ಜುಲೈ 20, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುಷ್ಯಾ, ವಾರ : ಸೋಮ, ತಿಥಿ : ಏಕಾದಾಶೀ, ನಿತ್ಯನಕ್ಷತ್ರ : ರೋಹಿಣೀ, ಯೋಗ : ಗಂಡ ಕರಣ : ಭದ್ರ, ಸೂರ್ಯೋದಯ – 06 – 14 am, ಸೂರ್ಯಾಸ್ತ – 07 – 03 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:51 – 09:27 ಗುಳಿಕ ಕಾಲ 11:03 – 12:39, ಯಮಗಂಡ ಕಾಲ 14:15 – 15:51.
ಮೇಷ ರಾಶಿ: ಯಂತ್ರಗಳಿಂದ ಗಾಯವಾಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಪ್ರೇಮಜೀವನವು ಹಿಂದಿಗಿಂತಲೂ ಭಿನ್ನವಾಗಿ ತೋರುವುದು. ನಿಮ್ಮ ಸಂಗಾತಿಯು ನಿಮ್ಮ ಬಗ್ಗೆ ಉತ್ತಮ ಮನೋಭಾವವನ್ನು ಹೊಂದಿರುವ ಸಾಧ್ಯತೆ ಇದೆ. ವಾಹನ ಖರೀಗೆ ಉತ್ಸಾಹ ಹೆಚ್ಚಿರುವುದು. ದೀರ್ಘ ಸಮಯದಿಂದ ಅನಾರೋಗ್ಯವು ಕಾಡುತ್ತಿದ್ದರೆ, ಇಂದು ಮುಕ್ತಿಪಡೆಯಬಹುದಾಗಿದೆ. ಮನೆಯ ಉತ್ಸವದಲ್ಲಿ ಪಾಲ್ಗೊಳ್ಳಲಾಗದು. ನಿಮಗೆ ಎದುರಾದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವಿರಿ. ಅಗತ್ಯ ವಸ್ತುಗಳ ಖರೀದಿಗೆ ಧನಸಹಾಯ ಸಿಗಲಿದೆ. ಕಲಹವಾಡಬೇಕೆನ್ನುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳುವುದು ಬೇಡ. ಎಲ್ಲರನ್ನೂ ಸಮಭಾವದಿಂದ ನೋಡಿ. ಬೇಕಾದದ್ದು ಸಮಯಕ್ಕೆ ಸರಿಯಾಗಿ ಸಿಗದೇ ಚಡಪಡಿಸುವಿರಿ. ಉದ್ಯೋಗದ ಕಾರಣಕ್ಕೆ ಅನಿರೀಕ್ಷಿತ ಪ್ರಯಾಣ ಮಾಡುವಿರಿ. ಇಂದು ಸಂಗಾತಿಯು ನಿಮ್ಮ ಸಂತೋಷವನ್ನು ಹೆಚ್ಚಿಸಬಹುದು. ಅಚ್ಚರಿ ಉಡುಗೊರೆಯೊಂದು ಸಿಗುವ ಸಾಧ್ಯತೆ ಇದೆ. ವಾಹನದಲ್ಲಿ ಸಂಚಾರಕ್ಕೆ ತೊಂದರೆ ಬರಬಹುದು. ನೀವು ಅಂದುಕೊಂಡಷ್ಟು ಸರಳವಾಗಿ ಕೆಲಸಗಳು ಇಂದು ಆಗದು.
ವೃಷಭ ರಾಶಿ: ವಿಶ್ವಾಸ ಬರುವಂತೆ ಮಾತನಾಡಿ ನಿಮ್ಮ ಗಮನವನ್ನು ಬೇರೆ ಕಡೆ ಸೆಳೆಯಬಹುದು. ಇಂದು ನೀವು ಸಕಾರಾತ್ಮಕವಾಗಿ ಇರಬೇಕು ಎಂದುಕೊಂಡರೂ ಆಗದು. ನೂತನ ಗೃಹದ ಹುಡುಕಾಟ ಮಾಡಲಿದ್ದೀರಿ. ನಿಮ್ಮ ಸೌದರ್ಯದ ಬಗ್ಗೆ ನಿಮಗೆ ಹಮ್ಮು ಇರಬಹುದು. ಸಾಲ ಕೊಟ್ಟವರ ಕಾಟದಿಂದ ಹತಾಶರಾಗುವಿರಿ. ಹಳೆಯ ಪರಿಚಿತರ ಭೇಟಿಯಾಗಲಿದೆ. ಇದು ಆತ್ಮೀಯವಾಗುವ ಸಾಧ್ಯತೆ ಇದೆ. ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವ ಹೊಣೆಗಾರಿಕೆ ಬಂದೀತು. ಮಕ್ಕಳಿಂದಾಗಿ ನಿಮಗೆ ಗೌರವ ಪ್ರಾಪ್ತವಾಗುವುದು. ಮಕ್ಕಳ ಕಲಿಕೆಯ ಮೇಲೆ ದೃಷ್ಟಿ ಇಡುವುದು ಮುಖ್ಯ. ಸ್ವಾಭಿಮಾನದಿಂದ ಇರಲು ನೀವು ಇಷ್ಟಪಡುವಿರಿ. ಆರ್ಥಿಕವಾಗಿ ಲಾಭವನ್ನು ಪಡೆಯಲು ಬಯಸುವಿರಿ. ಸಂಗಾತಿಯ ಸ್ವಭಾವವನ್ನು ಸುಲಭದಿಂದ ತಿಳಿಯಲು ಸಾಧ್ಯವಾಗದು. ಅತಿಯಾದ ಬಂಧನವೂ ನಿಮಗೆ ಕಿರಿಕಿರಿ ಎನಿಸಬಹುದು. ಇಂದು ನಿಮ್ಮ ಸ್ನೇಹಿತರು ಮನೆಗೆ ಬರಬಹುದು. ವೃತ್ತಿಯಲ್ಲಿ ನಿಮ್ಮ ಮೇಲೆ ಅಭಿಮಾನವು ಹೆಚ್ಚಾಗಬಹುದು. ನಿಮ್ಮ ನಂಬಿಕೆಗೆ ಪೆಟ್ಟು ಬೀಳುವುದು.
ಮಿಥುನ ರಾಶಿ: ತಂದೆಗೆ ನಿಮ್ಮಿಂದ ಉಡುಗೊರೆ ಕೊಡುವಿರಿ. ನಿಮ್ಮ ಕಾರ್ಯಗಳು ನಿಮ್ಮನ್ನೇ ಸುತ್ತಿಕೊಂಡೀತು. ನಿಮ್ಮನ್ನು ತಾತ್ಸಾರ ಮಾಡುತ್ತಿದ್ದಾರೆ ಎಂಬ ಭಾವನೆ ಮೂಡುವ ಸಾಧ್ಯತೆ ಇದೆ. ಮನಸ್ಸಿನ ನಿಗ್ರಹವನ್ನು ಮಾಡಲು ನೀವು ಬಹಳ ಪ್ರಯತ್ನಿಸುವಿರಿ. ಸಾಲಬಾಧೆಯ ಚಿಂತೆ ಕಾಡಲಿದೆ. ಪ್ರವಾಸದಲ್ಲಿ ಭೀತಿಯಾಗಲಿದೆ. ಅಸಮತೋಲನ ಆಹಾರದಿಂದ ನಿಮಗೆ ಕಷ್ಟವಾದೀತು. ನಿಮ್ಮ ಮಾತುಗಳು ಸರಿಯಾಗಿ ಸಂವಹವಾಗದೇ ಇದ್ದೀತು. ಮನೆಯವರ ಜೊತೆ ಪ್ರಯಾಣವನ್ನು ಮಾಡುವಿರಿ. ಆಹಾರದ ಉದ್ಯಮವು ನಿಮಗೆ ಲಾಭವನ್ನು ತಂದುಕೊಡಬಹುದು. ಒಳ್ಳೆಯ ಕೆಲಸಗಳೇ ನಿಮ್ಮನ್ನು ಸುಖವಾಗಿ ಇಡುವುದು. ಆಸ್ತಿಯ ಮಾರಾಟ ಬಗ್ಗೆ ಚಿಂತೆ ಹೆಚ್ಚಾಗುವುದು. ಇಂದು ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಮಕ್ಕಳ ಮೇಲೆ ಪ್ರೀತಿ ಅಧಿಕವಾಗುವುದು. ಯಾರಾದರೂ ನಿಮಗೆ ಬೇಡದ ಸಲಹೆಯನ್ನು ಕೊಡಬಹುದು. ಎಲ್ಲದಕ್ಕೂ ಅಡ್ಡಿಯನ್ನು ಕೊಡುವುದು ಬೇಡ. ನಿಮಗೆ ಸಿಕ್ಕಷ್ಟನ್ನು ಜೋಪಾನವಾಗಿ ಇಟ್ಟುಕೊಳ್ಳುವ ಬಗ್ಗೆ ಯೋಚನೆ ಇರಲಿ.
ಕರ್ಕಾಟಕ ರಾಶಿ: ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರೂ ಸಮಾಧನ ಚಿತ್ತ ನಿಮ್ಮದಾಗಿರದು. ಇಂದು ಸ್ತ್ರೀಯರು ತಾವು ಅಂದುಕೊಂಡಿದ್ದನ್ನು ಸಾಧಿಸುವರು. ಮಾಡಲು ಕೆಲಸಗಳಿದ್ದರೂ ಮಾಡದೇ ಸಮಯವನ್ನು ಹಾಳುಮಾಡುವಿರಿ. ದೂರದ ಊರಿಗೆ ಪ್ರಯಾಣವು ಅನಿರೀಕ್ಷಿತ ವಾಗಲಿದೆ. ಕೆಲಸದಿಂದ ನಿಮಗೆ ಅತಿಯಾದ ಮಾನಸಿಕ ಹಾಗೂ ದೈಹಿಕ ಆಯಾಸವಾಗಬಹುದು. ಸ್ವಲ್ಪ ವಿಶ್ರಾಂತಿ ಪಡೆಯುವುದು ಉತ್ತಮ. ಹಲವು ದಿನಗಳ ಅನಂತರ ಓದುವ ಅಭ್ಯಾಸ ಆರಂಭವಾಗುವುದು. ಅಪರಿಚಿತ ಹೂಡಿಕೆಯಿಂದ ಮೋಸವಾಗಲಿದೆ. ಕುಟುಂಬದವರ ಮೇಲೆ ಕೋಪವನ್ನು ಮಾಡಿಕೊಳ್ಳುವಿರಿ. ನಿಮಗೆ ಪ್ರಿಯವಾದದ್ದನ್ನು ಸ್ನೇಹಿತರು ತಂದುಕೊಟ್ಟಾರು. ಬುದ್ಧಿವಂತಿಕೆಯಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ಅನ್ನಿಸದ್ದನ್ನು ಹೇಳುವ ಹಾಗೆ ಹೇಳಿ. ಅದನ್ನು ಸಂಗಾತಿಯ ಜೊತೆಯೂ ಹಂಚಿಕೊಳ್ಳಿ. ಉನ್ನತ ಹುದ್ದೆಗೆ ಏರುವ ಅವಕಾಶ ಬರಲಿದ್ದು ಅದರಲ್ಲಿ ನಿಮಗೆ ಆಸಕ್ತಿ ಕಡಿಮೆಯಾಗುವುದು. ಹಳೆಯ ನೋವಿನ ಬಗ್ಗೆ ನಿಮಗೆ ಭಯವಿರುವುದು.
ಸಿಂಹ ರಾಶಿ: ನಿಮ್ಮ ಯಾರಾದರೂ ಮಾತನಾಡಿಕೊಳ್ಳುತ್ತಿರಬೇಕು ಎಂಬ ಬೇಡದ ಆಸೆ ಇರುವುದು. ಇಂದು ನೀವು ಮಾನಸಿಕ ಮತ್ತು ದೈಹಿಕವಾಗಿ ಸಬಲರು. ಉಲ್ಲಾಸ ಮತ್ತು ಸಂತೋಷಗಳು ಎಂದಿಗಿಂತ ಇಂದು ಹೆಚ್ಚು ಇರಲಿದೆ. ಅಪರೂಪದ ಆಹಾರವನ್ನು ಅತಿಯಾಗಿ ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ಸಂಶೋಧನೆಯನ್ನು ಮಾಡುತ್ತಿದ್ದರೆ ನಿಮಗೆ ಹೆಚ್ಚಿನ ಬೆಂಬಲ, ಪ್ರೋತ್ಸಾಹಗಳು ಸಿಗಬಹುದು. ನೀವಾಡಿದ ಅಪಶಬ್ದದಿಂದ ಎಲ್ಲರಿಗೂ ಬಹಳ ಕೋಪ ಬರಲಿದೆ. ಎಲ್ಲವೂ ಇದ್ದರೂ ಏನೂ ಇಲ್ಲವೆಂಬ ಕೊರಗು ಇರುವುದು. ಇಷ್ಟದವರು ಸಿಕ್ಕಾಗ ನಿಮಗೆ ಮಾತನಾಡಲು ಸಂತೋಷವನ್ನು ಹೇಳಿ ಕೊಳ್ಳಲು ಕಷ್ಟಪಡುವಿರಿ. ಸಮಸ್ಯೆಗಳನ್ನು ಬೇಗ ಪರಿಹರಿಸಿಕೊಳ್ಳಲು ಆಲೋಚಿಸಿ. ಸಂಕೀರ್ಣ ಮಾಡಿಕೊಳ್ಳುವುದು ಬೇಡ. ಸೊಂಟ ಭಾಗದಲ್ಲಿ ನೋವುಗಳು ಕಾಣಿಕೊಂಡೀತು. ನಿಮ್ಮ ವಿವೇಕವನ್ನು ಬಳಸಿ. ದೂರದ ಬಂಧುಗಳ ಆಗಮನವು ಆಗಲಿದೆ. ದೌರ್ಬಲ್ಯವನ್ನು ಮೆಟ್ಟಿ ಸಾಧಿಸಬೇಕಾದುದು ಇದೆ. ನಿಮ್ಮ ಆರ್ಥಿಕ ದೌರ್ಬಲ್ಯವನ್ನು ಆಡುಕೊಳ್ಳಬಹುದು.
ಕನ್ಯಾ ರಾಶಿ: ಏನೂ ಕೆಲಸವಿಲ್ಲಸಿದ್ದರೂ ಬಂಧುಗಳ ಜೊತೆ ಸುತ್ತಾಟ ಮಾಡುವಿರಿ. ನಿಮ್ಮ ಅಪರೂಪದ ವಸ್ತುವನ್ನು ಕಳೆದುಕೊಳ್ಳುವಿರಿ. ಹೆಚ್ಚು ಮಾತನಾಡಿ ಕಿರಿಕಿರಿ ಹುಟ್ಟಿಸಬೇಡಿ. ಸಹನೆಯನ್ನೇ ನಿಮ್ಮ ಆಯುಧವನ್ನಾಗಿ ಮಾಡಿಕೊಳ್ಳಿ. ಅವಿವಾಹಿತರಿಗೆ ಕೊರಗು ದೂರಾಗುವುದು. ದ್ವೇಷವನ್ನು ಇಟ್ಟುಕೊಂಡು ನಿಮ್ಮ ಮನಸ್ಸನ್ನು ಪ್ರಕ್ಷುಬ್ಧಗೊಳಿಸಿಕೊಳ್ಳುವುದು ಬೇಡ. ನಿಮ್ಮ ಅಸೂಯೆ ಕೆಟ್ಟ ಕೆಲಸವನ್ನು ಮಾಡಿಸುವುದು. ವೃತ್ತಿಯನ್ನು ಆನಂದಿಸಿ, ಖುಷಿಯಿಂದ ಕೆಲಸಮಾಡಿ. ಕೆಲಸವೂ ಚೆನ್ನಾಗಿ ಆಗುವುದು, ಹಾಗಾಗಿ ಉತ್ಸಾಹವೂ ಇದ್ದೀತು. ಭವಿಷ್ಯದ ಬಗ್ಗೆ ಅತಿಯಾದ ಚಿಂತೆಯ ಅವಶ್ಯಕತೆ ಇಲ್ಲ. ಇಲ್ಲವಾದರೆ ಅಪವಾದಗಳೂ ಬರಬಹುದು. ಹೊಸ ವಸ್ತ್ರಗಳನ್ನು ಧರಿಸುವ ಮನಸ್ಸಾಗಲಿದೆ. ನಿಮ್ಮ ವರ್ತನೆಗಳನ್ನು ನಿಮ್ಮ ಸುತ್ತಲಿನವರು ಗಮನಿಸುವರು. ನಿಮ್ಮದೇ ಆದ ಚಿಂತನೆಯಿಂದ ಕಾರ್ಯವನ್ನು ಮಾಡುವಿರಿ. ಒಂದೇ ರೀತಿಯಲ್ಲಿ ಜೀವನವನ್ನು ಸಾಗಿಸಲು ಕಷ್ಟವಾದೀತು. ಪರೋಪಕಾರದಿಂದ ಮನಸ್ಸು ಮುರಿಯಬಹುದು.
ತುಲಾ ರಾಶಿ: ಯೋಗ್ಯ ಸ್ಥಾನಕ್ಕೆ ನಿಮ್ಮನ್ನು ಆಯ್ಕೆ ಮಾಡುವ ನಿಮಗೆ ಸಾಧ್ಯತೆ ಕಾಣಿಸುವುದು. ನೀವು ಅನ್ಯರ ಯಶಸ್ಸಿಗೆ ನೀವು ಅಸೂಯೆ ಪಡುವ ಅವಶ್ಯಕತೆ ಇಲ್ಲ. ನಿಮಗೆ ಅಪಮಾನ ಮಾಡಲು ಪಿತೂರಿಗಳೂ ಆಗಬಹುದು. ನೀವು ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನವಿಡಿ. ನಿಮ್ಮ ಉತ್ತಮವಾದ ಹವ್ಯಾಸಕ್ಕೆ ಗೌರವ ಸಿಗಬಹುದು. ಅನವರತ ಕೆಲಸದಿಂದ ನಿಮಗೆ ಸ್ವಲ್ಪ ವಿಶ್ರಾಂತಿಯು ಇಂದು ಸಿಗಲಿದೆ. ಹೊಸ ಉದ್ಯೋಗದ ಸುದ್ದಿ ನಿಮಗೆ ನೆಮ್ಮದಿ ಕೊಡುವುದು. ನೂತನ ಗೃಹ ನಿರ್ಮಾಣದ ಬಗ್ಗೆ ಯೋಜನೆಯನ್ನು ಕುಟುಂಬದ ಜೊತೆ ಕುಳಿತು ರೂಪಿಸುವಿರಿ. ಆಸ್ತಿಯ ವಿಚಾರವಾಗಿ ಮನೆಯಲ್ಲಿ ಮಾತುಕತೆಗಳು ನಡೆಯಬಹುದು. ಸಮಯಕ್ಕೆ ಸರಿಯಾಗಿ ಎಲ್ಲವೂ ನಡೆಯಬೇಕು ಎಂಬುದು ನಿಮ್ಮ ದೃಢವಾದ ಸಂಕಲ್ಪ. ವಹಿಸಿಕೊಂಡ ಕಾರ್ಯವನ್ನು ಸಮಯಕ್ಕೆ ಸರಿಯಾಗಿ ಮಾಡಿ ಕೊಡುವಿರಿ. ಯೋಗ್ಯವಾದ ಸ್ಥಾನಮಾನಗಳನ್ನು ಪಡೆಯಲು ಹಾತೊರೆಯುವಿರಿ. ಯಾರನ್ನೋ ಹೆದರಿಸಿ ಕೆಲಸ ಮಾಡಿಸಿಕೊಳ್ಳುವ ವಿಚಾರಕ್ಕೆ ಹೋಗುವುದು ಬೇಡ. ಆಗದಿದ್ದರೆ ಅದನ್ನು ಬಿಟ್ಟುಬಿಡಿ. ಸಮಯ ಪಾಲನೆಯಿಂದ ನಿಮ್ಮ ಕೆಲಸಗಳು ಸರಿಯಾಗುವುದು.
ವೃಶ್ಚಿಕ ರಾಶಿ: ಮಕ್ಕಳಿಗಾಗಿ ಇಟ್ಟ ಹಣವನ್ನು ಸ್ವಂತ ಕೆಲಸಕ್ಕೆ ಖರ್ಚು ಮಾಡುವಿರಿ. ಇಂದು ನಿಮ್ಮ ಖಾಲಿ ಮನಸ್ಸಿಗೆ ಸಲ್ಲದ ಆಲೋಚನೆಗಳು ಬರಬಹುದು. ಸುಮ್ಮನೇ ಕುಳಿತುಕೊಳ್ಳುವುದು ಬೇಡ. ಅಸಾಧ್ಯವನ್ನು ಸಾಧಿಸುವ ಛಲವನ್ನು ಬಿಟ್ಟು ಸರಿಯಾದುದರ ಕಡೆಗೆ ಹೋಗುವುದು ಒಳ್ಳೆಯದು. ಮಕ್ಕಳು ನಿಮ್ಮ ಜೊತೆ ಸುತ್ತಾಡಲು ಬರುವರು. ಹೂಡಿಕೆಯ ನೆಪದಲ್ಲಿ ಒಂದಿಷ್ಟು ನಷ್ಟವು ನಿಮಗೆ ಗೊತ್ತಾಗದಂತೆ ಖಾಲಿಯಾಗುವುದು. ಸಮಯ ಹಾಗೂ ಹಣ ಎರಡನ್ನೂ ಜೋಪಾನ ಮಾಡಿಕೊಳ್ಳಿ. ನಿಮ್ಮನ್ನು ಯಾರಾದರೂ ಆಕರ್ಷಿಸಿಯಾರು. ಸಹೋದರಿಯರು ನಿಮಗೆ ಧನಸಹಾಯ ಮಾಡುವರು. ಸಮಯೋಚಿತ ಉತ್ತರಗಳು ನಿಮಗೆ ಧನಾತ್ಮಕ ಅಂಕಗಳನ್ನು ತಂದುಕೊಡುವುದು. ಎಲ್ಲರದ ವ್ಯಕ್ತಿತ್ವವಾದರೂ ಸಾಮನ್ಯರಂತೆ ವರ್ತಿಸುವಿರಿ. ಮಹಿಳೆಯ ಕಾರಣದಿಂದ ನಿಮಗೆ ಧನನಷ್ಟವು ಆಗಬಹುದು. ನಿಮ್ಮ ಭೂಮಿಯು ನಿಮಗೆ ಸಿಗಲಿದೆ. ನಿಮಗೆ ಸಪ್ಪೆ ಎನಿಸಿದ ವಿಷಯವನ್ನು ಮುಂದುವರಿಸುವುದಿಲ್ಲ. ಉದ್ಯೋಗದ ಒತ್ತಡದಿಂದ ನಿಮಗೆ ಅನಾರೋಗ್ಯದಿಂದ ಬಳಲುವಿರಿ.
ಧನು ರಾಶಿ: ಒಳ್ಳೆಯ ಕೆಲಸಗಳಿಗೆ ಸಮಯ ನೋಡುತ್ತ ಇರುವುದು. ಕೂಡಲೇ ಮಾಡುವುದನ್ನು ಮಾಡಿ ಮುಗಿಸಿ. ನಿಮಗೆ ಮನೆಯವರ ಸಹಕಾರದಿಂದ ಎಲ್ಲ ಕಾರ್ಯವನ್ನು ಮಾಡುವಿರಿ. ನಿದ್ರಾಹೀನತೆಯಿಂದ ಸ್ವಲ್ಪ ಆಲಸ್ಯವೂ ಇರಲಿದೆ. ಇಷ್ಟವಾದರ ಮಾತುಗಳು ನಿಮಗೆ ಬೇರೆ ರೀತಿಯಲ್ಲಿ ಅನ್ನಿಸಬಹುದು. ಮಕ್ಕಳ ವರ್ತನೆಯು ಊಹಿಸಲಾಗಸಷ್ಟು ಬದಲಾವಣೆಯಾಗಲಿದ್ದು, ಬೇಸರವಾಗಲಿದೆ. ಯಾರನ್ನೂ ಅಳೆಯುವ ಕೆಲಸ ಮಾಡುವುದು ಬೇಡ. ದೂರದ ಊರಿಬನಲ್ಲಿ ಉದ್ಯೋಗ ಮಾಡುವುದು ನಿಮಗೆ ಇಷ್ಟವಾಗದು. ನಿಮಗೆ ಅವರ ಅಳತೆಯ ಅಂದಾಜೂ ಸಿಗದು. ಭವಿಷ್ಯವು ನಿಮಗೆ ಕತ್ತಲೆಯಂತೆ ಕಂಡೀತು. ಸಂಗಾತಿಯಿಂದ ನಿರಾಸೆಯು ಉಂಟಾಗಬಹುದು. ಅನಗತ್ಯ ಹರಟೆಯನ್ನು ಬಿಡಿ. ಯಾರದೋ ಕಾರಣಕ್ಕೆ ನೀವು ಓಡಾಟ ಮಾಡಬೇಕಾಗುವುದು. ಅಂದುಕೊಂಡ ಕೆಲಸವನ್ನು ಪೂರೈಸಲು ನಿಮಗೆ ಸಮಸ್ಯೆಯು ಬರಬಹುದು. ನಿಮ್ಮ ಬಂಡವಾಳಕ್ಕೆ ತಕ್ಕ ಮನೆಯು ಸಿಗಲಿದೆ.
ಮಕರ ರಾಶಿ: ಸೇವೆಯಿಂದ ನಿವೃತ್ತಿ ಹೊಂದುವ ಸಂತಸ ನಿಮಲ್ಲಿ ಕಾಣಿಸುವುದು. ಇಂದು ನೀವು ಯಾವುದೇ ಒತ್ತಡಕ್ಕೆ ಸಿಲುಕದೇ ಆಪ್ತರ ಜೊತೆ ಆರಾಮಾಗಿ ಮಾತನಾಡಿ ದಿನವನ್ನು ಕಳೆಯುವಿರಿ. ಸ್ನೇಹಿತರ ಜೊತೆ ದಿನವನ್ನು ಕಳೆಯಲು ಹೊರಗೆ ಸುತ್ತಾಡಲು ಹೋಗುವಿರಿ. ಅಪರಿಚಿತರು ನಿಮಗೆ ಸಹಾಯವನ್ನು ಮಾಡುವರು. ಹಣವನ್ನು ಅಧಿಕವಾಗಿ ವ್ಯಯಮಾಡಬೇಕಾಗಬಹುದು. ಗಳಿಕೆಯ ಬಹುಪಾಲು ನಿಮ್ಮ ಕೈಗೆ ಕೂಡಲೇ ಸಿಗದು. ವಿದ್ಯುತ್ ಉಪಕರಣಗಳ ಮಾರಾಟಗಾರರಿಗೆ ಹೆಚ್ಚು ಲಾಭವಿರಲಿದೆ. ಸ್ವಂತ ಉದ್ಯಮವನ್ನು ನಡೆಸಲು ಸ್ನೇಹಿತರ ಜೊತೆ ಚರ್ಚಿಸಬಹುದು. ಅವಿವಾಹಿತರು ವಿವಾಹದ ಉತ್ಸಾಹದಲ್ಲಿ ಇರುವರು. ಪಾಲುದಾರಿಕೆಯಲ್ಲಿ ಬರುವ ಮನಸ್ತಾಪವನ್ನು ಮುಂದುವರಿಸದೇ ಅಲ್ಲಿಯೇ ಮೊಟಕುಗೊಳಿಸಿ. ಇಂದು ನಿಮಗೆ ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ಕೊಡಲಾರಿರಿ. ಧನವು ನಷ್ಟವಾದ ವಿಚಾರಗಳನ್ನು ಯಾರ ಬಳಿಯೂ ಹೇಳಲಾರಿರಿ. ತಂದೆಯ ಜೊತೆ ವಾಗ್ವಾದ ಮಾಡಿಕೊಳ್ಳುವಿರಿ. ವ್ಯವಹಾರದಲ್ಲಿ ಪಾರದರ್ಶಕತೆಯನ್ನು ತೋರಿಸಬೇಕಾಗುವುದು.
ಕುಂಭ ರಾಶಿ: ನಿಮ್ಮ ಸ್ವಾಮಿತ್ವನ್ನು ಉಳಿಸಿಕೊಳ್ಳಲು ಎಲ್ಲರ ಜೊತೆ ಚರ್ಚೋಪಚರ್ಚೆ ಮಾಡಬೇಕಾಗುವುದು. ಇಂದು ನೀವಿರುವ ವಾತಾವರಣವು ನಿಮಗೆ ಹಾಯೆನಿಸಬಹುದು. ಕೆಟ್ಟ ಕನಸುಗಳು ಬೀಳಬಹುದು. ಬೆಳಗ್ಗೆ ದೇವರಿಗೆ ದೀಪ ಬೆಳಗಿ. ಮೇಲಧಿಕಾರಿಗಳ ಮಾತು ನಿಮ್ಮ ಉತ್ಸಾಹವನ್ನು ತಗ್ಗಿಸೀತು. ಮಕ್ಕಳಿಗಾಗಿ ನೀವು ಸಂಪತ್ತನ್ನು ಕೂಡಿಡುವಿರಿ. ಇಬ್ಬರ ಮಧ್ಯದಲ್ಲಿ ನೀವು ಸಿಕ್ಕಿಬೀಳಬಹುದು. ದಾಂಪತ್ಯದಲ್ಲಿ ಒಡಕು ಬರುವ ಸಾಧ್ಯತೆ ಇದೆ. ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ನಿಮ್ಮವರಿಗೆ ತಿಳಿಸಲು ಪ್ರಯತ್ನಿಸಿ. ಆದುದರ ಬಗ್ಗೆ ಅತಿಯಾದ ಚಿಂತೆ ಬೇಡ. ಆಗುವುದನ್ನು ಸರಿಯಾಗಿ ಮಾಡಿಕೊಳ್ಳಲು ಆಲೋಚಿಸಿ. ಇಂದಿನ ದುಡಿಮೆಯು ಕಷ್ಟವೆನಿಸಬಹುದು. ನೋವಿಗೆ ಸ್ಪಂದಿಸುವ ಸ್ವಭಾವವು ನಿಮಗೆ ಇಷ್ಟವಾಗುವುದು. ಬಂಧುಗಳ ಮಾತು ನಿಮಗೆ ಕಿರಿಕಿರಿ ತರಿಸಬಹುದು. ನಿಮ್ಮ ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುವಿರಿ. ದಿನದ ಕೊನೆಗೆ ಯಾರಿಂದಲಾದರೂ ಶುಭ ವಾರ್ತೆ ಬರಲಿದೆ. ಕುಟುಂಬದ ಜವಾಬ್ದಾರಿಯು ನಿಮಗೆ ಸಿಗಬಹುದು.
ಮೀನ ರಾಶಿ: ಬೇಡದ ಕೆಲಸಕ್ಕೆ ಕೈ ಹಾಕಿ ಸುಮ್ಮನೇ ಸಿಕ್ಕಿಬೀಳುಬಿರಿ. ನಿಮ್ಮ ಕೆಲವು ವಿಚಾರದಲ್ಲಿ ತಿಳಿವಳಿಕೆ ಬಂದು ಅದನ್ನು ವಿವೇಕದಿಂದ ನೋಡುವಿರಿ. ಇಂದು ನಡೆಯುವ ನಕಾರಾತ್ಮಕ ವಾರ್ತೆಯನ್ನು ಲೆಕ್ಕಿಸದೇ ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ಮಾಡುವ ಕೆಲಸದಲ್ಲಿ ಉತ್ಸಾಹವು ಅಧಿಕವಾಗಿರಲಿದೆ. ಭೂಮಿಯ ವ್ಯವಹಾರದಲ್ಲಿ ಪಾಲುದಾರಿಕೆ ಇರಲಿದೆ. ಇರುವ ಗೌರವವನ್ನು ಉಳಿಸಿಕೊಳ್ಳಿ. ಅಪೂರ್ಣವಾದ ವ್ಯವಹಾರಗಳನ್ನು ಶೀಘ್ರವಾಗಿ ಮುಗಿಸಿಕೊಳ್ಳುವಿರಿ. ಎಲ್ಲವನ್ನೂ ಗೊತ್ತಿದ್ದರೂ ಬೇಕೆಂದೇ ವಾದದಲ್ಲಿ ಸೋಲುವಿರಿ. ಸಾಲದ ಮೊತ್ತವನ್ನು ಆದಷ್ಟು ಬೇಗ ತೀರಿಸುವ ಚಿಂತನೆ ಮಾಡುವಿರಿ. ಹಣಕಾಸಿನ ವಿಷಯವಾಗಿ ಮನೆಯಲ್ಲಿ ಕಲಹವೂ ಆಗಬಹುದು. ಬಂಧುಗಳ ಕಾರಣಕ್ಕೆ ಖರ್ಚು ಮಾಡುವಿರಿ. ಬಂದವರು ನಿಮಗೆ ಶ್ರೇಯಸ್ಸನ್ನು ಹಾರೈಸುವರು. ಇಂದು ಕುಟುಂಬ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯಬಹುದು. ಆಕಸ್ಮಿಕ ಧನಪ್ರಾಪ್ತಿಯಿಂದ ಸಂತೋಷವು ಇರುವುದು. ಯಾವುದಾದರೂ ಉಪಕರಣದಿಂದ ನಿಮಗೆ ಲಾಭವಾಗಬಹುದು.