Horoscope Today 26 April: ಈ ರಾಶಿಯವರಿಗೆ ರಾಜಕೀಯ ಬಲದಿಂದ‌ ಉನ್ನತ ಸ್ಥಾನ ಲಭ್ಯ, ಆದಾಯ ಗಳಿಕೆಯ ಪ್ರಯತ್ನಗಳು ಯಶಸ್ವಿಯಾಗುತ್ತವೆ.

ಶಾಲಿವಾಹನ ಶಕೆ ವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಕೃಷ್ಣ ಪಕ್ಷದ ತ್ರಯೋದಶೀ ತಿಥಿ, ಶನಿವಾರ ದುರಭ್ಯಾಸದಿಂದ ತೊಂದರೆ, ಕಲಹದಲ್ಲಿ ಭಾಗಿ, ಬಂಧುಗಳ ವಿರೋಧ, ಸಾಮಾಜಿಕ ಕಾರ್ಯದಲ್ಲಿ ತೊಡಗುವಿಕೆ, ಇವೆಲ್ಲಾ ಇರಲಿದೆ. ಏಪ್ರಿಲ್ 26ರ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

Horoscope Today 26 April: ಈ ರಾಶಿಯವರಿಗೆ ಮಾನಸಿಕ ಹಿಂಸೆ ತಡೆದುಕೊಳ್ಳಲಾಗದು

ಏಪ್ರಿಲ್ 26, ನಿತ್ಯಪಂಚಾಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಶನಿ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ರೇವತೀ, ಯೋಗ : ವೈಧೃತಿ, ಕರಣ : ತೈತಿಲ, ಸೂರ್ಯೋದಯ – 06 – 13 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭಕಾಲ : ರಾಹು ಕಾಲ 09:22 – 10:56, ಯಮಘಂಡ ಕಾಲ 14:05 – 15:39, ಗುಳಿಕ ಕಾಲ 06:14 – 07:48.

ಮೇಷ ರಾಶಿ: : ರಾಜಕೀಯ ಬಲದಿಂದ‌ ಉನ್ನತ ಸ್ಥಾನ ಲಭ್ಯ. ಹೊಸ ಕಾರ್ಯವನ್ನು ಮಾಡಲು ಅತಿಯಾದ ಭಯವು ಬರಲಿದೆ. ಅನಿರೀಕ್ಷಿತವಾಗಿ ಬಂಧುಗಳ ಆಗಮನವಾಗುವುದು. ವ್ಯವಹಾರದಲ್ಲಿ ಲಾಭವು ಆಶಾದಾಯಕವಾಗಿರುತ್ತದೆ. ವೈಯಕ್ತಿಕ ಸಮಸ್ಯೆಗಳ ಒತ್ತಡ ಕಡಿಮೆಯಾಗುತ್ತದೆ. ಯೋಜಿಸಲಾದ ಕೆಲಸಗಳು ನಿಧಾನವಾಗಿ ಪೂರ್ಣಗೊಳ್ಳುತ್ತವೆ. ಆದಾಯ ಗಳಿಕೆಯ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಉದ್ಯೋಗ ಬದಲಾವಣೆಯ ಪ್ರಯತ್ನಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತದೆ. ಜಗಳದಲ್ಲಿ ಮಧ್ಯಪ್ರವೇಶಿಸಿ ಸಮಾಧಾನ ಮಾಡುವಿರಿ. ಆಪ್ತರಿಗೆ ಉಡುಗೊರೆ ಕೊಡಲಿದ್ದೀರಿ. ಅಕಾರಣವಾಗಿ ಬರುವ ಕೋಪವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಿರಿ. ನಿಜವಾದ ಮಿತ್ರನ ಬಗ್ಗೆ ನಿಮಗೆ ಗೊತ್ತಾಗಲಿದೆ. ನೀವು ನಿಮ್ಮ ನಿಯಂತ್ರಣದಲ್ಲಿ ಇದ್ದರೆ ಯಾವ ಏರಿಳಿತವೂ ನಿಮ್ಮನ್ನು ಏನೂ ಮಾಡಲಾಗದು. ಸಣ್ಣ ವಿಚಾರಕ್ಕೆ ಸುಮ್ಮನೇ ಗದ್ದಲ ಮಾಡಿಕೊಳ್ಳುವಿರಿ. ಯಾವುದೋ ಗಹನವಾದ ಆಲೋಚನೆಯಲ್ಲಿ ನೀವು ಮುಳುಗಿರುವಿರಿ.

ವೃಷಭ ರಾಶಿ: : ಅಧ್ಯಾತ್ಮ ಶಕ್ತಿಯಿಂದ ಅನಾರೋಗ್ಯವನ್ನು ತಡೆಯಬಹುದು. ನಿಮಗೆ ದುರಭ್ಯಾಸಗಳು ಉನ್ನತಿಯನ್ನು ತಡೆಯುವುದು. ರೋಗ ಬಾಧೆಯಿಂದ ನೀವು ಹೊರಬರುವಿರಿ. ವ್ಯಾಪಾರದಲ್ಲಿ ನಷ್ಟಕ್ಕೆ ಪಾಲುದಾರರನ್ನು ತೋರಿಸುವುದು ಬೇಡ. ಅದನ್ನು ಗಣನೆಗೆ ತೆಗೆದುಕೊಳ್ಳದೇ ಮುಂದುವರಿಯುವಿರಿ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಹೊಸ ಉದ್ಯೋಗ ಪ್ರಯತ್ನಗಳು ಸಕಾರಾತ್ಮಕವಾಗಿರುತ್ತವೆ. ವಿವಾಹ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಹಣಕಾಸಿನ ಸಮಸ್ಯೆಗಳು ಸ್ವಲ್ಪ ಕಡಿಮೆಯಾಗುತ್ತವೆ. ವಿದ್ಯಾರ್ಥಿಗಳು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಕಳೆದುಕೊಂಡಿದ್ದನ್ನು ನೀವು ಪುನಃ ಪಡೆದುಕೊಳ್ಳುವ ಪ್ರಯತ್ನದಲ್ಲಿ ನೀವು ಇರುವಿರಿ. ಲೆಕ್ಕಕ್ಕೆ ಸಿಗದೇ ಇರುವ ಎಷ್ಟೋ ಹಣವನ್ನು ಕಳೆದುಕೊಳ್ಳಬೇಕಾಗುವುದು. ಹುಡುಗಾಟಿಕೆಯನ್ನು ಬಿಡುವುದು ನಿಮಗೆ ಕಷ್ಟವಾದೀತು. ಬಹಳ ದಿನಗಳಿಂದ ಅಡಗಿದ್ದ ದುಃಖವು ಇಂದು ಪ್ರಕಟವಾದೀತು. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ. ದೀರ್ಘಕಾಲದ ಸ್ನೇಹವು ಹೊಸದಾಗಿ ಆರಂಭವಾಗಲಿದೆ.

ಮಿಥುನ ರಾಶಿ: ಸ್ವಂತ ಉದ್ಯಮಕ್ಕೆ ಸಣ್ಣ ವಿರಾಮ ಕೊಡುವಿರಿ. ನಿಮ್ಮ ಹೊಸ ಪ್ರಯತ್ನಗಳು ಕಾರ್ಯಕ್ಕೆ ಬೇಕಾದ ಉತಗಸಾವನ್ನು ಕೊಡುವುದು.‌ ವಾಹನ ಸಂಚಾರಕ್ಕೆ ಅಡೆತಡೆಗಳಾಗಬಹುದು. ಮನೆಯ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವುದಿಲ್ಲ. ವೈಯಕ್ತಿಕ ಸಮಸ್ಯೆಗಳಿಂದ ಪರಿಹಾರ ಪಡೆಯುತ್ತೀರಿ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಪ್ರಾಮುಖ್ಯತೆ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಸಣ್ಣ ಲಾಭಗಳ ಸಾಧ್ಯತೆ ಇದೆ. ಹಣಕಾಸಿನ ಪ್ರಯತ್ನಗಳು ಮತ್ತು ಹಣಕಾಸಿನ ವಹಿವಾಟುಗಳು ಉತ್ತಮವಾಗಿರುತ್ತದೆ. ಹೂಡಿಕೆಯನ್ನು ನಿಲ್ಲಿಸುವ ಮನಸ್ಸಾಗುವುದು. ನಿಮಗೆ ಆಗದವರ ಮೇಲೆ ಸಲ್ಲದ ದೂರನ್ನು ಕೊಡುವಿರಿ. ತೀರ್ಥಕ್ಷೇತ್ರಗಳಿಗೆ ಹೋಗುವ ಮನಸ್ಸಾಗುವುದು. ಇಷ್ಟ ಮಿತ್ರರ ಭೇಟಿಯು ನಿಮಗೆ ಸಂತೋಷವನ್ನು ಕೊಡುವುದು. ಕೆಲವರ ತಂತ್ರಕ್ಕೆ ಸಿಲುಕಿ ನೀವು ಒದ್ದಾಡಬೇಕಾಗುವುದು. ನಟರಿಗೆ ಅವಕಾಶವು ಸಿಕ್ಕೂ ಸಿಗದಂತೆ ಆಗಬಹುದು. ಎಲ್ಲ ಸನ್ನಿವೇಶಕ್ಕೂ ಒಂದೇ ಪರಿಹಾರವು ಇರದು. ಮನೋರಥವನ್ನು ಈಡೇರಿಸಿಕೊಳ್ಳುವುದು ನಿಮಗೆ ಕಷ್ಟವಾಗುವುದು.

ಕರ್ಕಾಟಕ ರಾಶಿ: ನಿರ್ದಿಷ್ಟ ಕೆಲಸಗಳ ಮೇಲೆ ಅಧಿಕ ಗಮನವಿರಲಿದೆ. ಭೂಮಿಯ ವ್ಯವಹಾರಕ್ಕೆ ಕೈ ಹಾಕಲು ಹಿಂದೇಟು ಹಾಕುವಿರಿ. ಚಟುವಟಿಕೆಯಿಂದ ಇದ್ದರೂ ನಿಮ್ಮ ಕೆಲಸ ಮಾತ್ರ ಆಗದೇ ಇರುವುದು. ಪಾಲುದಾರಿಕೆಯನ್ನು ಪಡೆಯುವ ಮೊದಲು ಸಾಧ್ಯಾಸಾಧ್ಯತೆಗಳ ಬಗ್ಗೆ ಗಮನವಿರಲಿ. ವ್ಯವಹಾರಗಳು ತೃಪ್ತಿಕರವಾಗಿ ಮುಂದುವರಿಯುತ್ತದೆ. ಆದಾಯ ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಸಮಸ್ಯೆಗಳು ಮತ್ತು ವಿವಾದಗಳು ಬಗೆಹರಿಯುತ್ತವೆ. ಯಾವುದೇ ಪ್ರಯತ್ನ ಯಶಸ್ವಿಯಾಗುತ್ತದೆ. ನಿರೀಕ್ಷೆಗೂ ಮೀರಿದ ಆರ್ಥಿಕ ಪ್ರಗತಿ ಇರುತ್ತದೆ. ಹಿಂದಿನ ಸಮಸ್ಯೆಗಳು ಬಹಳ ಕಡಿಮೆಯಾಗುತ್ತವೆ. ನಿಮಗೆ ಸಿಗದ ಅಧಿಕಾರದ ಬಗ್ಗೆ ನಿಮಗೆ ಸ್ವಲ್ಪ ಅಸಮಾಧನಾವಿರುವುದು. ನಿಮ್ಮ ಉದ್ಯೋಗಕ್ಕೆ ಯಾರಿಂದಲಾದರೂ ಹೂಡಿಕೆಯನ್ನು ಮಾಡಿಸಿಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎಂದನಿಸಬಹುದು. ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರ. ನಿಮ್ಮ ನಿಯಮಿತ ಚೌಕಟ್ಟನ್ನು ಬಿಟ್ಟು ಆಚೆ ಬರಲು ಆಗದು. ನಿಮ್ಮ ನಡತೆಯಿಂದ ಕುಲಕ್ಕೆ ಅವಮಾನ.

ಸಿಂಹ ರಾಶಿ: ಮೇಲಧಿಕಾರಿಗಳನ್ನು ಪ್ರಶಂಸಿಸಿ ಕೆಲಸ ಮಾಡಿಸಿಕೊಳ್ಳುವಿರಿ. ನಿಮಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ವಾರ್ತೆಯು ಬರಬಹುದು. ಗೃಹ ನಿರ್ಮಾಣದ ಕಡೆಗೆ ಗಮನವಾಗಬೇಕಾಗುವುದು. ಕಛೇರಿಯ ಕೆಲಸಗಳ ಕಡೆ ವೈಯಕ್ತಿಕ ವಿಚಾರದ ಕಡೆ ಗಮನ ನೀಡಿಲಾಗದು. ಜೀವನವು ಸುಗಮವಾಗಿ ಸಾಗುತ್ತದೆ. ಹಣಕಾಸಿನ ವ್ಯವಹಾರಗಳು ಯಶಸ್ವಿಯಾಗಿ ಮತ್ತು ತೃಪ್ತಿಕರವಾಗಿ ಪೂರ್ಣಗೊಳ್ಳುತ್ತವೆ. ನಿರುದ್ಯೋಗಿಗಳ ಪ್ರಯತ್ನಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತದೆ. ಆದಾಯ ಸ್ಥಿರವಾಗಿರುತ್ತದೆ. ಆರೋಗ್ಯ ಚೆನ್ನಾಗಿರುವಂತೆ ತೋರುತ್ತದೆ. ಪ್ರಯಾಣವು ಲಾಭವನ್ನು ತರುತ್ತದೆ. ತಪ್ಪನ್ನು ಮಾಡಿ ಅನಂತರ ಅದನ್ನು ಸರಿ ಮಾಡಿಕೊಳ್ಳಲು ವಿವಿಧ ಪ್ರಯತ್ನವನ್ನು ಮಾಡುವಿರಿ. ನೀರಿನಿಂದ ಭಯವು ಉಂಟಾಗುವುದು. ಮನೆಯಲ್ಲಿ ಹಬ್ಬದ ವಾತಾವರಣ ಇರಲಿದ್ದು ನೀವೂ ಬಹಳ ದಿನಗಳ ಅನಂತರ ಇಂತಹ ಸಂತೋಷವನ್ನು ಪಡೆಯುವಿರಿ. ಕೆಲವು ವಿಚಾರಗಳಿಗೆ ಮತ್ತೆ ಮತ್ತೆ ಹೇಳಿಕೊಳ್ಳಬೇಕಾದೀತು. ಕಛೇರಿಯ ಕಾರ್ಯವನ್ನು ಮನೆಯಲ್ಲಿ ಇದ್ದು ಮಾಡಬೇಕಾಗಬಹುದು.

ಕನ್ಯಾ ರಾಶಿ: ಇಂದಿನ ಘಟನೆಯನ್ನು ತಾಳ್ಮೆಯಿಂದ ಎದುರಿಸುವುದು ಕಷ್ಟವಾಗಬಹುದು. ಇಂದು ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವು ವ್ಯಯವಾಗಬಹುದು. ವಿವಾದಗಳಿಂದ ಸಮಯವು ಹಾಳಾಗಬಹುದು.‌ ಆರ್ಥಿಕವಾಗಿ ನಿಮ್ಮ ನಡೆಯು ಅರ್ಥವಾಗದೇ ಇರುವುದು. ಹಿರಿಯರಿಗೆ ಎದುರು ಮಾತನಾಡಿ ಅನಂತರ ಪಶ್ಚಾತ್ತಾಪಪಡುವಿರಿ. ಆದಾಯ ನಿರೀಕ್ಷೆಯಂತೆ ಹೆಚ್ಚಾಗುವ ಸಾಧ್ಯತೆಯಿದೆ. ನೀವು ಕೆಲಸದಲ್ಲಿ ಅಧಿಕಾರವನ್ನು ಪಡೆಯುತ್ತೀರಿ. ಆರೋಗ್ಯ ಸ್ಥಿರವಾಗಿರುತ್ತದೆ. ಪ್ರಮುಖ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಸಹೋದರನ ಜೊತೆ ಆಸ್ತಿ ವಿವಾದ ಬಗೆಹರಿಯುತ್ತದೆ. ನೆನಪಿನ ಶಕ್ತಿಗೆ ಸೂಕ್ತವಾದ ಪರಿಹಾರವನ್ನು ಮೊದಲು ಮಾಡಿಕೊಳ್ಳಬೇಕಾಗುವುದು. ಯಾರನ್ನಾದರೂ ದೂಷಿಸಿ ಅವರ ವಿರೋಧವನ್ನು ಕಟ್ಟಿಕೊಳ್ಳುವಿರಿ. ಮಾತುಗಾರರು ಎಂದಿನ ವಾಚಾಳಿತನವನ್ನು ಕಡಿಮೆಮಾಡುವರು. ಸಿಟ್ಟಿನ‌ ಸ್ವಭಾವವನ್ನು ಬದಲಿಸಿಕೊಳ್ಳುವುದು ಸೂಕ್ತ. ಮನೆಯ ಕಾರ್ಯದಲ್ಲಿ ಸಮಯವು ಕಳೆದುಹೋಗುವುದು.

ತುಲಾ ರಾಶಿ: ಯಾವುದೋ ಕಾರಣಕ್ಕೆ ಬಿಟ್ಟುಹೋಗಿದ್ದ ಗೆಳೆತನ ಪುನಃ ಪ್ರಾರಂಭ. ಮಾನಸಿಕ ಒತ್ತಡವನ್ನು ಮಾಡಿಕೊಳ್ಳುವ ಸನ್ನಿವೇಶವು ಬರುವುದು. ವಾಸಸ್ಥಳದ ಬದಲಾವಣೆಯಿಂದ‌ ನೆಮ್ಮದಿ ಇರುವುದು. ಪ್ರಭಾವಿ ಜನರ ಭೇಟಿಯಿಂದ ಉದ್ಯೋಗದ ಬದಲಾವಣೆ ಸಾಧ್ಯವಾಗುವುದು. ಭೂಮಿಯ ಲಾಭಕ್ಕಾಗಿ ಹೆಚ್ಚು ಓಡಾಟ ಮಾಡಬೇಕಾಗುವುದು. ಇಡೀ ದಿನ ತೃಪ್ತಿಕರವಾಗಿ ಕಳೆಯುತ್ತದೆ. ಆದರೆ ನಿಮ್ಮ ವೃತ್ತಿ ಮತ್ತು ಉದ್ಯೋಗದಲ್ಲಿ ಸ್ವಲ್ಪ ಕೆಲಸದ ಒತ್ತಡ ಇರುತ್ತದೆ. ವ್ಯವಹಾರಗಳು ನಿರೀಕ್ಷಿತ ಲಾಭವನ್ನು ಗಳಿಸುತ್ತವೆ. ಯಾವುದೇ ಪ್ರಯತ್ನ ಫಲ ನೀಡುತ್ತದೆ. ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುತ್ತದೆ. ಉನ್ನತ ಅಧಿಕಾರಿಗಳ ಜೊತೆ ಹೆಚ್ಚು ವ್ಯವಹಾರವನ್ನು ಮಾಡಬೇಕಾಗಿರುವ ಕಾರಣ ಅವರ ಜೊತೆ ಓಡಾಡುವಿರಿ. ಹಣಕಾಸಿನ ವೆಚ್ಚಗಳ ಬಗ್ಗೆ ವಿಶೇಷವಾಗಿ ಕಾಳಜಿ ಬೇಕು. ಸ್ನೇಹತರ ಜೊತೆ ಮೋಜಿನಲ್ಲಿ ದಿನವನ್ನು ಮುಗಿಸುವಿರಿ. ಎಲ್ಲವನ್ನೂ ಒಮ್ಮೆಲೇ ಪಡೆಯಬೇಕು ಎಂಬ ಮನೋಭಾವವು ಸದ್ಯಕ್ಕೆ ಬೇಡ. ಅಪರಿಚಿತರ ಜೊತೆ ವಿವಾದ ಬೇಡ. ಸಂಪ್ರದಾಯದ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಬಹುದು.

ವೃಶ್ಚಿಕ ರಾಶಿ: ಆಪ್ತರ ನೋವಿಗೆ ನೀವು ನೀಡುವ ಸ್ಪಂದನೆಯೇ ದೊಡ್ಡ ಬಲ. ಅನೇಕ‌ ಅನುಮಾನಗಳಿಗೆ ಕಾರಣವಾಗಬಹುದು. ಉದ್ಯೋಗ ಮತ್ತು ವ್ಯವಹಾರಗಳು ಸರಾಗವಾಗಿ ಮುಂದುವರಿಯುತ್ತವೆ. ಆದಾಯ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯಕ್ಕೆ ಯಾವುದೇ ಕೊರತೆ ಇಲ್ಲ. ವಿದೇಶಿ ಉದ್ಯೋಗಗಳಿಗೆ ಅವಕಾಶಗಳಿವೆ. ನಿಮ್ಮ ವಿವಾಹ ಪ್ರಯತ್ನಗಳಲ್ಲಿ ಶುಭಸುದ್ದಿ ಸಿಗುತ್ತದೆ. ಮಕ್ಕಳು ತಮ್ಮ ಅಧ್ಯಯನದಲ್ಲಿ ಪ್ರಗತಿ ಸಾಧಿಸುತ್ತಾರೆ. ಮನಃಶಾಂತಿಯು ಇರುವ ಕಾರಣ ಯಾವುದೇ ಉದ್ವೇಗಕ್ಕೆ ಒಳಗಾಗುವುದಿಲ್ಲ. ಮಾತಿನ ಘರ್ಷಣೆಯಿಂದ ಕುಟುಂಬದ ಸೌಖ್ಯವು ಹಾಳಾಗಬಹುದು. ಏಕಾಗ್ರತೆಯಿಂದ ಕೆಲಸ ಮಾಡಿದರೆ ಅನಾಯಾಸವಾಗಿ ಗುರಿಯನ್ನು ತಲುಪಬಹುದು. ಮಕ್ಕಳ ಜೊತೆ ಚಿಂತೆಯನ್ನೆಲ್ಲ ಬಿಟ್ಟು ಸಂತೋಷದಿಂದ ಕಾಲವನ್ನು ಕಳೆಯುವಿರಿ. ಔದಾಸೀನ್ಯದಿಂದ ವ್ಯಾಪಾರದಲ್ಲಿ ನಷ್ಟವಾಗಲಿದೆ. ಮಿತ್ರರಿಂದ ಸಿಗಬೇಕಾದ ಹಣಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ. ನಿರೀಕ್ಷಿತ ಫಲವು ಲಭಿಸದು. ದೇವರ ಬಗ್ಗೆ ಶ್ರದ್ಧೆಯು ಕಡಿಮೆಯಾಗಲಿದೆ.

ಧನು ರಾಶಿ: ಕಷ್ಟದಿಂದ ತುಂಬಿದ ಸಾಲವು ಇಂದು ನಗಣ್ಯವೆನಿಸಬಹುದು. ಸರಿಯಾದ ದಾಖಲೆಯೊಂದಿಗೆ ಪ್ರಸ್ತುತಪಡಿಸಿ. ಇಂದಿನ ನಿಮ್ಮ ಯತ್ನದಿಂದ ಅಂದುಕೊಂಡ ಕಾರ್ಯವು ಸುಲಲಿತವಾಗುವುದು. ಪರರ ಕಷ್ಟಗಳಗೆ ಸ್ಪಂದಿಸಲು ಆಗದೇ ಇರಬಹುದು. ವಿವಾಹ ಯೋಗವನ್ನು ನೀವು ಒಪ್ಪಿಕೊಳ್ಳವುದು ಅನಿವಾರ್ಯ. ಯಾರಿಂದಲೂ ಧನಸಹಾಯವನ್ನು ಪಡೆಯಬಾರದು ಎಂಬ ಸಂಕಲ್ಪ ನಿಮ್ಮದಾಗಿರುವುದು. ಕೆಲಸದ ಜೀವನವು ಹೊಸ ಎತ್ತರವನ್ನು ಪಡೆಯುತ್ತದೆ. ಆದಾಯ ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಒಳ್ಳೆಯ ಸುದ್ದಿಗಳನ್ನು ಕೇಳುವ ಸಾಧ್ಯತೆಯಿದೆ. ನಿರುದ್ಯೋಗಿಗಳಿಗೆ ಅಪೇಕ್ಷಿತ ಮಾಹಿತಿ ಸಿಗಲಿದೆ. ಆದರೆ ಕುಟುಂಬ ಸದಸ್ಯರ ಖರ್ಚು ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಪ್ರಯತ್ನದಿಂದ ಉತ್ತಮ ಫಲಿತಾಂಶಗಳನ್ನು ಸಾಧಿಸುತ್ತಾರೆ. ಉತ್ತಮ ಕೆಲಸವನ್ನು ಅಜ್ಞಾನದಿಂದ ನಷ್ಟ ಮಾಡಿಕೊಳ್ಳುವಿರಿ. ಉದ್ಯಮದ ಕಾರಣ ಇರುವ ಸ್ಥಳದಿಂದ ದೂರ ಹೋಗಬೇಕಾಗುವದು. ಸುಳ್ಳಯ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಅಚಾತುರ್ಯದಿಂದ ಹಣವನ್ನು ಕಳೆದುಕೊಳ್ಳಬೇಕಾದೀತು. ಬೇಡದ ಕಾರ್ಯಕ್ಕೆ ಯಾರಾದರೂ ಪ್ರಚೋದಿಸಿಯಾರು.

ಮಕರ ರಾಶಿ: ದೊಡ್ಡ ಹೂಡಿಕೆ ದೊಡ್ಡ ಆದಾಯವನ್ನು ತರಲಿದೆ ಎಂಬ ಭ್ರಮೆ ಬೇಡ. ನಿಮಗೆ ಆಪ್ತರ ಹಿತ ನುಡಿಯನ್ನು ಕೇಳುವ ಅನಿವಾರ್ಯತೆ ಸೃಷ್ಟಿಯಾಗಲಿದೆ. ವೃತ್ತಿಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ತೊಂದರೆ ಬರಬಹುದು. ಸಲ್ಲದ ಅಪವಾದವನ್ನು ಒಪ್ಪಿಕೊಳ್ಳಲಾರಿರಿ. ನೀವು ಕೈಗೊಳ್ಳುವ ಯಾವುದೇ ಪ್ರಯತ್ನವು ಖಂಡಿತವಾಗಿಯೂ ಯಶಸ್ವಿಯಾಗುತ್ತದೆ. ಆದಾಯ ಹೆಚ್ಚಾಗಲಿದೆ. ವ್ಯರ್ಥ ಖರ್ಚು ಹೆಚ್ಚಾಗುವ ಸಾಧ್ಯತೆಯೂ ಇದೆ. ನಿರುದ್ಯೋಗಿಗಳಿಗೆ ವಿದೇಶದಿಂದ ಅಪೇಕ್ಷಿತ ಮಾಹಿತಿ ಸಿಗಲಿದೆ. ಕೆಲಸದಲ್ಲಿ ಆದ್ಯತೆ ಹೆಚ್ಚಾಗುತ್ತದೆ. ಅನಾರೋಗ್ಯದಿಂದ ಸ್ವಲ್ಪ ಚೇತರಿಕೆ ಕಂಡುಬರಲಿದೆ. ವೈಯಕ್ತಿಕ ಸಮಸ್ಯೆಗಳು ಕಡಿಮೆಯಾಗುತ್ತವೆ. ನಿಮ್ಮ ಹಠದ ಸ್ವಭಾವವು ಇತರರಿಗೆ ನೋವನ್ನು ಕೊಡಬಹುದು. ಸಹೋದ್ಯೋಗಿಗಳ ಜೊತೆ ನಿಮ್ಮ ಮಾತು ಅಸಹವಾಗಿರುವುದು. ವಿವಾದದಲ್ಲಿರುವ ಆಸ್ತಿಯಿಂದ ಮಾರಾಟವು ನಿಧಾನವಾಗುವುದು. ಸರ್ಕಾರ ಕಾರ್ಯವು ಇಂದು ಪೂರ್ಣವಾಗದು ಎಂದು ಅಂದುಕೊಂಡಿದ್ದರೂ ಕೊನೆಗೆ ಕೆಲಸವಾಗುವುದು. ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬೆಳೆಯಬಹುದು.

ಕುಂಭ ರಾಶಿ: ಬಂಧುಗಳ ಆಗಮನದಿಂದ ಮನೆಯ ವಾತಾವರಣ ನಿಮಗೆ ಸಮಾಧಾನ ತರದು.‌ ನಿಮ್ಮ ಉದ್ಯಮದ ಅಭಿವೃದ್ಧಿಗೆ ಕುಂಠಿತವಾಗುವ ಕೆಲವು ಸಂಗತಿಗಳು ಬರಬಹುದು. ಹಿತಶತ್ರುಗಳಿಂದ ನಿಮಗೆ ಹಿನ್ನಡೆಯಾಗಲಿದೆ. ನಿಮ್ಮ ವಸ್ತುಗಳ ಕಳ್ಳತನ ಆಗಬಹುದು. ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಹರಿಸುವುದು ಅಗತ್ಯ. ಕೆಲಸದ ಜೀವನವು ಸಕಾರಾತ್ಮಕವಾಗಿರುತ್ತದೆ. ವೃತ್ತಿಪರ ಜೀವನ ತೃಪ್ತಿಕರವಾಗಿ ಮುಂದುವರಿಯುತ್ತದೆ. ನೀವು ವ್ಯವಹಾರದಲ್ಲಿ ಉತ್ತಮ ಫಲಿತಾಂಶಗಳನ್ನು ಅನುಭವಿಸುವಿರಿ. ಕುಟುಂಬ ಜೀವನವು ಸಂತೋಷದಿಂದ ತುಂಬಿರುತ್ತದೆ. ನಿಮಗೆ ಬೇಕಾದುದನ್ನು ಹಠ ಮಾಡಿ ಪಡೆದುಕೊಳ್ಳುವಿರಿ. ನಿಮ್ಮನ್ನು ಪ್ರೀತಿಸುವವರಿಗೆ ಸಮಯವನ್ನು ಕೊಡಿ. ಹಣವನ್ನು ಅನ್ಯ ಕಾರ್ಯಕ್ಕೆ ಬಳಸುವಿರಿ. ಕಲಾವಿದರು ಅವಕಾಶದಿಂದ ವಂಚಿತರಾಗಬೇಕಾಗುವುದು. ಇಂದು ನಿಮಗೆ ಸಾಮಾಜಿಕ ಕಾರ್ಯಗಳಿಗೆ ಪ್ರೇರಣೆ ಸಿಗಬಹುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಓಡಾಟವು ಅಧಿಕವಾಗಿ ಇರುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ನೀವೇ ವಿಶೇಷ ಕಾಳಜಿಯನ್ನು ತೋರಿಸಬೇಕು.

ಮೀನ ರಾಶಿ: ಆರ್ಥಿಕವಾಗಿ ಏಳಿಗೆಯ ದಾರಿಯನ್ನು ನಿರೀಕ್ಷಿಸುತ್ತಲೇ ಇರುವಿರಿ. ಇಂದು ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ನೌಕರರಿಂದ ತೊಂದರೆ ಬರಬಹುದು. ವಿಶೇಷ ದ್ರವ್ಯ ಲಾಭದಿಂದ ಸಂತಸವು ಇರಲಿದೆ. ಗೊಂದಲಗಳಿಂದ ನಿಮ್ಮ‌ ಕಾರ್ಯವು ವೇಗವನ್ನು ಕಳೆದುಕೊಳ್ಳುವುದು. ಉದ್ಯೋಗದಲ್ಲಿ ಒಂದು ಹೆಜ್ಜೆ ಮೇಲಕ್ಕೆ ಸಾಗುವ ಅವಕಾಶ ಸಿಗುತ್ತದೆ. ವೃತ್ತಿ ಮತ್ತು ವ್ಯವಹಾರಗಳು ಲಾಭದಾಯಕವಾಗಿ ಮುಂದುವರಿಯುತ್ತವೆ. ಆದಾಯ ಗಮನಾರ್ಹವಾಗಿ ಹೆಚ್ಚಾದಂತೆ ಹಣಕಾಸಿನ ಸಮಸ್ಯೆಗಳು ಬಗೆಹರಿಯುತ್ತವೆ. ಉನ್ನತ ರಾಜಕೀಯ ಹುದ್ದೆಗಳಲ್ಲಿರುವ ಜನರೊಂದಿಗೆ ಸಂಪರ್ಕಗಳು ಹೆಚ್ಚಾಗುತ್ತವೆ. ಕಛೇರಿ ಕೆಲಸದಿಂದ ನಿಮ್ಮ ಸ್ವಂತ ಕೆಲಸಕ್ಕೆ ತೊಂದರೆಯಾಗಬಹುದು.‌ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನವನ್ನು ನೀಡುವರು. ಬಂಧುಗಳ ವಿವಾಹದ ಕಾರ್ಯಕ್ಕೆ ಓಡಾಟ ಮಾಡಬೇಕಾದೀತು. ಇಂದು ಒಂದಿಷ್ಟು ಆಯಾಸ ಬಿಟ್ಟರೆ, ಮತ್ತೇನೂ ಆಗದು. ಇನ್ನೊಬ್ಬರ ಬಗ್ಗೆ ನಿಮ್ಮಲ್ಲಿ ಕುತೂಹಲ ಇರಲಿದೆ. ಸಜ್ಜನರ ಜೊತೆ ಸಮಯ ಕಳೆಯುವ ಅವಕಾಶ ಸಿಗುವುದು.

Source: TV9 Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *