿಸಿ. ಸೌಮ್ಯವಾಗಿ ಕಾರ್ಯನಿರ್ವಹಿಸಬೇಕು. ಹಳೆಯ ವಿಚಾರಗಳು ಭುಗಿಲೇಳುವ ಸಾಧ್ಯತೆ ಇದೆ. ಭಾವನೆಗಳ ಮೇಲೆ ನಿಯಂತ್ರಣ ಇರಿಸಿಕೊಳ್ಳುವುದು ಅಗತ್ಯ. ನಿಮ್ಮ ಯಶಸ್ಸನ್ನು ಸಹಿಸಲಾಗದೇ ನೊಂದುಕೊಳ್ಳುವರು. ದಾಂಪತ್ಯಜೀವನದಲ್ಲಿ ವಿವಾದವಾಗುವ ಸಾಧ್ಯತೆ ಇದೆ. ಅರ್ಥವಿಲ್ಲದ ಚರ್ಚೆಗಳಲ್ಲಿ ಸಮಯ ಮತ್ತು ಹಣ ಎರಡೂ ನಷ್ಟ ಮಾಡಿಕೊಳ್ಳಬೇಕಾಗಬಹುದು. ನಿಮ್ಮ ಮನಸ್ಸನ್ನು ಯೋಗ್ಯರ ಜೊತೆ ಹಂಚಿಕೊಳ್ಳಿ. ತೊಂದರೆಯಾಗುವುದು ಗೊತ್ತಿದ್ದರೂ ಬೇಕೆಂದೇ ಸಿಕ್ಕಿಹಾಕಿಕೊಳ್ಳುವಿರಿ. ವಿಷಯದಲ್ಲಿ ನೀವು ಗೊಂದಲವಿರಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ವ್ಯವಸ್ಥೆಯನ್ನು ಮಾಡುವಿರಿ.

ಮೀನ ರಾಶಿ: ನಿಸ್ಪೃಹರಾಗಿದ್ದರೆ ಇಂದಿನ ದುಃಖಕ್ಕೆ ಬಾಧೆಪಡಲಾರಿರಿ. ನಿಮ್ಮ ಒರಟುತನದಿಂದ ದಾಂಪತ್ಯದಲ್ಲಿ ಕಲಹವಾಗುವ ಸಾಧ್ಯತೆ ಇದೆ. ನೀವು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ಅಪ್ರಬುದ್ಧರ ಎದುರು ನಿಮ್ಮ ಮನೆಯ ವ್ಯವಹಾರಗಳನ್ನು ಹೇಳಬೇಡಿ. ಉದ್ಯೋಗದಲ್ಲಿ ಪ್ರಗತಿಯ ಸೂಚನೆಗಳಿವೆ. ಆದರೆ ಸಹನೆ ಮತ್ತು ಅಂತರಾಳದ ನಿರ್ವಹಣೆ ಅಗತ್ಯ. ಕುಟುಂಬದೊಂದಿಗೆ ಕಳೆಯುವ ಸಮಯದಿಂದ ಮಾನಸಿಕ ಶಾಂತಿ ಲಭಿಸುತ್ತದೆ. ಅತ್ಯಂತ ಮಹತ್ತ್ವದ ಯೋಜನೆಯು ಪ್ರಾರಂಭವಾಗುತ್ತದೆ. ಸಂಬಂಧಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ‌. ಈ ದಿನ ನಿಮ್ಮ ಆರ್ಥಿಕ ಸ್ಥಿತಿಯನ್ನು ನೋಡಿಕೊಳ್ಳಿ ಮತ್ತು ಅಪರಿಚಿತರ ಜೊತೆ ಹಣದ ವ್ಯವಹಾರ ಮಾಡಬೇಡಿ. ನಿಮ್ಮ ಆರ್ಥಿಕ ಪರಿಸ್ಥಿತಿಯು ಮೊದಲಿಗಿಂತ ಉತ್ತಮವಾಗಿದ್ದು, ಹೂಡಿಕೆಯ ಕಡೆ ಗಮನವಿರುವುದು. ನಿಮ್ಮ ಪ್ರಮುಖ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ನಿಮ್ಮ ಕೈಲಾದಷ್ಟು ಪ್ರಯತ್ನಿಸಿ.

TV9 Kannada

Leave a Reply

Your email address will not be published. Required fields are marked *