Horoscope Today 23 June: ಈ ರಾಶಿಯವರು ಬೇಡದ ವಿಚಾರಕ್ಕೆ ಮಧ್ಯ ಪ್ರವೇಶಿಸುವರು.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಪ್ರೀತಿ, ಕರಣ: ತೈತಿಲ, ಸೂರ್ಯೋದಯ – 06 : 06 am, ಸೂರ್ಯಾಸ್ತ – 07 : 03 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 07:44 – 09:21, ಯಮಘಂಡ ಕಾಲ 10:58 – 12:35, ಗುಳಿಕ ಕಾಲ 14:12 – 15:49

ಮೇಷ ರಾಶಿ: ಯಾರನ್ನೂ ಕೆಣಕುವ ಕಾರ್ಯಕ್ಕೆ ಹೋಗಬೇಡಿ. ಕೊಟ್ಟ ವಸ್ತುವನ್ನು ಇಟ್ಟುಕೊಳ್ಳಲು ಆಗದು. ಸಾಮಾಜಿಕವಾಗಿ ಮನ್ನಣೆ ಸಿಗುವ ದಿನ. ಯೋಚಿಸದೆ ಇತರರ ಮಾತುಗಳನ್ನು ನಂಬುವುದು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಕೆಲಸ ಮುಗಿಸಲು ಸಾಕಷ್ಟು ಶ್ರಮ ಬೇಕಾಗುತ್ತದೆ. ವ್ಯವಹಾರದಲ್ಲಿ ನಿಮಗೆ ಹೊಸ ಕೆಲಸ ಮತ್ತು ಜವಾಬ್ದಾರಿಗಳು ಸಿಗುತ್ತವೆ. ನಕಾರಾತ್ಮಕ ನಿಮ್ಮ ವಿಷಯಗಳು ವೇಗವನ್ನು ಪಡೆಯುವುದು. ನಿಮ್ಮ ಸ್ವಂತ ವಿವೇಚನೆಯಿಂದ ಕೆಲವೊಂದು ಕಲಹಗಳನ್ನು ನಿವಾರಣೆ ಮಾಡಿಕೊಳ್ಳುವಿರಿ. ಕಿವಿಯ ತೊಂದರೆಯಿಂದ ಧನ ನಷ್ಟ. ಭೂ ವ್ಯವಹಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ಸಂಗಾತಿಯು ನಿಮಗೆ ಅನುಕೂಲಳಾಗಿರುವಳು. ಎಂತಹ ಚತುರನೂ ಮುಗ್ಗರಿಸಿ ಬೀಳಬೇಕಾಗುವುದು. ಮನಸ್ಸು ದೇಹವೆರಡೂ ಭಾರವಾಗಲಿದೆ. ಹೂಡಿಕೆಯ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಮುಂದುವರಿಯಿರಿ. ಸಾಮಾಜಿಕ ಮುಖಂಡರು ಸಂಘಟನೆಯಲ್ಲಿ ತೊಡಗುವರು. ತಂತ್ರಜ್ಞಾನವನ್ನು ನೀವು ಅತಿಯಾಗಿ ಬಳಸುವಿರಿ.

ವೃಷಭ ರಾಶಿ: ಪ್ರೀತಿಯಿಂದ ಎಲ್ಲವೂ ಸಾಧ್ಯವಿದೆ ಎಂಬ ಅರಿವು ಗೊತ್ತಾಗಲಿದೆ. ಇಂದು ನೀವು ಸಾಲಗಾರರ ಕಾಟದಿಂದ ನೀವು ಮುಕ್ತರಾಗುವಿರಿ. ಅನಿರೀಕ್ಷಿತ ಧನಲಾಭವು ನಿಮ್ಮ ನಿಶ್ಚಿಂತೆಗೆ ಕಾರಣವಾಗಲಿದೆ. ಹೂಡಿಕೆಗೆ ಗಮನ ಹೆಚ್ಚಿರಲಿ. ಶಾಂತತೆ ಮತ್ತು ಬುದ್ಧಿವಂತಿಕೆಯಿಂದ ಮುಂದುವರಿಯಿರಿ. ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬೇಡಿ ಅಥವಾ ಮಧ್ಯ ಪ್ರವೇಶಿಸಬೇಡಿ. ಅಪರಿಚಿತರ ಒಡನಾಟ ಹೆಚ್ಚಾಗಲಿದೆ. ಉದ್ಯೋಗದ ಸ್ಥಾನದಲ್ಲಿ ಒತ್ತಡವು ಹೆಚ್ಚಾಗಲಿ. ಮಾಧ್ಯಮಗಳಲ್ಲಿ ಕೆಲಸ ಮಾಡುವವರು ಬಹಳ ಒತ್ತಡದಲ್ಲಿ ಇರುವರು. ಎಲ್ಲದಕ್ಕೂ ಗ್ರಹ ಚಾರ ಎಂದು ಮೂದಲಿಸುವುದು ಬೇಡ. ನಿಮ್ಮ ಪ್ರಯತ್ನದಲ್ಲಿ ಲೋಪವು ಬಾರದಂತೆ ನಿರ್ವಹಿಸಿ. ಧಾವಂತದಲ್ಲಿ ಮೈ ಮರೆವು ಸಹಜ. ಎಚ್ಚರಿಕೆಯಲ್ಲಿ ನಿಮ್ಮ ನಡೆ ಇರಲಿ. ಸಣ್ಣ ವಿಚಾರಕ್ಕೆ ಪತ್ನಿಯ ಜೊತೆ ವಾಗ್ವಾದ ಬೇಡ. ಏನೇ ಹೇಳಿದರೂ ಕೇಳಿಸಿಕೊಂಡು ಬನ್ನಿ. ಕುಟುಂಬವು ನಿಮಗೆ ಕೊಡುವ ಕಿಮ್ಮತ್ತು ಕಡಿಮೆ ಆಗಿದೆ ಎಂದು ಅನ್ನಿಸುವುದು. ಸಂಗಾತಿಯಿಂದ ಕಿರಿಕಿರಿಯ ಸಾಧ್ಯತೆ ಇದೆ.

ಮಿಥುನ ರಾಶಿ: ದೃಷ್ಟಿ ಶುದ್ಧವಾದರೆ ನೋಟವೂ ಹಾಗೇ ಇರುವುದು. ನಿಮ್ಮಲ್ಲಿರವ ದುರ್ಗುಣಗಳು ನಿಮಗೆ ಅರ್ಥವಾಗಿ ಅವುಗಳನ್ನು ಸರಿಮಾಡಿಕೊಳ್ಳುವಿರಿ. ಸಾಲ ಕೊಟ್ಟವರು ಕಟುವಾಗಿ ಮಾತನಾಡಬಹುದು. ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಇದು ಒಳ್ಳೆಯ ಸಮಯ. ನಿಮ್ಮ ಹಾವಭಾವದ ಮೇಲೆ ಗಮನವಿರಲಿ. ಆದ್ದರಿಂದ, ಈ ಕೆಲಸದಲ್ಲಿ ನಿಮ್ಮ ಸಮಯವನ್ನು ಹೂಡಿಕೆ ಮಾಡಿ. ನಿಮ್ಮ ಪ್ರಮುಖ ಕೆಲಸವು ಬುದ್ಧಿವಂತ ಜನರ ಸಲಹೆಯೊಂದಿಗೆ ಪೂರ್ಣಗೊಳ್ಳುತ್ತದೆ. ಕರ್ತವ್ಯವವನ್ನು ಬಿಡದೇ ಮಾಡಿ. ಮಕ್ಕಳು ದುರಭ್ಯಾಸಗಳಿಗೆ ಬಲಿಯಾಗಬಹುದು. ನಿಮಗೆ ಬಂಧುಗಳಿಂದ‌ ಹೆಚ್ಚಿನ ಗೌರವ ದೊರೆಯುವ ಸಾಧ್ಯತೆ ಇದೆ. ರಾಜಕೀಯ ವ್ಯಕ್ತಿಗಳ ಸಹವಾಸ ಮಾಡುವಿರಿ. ಗಳಿಸುವುದನ್ನು ಪ್ರಾಮಾಣಿಕವಾಗಿ ಗಳಿಸಿ. ಆಹಾರದಿಂದ ಆರೋಗ್ಯವು ಕೆಡಲಿದೆ. ವೇತನವು ಹೆಚ್ಚಾಗುವ ಸಾಧ್ಯತೆ ಇದೆ. ತಾಯಿಗೆ ಅಚ್ಚರಿಯ ಉಡುಗೊರೆಯನ್ನು ಕೊಡುವಿರಿ.

ಕರ್ಕಾಟಕ ರಾಶಿ: ಹಿರಿಮೆಯಿಂದ ಮುಜುಗರವಾಗಲಿದೆ. ಇಂದು ಹೆಚ್ವಿನ ಸಮಯವನ್ನು ಆಟ, ಓಟಗಳಲ್ಲಿ ಕಳೆಯುವಿರಿ. ಮಕ್ಕಳು ನಿಮ್ಮನ್ನು ಬಹಳ ಹಚ್ಚಿಕೊಳ್ಳುತ್ತಾರೆ. ಆತುರದ ನಿರ್ಧಾರಕ್ಕೆ ಹೋಗಬೇಡಿ. ಸಮಯಕ್ಕಾಗಿ ಕಾಯಿರಿ. ಹೊಸದಾಗಿ ಏನಾದರೂ ಕಲಿಯುವ ಅವಕಾಶ ಸಿಗಬಹುದು. ಕೆಲಸದ ಸ್ಥಳದಲ್ಲಿ ಹಳೆ ತಪ್ಪುಗಳಿಗಾಗಿ ಜನ ತಿರಸ್ಕರಿಸಬಹುದು, ತಾಳ್ಮೆಯಿಂದ ಉತ್ತರ ಕೊಡಿ. ಹಣದ ವ್ಯವಹಾರಗಳಲ್ಲಿ ನಿಮಗೆ ಆತ್ಮವಿಶ್ವಾಸ ಬೇಕಾಗಿರುತ್ತದೆ. ಇಂದು ದೈಹಿಕವಾಗಿ ಹಾಗೂ ಮಾನಸಿಕವಾಗಿ ನೋವನ್ನು ಅನುಭವಿಸುವಿರಿ. ನಿಮ್ಮ ಪ್ರಯಾಣಕ್ಕೆ ಸ್ನೇಹಿತರು ಜೊತೆಯಾಗುವರು. ಕೃಷಿಕರು ಬೆಳೆಗಳಿಗೆ ಉತ್ತಮ ಬೆಲೆ ದೊರೆತ ಕಾರಣ ಸಂತೋಷಪಡಬಹುದು. ಇಂದು ನೆಮ್ಮದಿಯಿಂದ ಮನೆಯಲ್ಲಿಯೇ ಇದ್ದು ಕಾಲಕಳೆಯುವಿರಿ. ನಿರಂತರ ಸುತ್ತಾಟದಿಂದ ಬೇಸತ್ತ ನಿಮಗೆ ಇಂದು ಹಾಯೆನಿಸಬಹುದು. ನಿಮ್ಮವರ ಕಷ್ಟಗಳ ಮುಂದೆ ನಿಮ್ಮ ಕಷ್ಟ ಅಲದಪವೆನಿಸಬಹುದು. ನಿಮ್ಮ ಗುಪ್ತ ಆಲೋಚನೆಗಳು ಬಯಲಾಗಬಹುದು.

ಸಿಂಹ ರಾಶಿ: ಅದೃಷ್ಟವನ್ನು ಪರೀಕ್ಷಿಸುವಷ್ಟು ಉದ್ಧಟತನ ಬೇಡ. ನೀವು ಅಪವಾದಗಳನ್ನು ಕೇಳುವ ಸ್ಥಿತಿ ಬರಬಹುದು. ಸಾಲವನ್ನು ಕೊಟ್ಟವರು ಇಂದು ಪೀಡಿಸಲಿದ್ದಾರೆ. ವ್ಯವಸ್ಥಾಪಕರಾಗಿದ್ದರೆ ನಿಮ್ಮ ಕೆಲಸವು ಮೇಲಧಿಕಾರಿಗಳಿಗೆ ಸಂತಸ ನೀಡುವುದು. ಯೋಜನೆಯನ್ನು ತಕ್ಷಣ ಆರಂಭಿಸುವ ಬದಲು ಸವಾಲುಗಳ ಬಗ್ಗೆ ಮನದಟ್ಟಾಗಿ ಯೋಚಿಸಿ. ಕರುಳಿನ ಕೂಗು ಹಣಕಾಸಿನಲ್ಲಿ ಚಿಕ್ಕದಾದ ಲಾಭ ಕಂಡುಬರುತ್ತದೆ. ಮನೆಯವರು ನಿಮ್ಮ ಬದಲಾವಣೆಗಳನ್ನು ಗುರುತಿಸಿ ಮೆಚ್ಚಬಹುದು. ದ್ವೇಷವನ್ನು ಮುಂದುವರಿಸಿ ಮನಸ್ಸು ಕೆಡುವುದು. ಸ್ನೇಹಿತರಿಂದ ಪ್ರೋತ್ಸಾಹ ಸಿಗುತ್ತದೆ. ಆಸ್ತಿಯನ್ನು ಮಾರುವ ಆಲೋಚನೆ ಬರಲಿದೆ. ಕುಟುಂಬದ ಮದುವೆಗೆ ಸಿದ್ಧತೆಗಳನ್ನು ಪ್ರಾರಂಭಿಸುವಿರಿ. ನಿಮ್ಮ ಜೀವನಸಂಗಾತಿಗಾಗಿ ನೀವು ಸೌಮ್ಯಸ್ವಭಾವದವರು ಆಗಬೇಕಾಗಿಬರಬಹುದು. ಗೆಳೆಯರಿಗೆ ಅನೇಕ ದಿನಗಳ ಅನಂತರ ಸಮಯವನ್ನು ಕೊಡುವಿರಿ. ಸುಳ್ಳು ಅತಿಯಾಗಬಹುದು. ಶಿಕ್ಷಣಕ್ಷೇತ್ರದಲ್ಲಿ ಯಶಸ್ಸು ಸಿಗುವುದು. ಸಕಾಲಕ್ಕೆ ಆರ್ಥಿಕ ನೆರವು, ಸ್ವಲ್ಪ ನೆಮ್ಮದಿ.

ಕನ್ಯಾ ರಾಶಿ: ಹೊಸ ಯಂತ್ರಗಳ ಖರೀದಿಯಿಂದ ಖರ್ಚಿಗೆ ದಾರಿ. ಇಂದು ನಿಮ್ಮ ಸಹಾಯಕರೇ ನಿಮಗೆ ತೊಂದರೆ ಕೊಟ್ಟಾರು. ಕಲಹವನ್ನು ಮಾಡಿಕೊಳ್ಳಲಿದ್ದೀರಿ. ಚೆನ್ನಾಗಿ ಮಾತನಾಡುತ್ತೇನೆಂದು ಏನನ್ನಾದರೂ ಹೇಳಿ ಬೇರೆಯವರಿಗೆ ನೋವನ್ನು ಕೊಡಬೇಡಿ. ಇತರರಿಂದ ಏನನ್ನೂ ನಿರೀಕ್ಷಿಸಬೇಡಿ. ಇಲ್ಲದಿದ್ದರೆ ಫಲಿತಾಂಶಗಳು ನಕಾರಾತ್ಮಕವಾಗಿರಬಹುದು. ಮನೆಗೆ ಬಂದವರಿಗೆ ಅಪಮಾನವಾಗಬಹುದು. ನೀವು ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ ಮತ್ತು ನಿಮ್ಮ ಶತ್ರುಗಳ ಮೇಲೆ ವಿಜಯಶಾಲಿಯಾಗುತ್ತೀರಿ. ಕಛೇರಿಯಲ್ಲಿ ನಿಮ್ಮ ನಾಯಕನ ಜೊತೆಗೆ ನೀವು ಉತ್ತಮ ಬಾಂಧವ್ಯವನ್ನು ಹೊಂದಿರುತ್ತೀರಿ. ಮಹಿಳಾ ಸ್ನೇಹಿತರು ನಿಮಗೆ ಬೇಕಾದ ಸಹಾಯವನ್ನು ಮಾಡುವರು. ಅಂದುಕೊಂಡ ಮಾತ್ರಕ್ಕೆ ಎಲ್ಲ ಕಾರ್ಯವೂ ಆಗದು. ನಿಮ್ಮ ಆದಾಯವನ್ನು ಹೇಳಿಕೊಳ್ಳಲು ಹೋಗಬೇಡಿ. ನಿಮಗೇ ತೊಂದರೆಯಾದೀತು. ಹೊಸ ವ್ಯವಹಾರವನ್ನು ಪ್ರಾರಂಭಿಸಿವರು ಉತ್ಸಾಹದ ಕಾರಣ ಉತ್ತಮ ಲಾಭವನ್ನು ಪಡೆಯಬಹುದು.

ತುಲಾ ರಾಶಿ: ಬೆಂಬಲ ಸಿಗದೇ ಇದ್ದರೆ ಉತ್ಸಾಹ ಕಡಿಮೆಯಾಗಲಿದೆ. ಇಂದು ನಿಮಗೆ ನಿಮ್ಮವರುಲೇ ಬಯಸದೇ ಇದ್ದರೂ ಸಹಾಯ ಮಾಡುವವರಿದ್ದಾರೆ. ಕಛೇರಿಯ ಕಾರ್ಯಕ್ಕೆಂದು ದೂರದ ಊರಿಗೆ ಹೋಗುವವರಿದ್ದೀರಿ‌. ವಾಹನದಿಂದ ತೊಂದರೆ ಇರಲಿದೆ. ನಿಮ್ಮ ಕೆಲಸದಲ್ಲಿ ಹಲವರ ಬೆಂಬಲ ಸಿಗುತ್ತದೆ. ಹಳೆಯ ವಿವಾದಗಳು ಬಗೆಹರಿಯುತ್ತವೆ. ನೀವು ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಬಹುದು. ನಿಮ್ಮ ಆದಾಯವು ಸುಧಾರಿಸುತ್ತದೆ. ಇಷ್ಟು ದಿನ‌ ಆಗಮನ ಮಾತ್ರ ಆಗಿತ್ತು.‌ ಇನ್ನು ಧನದ ಗಮನವೇ ಹೆಚ್ಚಾಗುವುದು. ನಿಮ್ಮ ಆಲೋಚನೆಗಳಿಗೆ ಚೌಕಟ್ಟಿರಲಿ. ವ್ಯಾಪಾರಸ್ಥರಾಗಿದ್ದರೆ ಇಂದು ಕಲಹವೂ ಆಗಬಹುದು. ನಿಮ್ಮ ದುಃಖವು ಅಲ್ಪ ಸಮಯದಲ್ಲಿ ದೂರವಾಗಲಿದೆ. ಏನಾಗುತ್ತಿದೆ ಎಂಬ ಯಾವ ಸೂಚನೆಯೂ ನಿಮಗೆ ಸಿಗದಾಗುವುದು. ವ್ಯಾಪಾರವನ್ನು ಮುಚ್ಚಬೇಕು ಎನ್ನುವ ಸ್ಥಿತಿಯವರೆಗೆ ಹೋಗಬಹುದು. ಆಪ್ತರಾದ ಮಾತ್ರಕ್ಕೆ ಎಲ್ಲವನ್ನೂ ಸರಿಯಾಗಿ ಹೇಳುತ್ತಾರೆ ಎಂದಿಲ್ಲ. ತಂದೆಯ ಆಸೆಯನ್ನು ಪೂರ್ಣ ಮಾಡಿ, ಅವರಿಗೆ ಖುಷಿಯನ್ನು ಕೊಡುವಿರಿ.

ವೃಶ್ಚಿಕ ರಾಶಿ: ಮಾತಿಗೆ ಅನುಕೂಲತೆ ಸೃಷ್ಟಿಯಾಗಲಿದೆ. ಇಂದು ನಿಮ್ಮ ಜೊತೆಗಾರರ ನಿಧಾನಗತಿಯ ಕೆಲಸವು ನಿಮ್ಮ ಮನಃಸ್ಥಿತಿಗೆ ಹೊಂದದಿರಬಹುದು. ಕಾರಣಾಂತರಗಳಿಂದ ಖರ್ಚು ಹೆಚ್ಚಾಗಬಹುದು. ನಿಮ್ಮ ಕೆಲಸದ ನಿಮಿತ್ತ ನೀವು ಪ್ರಯಾಣಿಸಬೇಕಾಗಬಹುದು. ಚಿಂತೆಗಳು ಕೊನೆಗೊಳ್ಳುತ್ತವೆ. ಯೋಜನೆಗಳು ಯಶಸ್ವಿಯಾಗುತ್ತವೆ ಮತ್ತು ಹೊಸ ಕೆಲಸಗಳು ಲಭ್ಯವಾಗುತ್ತವೆ. ಸಾಹಸದಿಂದ ನಿಮಗೆ ಅನಾರೋಗ್ಯ ಬರಲಿದೆ. ನಿಮ್ಮ ಗುರಿಯನ್ನು ಸಾಧಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಮಕ್ಕಳ ಯಶಸ್ಸಿನಿಂದ ನೀವು ನಿಮ್ಮಲ್ಲಿ ಉತ್ಸಾಹವು ಅಧಿಕವಾಗುವುದು. ಹೊಸ ಯೋಜನೆಗಳು ನಿಮ್ಮನರಿಸಿ ಬರಲಿವೆ. ದಾಂಪತ್ಯದಲ್ಲಿ ಕಿರಿಕಿರಿಯ ಅನುಭವವಾದರೆ ತಟಸ್ಥರಾಗಿ. ಎಲ್ಲವೂ ತಾನಾಗಿಯೇ ತಿಳಿದು ಬರುತ್ತದೆ. ಪೂರ್ವಾಪರ ಯೋಚನೆ ಇಲ್ಲದೇ ಮಾತನಾಡಿ ಸಂಬಂಧವನ್ನು ಹಾಳುಮಾಡಿಕೊಳ್ಳಬೇಡಿ. ಸಂಶೋಧನೆಯ ವಿದ್ಯಾರ್ಥಿಗಳಿಗೆ ಹೊಸ ದಿಕ್ಕು ಸಿಗಲಿದೆ.

ಧನು ರಾಶಿ: ಶಾಂತಿಯ ದಾರಿ ಸುಖವಾಗಿದ್ದರೂ ಸಾಧಿಸಲು ಆಗದು. ಇಂದು ನೀವು ಹಾಕಿಕೊಂಡ ಯೋಜನೆಗೆ ಕುಟುಂಬದ ಸಹಾಯವು ಲಭ್ಯವಾಗಲಿದೆ. ಭೂಮಿಯ ಕ್ರಯ ಮತ್ತು ವಿಕ್ರಯಗಳಲ್ಲಿ ಲಾಭ ಕಾಣದು. ಇಂದು ಬಹಳಷ್ಟು ಕೆಲಸ ಇರುತ್ತದೆ. ಯಶಸ್ವಿಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ನ್ಯಾಯಾಂಗದ ವಿಚಾರದಲ್ಲಿ ಯಶಸ್ಸು. ಅನಿರೀಕ್ಷಿತ ಓಡಾಟ ಮಾಡುವಿರಿ. ಭೂಮಿಗೆ ಸಂಬಂಧಿಸಿದ ಪ್ರಯೋಜನಗಳು ದೊರೆಯುತ್ತವೆ. ಕುಳಿತಲ್ಲೇ ಕುಳಿತಿರುವ ನಿಮಗೆ ಕೆಲಸವನ್ನು ಮಾಡುವ ಅಪೇಕ್ಷೆ ಉಂಟಾಗುವುದು. ಕೆಲಸದಲ್ಲಿ ನೀವು ಕಡಿಮೆ ಪ್ರಯತ್ನದಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದಾಗಿದೆ. ಆದರೆ ನಿಮ್ಮ ಬುದ್ಧಿಯನ್ನು ಬಳಸಿಕೊಳ್ಳಬೇಕಿದೆ. ವೈವಾಹಿಕ ಜೀವನವು ತುಂಬಾ ಸರಸಮಯವಾಗಿರುವಿದು. ಕಾರ್ಯ ಸ್ಥಳದಲ್ಲಿ ನಿಮ್ಮ ವ್ಯವಸ್ಥಾಪಕರೊಂದಿಗೆ ನೀವು ಉತ್ತಮ ಬಾಂಧವ್ಯವನ್ನು ಹೊಂದುವಿರಿ. ವ್ಯಾಪಾರದಲ್ಲಿ ಚಾಣಕ್ಷತೆಯಿಂದ ಲಾಭವನ್ನು ಪಡೆಯುವಿರಿ.

ಮಕರ ರಾಶಿ: ಆರ್ಥಿಕ ಬಲ ಇಲ್ಲದೇ ಇರುವುದರಿಂದ ಸಾಲ ಮಾಡುವ ಸ್ಥಿತಿ ಬಂದೊದಗಲಿದೆ. ಇಂದು ನಿಮ್ಮ ಆಲೋಚನಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ದೇಶಗಳಿಗೆ ವಸ್ತುಗಳನ್ನು ಕಳುಹಿಸುವ ಉದ್ಯೋಗವನ್ನು ಮಾಡುತ್ತಿದ್ದರೆ ಅವರಿಗೆ ಲಾಭವಿದೆ. ನೀವು ವಿವಾದಗಳಲ್ಲಿ ಜಯ ಸಾಧಿಸುವಿರಿ. ದಿನದ ಅಂತ್ಯದಲ್ಲಿ, ಕುಟುಂಬದ ವಾತಾವರಣ ಅನುಕೂಲಕರವಾಗಿರುತ್ತದೆ ಮತ್ತು ಸಂತೋಷವು ಮೇಲುಗೈ ಸಾಧಿಸುತ್ತದೆ. ವ್ಯವಹಾರವು ಉತ್ತಮವಾಗಿರುತ್ತದೆ. ಹೊಸ ಆದಾಯ ಮೂಲವನ್ನು ಸೃಷ್ಟಿಮಾಡಿಕೊಳ್ಳುವಿರಿ. ನಿಮ್ಮ ಸೌಮ್ಯ ಸ್ವಭಾವ ಮತ್ತು ಅತ್ಯುತ್ತಮ ಸಂವಹನ ಕೌಶಲ್ಯಕ್ಕಾಗಿ ನೀಮ್ಮನ್ನು ಪ್ರಶಂಸೆ ಸಿಗಬಹುದು. ಸಾಲಗಾರರಿಂದ ನೀವು ಬಾಕಿ ಹಣವನ್ನು ಮರಳಿ ಬರಲಿದೆ. ನಿಮ್ಮದಲ್ಲದ ವಿಚಾರಕ್ಕೆ ನೀವು ಮೂಗು ತೂರಿಸಬೇಡಿ. ಪ್ರೇಮದ ವಿಚಾರದಲ್ಲಿ ಅನುಮಾನ ಬರಬಹುದು.‌ ಆಡಿದ ಮಾತಿನ ತಪ್ಪಿಗೆ ಕ್ಷಮೆ ಕೇಳುವರು. ಜಾಣ್ಮೆಯಿಂದ ಮಾಡಿದ ವ್ಯವಹಾರಕ್ಕೆ ಪ್ರಶಂಸೆ ಸಿಗಲಿದೆ. ಶಿಸ್ತನ್ನು ಬಿಡದೇ ಪಾಲಿಸುವುದು ನಿಮಗೆ ಗೌರವವನ್ನು ತಂದು ಕೊಡುವುದು. ಶಿಸ್ತುಬದ್ಧವಾದ ವ್ಯವಹಾರದಿಂದ ನಿಮಗೆ ಹೊಗಳಿಕೆ ಸಿಗುವುದು.

ಕುಂಭ ರಾಶಿ: ದೇವರಲ್ಲಿ ನಿಜ ಭಕ್ತಿಯನ್ನು ತೋರಿದರೆ ಅದೇ ನಿಮಗೆ ದಾರಿ ತೋರಿಸುವುದು. ಇಂದು ನಿಮ್ಮ ಕಾರ್ಯಗಳು ನಿಧಾನಗತಿಯಲ್ಲಿ ಇರಲಿದೆ. ಕೃಷಿಯನ್ನು ಅವಲಂಬಿಸಿ ಬದುಕುವವರಿಗೆ ಅಲ್ಪ ಲಾಭವೂ ಸಿಗಲಿದೆ‌. ವಿದ್ಯಾರ್ಥಿಗಳು ಹತ್ತಾರು ಗೊಂದಲಗಳನ್ನು ಇಟ್ಟುಕೊಳ್ಳಲಿದ್ದಾರೆ. ಸಂತೋಷ ಮತ್ತು ಹಣದ ಹರಿವು ಉತ್ತಮವಾಗಿರುತ್ತದೆ. ಸಹಕಾರದ ನಿರೀಕ್ಷೆಗಳು ಈಡೇರುವುದಿಲ್ಲ. ಆದರೆ ನಿಮ್ಮ ಮಕ್ಕಳಿಂದ ನೀವು ಸಂತೋಷವನ್ನು ಪಡೆಯುವಿರಿ. ಹಳೆಯ ವಿವಾದಗಳಲ್ಲಿ ನಿಮ್ಮ ಪರವಾಗಿ ಒಮ್ಮತ ಮೂಡಬಹುದು. ನಿಮ್ಮ ಮಕ್ಕಳ ವೃತ್ತಿಜೀವನದ ಬಗ್ಗೆ ನೀವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ವೈಯಕ್ತಿಕ ಸಂಬಂಧದಲ್ಲಿ ಅನ್ಯೋನ್ಯತೆ ಹೆಚ್ಚಾಗುವ ಸಾಧ್ಯತೆ ಇದೆ‌. ಅಲ್ಪಾವಧಿಯ ವೃತ್ತಿಗೆ ಸೇರಿಕೊಳ್ಳುವುದು ಉತ್ತಮ. ಯಾರ ಮೇಲೋ ಸಿಟ್ಟುಗೊಂಡು ಇನ್ಯಾರಮೇಲೋ ತೀರಿಸಿಕೊಳ್ಳುವುದು ಬೇಡ. ದೂರದ ಊರಿಗೆ ಹೋದಾಗ ಉತ್ತಮ ವ್ಯವಸ್ಥೆ ಆಗಲಿದೆ. ಶಿಕ್ಷಕರು ಆದಷ್ಟು ಜಾಗರೂಕರಗಿ ವರ್ತಿಸಿ. ನಿಮ್ಮನ್ನು ಮಕ್ಕಳು ನೋಡುವರು. ಪ್ರೀತಿಯಲ್ಲಿ ಇಂದು ಸಮಯ ಸರಿಯುವುದೇ ಗೊತ್ತಾಗದು.

ಮೀನ ರಾಶಿ: ಕೋಪದ ಕೈಗೆ ಬುದ್ಧಿಯನ್ನು ಕೊಟ್ಟರೆ ನಿಮ್ಮ ಎಲ್ಲ ಯೋಜನೆಯೂ ವಿಫಲವಾಗಲಿದೆ. ಇಂದು ನಿಮ್ಮ ಸ್ವಂತ ಉದ್ಯಮದಲ್ಲಿ ನಿಮಗೆ ಲಾಭವಿದೆ. ಹಲವು ದಿನಗಳಿಂದ ಅನಾರೋಗ್ಯದ ಕಾರಣ ಕಿರಿಕಿರಿಯನ್ನು ಅನುಭವಿಸುತ್ತಿರುವ ನೀವು ಇಂದು ಆರೋಗ್ಯದತ್ತ ಮುಖಮಾಡುವಿರಿ. ಸಮಸ್ಯೆ ಪರಿಹರಿಸಲು ಕೋಪಗೊಳ್ಳುವ ಬದಲು ಬುದ್ಧಿವಂತಿಕೆಯನ್ನು ಬಳಸಿ. ಮಕ್ಕಳ ಮೇಲೆ ಹೆಚ್ಚು ಒತ್ತಡ ಹೇರಬೇಡಿ ಮತ್ತು ಅವರೊಂದಿಗೆ ಶಾಂತಿಯುತವಾಗಿ ವರ್ತಿಸಿ. ಇಲ್ಲವಾದರೆ ಬೇಡ. ನೀವು ಅಪರೂಪಕ್ಕೆ ಸಿಕ್ಕ ಸದನೇಹಿತನ ಜೊತೆ ಸಮಯವನ್ನು ಕಳೆಯುವಿರಿ. ವೃತ್ತಿಜೀವನದಲ್ಲಿ ಒಳ್ಳೆಯ ಹಂತವನ್ನು ತಲುಪಲು ಇಂದಿನಿಂದ‌ ಶ್ರಮವಹಿಸುವುದು ಅಗತ್ಯ. ಮಂಡಿನೋವಿನಿಂದ ಇಂದು ಕಷ್ಟಪಡುವಿರಿ. ಯಾರನ್ನೂ ನಂಬುವ ಸ್ಥಿತಿಯಲ್ಲಿ ಇಂದು ನೀವಿರುವುದಿಲ್ಲ. ಅದಷ್ಟು ಕಡಿಮೆ ಮಾತನಾಡಿ. ಅವರ ಆರೋಗ್ಯವೂ ಚೇತರಿಕೆ ಕಾಣುವುದು. ಇಂದು ನಿಮ್ಮ ಆದಾಯವನ್ನು ಇಮ್ಮಡಿಗೊಳಿಸಿಕೊಳ್ಳಬಹುದು. ಮಕ್ಕಳಿಗೆ ಬೇಕಾದ ವಿದ್ಯಾಭ್ಯಾಸವನ್ನು ಕೊಡಲು ಸಾಲ ಮಾಡಬೇಕಾದೀತು.

Leave a Reply

Your email address will not be published. Required fields are marked *