ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ದ್ವಿತೀಯಾ ತಿಥಿಯಲ್ಲಿ ಒಮ್ಮೆಲೆ ಜವಾಬ್ದಾರಿ, ಉದ್ಯೋಗದಲ್ಲಿ ಅಸಹಕಾರ, ಆಪ್ತರ ನಿರ್ಲಕ್ಷ್ಯಕ್ಕೆ ಒಳಗಾಗುವುದು, ಭಾವನೆಗೆ ಪೆಟ್ಟು, ಹೊಸ ಯೋಜನೆಗಳನ್ನು ಜಾರಿಗೊಳಿಸುವ ಪ್ರಕ್ರಿಯೆಯು ನಡೆಯಲಿರುವುದು ಇಂದಿನ ಭವಿಷ್ಯ ಹೇಳಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ದ್ವಿತೀಯಾ ನಿತ್ಯನಕ್ಷತ್ರ : ಶತಭಿಷಾ, ಯೋಗ : ವ್ಯತಿಪಾತ್, ಕರಣ : ಬವ , ಸೂರ್ಯೋದಯ – 07 – 02 am, ಸೂರ್ಯಾಸ್ತ – 06 – 29 pm, ಇಂದಿನ ಶುಭಾಶುಭಕಾಲ : ರಾಹು ಕಾಲ 14:12 – 15:38, ಯಮಘಂಡ ಕಾಲ 07:02 – 08:28, ಗುಳಿಕ ಕಾಲ 09:54 – 11:20
ಮೇಷ ರಾಶಿ: ಕಳೆದುಕೊಂಡ ಸಂಪತ್ತನ್ನು ಮತ್ತೆ ಪಡೆಯುವ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮ ಸಹಾಯವನ್ನು ಪಡೆದವರು ನಿಮ್ಮನ್ನು ಮರೆಯಬಹುದು. ಒಮ್ಮೆಲೆ ಹಲವಾರು ಜವಾಬ್ದಾರಿಗಳನ್ನು ನೀವು ನಿರ್ವಹಿಸಬೇಕಾಗುವುದು. ನಿಮ್ಮ ಪ್ರೀತಿಗೆ ವಂಚನೆಯಾಗುವ ಸಾಧ್ಯತೆ ಇದೆ. ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳುವಿರಿ. ದುರಭ್ಯಾಸಗಳ ಕಡೆ ಗಮನಹೋಗುವು ಸಾಧ್ಯತೆ ಇದೆ. ಮಕ್ಕಳ ಮೇಲಿಟ್ಟ ಭರವಸೆಯು ಫಲಿಸಬಹುದು. ಸಂಗಾತಿಗೆ ನೀವೇ ಧೈರ್ಯಕೊಡಬೇಕಾಗುವುದು. ದೈವಭಕ್ತಿ ಶ್ರದ್ಧೆಗಳು ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದು. ಇನ್ನೊಬ್ಬರಿಗೆ ಕೊಡುವ ಸಮಯು ವ್ಯರ್ಥವಾಗುವುದು. ನಿರಂತರ ಕೆಲಸದಿಂದ ನಿಮಗೆ ಸ್ವಲ್ಪ ವಿಶ್ರಾಂತಿಯ ಅವಶ್ಯಕತೆ ಇದೆ. ಯಾವ ಬಂಧನಕ್ಕೂ ಒಳಪಡದೇ ಮನಸ್ಸು ಮುಕ್ತವಾಗಿರಲು ಬಯಸುವುದು. ಸಾಮರಸ್ಯದ ಅಭಾವವು ದ್ವೇಷಕ್ಕೆ ಕಾರಣವಾಗುವುದು. ಅಭ್ಯಾಸ ವಿಷಯದಲ್ಲಿ ನಿಮಗೆ ಪೂರ್ಣ ತೃಪ್ತಿ ಇರದು. ಸಿಕ್ಕ ವಸ್ತುವನ್ನು ಸರಿಯಾಗಿ ಬಳಸಿಕೊಳ್ಳಿ. ನಿಮ್ಮನ್ನು ಸ್ನೇಹಿತರು ಕಡೆಗಣಿಸಬಹುದು.
ವೃಷಭ ರಾಶಿ: ಆರ್ಥಿಕವಾಗಿ ಸಬಲರೆಂದು ತೋರಿಸಿಕೊಳ್ಳಲು ಇಷ್ಟಪಡುವುದಿಲ್ಲ. ಇಂದು ಆಸ್ತಿಯ ವಿಚಾರವಾಗಿ ಕುಟುಂಬದಲ್ಲಿ ಮಾತುಕತೆಗಳು ನಡೆಯಬಹುದು. ಹಿತಶತ್ರುಗಳನ್ನು ನೀವು ನಿಭಾಯಿಸುವುದು ಕಷ್ಟವಾದೀತು. ದೊಡ್ಡ ವ್ಯಕ್ತಿತ್ವದ ಬಗ್ಗೆ ನಿಮಗೆ ಅರಿವಿರದು. ಕೃತಜ್ಞತೆಯನ್ನು ಸ್ಮರಿಸಿಕೊಳ್ಳುವ ವಿಧಾನವನ್ನು ಕಂಡುಕೊಳ್ಳುವಿರಿ. ಅಮೂಲ್ಯ ವಸ್ತುವನ್ನು ನಿರ್ಲಕ್ಷ್ಯದಿಂದ ಎಲ್ಲಿಯೋ ಇಟ್ಟು ಕಳೆದುಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳಿಂದ ನೀವು ಸಾಮಾಜಿಕ ಕಾರ್ಯಕ್ಕೆ ಹಣವನ್ನು ಪಡೆಯುವಿರಿ. ಆಪ್ತರನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮೊಳಗಿರುವ ತರತಮಭಾವವನ್ನು ಪ್ರಕಟಿಸಲಾರಿರಿ. ನಿಮ್ಮ ಅನುಮಾನದ ಬುದ್ಧಿಯನ್ನು ಕಡಿಮೆ ಮಾಡಿ, ಯಾವುದಾದರೂ ಸದ್ವಿಚಾರಕ್ಕೆ ಗಮನಕೊಡಿ. ನಿಮ್ಮವರು ನಿಮ್ಮನ್ನು ಬೇರೆ ಕೆಲಸಗಳಿಗೆ ಕರೆದುಕೊಂಡು ಹೋಗುವರು. ನಿಮ್ಮ ಪಕ್ಷಪಾತವು ಕೆಲವರಿಗೆ ಇಷ್ಟವಾಗದು. ನೀವು ವಹಿಸಿಕೊಂಡ ನಿರ್ಮಾಣ ಕೆಲಸಗಳು ನಿಧಾನವಾಗುವುದು.
ಮಿಥುನ ರಾಶಿ: ಸಮರ್ಥರ ಜೊತೆ ವಾಗ್ವಾದ ನಡೆಸುವಿರಿ. ವೃತ್ತಿಯಲ್ಲಿ ಸುಲಭದ ಕಾರ್ಯವನ್ನು ನೀವು ಆರಿಸಿಕೊಳ್ಳುವಿರಿ. ಆತ್ಮವಿಶ್ವಾಸದ ಕೊರೆತೆಯು ಕಾಣಿಸುವುದು. ಮಾತನ್ನು ಅಧಿಕವಾಗಿ ಆಡಿ ಇತರರಿಗೆ ಬೇಸರವನ್ನು ತರಿಸುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮ್ಮ ಗಮನ ಮುಖ್ಯವಾಗಿರಲಿ. ವಿವಾಹ ಸಂಬಂಧಕ್ಕೆ ನಿಮ್ಮ ಪೂರ್ಣ ಸಹಮತ ಇರದು. ಸ್ನೇಹಿತರ ಜೊತೆ ಮೋಜಿನಲ್ಲಿ ಕಾಲ ಕಳೆಯುವಿರಿ. ಸಹೋದ್ಯೋಗಿಗಳ ಸಹಕಾರದಿಂದ ವೃತ್ತಿಯಲ್ಲಿ ಅಸಮಾಧಾನ ಕಾಣಿಸುವುದು. ಮನಸ್ಸು ಬಹಳ ಖಿನ್ನತೆಗೆ ಹೋಗಬಹುದು. ಯಾವ ವಿಚಾರವನ್ನೂ ತೀರ್ಮಾನಿಸಲಾಯಿತು ಆಗದು. ವ್ಯಾಪಾರದಲ್ಲಿ ನಿಮ್ಮ ಜಾಣ್ಮೆಯನ್ನು ತೋರಿಸುವಿರಿ. ಮಕ್ಕಳ ಶಿಕ್ಷಣದ ವಿಚಾರದಲ್ಲಿ ನಿಮಗೆ ಸಮಾಧಾನವು ಪೂರ್ಣವಾಗಿ ಇರದು. ಅಹಂಕಾರದ ಮಾತುಗಳು ಇತರರಿಗೆ ಹಿಂಸೆಯಾದೀತು. ಪ್ರಖ್ಯಾತ ವ್ಯಕ್ತಿಗಳನ್ನು ಅನಿರೀಕ್ಷಿತವಾಗಿ ಭೇಟಿ ಮಾಡುವಿರಿ. ದೊಡ್ಡ ಅಪಾಯದಿಂದ ನೀವು ಸುರಕ್ಷಿತರಾಗಿರುವಿರಿ. ಸಂಗಾತಿಯ ಇಂಗಿತವನ್ನು ತಿಳಿಯಲು ಪ್ರಯತ್ನಿಸುವಿರಿ.
ಕರ್ಕಾಟಕ ರಾಶಿ: ಭೇದಭಾವವನ್ನು ಮರೆತು ಅಲ್ಪಕಾಲವಾದರು ಬಂಧುಗಳ ಜೊತೆ ಇರಬೇಕಾದೀತು. ಹಠದಿಂದ ಏನನ್ನೂ ಸಾಧಿಸಲಾಗದು ಎಂಬುದು ನಿಮಗೇ ಮನವರಿಕೆಯಾಗಲಿದೆ. ಉದ್ಯೋಗಮಿತ್ರರು ನಿಮ್ಮ ಕಾರ್ಯಗಳಿಗೆ ಸಹಕಾರ ನೀಡುವರು. ಶತ್ರುಗಳು ಸಹಿಸಲಾಗದೇ ನಿಮ್ಮ ಮೇಲೆ ಆರೋಪಗಳನ್ನು ಮಾಡಬಹುದು. ಎಲ್ಲದರಲ್ಲಿಯೂ ನೀವೇ ಬುದ್ಧಿವಂತರು ಎಂದು ತೋರಿಸಿಕೊಳ್ಳುವುದು ಬೇಡ. ಎಲ್ಲ ಕಡೆ ನೀವೇ ಕಾಣಿಸಿಕೊಳ್ಳಬೇಕು ಎಂಬ ಧೋರಣೆ ಕಾಣಿಸುವುದು. ಮನೋರಂಜನೆಯಲ್ಲಿ ಪಾಲ್ಗೊಂಡು ಮನಸ್ಸು ಹಗುರಾಗುವುದು. ಅಧಿಕಾರದಿಂದ ಕೂಡಿದ ಮಾತು ನಿಮಗೆ ಪ್ರಯೋಜನವಾಗದು. ನಿಮ್ಮ ಸ್ವಭಾವದಲ್ಲಿ ಆದ ಬದಲಾವಣೆಯುಂದ ಅಚ್ಚರಿಯಾದೀತು. ದೊಡ್ಡ ಅಪಾಯದಿಂದ ತಪ್ಪಿಸಿಕೊಳ್ಲಕುವುರಿ. ನಿಮ್ಮದಲ್ಲದ್ದನ್ನು ನಿಮ್ಮದೆಂದು ವಾದಿಸಲು ಹೋಗಬೇಡಿ. ಮನೆಯ ಕೆಲಸವು ಬಹಳ ಆಯಾಸವನ್ನು ಕೊಡಬಹುದು. ವ್ಯಾಪಾರದಲ್ಲಿ ಪೂರೈಕೆ ಮಾಡುವವರಿಗೆ ಹೆಚ್ಚು ಬೇಡಿಕೆ ಕಾಣಿಸುವುದು. ಉದ್ಯಮದ ಹೊಸ ಕೇಂದ್ರವನ್ನು ನಿರ್ಮಿಸುವ ಸಾಧ್ಯತೆ ಇದೆ.
ಸಿಂಹ ರಾಶಿ: ಪರರ ಬಗ್ಗೆ ಅನುಕಂಪ ಉಂಟಾಗುವುದು. ಮಾನಸಿಕ ಸ್ಥೈರ್ಯದಿಂದ ಎಲ್ಲ ಕೆಲಸವನ್ನು ಮಾಡಿಕೊಳ್ಳುವಿರಿ. ಸಂಸ್ಥೆಯ ಮುಖ್ಯಸ್ಥರಾಗಿ ಆಯ್ಕೆಯಾಗುವ ಸಂಭವವಿದೆ. ಸದ್ಯೋ ಭವಿಷ್ಯಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ಉದ್ಯಮದಲ್ಲಿ ಎದುರಾಳಿಗಳು ತಯಾರಾಗುವ ಸಾಧ್ಯತೆ ಇದೆ. ಗೊತ್ತಿಲ್ಲದೇ ಕೆಟ್ಟ ಮಾರ್ಗವನ್ನು ನೀವು ಅನುಸರಿಸಬಹುದು. ನಿಮ್ಮ ಪ್ರಾಮಾಣಿಕತೆಗೆ ಬೆಲೆ ಇಲ್ಲವೆನಿಸುವುದು. ನಿಮ್ಮ ಮಾತುಗಳು ಅರಣ್ಯರೋದನದಂತೆ ನಿಷ್ಪ್ರಯೋಜಕವಾದೀತು. ಹಿತಶತ್ರುಗಳ ತಂತ್ರಕ್ಕೆ ಬಲಿಯಾಗಿ ಬೇಸರಗೊಳ್ಳುವಿರಿ. ಆರೋಗ್ಯದ ರಕ್ಷಣೆಯಲ್ಲಿ ಹಿನ್ನಡೆಯಾದೀತು. ಅಪರಿಚಿತರ ವಿದ್ಯಾಭ್ಯಾಸಕ್ಕೆ ನಿಮ್ಮಿಂದ ಸಹಾಯವು ಸಿಗಲಿದೆ. ಎತ್ತರದ ಪ್ರದೇಶವನ್ನು ಏರುವ ಸಾಹಸ ಮಾಡುವಿರಿ. ಅಧಿಕಾರಿಗಳು ವೃತ್ತಿಯನ್ನು ಸರಿಯಾಗಿ ನಿರ್ವಹಿಸುವರು. ಅಜ್ಞಾನವನ್ನು ಯಾರಿಂದಲಾದರೂ ದೂರಮಾಡಿಕೊಳ್ಳಿ. ಒತ್ತಾಯಪೂರ್ವಕವಾಗಿ ಯಾರ ಸ್ನೇಹವನ್ನೂ ಬಯಸದಿರಿ.
ಕನ್ಯಾ ರಾಶಿ: ಆರೋಗ್ಯದ ರಕ್ಷಣೆಗೆ ಉಳಿತಾಯದ ಬಗ್ಗೆ ಗಮನ ಕೊಡುವಿರಿ. ಅತಿಯಾದ ಆಡಂಬರವು ನಿಮಗೇ ಮುಜುಗರವನ್ನು ತಂದೀತು. ಹಿತಶತ್ರುಗಳ ಸಂಚಿಗೆ ಬಲಿಯಾಗುವ ಸಾಧ್ಯತೆ ಇದೆ. ಸರ್ಕಾರಿ ಉದ್ಯೋಗಿಗಳು ನಿಮಗೆ ತೊಂದರೆಯನ್ನು ಕೊಡಬಹುದು. ಧೈರ್ಯವನ್ನು ಕಳೆದುಕೊಳ್ಳುವ ಅಗತ್ಯವಿಲ್ಲ. ಉದ್ಯಮದಲ್ಲಿ ಉಂಟಾದ ಬೆಳವಣಿಗೆಯನ್ನು ಸಕಾರಾತ್ಮಕವಾಗಿ ಆಲೋಚಿಸಿ. ರಾಜಕಾರಣದಿಂದ ನಿಮ್ಮ ಯಶಸ್ಸಿಗೆ ತೊಂದರೆ. ಸಮ್ಮಾನಗಳನ್ನು ಪಡೆಯುವ ಆಸೆ ಇದ್ದರೂ ಯೋಗವು ಬೇಕಾಗುತ್ತದೆ. ಯಾರನ್ನೋ ನಂಬಿ ನೀವು ಇರುವ ಸಣ್ಣ ಕೆಲಸವನ್ನೂ ಬಿಡುವಿರಿ. ಹಿತಶತ್ರುಗಳ ಪಿತೂರಿಯು ನಿಮ್ಮ ಶ್ರೇಯಸ್ಸಿಗೆ ತೊಂದರೆಯನ್ನು ಮಾಡೀತು. ಯಾರನ್ನೋ ಹೊಗಳಿ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಪರೋಕ್ಷವಾಗಿಯಾದರೂ ಹಿರಿಯರ ಆಶೀರ್ವಾದ ಪಡೆಯಿರಿ. ಆಗದವರು ನಿಮ್ಮ ರಹಸ್ಯ ವಿಚಾರಗಳನ್ನು ತಿಳಿದುಕೊಳ್ಳಲು ಇಚ್ಛಿಸುವರು. ನಿರುದ್ಯೋಗದ ಸಮಸ್ಯೆ ದೂರಾಗುವುದು.
ತುಲಾ ರಾಶಿ: ನಿಮ್ಮ ಒತ್ತಡದ ಸ್ಥಿತಿಯಲ್ಲಿ ಯಾರಾದರೂ ಜೊತೆಗೆ ಬರುವರು. ಆದರೆ ಅದರ ದುರುಪಯೋಗ ಮಾಡಿಕೊಳ್ಳಬಹುದು. ವೃತ್ತಿಯಲ್ಲಿ ಪರಿಣಿತಿಯನ್ನು ಸಾಧಿಸಿಕೊಳ್ಳುವಿರಿ. ಸಹೋದ್ಯೋಗಿಗಳಿಂದ ಒತ್ತಡವು ಬರಬಹುದು. ವಿವಾಹದ ಮಾತುಕತೆಗೆ ಹಿರಿಯರನ್ನು ಮುಂದಿಟ್ಟುಕೊಳ್ಳಬೇಕು. ಅಪರೂಪದ ಮಿತ್ರರ ಭೇಟಿಯಿಂದ ಸಂತೋಷವಾಗಲಿದೆ. ದ್ವಿಚಕ್ರದ ವಾಹನವನ್ನು ಚಲಾಯಿಸುವಾಗ ಜಾಗರೂಕತೆ ಇರಲಿ. ನಿಮ್ಮ ಸ್ವಭಾವವು ಇತರರಿಗೂ ಗೊತ್ತಾದೀತು. ವಿದೇಶದ ವ್ಯಕ್ತಿಗಳ ಸಂಪರ್ಕ ಉಂಟಾಗುವುದು. ನಿರಪೇಕ್ಷೆಯಿಂದ ಕೆಲಸ ಮಾಡಿದರೆ, ಅಧಿಕ ಸಂತೋಷ. ನಿಮ್ಮ ಗೌರವಕ್ಕೆ ತೊಂದರೆಯಾಗುವುದು. ಕಠೋರ ಮಾತುಗಳಿಂದ ನಿಮ್ಮ ವಲಯ ಖಾಲಿಯಾಗಿ, ಒಂಟಿಯಾಗುವಿರಿ. ಯೌವನಾವಸ್ಥೆಯಲ್ಲಿ ಇರುವವರಿಗೆ ಯಾರನ್ನಾದರೂ ಪ್ರೀತಿಸುವ ಇಚ್ಛೆಯು ಬರಬಹುದು. ಸಹೋದರರ ನಡುವೆ ಭಿನ್ನಾಭಿಪ್ರಾಯ ಬರಬಹುದು. ಜೀವನದ ಬಗ್ಗೆ ನಕಾರಾತ್ಮಕ ಅಂಶಗಳೇ ಕಾಣಿಸುವುದು.
ವೃಶ್ಚಿಕ ರಾಶಿ: ಪಾಲುದಾರಿಕೆಯಲ್ಲಿ ಭಿನ್ನಾಭಿಪ್ರಾಯ ಸಹಜ. ದೊಡ್ಡ ಉದ್ದೇಶಕ್ಕೆ ಅದನ್ನು ಗೌಣ ಮಾಡಿಕೊಂಡರೆ ಮಾನಸಿಕ ಆರೋಗ್ಯದಲ್ಲಿ ಚೇತರಿಕೆ. ಹೂಡಿಕೆಯಿಂದ ಲಾಭವು ಸಿಗುವ ನಿರೀಕ್ಷೆಯಲ್ಲಿ ಇರುವಿರಿ. ಅನಿರೀಕ್ಷಿತವಾಗಿ ದೂರಪ್ರಯಾಣ ಮಾಡಬೇಕಾದೀತು. ನಿಮ್ಮ ಕೆಲಸಕ್ಕೆ ವೃತ್ತಿಯಲ್ಲಿ ಉತ್ತಮ ಪ್ರಶಂಸೆಯು ಸಿಗುವುದು. ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ಯೋಜನೆ ಮಾಡಬೇಕು. ಇಂದು ನಿಮಗೆ ಉತ್ಸಾಹದ ದಿನವೂ ಆಗಲಿದೆ. ರಾಜಕೀಯವಾದ ಲಾಭದ ಗಳಿಕೆಯು ಇರಲಿದೆ. ನಿಮ್ಮ ಯೋಜನೆಗೆ ಸ್ಪಂದಿಸದೇ ಅದು ಹಾಳಾಗುವುದು. ಸ್ನೇಹಿತರಿಗಾಗಿ ಮಾಡಿದ ಸಾಲವು ಕೊನೆಗೆ ನಿಮಗೇ ಸುತ್ತಿಕೊಳ್ಳುವುದು. ಸಂಶೋಧನೆಗೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ಯಾರದೋ ದಾಳವಾಗಿ ಇಂದು ಕೆಲಸವನ್ನು ಮಾಡಬೇಕಾಗಬಹುದು. ಸರ್ಕಾರಿ ಉದ್ಯೋಗಿಗಳ ಸ್ಥಾನವು ಹೆಚ್ಚಾಗಬಹುದು. ನಿಮ್ಮನ್ನು ನಿರ್ಲಕ್ಷಿಸುವ ಸ್ಥಳದಲ್ಲಿ ಇರಲು ಇಷ್ಟಪಡುವುದಿಲ್ಲ. ಎಲ್ಲ ತಪ್ಪುಗಳಿಗೂ ಸಂಗಾತಿಯನ್ನು ಬೊಟ್ಟು ಮಾಡಿ ತೋರಿಸುವಿರಿ.
ಧನು ರಾಶಿ: ಯಶಸ್ಸಿನ ಅಪೇಕ್ಷೆ ಉಳ್ಳವರು ಮತ್ತೊಬ್ಬರ ಒಳ್ಳೆಯದನ್ನೂ ಕೀರ್ತನೆ ಮಾಡಬೇಕು. ಶೀಘ್ರಫಲಾಪೇಕ್ಷೆಯಿಂದ ಅನಾಹುತವು ಸಂಭವಿಸೀತು. ಗಾಯಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ವಿಷಯಕ್ಕೆ ತಕ್ಕಂತೆ ಮಾತಿನಲ್ಲಿ ಏರಿಳಿತವಿರಲಿ. ಆತ್ಮಸಂತೋಷವು ನಿಮ್ಮ ಕಾರ್ಯಕ್ಕೆ ಇನ್ನಷ್ಟು ಉತ್ಸಾಹವನ್ನು ಕೊಡುವುದು. ಯಾರಿಲ್ಲಿರುವ ನ್ಯೂನತೆಯನ್ನು ಸಹಜವಾಗಿ ಸ್ವೀಕರಿಸುವ ಸ್ವಭಾವ ಉತ್ತಮ. ಶತ್ರುಗಳಿಂದ ನಿಮಗೆ ವಂಚನೆಯಾಗಿದ್ದು ವಿಳಂಬವಾಗಿ ಗೊತ್ತಾಗುವುದು. ಮಿತ್ರರಿಂದ ನಿಮ್ಮ ಇಚ್ಛೆಯು ಪೂರ್ಣವಾಗುವುದು. ಸಿಟ್ಟಿನ ಸ್ವಭಾವದಿಂದ ಮನೆಯಲ್ಲಿ ಅಸಮಾಧಾನ ಇರುವುದು. ಎಲ್ಲ ವಿಚಾರದಲ್ಲಿಯೂ ಒಂದಿಲ್ಲೊಂದು ಕಿರಿಕಿರಿ ಕಾಣಿಸೀತು. ಸಮಾಧಾನದಿಂದ ಆಲೋಚಿಸಲು ನಿಮಗೆ ಬಾರದು. ಬಹಳ ದಿನಗಳ ಅನಂತರ ಬಂಧುಗಳ ಮನೆಗೆ ಹೋಗಲಿದ್ದೀರಿ. ಸಂಗಾತಿಯ ವಿಚಾರದಲ್ಲಿ ಉದ್ವೇಗಕ್ಕೆ ಒಳಗಾಗುವುದು ಬೇಡ. ದೃಢವಾದ ಗುರಿಯ ಕಡೆ ಗಮನವಿರಲಿ.
ಮಕರ ರಾಶಿ: ಗೌಪ್ಯ ವ್ಯವಹಾರದಲ್ಲಿ ತೊಂದರೆ ಕಾಣಿಸುವುದು. ಮಾಡುವ ಕಾರ್ಯದಲ್ಲಿರುವ ಆರಂಭಶೂರತ್ವವು ಕೊನೆಗೆ ಇರಲಾರದು. ಸಿದ್ಧವಸ್ತುಗಳ ಮಾರಾಟದಿಂದ ಲಾಭವನ್ನು ಕಾಣುವಿರಿ. ವಿದ್ಯಾರ್ಥಿಗಳು ಪ್ರೇಮದಲ್ಲಿ ಬೀಳುವ ಸಾಧ್ಯತೆ ಇದೆ. ಕೌಶಲವನ್ನು ಕರಗತ ಮಾಡಿಕೊಳ್ಳುವಿರಿ. ಮನೆಯವರ ಮಕ್ಕಳ ಮೇಲೆ ಗಮನ ಇರಿಸುವುದು ಮುಖ್ಯ. ಪ್ರಚೋದನಕಾರಿ ಮಾತುಗಾರರಿಗೆ ಅವಕಾಶವು ಸಿಗಲಿದೆ. ಸಂಸ್ಥೆಯ ಜವಾಬ್ದಾರಿಯನ್ನು ಹೊತ್ತು ಅದನ್ನು ನಿಮ್ಮ ಹಿಡಿತದಲ್ಲಿ ಇರುವಂತೆ ನೋಡಿಕೊಳ್ಳಿ. ಜನರನ್ನು ನಿರ್ವಹಿಸುವ ಕಾರ್ಯಕ್ಕೆ ನಿಮಗೆ ಪ್ರಶಂಸೆ ಸಿಗಲಿದೆ. ಆಸ್ತಿಯ ಖರೀದಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸರಿಯಾಗಿ ಪಡೆಯಿರಿ. ಬಹಳ ದಿನಗಳ ಅನಂತರ ಸಮಾಜಮುಖಿಯಾಗಿ ಕಾಣಿಸುವಿರಿ. ನಿಮ್ಮ ಪಾಲಿಗೆ ಬಂದಿದ್ದನ್ನು ಬಿಟ್ಟುಕೊಡಲಾರಿರಿ. ಇನ್ನೊಬ್ಬರ ಸಂಕಷ್ಟವನ್ನು ನಿವಾರಿಸಲು ಉತ್ಸಾಹದಿಂದ ಇರುವಿರಿ. ಮನೆಯಲ್ಲಿ ಸಂತೋಷದಿಂದ ಕಾಲ ಕಳೆಯುವಿರಿ.
ಕುಂಭ ರಾಶಿ: ನಿಮ್ಮ ಉದ್ಯೋಗಕ್ಕೆ ಆರ್ಥಿಕ ಬೆಂಬಲ ಸಿಗದಿದ್ದರೂ ನೈತಿಕ ಬೆಂಬಲ ಸಿಗಲಿದೆ. ಇಂದು ನಿಮ್ಮ ಉದ್ಯಮದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಕಷ್ಟವಾದೀತು. ಸಣ್ಣ ಮಟ್ಟಿನ ಸಾಲವನ್ನು ನೀವು ಮಾಡಬೇಕಾದ ಸ್ಥಿತಿಯು ಬರಬಹುದು. ತಂದೆಯ ಕಡೆಯಿಂದ ನಿಮಗೆ ಯಾವ ಸಹಾಯವೂ ಸಿಗದೇಹೋಗಬಹುದು. ಉತ್ಪನ್ನಗಾರರಿಗೆ ಸಂತೋಷದ ದಿನವು ಇದಾಗಲಿದೆ. ನೂತನ ಗೃಹನಿರ್ಮಾಣದ ಬಗ್ಗೆ ಮನೆಯವರ ಜೊತೆ ಮಾತನಾಡುವಿರಿ. ಸ್ನೇಹವು ದೂರ ಮಾಡಿಕೊಳ್ಳುವಿರಿ. ಹೊಸ ಕೆಲಸಗಳ ಕಡೆ ಗಮನ ಇರುವುದು. ಸುಂದರ ಸ್ಥಳಗಳಿಗೆ ಹೋಗಿ ಮನಸ್ಸು ಹಗುರಾಗುವುದು. ಮನಸ್ಸಿನ ಬಂಧಗಳು ಸಡಿಲಾಗುವುದು. ಅಹಂಕಾರವು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಯಾವ ಕಾರ್ಯವನ್ನೇ ಮಾಡುವುದಾದರೂ ಪ್ರಮಾಣದ ಅಗತ್ಯವಿರಲಿದೆ. ಮನೆಯ ಸದ್ಯರ ಜೊತೆ ಹೆಚ್ಚು ಸಮಯ ಕಾಲಹರಣ ಮಾಡುವಿರಿ. ಹಿತಶತ್ರುಗಳ ಬಾಧೆಯು ಕಾಣಿಸಿಕೊಳ್ಳುವುದು. ಪತ್ರ ವ್ಯವಹಾರಗಳಿಲ್ಲದೇ ಯಾವದನ್ನೂ ಒಪ್ಪಿಕೊಳ್ಳುವುದು ಬೇಡ.
ಮೀನ ರಾಶಿ: ಇಂದು ನಿಮ್ಮ ಸಂಗಾತಿಯಾಗುವವರ ಜೊತೆ ಹೆಚ್ಚು ಸಮಯ ಕಳೆದು, ಭವಿಷ್ಯದ ಬಗ್ಗೆ ಚಿಂತನೆ ನಡೆಸುವಿರು. ಆಗಿಹೋದ ಕಾಯಗಳನ್ನು ನೆನೆದುಕೊಂಡು ಸಂತೃಪ್ತಿಪಡುವಿರಿ. ನಿಮಗೆ ನೀಡಿದ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಉದ್ಯೋಗದ ಸ್ಥಳದಲ್ಲಿ ಹೆಚ್ಚು ಲವಲವಿಕೆ ಇರಲಿದೆ. ಬಾಂಧವ್ಯವನ್ನು ಬೆಸೆಯಲು ಒಳ್ಳೆಯ ಸನ್ನಿವೇಶ ಸೃಷ್ಟಿಯಾಗುವುದು. ಸಣ್ಣ ಕಾರ್ಯಕ್ಕೆ ಹೆಚ್ಚು ಶ್ರಮವಹಿಸಬೇಕಾದೀತು. ಆಪ್ತರನ್ನು ದೂರ ಮಾಡಿಕೊಳ್ಳುವಿರಿ. ನೌಕರರಿಗೆ ನೀವು ಕೊಡುವ ವ್ಯವಸ್ಥೆಯಿಂದ ಸಂತೋಷವಾಗಲಿದೆ. ಸೋತರೂ ಗೆದ್ದವರ ಜೊತೆ ನಿಮ್ಮ ಪ್ರತಿಷ್ಠೆಯನ್ನು ತೋರಿಸುವಿರಿ. ಪ್ರಯತ್ನವೇ ಇಲ್ಲದೇ ಫಲವನ್ನು ಬಯಸುವುದು ಸರಿಯಲ್ಲ. ಹಣದ ವಿಚಾರದಲ್ಲಿ ನಿಮಗೆ ಇಂದು ಲೋಭವು ಇರದು. ನೀವು ಇಂದು ಯಾರ ಮಾತನ್ನೂ ನಂಬುವ ಮನಃಸ್ಥಿತಿಯಲ್ಲಿ ಇಲ್ಲ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವರು.