ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಕೃಷ್ಣ ಪಕ್ಷದ ಏಕಾದಶೀ ತಿಥಿ, ಗುರುವಾರ ಅನ್ಯ ಕ್ಷೇತ್ರದಿಂದ ನೆರವು, ಹಣಕಾಸಿನ ಹರಿವು, ಆಗಬೇಕಾದ ಕೆಲಸದ ಮರೆವು, ಹೊಸ ಯೋಜನೆಯ ಅರಿವು ಇರುವುದು. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ : ಚೈತ್ರ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಬ್ರಹ್ಮ, ಕರಣ: ಭದ್ರ, ಸೂರ್ಯೋದಯ – 06:14 am, ಸೂರ್ಯಾಸ್ತ – 06 : 46 pm, ಇಂದಿನ ಶುಭಾಶುಭಕಾಲ: ರಾಹು ಕಾಲ 14:05 – 15:39, ಯಮಘಂಡ ಕಾಲ 06:15 – 07:49, ಗುಳಿಕ ಕಾಲ 09:23 – 10:57
ಮೇಷ ರಾಶಿ: ಒಮ್ಮೊಮ್ಮೆ ವೈಯಕ್ತಿಕ ಹಿತಾಸಕ್ತಿಯನ್ನು ಪಕ್ಕಕ್ಕಿರಿಸಿ ಕೆಲಸ ಮಾಡಬೇಕಾಗುವುದು. ವೇಗವಾಗಿ ಹಣವನ್ನು ಗಳಿಸುವ ವಿಧಾನಕ್ಕೆ ಕೈ ಹಾಕುವ ಮೊದಲು ಆಪ್ತರ ಸಲಹೆ ಬೇಕು. ನಿಮ್ಮಿಂದ ಕುಟುಂಬಕ್ಕೆ ಉತ್ತಮವಾದ ಹೆಸರು ಬರಲಿದೆ. ಇಂದು ನಿಮ್ಮನ್ನು ಹುಡುಕಿಕೊಂಡು ಬರುವರಿಂದ ನಿಮ್ಮ ವಿವಾಹವು ನಿಶ್ಚಯವಾಗಲಿದೆ. ಬೇರೆಯವರನ್ನು ಗೊಂದಲಕ್ಕೆ ಸಿಕ್ಕಿ ಹಾಕಿಸುವುದು ಬೇಡ. ಹೂಡಿಕೆಯ ಹೊಸ ವಿಧಾನದಿಂದ ಸಂತೋಷ. ನಿಮ್ಮ ಸ್ನೇಹವನ್ನು ಬಯಸಲು ಇಂದು ಅನೇಕರು ಇರಲಿದ್ದಾರೆ. ಅಮುಖ್ಯವಾದ ಕಾರ್ಯಗಳಿಗೆ ಓಡಾಟವನ್ನು ಮಾಡಬೇಕಾದೀತು. ಪಾಲುದಾರಿಕೆಯು ನಿಮಗೆ ಮೋಸದಂತೆ ಕಾಣುವುದು. ಶತ್ರುಗಳ ಬಗ್ಗೆ ಯಾರಾದರೂ ಕಿವಿಚುಚ್ಚುವರು. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎನ್ನುವುದು ನಿಮ್ಮ ಉದ್ದೇಶವಾದರೂ ಅದು ಆಗದು. ಆಪಾಯದ ಸೂಚನೆಯನ್ನು ಗಮನಿಸಿಕೊಳ್ಳಿ. ವ್ಯಾಪಾರವನ್ನು ಅಚ್ಚುಕಟ್ಟಾಗಿ ಮುಗಿಸುವ ಕೌಶಲವು ನಿಮ್ಮಲ್ಲಿರುವುದು. ಹೂಡಿಕೆಯ ವಿಚಾರದಲ್ಲಿ ಯಾರಾದರೂ ದಾರಿಯನ್ನು ತಪ್ಪಿಸಿಯಾರು. ಉದ್ಯಮಿಗಳ ಭೇಟಿ ಮಾಡುವಿರಿ. ಜವಾಬ್ದಾರಿಯನ್ನು ಪೂರೈಸಿ ಕೈಬಿಡಿ.
ವೃಷಭ ರಾಶಿ: ಯಾರದೋ ಕಾರ್ಯಕ್ಕೆ ಮತ್ತಾರಮೇಲೋ ಕೋಪಗೊಳ್ಳುವಿರಿ. ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮುಂಗೋಪಿಯಾಗಿ ಕಾರ್ಯಗಳನ್ನು ಮಾಡಬೇಡಿ. ಪ್ರೀತಿಗೆ ಬೆಲೆಯನ್ನು ಕೊಡುವ ನಿಮ್ಮ ಹವ್ಯಾಸವು ಮುಂದುವರಿಯಲಿ. ರಾಜಕೀಯದ ನಿಮ್ಮ ರಹಸ್ಯ ನಡೆಯು ಬಯಲಾಗಬಹುದು. ನಿಮ್ಮ ದಕ್ಷ ಕಾರ್ಯವು ಎಲ್ಲರಿಗೂ ಮಾದರಿಯಾದೀತು. ತುರ್ತು ಚಿಕಿತ್ಸೆಯ ಅವಶ್ಯಕತೆ ಎದುರಾಗುವುದು. ಅನಗತ್ಯ ಅಲೆದಾಟವನ್ನು ನಿಲ್ಲಿಸಿ ಕಾರ್ಯದಲ್ಲಿ ಮಗ್ನರಾಗಿ. ನಿಮ್ಮ ಸಂಗತಿ ಇಂದು ಸ್ವರ್ಗದ ಮೇಲೆ ಇದೆ, ಇಂದು ಅದು ನಿಮಗೆ ಅರ್ಥವಾಗುತ್ತದೆ. ನಿಮ್ಮ ಪ್ರಯತ್ನಕ್ಕೆ ಸರಿಯಾದ ಫಲವು ಸಿಗುವುದು. ಆದಾಯವನ್ನು ನಿರೀಕ್ಷಿತ ಖರ್ಚಿನ ಬಗ್ಗೆ ನಿಯಂತ್ರಣ ಬೇಕು. ನಿಮ್ಮ ಗುರಿಯನ್ನು ಬದಲಾಯಿಸುವುದು ಬೇಡ. ಇಂದು ಖರ್ಚಿನ ಬಗ್ಗೆ ಊಹೆಗೂ ಸಿಗದು. ಶ್ರಮಕ್ಕೆ ಯೋಗ್ಯವಾದ ಆದಾಯವನ್ನು ನಿರೀಕ್ಷಿಸುವಿರಿ. ಹೇಳಬೇಕಾದ ವಿಷಯದಲ್ಲಿ ಮುಚ್ಚು ಮರೆ ಇಲ್ಲದೇ ಸರಿಯಾಗಿ ಹೇಳಿ. ಆದುದರ ಬಗ್ಗೆ ನಿಮಗೆ ಯಾವುದೇ ಬೇಸರವನ್ನು ಮಾಡಿಕೊಳ್ಳುವುದಿಲ್ಲ.
ಮಿಥುನ ರಾಶಿ: ದೀರ್ಘಕಾಲದ ಖರ್ಚು ಕಡಿಮೆಯಾಗುವ ಸಂಭವವಿದೆ. ಉಪಯೋಗವಿಲ್ಲದ ವಸ್ತುಗಳನ್ನು ಬೇರೆ ಮಾಡುವಿರಿ. ಮೌನದಲ್ಲಿಯೂ ಅದು ಬಗೆಹರಿಯಬಹುದು ಎನ್ನುವ ಚಿಂತನೆಯನ್ನು ಮೊದಲು ಮಾಡಿಕೊಂಡು ಕಲಹಾದಿಗಳು ಬೇಕೇ ಎನ್ನುವ ತೀರ್ಮಾನಕ್ಕೆ ಬನ್ನಿ. ಮನಸ್ಸಿಗೆ ಯಾವುದನ್ನಾದರೂ ತಂದುಕೊಂಡು ಅನಂತರ ಮುಂದುವರಿಯುವಿರಿ. ಪ್ರಯಾಣದ ಆಯಾಸವು ನಿಮ್ಮನ್ನು ದುರ್ಬಲಗೊಳಿಸುತ್ತದೆ. ನಿಮ್ಮ ಯೋಜನೆಗೆಳಿಗೆ ಪುರಸ್ಕಾರಗಳು ಸಿಗಬಹುದು. ಅಮೂಲ್ಯ ಸಮಯವನ್ನು ಆಲಸ್ಯದಿಂದ ಕಳೆಯುವಿರಿ. ಚಿತ್ರಕಾರರಿಗೆ ಅವಕಾಶಗಳು ಬರಬಹುದು. ಜೀವನದಲ್ಲಿ ಅನೇಕರಿಂದ ನೀವು ಹಿಂದೆ ಬೀಳುತ್ತೀರಿ. ಇದು ನಿಮ್ಮ ಜೀವನಸಂಗಾತಿಯೊಂದಿಗಿನ ಅದ್ಭುತ ದಿನವಾಗಿದೆ. ನಿಮ್ಮ ಕಾಳಜಿಯು ಇತರರಿಗೆ ಮುಜುಗರವನ್ನು ತಂದೀತು. ಕಟ್ಟಡ ನಿರ್ಮಾಣದವರಿಗೆ ಹೆಚ್ಚು ಲಾಭವಾಗಲಿದೆ. ಹೊಸ ಯೋಜನೆಗಳೂ ಅವರಿಗೆ ಸಿಗಲಿದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇರಲಿದೆ.
ಕರ್ಕಾಟಕ ರಾಶಿ: ಸಹೋದ್ಯೋಗಿಗಳ ಜೊತೆ ಸಾಮರಸ್ಯ ಕಷ್ಟವಾಗುವುದು. ಇಂದು ವಿವಾಹಕ್ಕೆ ಸಂಬಂಧಿಸಿದಂತೆ ನಿಮಗೆ ಕೆಲವು ವಿಘ್ನಗಳು ಬರಲಿವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಸಂತಾನದ ವಿಚಾರದಲ್ಲಿ ಅಶಾಂತಿ ಮೂಡಬಹುದು. ನಿಯಮ ಭಂಗದಿಂದ ನಿಮಗೆ ಕಷ್ಟ. ನಿಮ್ಮವರೆಂದುಕೊಂಡವರು ನಿಮ್ಮವರಾಗದೇ ಇರಬಹುದು. ಸಂಗಾತಿಗಳ ಕಲಹವು ಮಕ್ಕಳ ಕಾರಣದಿಂದ ತಣ್ಣಗಾಗುತ್ತದೆ. ಧಾರ್ಮಿಕ ಕಾರ್ಯಗಳಿಗೆ ಸಂಪತ್ತು ಬಳಕೆಯಾಗಲಿದೆ. ದಾಖಲೆಗಳು ನಿಮ್ಮ ಬಗ್ಗೆ ಸರಿಯಾದ ಮಾಹಿತಿ ಕೊಡುವುದು. ಅಪರೂಪದ ವ್ಯಕ್ತಿಗಳು ನಿಮ್ಮ ಸಂಪರ್ಕಕ್ಕೆ ಬರಲಿದ್ದಾರೆ. ಕೃಷಿಯ ಉತ್ಪನ್ನದಿಂದ ಅಧಿಕಲಾಭವಿರಲಿದೆ. ನಿಮ್ಮನ್ನು ವಿರೋಧಿಸುವವರು ಹೆಚ್ಚಾದಾರು. ಕಲಾವಿದರಿಗೆ ವಿದೇಶಪ್ರವಾಸಕ್ಕೆ ಅವಕಾಶ ಲಭಿಸಲಿದೆ. ನಿಂತ ಕಾರ್ಯಕ್ಕೆ ಚಾಲನೆ ನೀಡುವಿರಿ. ಆಶ್ರಯದಾತರನ್ನು ಅಪಮಾನ ಮಾಡುವಿರಿ. ಸ್ಪರ್ಧೆಗಾಗಿ ನಡೆಸಿದ ನಿಮ್ಮ ಶ್ರಮವು ವ್ಯರ್ಥವಾದೀತು. ನಿಮ್ಮ ಮೇಲಿರುವ ಭಾವನೆಯು ದೂರಾಗಬಹುದು.
ಸಿಂಹ ರಾಶಿ: ವ್ಯವಹಾರದಲ್ಲಿ ಮಗ್ನರಾಗಿ ಹಲವು ತಿರುಗಾಟ ಮಾಡಬೇಕಾಗುವುದು, ಅಕಾಲದಲ್ಲಿ ಭೋಜನ ವಿಶ್ರಾಂತಿಗಳು ಆರೋಗ್ಯದಲ್ಲಿ ವ್ಯತ್ಯಾಸವನ್ನು ಮಾಡುವುದು. ಪಿರ್ತಾರ್ಜಿತ ಆಸ್ತಿಯನ್ನು ಅನುಭವಿಸುವ ಕ್ಷಣ ನಿಮ್ಮದಾಗಿದೆ. ಶತ್ರುಗಳು ನಿಮ್ಮ ಚಲನವಲನಗಳನ್ನು ಗಮನಿಸುತ್ತ ಇರುವರು. ತುಂಬಾ ದಿನಗಳಿಂದ ಕಾಡುವ ಸಮಸ್ಯೆಗೆ ಇಂದು ಪರಿಹಾರ ದೊರಕಲಿದೆ. ಅಶುಭವಾರ್ತೆಯಿಂದ ಉತ್ಸಾಹಕ್ಕೆ ಭಂಗ. ಜಾಣ್ಮೆಯಿಂದ ಅದನ್ನು ದೂರಮಾಡಿಕೊಳ್ಳಿ. ಪ್ರತ್ಯಕ್ಷವಾಗಿ ಕಂಡಿದ್ದು ಪ್ರಮಾಣೀಕರಿಸಿ ನೋಡುವುದು ಉತ್ತಮ. ಪ್ರಯಾಣವನ್ನು ಅನಿವಾರ್ಯ ಮಾಡಿಕೊಳ್ಳಬೇಡಿ. ಸಮಯದ ಚಕ್ರವು ವೇಗವಾಗಿ ಸುತ್ತಿದಂತೆ ಕಾಣಿಸುವುದು. ನಿಮ್ಮಿಂದ ಬದಲಾವಣೆಯನ್ನು ನಿರೀಕ್ಷಿಸುವವರಿಗೆ ಯೋಗ್ಯ ಉತ್ತರ ಕೊಡುವಿರಿ. ಇಂದು ಹಲವು ಕಾರ್ಯಗಳನ್ನು ಒಂದೇ ಸಲ ಮಾಡಬೇಕಾಗಬಹುದು. ಎಲ್ಲವೂ ಆಗಿಹೋದಂತೆ ನಿಮಗೆ ಅನ್ನಿಸಬಹುದು. ನಿಮ್ಮವರನ್ನು ಬಿಟ್ಟು ಹೋದವರ ಬಗ್ಗೆ ಆಲೋಚನೆ ಬೇಡ. ವಸತಿಯಲ್ಲಿ ತೊಂದರೆ ಬಂದ ಕಾರಣ ಬದಲಾಯಿಸುವ ಸಂದರ್ಭವೂ ಬರಬಹುದು.
ಕನ್ಯಾ ರಾಶಿ: ಯಾವುದೇ ಕೆಲಸಕ್ಕೆ ಹೋಗುವಾಗಲೂ ದೈವ ಬಲವನ್ನು ಪ್ರಾರ್ಥಿಸಿಕೊಳ್ಳುವಿರಿ. ನಿಮ್ಮ ಸ್ವಂತ ಉದ್ಯೋಗವಿದ್ದರೆ ಲಾಭವನ್ನು ಕಾಣುವಿರಿ. ಧಾರ್ಮಿಕ ಕಾರ್ಯಗಳನ್ನು ಮಾಡುವವರಿಗೆ ಇಂದು ಹೆಚ್ಚಿನ ಲಾಭವನ್ನು ನಿರೀಕ್ಷಿತ ಲಾಭವನ್ನು ಕಾಣಬಹುದಾಗಿದೆ. ಮನಸ್ಸು ಶಾಂತವಾದಷ್ಟು ಕಾರ್ಯದಲ್ಲಿ ಪ್ರಗತಿ ಹೆಚ್ಚು. ಉಕರಣಗಳಿಗೆ ಕಾರಣಾಂತರಗಳಿಂದ ಧನವ್ಯಯವಾದೀತು. ನಂಬಿಕೆಯನ್ನು ಉಳಿಸಿಕೊಳ್ಳಲು ಬಹಳ ಪ್ರಯತ್ನವನ್ನು ಮಾಡಬೇಕಾದೀತು. ಉತ್ತಮರ ಸಹವಾಸ ನಿಮ್ಮ ಜೀವನಕ್ಕೆ ತಿರುವನ್ನು ಕೊಟ್ಟೀತು. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ನಿಮ್ಮನ್ನು ಮಾರ್ಗಭ್ರಷ್ಟರನ್ನಾಗಿ ಮಾಡುವ ಕೆಲಸವು ನಿಮಗೆ ಗೊತ್ತಿಲ್ಲದೇ ನಡೆಯುವುದು. ಇಂದು ಹಿರಿಯರಿಂದ ಕೆಲವು ಹಿತೋಪದೇಶವನ್ನು ಕೇಳಬೇಕಾದೀತು. ವ್ಯಾಪಾರದ ಸ್ಥಳದಲ್ಲಿ ಇಕ್ಕಟ್ಟು ಉಂಟಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳುವುದು ಬೇಡ. ನಿಮ್ಮನ್ನು ಅರಿತವರು ಬಿಡಲಾರರು. ಅನಾರೋಗ್ಯದ ಕಾರಣ ಉತ್ಸಾಹದ ಯಾವ ಕಾರ್ಯವನ್ನೂ ಮಾಡಲಾಗದು. ದಿನದ ಕೆಲಸವನ್ನು ಮಾಡುವಷ್ಟರಲ್ಲಿ ನಿಮ್ಮ ಸಮಯವು ಕಳೆದುಹೋಗುವುದು.
ತುಲಾ ರಾಶಿ: ನಿಮ್ಮ ಅಭಿವೃದ್ಧಿ ಇತರರಿಗೆ ಇಷ್ಟವಾಗದೇ ಇರಬಹುದು. ಅಸೂಯೆಯಿಂದ ಎಲ್ಲವನ್ನೂ ಹಾಳು ಮಾಡಬಹುದು. ನಿಮ್ಮ ಕಾರ್ಯದಕ್ಷತೆಗೆ ಉನ್ನತವಾದ ಸ್ಥಾನಮಾನಗಳು ಪ್ರಾಪ್ತವಾಗುವುವು. ಮಾನಸಿಕ ತೊಂದರೆಯನ್ನು ಅನುಭವಿಸುವಿರಿ. ಅವಕಾಶಗಳು ನಿಮ್ಮ ಕೈತಪ್ಪುವ ಸಾಧ್ಯತೆ ಇದೆ. ಯಾರ ವಿರೋಧವನ್ನೂ ನೀವು ಸಹಿಸಲಾರಿರಿ. ಪರೀಕ್ಷೆಯ ಭಯವು ನಿಮ್ಮನ್ನು ಅತಿಯಾಗಿ ಕಾಡುವುದು. ಭೂವ್ಯವಹಾರದಲ್ಲಿ ನಷ್ಟವಾಗುವುದು. ನಿಮ್ಮ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆಯು ಘಟಿಸುವುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸಿ ಪಡೆದುಕೊಳ್ಳುವಿರಿ. ನಿಮ್ಮ ಸಾಮರ್ಥ್ಯವನ್ನು ವರ್ಧಿಸಲು ಕೌಶಲವೂ ಇರಲಿ. ಸ್ತ್ರೀಯರು ತಮ್ಮ ಕೌಶಲವನ್ನು ತೋರಿಸುವರು. ಪಾಲುದಾರಿಕೆಯ ಭೂ ಸಂಬಂಧದ ಕಾರ್ಯದಿಂದ ಲಾಭವಾಗಲಿದೆ. ದಾಂಪತ್ಯವು ಪರಸ್ಪರ ಸೌಹಾರ್ದದ ಮಾತುಗಳಿಂದ ನೆಮ್ಮದಿ ಸಿಗುವುದು. ಮಕ್ಕಳ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ಅವಶ್ಯಕತೆಯನ್ನು ನೋಡಿ. ಯಾರಾದರೂ ನಿಮ್ಮ ಬಗ್ಗೆ ಅಸತ್ಯವನ್ನು ಆಡಿದರೆ ಅದನ್ನು ಕಂಡು ಹಿಡಿಯುವಿರಿ.
ವೃಶ್ಚಿಕ ರಾಶಿ: ಅಧಿಕಾರದಲ್ಲಿ ವಿವೇಚನೆ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ನಿಮ್ಮ ಸಾಮಾಜಿಕವಾಗಿ ಮನ್ನಣೆಯನ್ನು ಕಂಡು ಅಸೂಯೆಪಡಬಹುದು. ಬಂಗಾರದ ವ್ಯಾಪರಿಗಳಿಗೆ ಲಾಭವಾಗಲಿದೆ. ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳಲಿದ್ದೀರಿ. ಕುಟುಂಬದಿಂದ ಅಶುಭವಾದ ಸುದ್ದಿಯು ನಿಮಗೆ ತಿಳಿಯಲಿದೆ. ನಿಮ್ಮ ಉಪಾಯವು ಸರಳವಾಗಿದ್ದು, ಉಚಿತವೂ ಆಗಿರಲಿದೆ. ಪ್ರಾಮಾಣಿಕತೆಯು ಇಂದು ನಿಮಗೆ ವರವಾಗಿ ಅನೇಕರ ಪ್ರಶಂಸೆಗೆ ಕಾರಣವಾಗಲಿದೆ. ವಿದ್ಯಾರ್ಥಿಗಳು ಯಾರ ಬೆಂಬಲಕ್ಕೂ ಕಾಯದೇ ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಮುನ್ನುಗ್ಗುವುದು ಸೂಕ್ತ. ಇಂದು ಸಂತಾನದ ಸುಖವು ಸಿಗುವುದು. ಪ್ರೀತಿಪಾತ್ರರ ಆಗಮನದಿಂದ ಮನಸ್ಸು ಸಂತೋಷಗೊಳ್ಳಲಿದೆ. ನಿಮ್ಮನ್ನು ಖುಷಿಪಡಿಸಲು ನಿಮ್ಮ ಜೀವನ ಸಂಗಾತಿ ಇಂದು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ನಿಮ್ಮ ಕೆಲವು ವರ್ತನೆಯನ್ನು ಮಿತ್ರರು ವಿರೋಧಿಸುವರು. ಅಮೂಲ್ಯ ವಸ್ತುಗಳನ್ನು ಖರೀದಿಸುವುದು ಕಷ್ಟವಾದರೂ ಮಾಡುವಿರಿ. ನಿಮ್ಮ ಸಾಮರ್ಥ್ಯಕ್ಕೆ ಕೊಟ್ಟ ಜವಾಬ್ದಾರಿಯು ಸಣ್ಣದಾಗಿರುವುದು.
ಧನು ರಾಶಿ: ಮಿತ್ರರು ನಿಮ್ಮ ಬಗ್ಗೆ ಸಲ್ಲದ್ದನ್ನು ಹೇಳಬಹುದು. ನಿಮ್ಮ ದಾಂಪತ್ಯದಲ್ಲಿ ಉಂಟಾದ ವಿರಸವು ನ್ಯಾಯಾಲಯದ ಮೆಟ್ಟಿಲೇರಬಹುದು. ಆಸ್ತಿಯ ವಿಚಾರದಲ್ಲಿ ಕಲಹಗಳು ಉಂಟಾಗಬಹುದು. ನಿಮ್ಮ ಬಗ್ಗೆ ಅಪಪ್ರಚಾರಗಳು ಕೇಳಿ ಬರಬಹುದು. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ಪಡೆಯುವಿರಿ. ನಿಮ್ಮ ವಸ್ತುಗಳ ಮೇಲೆ ಅತಿಯಾದ ಮೋಹವು ಇರುವುದು. ಸ್ನೇಹಿತರ ಜೊತೆ ಇಂದು ಕಾಲವನ್ನು ಕಳೆಯುವಿರಿ. ಇತರ ನೋವಿಗೆ ನೀವಾಗಿಯೇ ಸ್ಪಂದಿಸುವಿರಿ. ಸಂಗಾತಿಯ ಯೋಚನೆಗಳಿಗೆ ಪ್ರತಿಸ್ಪಂದನೆಯು ಸಿಗಲಿದೆ. ಹಳೆಯ ನೋವುಗಳು ಕಾಡಬಹುದು. ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ನೋಡಿಕೊಳ್ಳಲು ಹೋಗಿ ನಿಮ್ಮ ಆರ್ಥಿಕತೆಯು ಹಿಂದಡಿ ಇಡಬಹುದು. ಮಧ್ಯವರ್ತಿಗಳಿಗೆ ನಷ್ಟವಾಗಬಹುದು. ಸಮಾರಂಭದಲ್ಲಿ ಹಳೆಯ ಸ್ನೇಹಿತರ ಭೇಟಿಯಾಗುವುದು. ಆಕಸ್ಮಿಕ ಧನಪ್ರಾಪ್ತಿಯಿಂದ ಹರ್ಷಗೊಳ್ಳುವಿರಿ. ಶ್ರೇಷ್ಠ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ.
ಮಕರ ರಾಶಿ: ಅನಾರೋಗ್ಯದ ಕಾರಣ ಮಾತೂ ಕಠೋರವೆನಿಸಬಹುದು. ನಿಮ್ಮನ್ನು ನೀವು ಸಜ್ಜನರೆಂದುಕೊಳ್ಳುವಿರಿ. ಇಂದು ನೀವು ಮೌಲ್ಯಯುತವಾದ ವಸ್ತುಗಳನ್ನು ಆಸೆಪಟ್ಟು ಖರೀದಿಸುವಿರಿ. ಹಣದ ಪ್ರಾಮುಖ್ಯವನ್ನು ತಿಳಿದುಕೊಳ್ಳುವ ಸಮಯವಿಂದು. ದಾಂಪತ್ಯದಲ್ಲಿ ಶತ್ರುತ್ವ ಕೆಲಸಮಾಡಬಹುದು. ನಿಮ್ಮ ವಿದ್ಯುದುಪಕರಣದಿಂದ ನಿಮಗೆ ನಷ್ಟವಾಗಲಿದೆ. ಅಗತ್ಯವಿದ್ದಷ್ಟು ಮಾತ್ರ ಮಾತನಾಡಿ. ನಿಮ್ಮ ಅಸೂಯಾಗುಣದಿಂದ ನಿಮಗೇ ತೊಂದರೆಯಾದೀತು. ಹಿರಿಯರ ಅನಾರೋಗ್ಯದಲ್ಲಾಗುವ ವ್ಯತ್ಯಾಸದಿಂದ ಆತಂಕವು ಸೃಷ್ಟಿಯಾದೀತು. ಕೆಲವು ಸನ್ನಿವೇಶಗಳಲ್ಲಿ ನಿಯಂತ್ರಣ ಅವಶ್ಯಕ. ಇಂದು ನೀವು ಇತರರಿಗೆ ಹೇಳುವ ಉತ್ಸಾಹವನ್ನು ಮಾಡುವುದಿಲ್ಲ. ಚಂಚಲ ಮನಸ್ಸು ಸ್ಥಿರವಾಗುವ ತನಕ ಯಾವ ವಿವಾದಕ್ಕೂ ಆಸ್ಪದ ಬೇಡ. ನಿಮ್ಮ ಜೀವನಸಂಗಾತಿ ಇಂದು ನಿಮಗೆ ಪೂರ್ಣ ಬಲ ಮತ್ತು ಪ್ರೀತಿಯನ್ನು ನೀಡುವರು. ಎಲ್ಲರ ಜೊತೆಗಿದ್ದರೂ ಒಂಟಿಯಂತೆ ಅನ್ನಿಸುವುದು. ಇಂದು ಸ್ತ್ರೀಯರಿಗೆ ಮಾನಿಸಿಕವಾದ ಕಿರಿಕಿರಿ ಇರಲಿದ್ದು ತೊಂದರೆಯಾಗಬಹುದು.
ಕುಂಭ ರಾಶಿ: ನಿಮ್ಮ ಆಲೋಚನೆಯ ಕ್ರಮ ದಿಕ್ಕು ತಪ್ಪಬಹುದು. ಪುಣ್ಯಸ್ಥಳಗಳ ಭೇಟಿಗೆ ಆಸಕ್ತಿಯನ್ನು ಹೊಂದುವಿರಿ. ಆಪ್ತರ ಜೊತೆ ಸಮಾಲೋಚನೆ ನಡೆಸುವಿರಿ. ಸಂಗಾತಿಯಿಂದ ಹಣವನ್ನು ನಿರೀಕ್ಷಿಸುವಿರಿ. ಹಿರಿಯ ಆಶೀರ್ವಾದವೇ ನಿಮ್ಮ ಕಾರ್ಯಗಳಿಗೆ ಬೆಂಬಲವಾಗಲಿದೆ. ಹಣದ ವ್ಯಯವು ನಿಮ್ಮನ್ನು ಆತಂಕಕ್ಕೆ ತಳ್ಳಬಹುದು. ವಿವೇಚನೆ ಇರಲಿ. ಅಚಲವಾದ ನಂಬಿಕೆಯೇ ನಿಮ್ಮ ಕಾರ್ಯವನ್ನು ಸರಿಯಾಗಿ ಆಗುವಂತೆ ಮಾಡುವುದು. ದಂಪತಿಗಳ ನಡುವೆ ನಡೆದ ಮಾತುಕತೆಗಳು ಮುಂದಿನ ಹಂತಕ್ಕೂ ಹೋಗಬಹುದು. ನೀವು ಸಾಲ ಪಡೆಯಲು ಯೋಜನೆ ಮಾಡಿದ್ದರೆ ದೀರ್ಘಕಾಲ ಅದನ್ನು ಇಟ್ಟುಕೊಳ್ಳುವುದು ಬೇಡ. ನಿಮ್ಮ ಪ್ರೀತಿಯು ನಿಜವಾಗಿಯೂ ಅದ್ಭುತ ಎನಿಸಬಹುದು. ನಿಮ್ಮ ಅಂದಾಜು ಮೀರಬಹುದು. ಆದಾಯಕ್ಕೆ ನಾನಾ ಮೂಲವನ್ನು ಆಯ್ಕೆ ಮಾಡಿಕೊಳ್ಳುವಿರಿ. ಆಕಸ್ಮಿಕವಾಗಿ ಆರೋಗ್ಯವು ಹದ ತಪ್ಪಬಹುದು. ನಿಮ್ಮನ್ನು ನೀವು ಬದಲಾಯಿಸಲು ಪ್ರಯತ್ನಿಸುವಿರಿ.
ಮೀನ ರಾಶಿ: ಕೋಪವು ಇಂದು ಸಕಾರಣವಗಿದ್ದು, ಮನೆಯವರು ಶಾಂತ ಮಾಡುವರು. ಇಂದು ಒತ್ತಡದ ನಡುವೆಯೂ ನಿಮ್ಮ ಕಾರ್ಯನಿರ್ವಹಣೆಗೆ ಪ್ರಂಶಸೆಗಳು ಸಿಗಲಿವೆ. ಹಣದ ಸಮಸ್ಯೆಗಳಿಂದ ಮುಕ್ತರಾಗುವಿರಿಸಿ. ಅನೇಕ ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ. ವೈದ್ಯವೃತ್ತಿಯನ್ನು ಆರಿಸಿಕೊಂಡ ನಿಮಗೆ ಗೌರವಾದರಗಳು ಸಿಗಲಿವೆ. ಪರೋಪಕಾರದಿಂದ ಆತ್ಮತೃಪ್ತಿ ಆಗಲಿದೆ. ಕೃಷಿ ಉತ್ಪನ್ನಗಳ ಉದ್ಯಮದವರಿಗೆ ಹೆಚ್ಚು ಲಾಭವಾಗಲಿದೆ. ಉನ್ನತ ಉದ್ದೇಶಗಳು ಸಾಕಾರಗೊಳ್ಳುವ ದಿನವಾಗಿದೆ. ಹಬ್ಬದ ವಾತಾವರಣವು ಚೆನ್ನಾಗಿರಲಿದೆ. ಅಲ್ಪ ಆದಾಯವೂ ಉತ್ತೇಜನ ನೀಡುವುದು. ವೈವಾಹಿಕ ಜೀವನವನ್ನು ನಡೆಸುವ ಬಗ್ಗೆ ನಿಮಗೆ ಸಲಹೆಗಳು ಸಿಗುವುದು. ಭೂಮಿಗೆ ಸಂಬಂಧಿಸಿದ ವಿಚಾರಗಳನ್ನು ಇತ್ಯರ್ಥ ಮಾಡಿಕೊಳ್ಳುವುದು ಉಚಿತ. ಉನ್ನತ ವಿದ್ಯಾಭ್ಯಾಸಕ್ಕಾಗಿ ಹೊರಗಡೆ ವಾಸಮಾಡಬೇಕಾಗುವುದು. ನಿಮ್ಮ ಕಾರ್ಯವು ಆಗಬೇಕಾದರೆ ಓಡಾಟ ಅನಿವಾರ್ಯವಾಗಲಿದೆ. ನಿಮ್ಮ ಕೆಲಸವು ಬದಲಾವಣೆಯಾಗಬಹುದು.
Source: TV9 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1