
ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ವೃಷಭ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ವೃದ್ಧಿ, ಕರಣ : ಬವ, ಸೂರ್ಯೋದಯ – 06 : 03 am, ಸೂರ್ಯಾಸ್ತ – 06 : 57 pm, ಇಂದಿನ ಶುಭಾಶುಭಕಾಲ : ರಾಹು ಕಾಲ 17:21 – 18:57, ಯಮಘಂಡ ಕಾಲ 12:31 – 14:07, ಗುಳಿಕ ಕಾಲ15:44 – 17:21
ಮೇಷ ರಾಶಿ: ಎಲ್ಲ ನಕಾರಾತ್ಮಕತೆಯೂ ನಿಮ್ಮನ್ನೇ ಸುತ್ತುವರಿದಂತೆ ಕಾಣಿಸುವುದು. ಇಂದು ನಿಮಗೆ ಗುರುಸಮಾನರ ಭೇಟಿಯಾಗಲಿದೆ. ಅತಿಯಾಗಿ ಉದ್ಯೋಗವನ್ನು ಬದಲಾಯಿಸುವುದು ಸೂಕ್ತವಲ್ಲ. ಅವಮಾನವಾಗು ಸಂದರ್ಭವಿದ್ದರೆ ಅಲ್ಲಿಂದ ದೂರನಡೆಯಿರಿ. ನಿಮ್ಮ ವ್ಯಕ್ತಿತ್ವವನ್ನು ಹುಡುಕಿಕೊಂಡು ಬರುವವರಿದ್ದಾರೆ. ನಿಮ್ಮ ತುರ್ತನ್ನು ಇನ್ನೊಬ್ಬರಿಗೆ ಹೇರಿ ಶಾಂತವಾಗುವಿರಿ. ಯೋಚಿಸದೆ ಇತರರ ಮಾತುಗಳನ್ನು ನಂಬುವುದು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಕೆಲಸ ಮುಗಿಸಲು ಸಾಕಷ್ಟು ಶ್ರಮ ಬೇಕಾಗುತ್ತದೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ನಿಮಗೆ ಹೊಸ ಕೆಲಸ ಮತ್ತು ಜವಾಬ್ದಾರಿಗಳು ಸಿಗುತ್ತವೆ. ನಿಮ್ಮನ್ನು ಯಾರಾದರೂ ಪ್ರಶಂಸಿಸಲಿ ಎನ್ನುವ ಭಾವ ಇರುವುದು. ನೀವು ಕೆಲವು ಪ್ರಮುಖ ವಿಷಯಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ನೆಚ್ಚಿನ ಜನರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಯಾರ ಮೇಲೂ ನಿಮ್ಮದೇ ಆದ ನಿಲವು ಬೇಡ. ದಿನದಲ್ಲಿ ಬದಲಾವಣೆಯನ್ನು ತಂದುಕೊಳ್ಳುವಿರಿ.
ವೃಷಭ ರಾಶಿ: ಕಾರಣವಿಲ್ಲದೇ ಆಗುವ ಕಾರ್ಯಕ್ಕೆ ಅದನ್ನು ಕೆದಕಿ ತೆಗೆಯುವುದು ಬೇಡ. ಇಂದು ಬಹಳ ಸುಖವಾಗಿರುವ ದಿನ. ನೀವೇ ಶ್ರೇಷ್ಠ ಎಂಬ ಭಾವನೆ ನಿಮಗೆ ಬರಲಿದೆ. ನಿಮಗೆ ಪ್ರಶಂಸೆಗಳು ಸಿಗಲಿವೆ. ಯಾವುದನ್ನೂ ಪರಿಶೀಲಿಸದೇ ಸ್ವೀಕರಿಸಬೇಡಿ. ಅನಿರೀಕ್ಷಿತ ಹಣವೂ ಸಿಗಬಹುದು. ಶಾಂತತೆ ಮತ್ತು ಬುದ್ಧಿವಂತಿಕೆಯಿಂದ ಮುಂದುವರಿಯಿರಿ. ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬೇಡಿ ಅಥವಾ ಮಧ್ಯಪ್ರವೇಶಿಸಬೇಡಿ. ನಿಮ್ಮ ಖರ್ಚುಗಳ ಬಗ್ಗೆ ಗಮನ ಕೊಡಿ ಮತ್ತು ಯೋಚಿಸದೆ ಅಪಾಯಗಳನ್ನು ತಂದುಕೊಳ್ಳುವಿರಿ. ಕಲಾವಿದರಾಗುವ ಮನಸ್ಸು ಹೆಚ್ಚುವುದು. ವಿದ್ಯಾರ್ಥಿಗಳು ಅಭ್ಯಾಸದತ್ತ ಗಮನಹರಿಸಬೇಕು. ಆದಷ್ಟು ಎಚ್ಚರಿಕೆಯಿಂದ ಇರಿ. ಸರ್ಕಾರಿ ನಿಯಮಗಳ ಉಲ್ಲಂಘನೆ ಬೇಡ. ಸ್ತ್ರೀಯರಿಂದ ಲಾಭವನ್ನು ಪಡೆಯುವಿರಿ. ಇಂದಿನ ಸ್ನೇಹಿತರ ಭೇಟಿಯಿಂದ ನಿಮ್ಮಲ್ಲಿ ಉತ್ಸಾಹವನ್ನು ಜಾಗರೂಕಗೊಳಿಸುವುದು. ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಸಿಲುಕುವಿರಿ. ಶ್ರಮಕ್ಕೆ ಫಲವನ್ನು ನಿರೀಕ್ಷಿಸುತ್ತ ಸಮಯವನ್ನು ವ್ಯರ್ಥ ಮಾಡುವಿರಿ.
ಮಿಥುನ ರಾಶಿ: ನಿಮ್ಮ ಗುರಿಯಾಗಿಸಿಕೊಂಡು ಮಾತನಾಡಿದರೆ ಅದನ್ನು ಇನ್ನೊಬ್ಬರ ಕಡೆ ಪರಿವರ್ತಿಸುವಿರಿ. ನೀವು ಇಂದು ಹೊಸ ಪಾಲುದಾರಿಕೆಯಲ್ಲಿ ಕೆಲಸವನ್ನು ಆರಂಭಿಸಲು ಯೋಚಿಸಿದ್ದೀರಿ. ನಿಮ್ಮವರೇ ನಕಾರಾತ್ಮಕ ಮಾತುಗಳನ್ನು ಹೇಳಿ ದಾರಿಬತಪ್ಪಿಸುವರು ಅಥವಾ ಅವಮಾನ ಮಾಡುವರು. ಸದ್ಭಾವವಿದ್ದರೆ ಎಲ್ಲವೂ ತಾನಾಗಿಯೇ ಒಲಿಯುವುದು. ಹೊಸ ಯೋಜನೆಗೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಇದು ಒಳ್ಳೆಯ ಸಮಯ. ಆದ್ದರಿಂದ, ಈ ಕೆಲಸದಲ್ಲಿ ನಿಮ್ಮ ಸಮಯವನ್ನು ಹೂಡಿಕೆ ಮಾಡಿ. ನಿಮ್ಮ ಪ್ರಮುಖ ಕೆಲಸವು ಬುದ್ಧಿವಂತ ಜನರ ಸಲಹೆಯೊಂದಿಗೆ ಪೂರ್ಣಗೊಳ್ಳುತ್ತದೆ. ಸಂಪತ್ತನ್ನು ಅಪರಿಚಿತ ಸ್ಥಳದಲ್ಲಿ ಇಟ್ಟು ಕಳೆದುಕೊಳ್ಳುವಿರಿ. ದ್ವೇಷವನ್ನು ಬಿಟ್ಟು ಮುಂದುವರಿಯುವುದು ಒಳ್ಳೆಯದು. ನಿಮ್ಮ ಕೆಲವು ವಿರೋಧಿಗಳು ನಿಮಗೆ ತೊಂದರೆ ಕೊಡಲು ಪ್ರಯತ್ನಿಸಬಹುದು. ನಿಮ್ಮ ಕೊರತೆಯೇ ನಿಮಗೆ ಶಾಪವಾಗಬಹುದು. ಕೇಳಿದಷ್ಟು ಹಣವನ್ನು ಕೊಟ್ಟು ಹೊಸ ವಸ್ತುವನ್ನು ಖರೀದಿಸುವಿರಿ.
ಕರ್ಕಾಟಕ ರಾಶಿ: ವ್ಯಾಪಾರಗಳನ್ನು ಚೌಕಟ್ಟಿನಲ್ಲಿ ತರುವ ಪ್ರಯತ್ನ ಸಾಗುವುದು. ನಿಮ್ಮ ಆತುರವು ಕೆಲಸವನ್ನು ಹಾಳುಮಾಡಿಕೊಳ್ಳಲು ಸಾಕು. ರಾಜಕೀಯ ಕುಟಂಬದ ವ್ಯಕ್ತಿಯನ್ನು ನೀವು ಭೇಟಿ ಮಾಡಲಿದ್ದು ಕೆಲವು ಅನುಕೂಲತೆಗಳು ಆಗಲಿವೆ. ಇರುವ ಕೆಲಸಕ್ಕೆ ಮತ್ತೇನಾದರೂ ಸೇರಿಸಿಕೊಳ್ಳುವಿರಿ. ಹೊಸದಾಗಿ ಏನಾದರೂ ಕಲಿಯುವ ಅವಕಾಶ ಸಿಗಬಹುದು. ಕೆಲಸದ ಸ್ಥಳದಲ್ಲಿ ಹಳೆ ತಪ್ಪುಗಳಿಗಾಗಿ ಜನ ತಿರಸ್ಕರಿಸಬಹುದು – ತಾಳ್ಮೆಯಿಂದ ಉತ್ತರ ಕೊಡಿ. ಹಣದ ವ್ಯವಹಾರಗಳಲ್ಲಿ ನಿಮಗೆ ಆತ್ಮವಿಶ್ವಾಸ ಬೇಕಾಗಿರುತ್ತದೆ. ಉದ್ವೇಗದಲ್ಲಿ ನಿಮ್ಮ ವರ್ತನೆಗಳು ಸಾಮಾನ್ಯರಿಗೆ ಬೇರೆ ಅರ್ಥವನ್ನೇ ಕೊಡುವುದು. ವೈವಾಹಿಕ ಜೀವನವು ನಿಮಗೆ ಬೇಸರವೆನಿಸಬಹುದು. ನೀವು ಅವಕಾಶಗಳತ್ತ ಗಮನ ಹರಿಸಬೇಕು. ಮಕ್ಕಳ ವಿಚಾರದಲ್ಲಿ ನಿಮಗೆ ಸಮಾಧಾನವು ಸಿಗದೇ ಇರಬಹುದು. ಜಲೋದ್ಯಮದಿಂದ ಉತ್ತಮಲಾಭವು ಸಿಗುವುದು. ಸಮಯೋಚಿತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ.
ಸಿಂಹ ರಾಶಿ: ಅಭ್ಯಾಸವಿಲ್ಲದ ವಿದ್ಯೆಯನ್ನು ಪ್ರಯೋಗಿಸಿ ವಿಫಲರಾಗುವಿರಿ. ಎಲ್ಲರೆದುರು ಅಪಮಾನವೂ ಆಗಬಹುದು. ಇಂದು ನಿಮ್ಮವರು ಯಾರು ಮತ್ತು ನಿಮ್ಮವರಂತೆ ಕಾಣುವವರು ಯಾರು ಎಂಬುದರ ಸ್ಪಷ್ಟ ನಿಲುವು ಇರಲಿದೆ. ಮಕ್ಕಳಿಗೆ ನಿಮ್ಮ ಪ್ರೀತಿ ಹೆಚರಚಾಗುವುದು. ಸವಾಲುಗಳ ಬಗ್ಗೆ ಮನದಟ್ಟಾಗಿ ಯೋಚಿಸಿ. ಹಣಕಾಸಿನಲ್ಲಿ ಚಿಕ್ಕದಾದ ಲಾಭಕಂಡುಬರುತ್ತದೆ. ಮನೆಯವರು ನಿಮ್ಮ ಬದಲಾವಣೆಗಳನ್ನು ಗುರುತಿಸಿ ಮೆಚ್ಚಬಹುದು. ಸ್ನೇಹಿತರಿಂದ ಪ್ರೋತ್ಸಾಹ ಸಿಗುತ್ತದೆ. ಆರೋಗ್ಯದಲ್ಲಿ ಸುಧಾರಣೆ. ನಿಮ್ಮ ಕಾರ್ಯಕ್ಷಮತೆ ಜನರನ್ನು ಆಕರ್ಷಿಸಬಹುದು. ಇಂದು ನೀವು ದಾರಿ ತಪ್ಪುವ ಸಂಭವವಿದೆ. ಸಂಗಾತಿಯನ್ನು ಹುಡುಕುವ ಕೆಲಸವು ನಿಮಗೆ ಬೇಸರವನ್ನು ತರಿಸುವುದು. ಮಾತುಗಳನ್ನು ಕಡೆ ಆಡುವುವಿರಿ. ಇಂದು ಪಾಲುದಾರಿಕೆಯಲ್ಲಿ ಯಾವುದೇ ಕೆಲಸವನ್ನು ಮಾಡಿದರೆ, ಅದು ನಿಮಗೆ ಒಳ್ಳೆಯದು. ನೆರೆ ಮನೆಯವರ ಜೊತೆ ಕಲಹವಾಗಬಹುದು. ದಿನ ಮಾನಸಿಕ ಒತ್ತಡದಿಂದ ನೀವು ಹೊರಬರಲು ಕಷ್ಟವಾದೀತು.
ಕನ್ಯಾ ರಾಶಿ: ಅರ್ಥಮಾಡಿಕೊಳ್ಳದೇ ಇರುವವರ ಜೊತೆ ಕಾಲಹರಣವಾಗಬಹುದು. ಭೂಮಿಯ ವಿಚಾರದಲ್ಲಿ ಸರಿಯಾದ ಮಾಹಿತಿ ಸಿಗದೇ ಮೋಸ ಹೋಗಬೇಕಾದೀತು. ಯಥಾಯೋಗ್ಯ ದಾನವನ್ನೂ ನೀವು ಮಾಡಲಿದ್ದೀರಿ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಾಧಿಸಲಾಗದು. ಯಾರು ಏನೇ ಹೇಳಿದರೂ ನಿಮಗೆ ಬೇಕಾದುದನ್ನು ಮಾತ್ರ ಪಡೆಯುವಿರಿ. ಇತರರಿಂದ ಏನನ್ನೂ ನಿರೀಕ್ಷಿಸಬೇಡಿ, ಇಲ್ಲದಿದ್ದರೆ ಫಲಿತಾಂಶಗಳು ನಕಾರಾತ್ಮಕವಾಗಿರಬಹುದು. ನೀವು ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ ಮತ್ತು ನಿಮ್ಮ ಶತ್ರುಗಳ ಮೇಲೆ ವಿಜಯಶಾಲಿಯಾಗುತ್ತೀರಿ. ದಾನವಾಗಿ ಅಪರೂಪದ ವಸ್ತುಗಳು ಸಿಗಲಿವೆ. ನೀವು ಕೆಲವು ಇನ್ನೊಬ್ಬರಿಗೆ ತೊಂದರೆಯಾಗುವಂತಹ ಚಟುವಟಿಕೆಗಳನ್ನು ತಡೆಯಬೇಕು. ಜಾಣತನವು ಇಂದು ನಿಮ್ಮ ಉಪಯೋಗಕ್ಕೆ ಬರುವುದು. ಸ್ತ್ರೀಯರು ಅವರಿಗೆ ಬೇಕಾದ ಕಾರ್ಯವನ್ನು ಬಹಳ ನಾಜೂಕಿನಿಂದ ಮಾಡಿಸಿಕೊಳ್ಳುವರು. ಬಹಿಶ್ಶತ್ರುಗಳಿಗಿಂತ ಅಂತಶ್ಶತ್ರುಗಳ ಬಗ್ಗೆ ಎಚ್ಚರ ಅವಶ್ಯಕ.
ತುಲಾ ರಾಶಿ: ಸಂಗಾತಿಯಿಂದ ಅಚ್ಚರಿಯ ಮಾತುಗಳು ಕೇಳಿಬರಬಹುದು. ಹೊಸ ಉದ್ಯೋಗವನ್ನು ಹುಡುಕುವ ಕೆಲಸಕ್ಕೆ ಹೆಚ್ಚು ಓಡಾಟ ಆಗಬಹುದು. ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ನಿರಂತರ ಯತ್ನವನ್ನು ಮಾಡುವಿರಿ. ನಿಮ್ಮ ಕೆಲಸದಲ್ಲಿ ನಿಮಗೆ ಬೆಂಬಲ ಸಿಗುತ್ತದೆ. ಹಳೆಯ ವಿವಾದಗಳು ಬಗೆಹರಿಯುತ್ತವೆ. ನೀವು ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುತ್ತೀರಿ ಮತ್ತು ನಿಮ್ಮ ಆದಾಯವು ಸುಧಾರಿಸುತ್ತದೆ. ತಾಯಿಯ ಆರೋಗ್ಯವು ಕೆಡಲಿದ್ದು ಚಿಕಿತ್ಸೆಯನ್ನು ಕೊಡಿಸುವಿರಿ. ನಿಮ್ಮ ಪೂರ್ವ ನಿಶ್ಚಯವು ತಲೆಕೆಳಗಾಗಬಹುದು. ಕ್ರಮಬದ್ಧವಾದ ಆಲೋಚನೆಗಳು ನಿಮಗೆ ಸ್ಫೂರ್ತಿಯನ್ನು ಕೊಡಬಹುದು. ಪರಸ್ಪರ ಸಹಕಾರದ ಭಾವನೆ ನಿಮ್ಮ ಮನಸ್ಸಿನಲ್ಲಿ ಉಳಿಯುತ್ತದೆ. ಮಕ್ಕಳಿಗೆ ಹಣವನ್ನು ಕೊಟ್ಟು ತಪ್ಪು ದಾರಿಗೆ ಕಳುಹಿಸುವಿರಿ. ನಿಮ್ಮ ಬಗ್ಗೆ ಸುಳ್ಳು ವದಂತಿಗಳು ಹರಡಬಹುದು. ನಿರ್ಮಾಣ ವ್ಯವಸ್ಥೆಯಲ್ಲಿ ಇರುವವರಿಗೆ ಸ್ವಲ್ಪ ಹಿನ್ನಡೆಯಾಗಲಿದೆ. ನಿಮಗೆ ಸಂಬಂಧವಿಲ್ಲದ ವಿಚಾರದಲ್ಲಿ ಹಣವನ್ನು ಕಳೆದುಕೊಳ್ಳಬೇಕಾಗಬಹುದು.
ವೃಶ್ಚಿಕ ರಾಶಿ: ನಿಮ್ಮ ಅನುಕಂಪ ಸಾರ್ಥಕವೆನಿಸಬಹುದು. ನಿಮಗೆ ಇಂದು ಸಂಬಂಧಗಳ ಬೆಲೆಯು ಅರ್ಥವಾಗಲಿದೆ. ಕೆಲವು ಪಾಠವು ನಿಮಗಾಗಲಿದೆ. ಎಲ್ಲವುದನ್ನೂ ವಿರೋಧಿಸುವುದು ಸರಿಯಾಗದು. ಮನೆಯಲ್ಲಿಯೇ ಇದ್ದು ಬೇಸರವಾಗಲಿದೆ. ನಿಮ್ಮ ಕೆಲಸದ ನಿಮಿತ್ತ ನೀವು ಪ್ರಯಾಣಿಸಬೇಕಾಗಬಹುದು. ಚಿಂತೆಗಳು ಕೊನೆಗೊಳ್ಳುತ್ತವೆ ಮತ್ತು ಹಣ ಸಿಗುತ್ತದೆ. ಯೋಜನೆಗಳು ಯಶಸ್ವಿಯಾಗುತ್ತವೆ ಮತ್ತು ಹೊಸ ಕೆಲಸಗಳು ಲಭ್ಯವಾಗುತ್ತವೆ. ನಿಮ್ಮ ಗುರಿಯನ್ನು ಸಾಧಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಮನೆಯಲ್ಲಿ ವಾತಾವರಣ ಚೆನ್ನಾಗಿರುತ್ತದೆ. ಅಪರಿಚಿತ ಕರೆಗಳಿಗೆ ಕಿವಿಗೊಡದೇ ನಿಮ್ಮ ಕೆಲಸವನ್ನು ಮಾಡಿ. ಇನ್ನೊಬ್ಬರನ್ನು ನೋಡಿ ನೀವು ಕಲಿಯುವುದು ಬಹಳಷ್ಟು ಇದೆ ಎಂದು ಅರಿವಾಗಬಹುದು. ನಿಮ್ಮ ದೀರ್ಘಾವಧಿಯ ಯೋಜನೆಗಳು ವೇಗವನ್ನು ಪಡೆಯಲಿ. ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ತಯಾರಿಯಲ್ಲಿ ಶ್ರಮಿಸಬೇಕಾಗುತ್ತದೆ. ವಾಹನದ ದಾಖಲೆಗಳನ್ನು ಪರಿಶೀಲಿಸಿಕೊಂಡು ಚಲಾಯಿಸಿ. ಹೂಡಿಕೆಯಿಂದ ನಿಮಗೆ ಲಾಭಾಂಶವು ಸಿಗುವುದು.
ಧನು ರಾಶಿ: ನಿಮ್ಮ ಸ್ನೇಹಿತರು ನಿಮ್ಮ ಬಳಿ ಖರ್ಚು ಮಾಡಿಸುವರು. ಅನ್ಯ ಉಪಾಯವಿರದು. ಇಂದು ನೀವು ಬಹಳ ಚಾತುರ್ಯದಿಂದ ಕೆಲಸವನ್ನು ಮಾಡಿದರೂ ನಷ್ಟವಾಗಬಹುದು. ಆರೋಗ್ಯದ ವಿಚಾರದಲ್ಲಿ ಚಿಂತೆ ಬೇಡ. ಸರಿಮಾಡಿಕೊಳ್ಳುವ ಬಗ್ಗೆ ಚಿಂತಿಸಿ. ಬಹಳಷ್ಟು ಕೆಲಸ ಇರುತ್ತದೆ ಮತ್ತು ಯಶಸ್ಸು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಮಧ್ಯದಲ್ಲಿ ನ್ಯಾಯಾಂಗ ವಿಷಯಗಳಲ್ಲಿ ಯಶಸ್ಸು ಮತ್ತು ಭೂಮಿಗೆ ಸಂಬಂಧಿಸಿದ ಪ್ರಯೋಜನಗಳು ದೊರೆಯುತ್ತವೆ. ಸಂಜೆ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ದಾಂಪತ್ಯದಲ್ಲಿ ಅಪಮಬಿಕೆಗಳು ತಲೆ ಹಾಕಬಹುದು. ನೀವು ಬಹಳ ಸಮಯದ ಅನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಸಂಗಾತಿಯ ನಡುವಣ ಭಿನ್ನಾಭಿಪ್ರಾಯವನ್ನು ಮಾತನಾಡಿ ಪರಿಹರಿಸಬಹುದು. ನಿಮ್ಮ ಹಳೆಯ ತಪ್ಪುಗಳಿಂದ ನೀವು ಕಲಿಯಬೇಕು. ನಿಮ್ಮ ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ಕಳೆದುಕೊಂಡಿದ್ದನ್ನು ಮತ್ತೆ ಪಡೆಯುವ ಆಸೆ ಇರಲಿದೆ. ದೇಹವನ್ನು ದಂಡಿಸಲಾಗದ ಸ್ಥಿತಿ ಇರುವುದು.
ಮಕರ ರಾಶಿ: ನೀವು ಪಡೆವ ಅಲ್ಪ ವಿಶ್ರಾಂತಿಯು ದಿನವನ್ನು ಹಾಳುಮಾಡಬಹುದು. ಇಂದು ನಿಮ್ಮ ದಾಂಪತ್ಯ ಜೀವನವು ಸುಖವಾಗಿರುವುದು. ಮಕ್ಕಳ ಜೊತೆ ಪತಿ ಪತ್ನಿಯರಿಬ್ಬರೂ ಕಾಲವನ್ನು ಕಳೆಯುವಿರಿ. ದೂರದ ಊರಿಗೆ ಪ್ರಯಾಣ ಹೋಗುವ ಯೋಜನೆಗಳನ್ನು ಹಾಕಿಕೊಳ್ಳುವಿರಿ. ನೀವು ವಿವಾದಗಳಲ್ಲಿ ಜಯ ಸಾಧಿಸುವಿರಿ. ದಿನದ ಅಂತ್ಯದಲ್ಲಿ, ಕುಟುಂಬದ ವಾತಾವರಣ ಅನುಕೂಲಕರವಾಗಿರುತ್ತದೆ ಮತ್ತು ಸಂತೋಷವು ಮೇಲುಗೈ ಸಾಧಿಸುತ್ತದೆ. ವ್ಯವಹಾರವು ಉತ್ತಮವಾಗಿರುತ್ತದೆ, ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಕೆಲಸಗಳು ಸುಗಮವಾಗಿ ನಡೆಯಲಿವೆ. ಯಾರನ್ನೂ ನೀವು ಇಷ್ಟಪಡಲಾರಿರಿ. ಮಾತುಗಳು ಕಿರಿಕಿರಿ ಎನಿಸಬಹುದು. ಇಂದು ಕೆಲವು ಸಂದರ್ಭದಲ್ಲಿ ಸುಳ್ಳು ಹೇಳಬೇಕಾಗಬಹುದು. ನಿಮ್ಮ ಸಂಪೂರ್ಣ ಗಮನವು ವೈಯಕ್ತಿಕ ವಿಷಯಗಳ ಮೇಲೆ ಇರುತ್ತದೆ. ನಿಮ್ಮ ಸಂತೋಷಕ್ಕಾಗಿ ನಿಮ್ಮ ಸ್ಥಾನ ಇರುವುದಿಲ್ಲ. ಮಕ್ಕಳ ಪಕ್ಷದಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ನಿಮ್ಮ ಸಂಗಾತಿಯಿಂದ ನೀವು ಎಲ್ಲದಕ್ಕೂ ಬೆಂಬಲ ಪಡೆಯುವಿರಿ.
ಕುಂಭ ರಾಶಿ: ನಿಮ್ಮ ಶಕ್ತಿಯನ್ನು ಸರಿಯಾದ ಕಡೆ ಪ್ರಯೋಗಿಸಿ. ನೀವು ಮಾಡುವ ವೃತ್ತಿಯಿಂದ ಊಹಿಸದ ಯಶಸ್ಸು ಸಿಗುವುದು. ಅನಿರೀಕ್ಷಿತ ತಿರುವುಗಳು ಗೊಂದಲವನ್ನು ಉಂಟುಮಾಡೀತು. ನಿಮ್ಮ ಗೆಳೆತನವು ಖುಷಿ ಕೊಡುವುದು. ಅತಿಯಾದ ಆಲೋಚನೆಗಳು ಮಾನಸಿಕ ನೆಮ್ಮದಿಯನ್ನು ದೂರಮಾಡಲಿವೆ. ದಿನದ ಆರಂಭದಲ್ಲಿ ಕಷ್ಟಗಳು ಎದುರಾಗುತ್ತವೆ. ಆದರೆ ನಂತರ ಸಂತೋಷ ಮತ್ತು ಹಣದ ಹರಿವು ಉತ್ತಮವಾಗಿರುತ್ತದೆ. ಸಹಕಾರದ ನಿರೀಕ್ಷೆಗಳು ಈಡೇರುವುದಿಲ್ಲ, ಆದರೆ ನಿಮ್ಮ ಮಕ್ಕಳಿಂದ ನೀವು ಸಂತೋಷವನ್ನು ಪಡೆಯುತ್ತೀರಿ. ಹಳೆಯ ವಿವಾದಗಳಲ್ಲಿ ನಿಮ್ಮ ಪರವಾಗಿ ಒಮ್ಮತ ಮೂಡಬಹುದು. ಎದುರಾಳಿಯು ನಿಮ್ಮ ವಿರುದ್ಧ ಸಂಚು ಮಾಡಬಹುದು. ಮನೆಯನ್ನು ನವೀಕರಿಸಲು ಸಹ ನೀವು ಹೆಚ್ಚು ಗಮನಹರಿಸುತ್ತೀರಿ. ನಿಮ್ಮ ಸೌಲಭ್ಯಗಳನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮ್ಮ ಸುಳ್ಳನ್ನು ಯಾರಾದರೂ ನಂಬಬಹುದು. ಆಕಸ್ಮಿಕ ಧನಲಾಭದಿಂದ ಸಂತಸವು ಇರಲಿದೆ. ಮನಸ್ಸು ಬಹಳ ಉತ್ಸಾಹದಿಂದ ಇರಲಿದೆ. ಮನೆಯ ಹಿರಿಯರ ಸೇವೆಯನ್ನು ಮಾಡಬೇಕೆನಿಸುವುದು.
ಮೀನ ರಾಶಿ: ದೈನಂದಿನ ಕೃತ್ಯಕ್ಕೆ ಅಡ್ಡಿ ಬರುವುದು, ಆತಂಕವಾಗಲಿದೆ. ಇಂದಿನ ನಿಮ್ಮ ವಹಿವಾಟುಗಳು ಗೊಂದಲದಿಂದ ಇರಲಿದೆ. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳಿಗೆ ಸಹಾಯ ಮಾಡಬೇಕಾಗಬಹುದು. ಮನೆಗೆ ಅವಶ್ಯವಿರುವ ವಸ್ತುಗಳನ್ನು ಖರೀದಿಸುವಿರಿ. ಸಮಸ್ಯೆ ಇದ್ದರೆ, ಅದನ್ನು ಪರಿಹರಿಸಲು ಕೋಪಗೊಳ್ಳುವ ಬದಲು ಬುದ್ಧಿವಂತಿಕೆಯನ್ನು ಬಳಸಿ. ಮಕ್ಕಳ ಮೇಲೆ ಹೆಚ್ಚು ಒತ್ತಡ ಹೇರಬೇಡಿ ಮತ್ತು ಅವರೊಂದಿಗೆ ಶಾಂತಿಯುತವಾಗಿ ವರ್ತಿಸಿ. ಮುಖ್ಯವಾಗಿ ಈ ಸಮಯದಲ್ಲಿ ಹಳೆಯ ಸಮಸ್ಯೆಯನ್ನು ಪರಿಹರಿಸಲು ನಿಮಗೆ ಅವಕಾಶ ಸಿಗುತ್ತದೆ. ಯಾವುದೇ ಕೆಲಸದಲ್ಲಿ ನಿರ್ಲಕ್ಷ್ಯವನ್ನು ಇಟ್ಟುಕೊಳ್ಳುವುದು ಬೇಡ. ನಿಮ್ಮ ಕಠಿಣ ಪರಿಶ್ರಮವು ಫಲ ನೀಡುತ್ತದೆ. ಸಂತಾನ ಸುದ್ದಿಯು ನಿಮಗೆ ಖುಷಿ ಕೊಟ್ಟೀತು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಚಿಂತೆ ಇರಲಿದೆ. ಸಹೋದರನಿಂದ ಆರ್ಥಿಕ ಸಹಕಾರವನ್ನು ನಿರೀಕ್ಷಿಸುವಿರಿ. ಆರೋಗ್ಯವು ಉತ್ತಮವಾಗಲಿದ್ದು, ಮೊದಲಿನ ಸ್ಥಿತಿಗೆ ಮರಳುವಿರಿ.
TV9 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1