ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಪ್ರಮಾಣದ ಮಜ್ಜಿಗೆ ಕುಡಿಯಬೇಕು ಗೊತ್ತಾ?: ಅತಿಯಾಗಿ ಸೇವಿಸದರೆ ಅಡ್ಡಪರಿಣಾಮ.

Benefits Of Drinking Buttermilk: ಬೇಸಿಗೆಯ ಸುಡುವ ಶಾಖದಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯ. ಜನರು ಬಿಸಿಲಿನ ಶಾಖದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ತಮ್ಮ ದೇಹವನ್ನು ತಂಪಾಗಿಡಲು ತಮ್ಮ ಆಹಾರದಲ್ಲಿ ವಿವಿಧ ಪಾನೀಯಗಳನ್ನು ಸೇರ್ಪಡೆ ಮಾಡಿಕೊಳ್ಳುತ್ತಾರೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವಲ್ಲಿ ಮಜ್ಜಿಗೆ ಪ್ರಮುಖ ಪಾತ್ರ ವಹಿಸುತ್ತದೆ.

ಮಜ್ಜಿಗೆಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ದೇಹವನ್ನು ತಂಪಾಗಿಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪಾನೀಯ ಎಂದು ಪರಿಗಣಿಸಲಾಗುತ್ತದೆ. ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಮಜ್ಜಿಗೆಯಲ್ಲಿರುವ ಪ್ರೋಬಯಾಟಿಕ್‌ಗಳು ಮತ್ತು ಕ್ಯಾಲ್ಸಿಯಂ ಜೀರ್ಣಕ್ರಿಯೆ ಸುಧಾರಿಸುತ್ತದೆ ಹಾಗೂ ಮೂಳೆಯ ಬಲವನ್ನು ಹೆಚ್ಚಿಸುತ್ತದೆ.

ದೇಹದ ಉಷ್ಣತೆ ಕಡಿಮೆ ಮಾಡಲು ಹಾಗೂ ತ್ವರಿತ ಶಕ್ತಿಯನ್ನು ಒದಗಿಸಲು ಮಜ್ಜಿಗೆ ಉತ್ತಮ ಪಾನೀಯವಾಗಿದೆ. ಬೇಸಿಗೆಯಲ್ಲಿ ದೇಹಕ್ಕೆ ನೀರು ಬೇಕಾಗುತ್ತದೆ. ಮಜ್ಜಿಗೆ ನೀರಿನ ಕೊರತೆ ನೀಗಿಸುವ ಉತ್ತಮ ಪಾನೀಯವಾಗಿದೆ. ಆದರೆ, ಅತಿಯಾದ ಸೇವನೆಯು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ದಿನಕ್ಕೆ ಎಷ್ಟು ಪ್ರಮಾಣದ ಮಜ್ಜಿಗೆ ಕುಡಿಯೋದು ಉತ್ತಮ?: ಆರೋಗ್ಯ ತಜ್ಞರ ಪ್ರಕಾರ, ಮಜ್ಜಿಗೆಯನ್ನು ಅತಿಯಾದ ಸೇವನೆ ಮಾಡುವುದರಿಂದ ದೇಹಕ್ಕೆ ಹಾನಿಕಾರಕವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮಜ್ಜಿಗೆ ಕುಡಿಯುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗಬಹುದು. ಕೆಲವು ಜನರಲ್ಲಿ ಹೆಚ್ಚು ಮಜ್ಜಿಗೆ ಕುಡಿಯುವುದರಿಂದ ಗ್ಯಾಸ್, ಅಜೀರ್ಣ ಅಥವಾ ಹೊಟ್ಟೆ ಸಮಸ್ಯೆಗಳು ಉಂಟಾಗಬಹುದು. ಇದರ ಜೊತೆಗೆ ಹಾಲು ಮತ್ತು ಮಜ್ಜಿಗೆಯಲ್ಲಿರುವ ತಾಜಾ ಪದಾರ್ಥಗಳು ದೇಹಕ್ಕೆ ಹೆಚ್ಚಿನ ಫೈಬರ್ ಮತ್ತು ಶುಗರ್​ ಒದಗಿಸುತ್ತವೆ. ಮಜ್ಜಿಗೆಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸದಿದ್ದರೆ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಮಜ್ಜಿಗೆ ಕುಡಿಯುವುದನ್ನು ತಪ್ಪಿಸಿ.

ಆರೋಗ್ಯ ತಜ್ಞರ ಸಲಹೆಯ ಪ್ರಕಾರ, ದಿನಕ್ಕೆ 1ರಿಂದ 2 ಗ್ಲಾಸ್ ಮಜ್ಜಿಗೆ ಕುಡಿಯುವುದು ಒಳ್ಳೆಯದು. ಇದು ದೇಹಕ್ಕೆ ತಂಪಾಗಿ ಹಾಗೂ ಸರಾಗವಾಗಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಮಜ್ಜಿಗೆ ಕುಡಿಯುವುದರಿಂದ ಇತರ ಆರೋಗ್ಯ ಸಮಸ್ಯೆಗಳ ಅಪಾಯವೂ ಹೆಚ್ಚಾಗುತ್ತದೆ.

ಬೇಸಿಗೆಯಲ್ಲಿ ಮಜ್ಜಿಗೆ ಪ್ರಯೋಜನಕಾರಿಯೇ?: ಮಜ್ಜಿಗೆಯನ್ನು ಮೊಸರಿನಿಂದ ತಯಾರಿಸಲಾಗುತ್ತದೆ. ಮೊಸರು ತಣ್ಣನೆಯ ಗುಣವನ್ನು ಹೊಂದಿರುತ್ತದೆ. ಶಾಖದಿಂದ ರಕ್ಷಿಸಲು ಇದು ಉಪಯುಕ್ತವಾಗಿದೆ. ಮೊಸರು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಕರುಳಿನ ಆರೋಗ್ಯ ಮತ್ತು ಇತರ ಹಲವು ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ.

ಮೊಸರಿನಲ್ಲಿ ಬಹಳಷ್ಟು ಪೋಷಕಾಂಶಗಳಿವೆ. ಇದು ಹೊಟ್ಟೆಗೆ ತುಂಬಾ ಪ್ರಯೋಜನಕಾರಿಯಾದ ಒಳ್ಳೆಯ ಬ್ಯಾಕ್ಟೀರಿಯಾ ಹೊಂದಿರುತ್ತದೆ. ಮೊಸರು ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯಕವಾಗಬಹುದು. ‘ಜರ್ನಲ್ ಆಫ್ ನ್ಯೂಟ್ರಿಷನ್’ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ದಿನಕ್ಕೆ ಎರಡು ಬಾರಿ 200 ಗ್ರಾಂ ಮೊಸರು ಸೇವಿಸುವ ಜನರು ತಮ್ಮ ಮಲಬದ್ಧತೆ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.

ಅಮೇರಿಕನ್ ಸೊಸೈಟಿ ಫಾರ್ ನ್ಯೂಟ್ರಿಷನ್‌ನ ಪೌಷ್ಟಿಕತಜ್ಞ ಡಾ.ಡ್ಯಾನ್ ಬ್ರಾಂಡ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ಮೊಸರು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಹಾಗೂ ಮಲಬದ್ಧತೆ ಕಡಿಮೆಯಾಗುತ್ತದೆ ಎಂದು ಡಾ.ಡ್ಯಾನ್ ಬ್ರಾಂಡ್ ತಿಳಿಸಿದ್ದಾರೆ.

ಮಜ್ಜಿಗೆ ದೇಹವನ್ನು ತಂಪಾಗಿಸಲು, ವಿಶೇಷವಾಗಿ ಬೇಸಿಗೆಯಲ್ಲಿ ತುಂಬಾ ಒಳ್ಳೆಯದು. ಅದರ ಅತ್ಯುತ್ತಮ ಪ್ರಯೋಜನಗಳಿಗಾಗಿ ಮಜ್ಜಿಗೆಗೆ ಕರಿಬೇವು ಸೇರಿಸುವುದರಿಂದ ದೇಹ ಮತ್ತು ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಆರೋಗ್ಯ ತಜ್ಞರ ಪ್ರಕಾರ, ಮಜ್ಜಿಗೆ ಕುಡಿಯುವುದು ಚರ್ಮಕ್ಕೂ ತುಂಬಾ ಒಳ್ಳೆಯದು. ಕರಿಬೇವು-ಮಜ್ಜಿಗೆಯನ್ನು ಹೇಗೆ ತಯಾರಿಸುವುದು? ಮತ್ತು ಚರ್ಮಕ್ಕೆ ಅದರ ಪ್ರಯೋಜನಗಳೇನು ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ.

ಬೇಕಾಗಿರುವ ಸಾಮಗ್ರಿಗಳೇನು?:

  • 1 ಕಪ್ ಮಜ್ಜಿಗೆ ಅಥವಾ ಮೊಸರು
  • ಕರಿಬೇವು (ಅಗತ್ಯವಿದ್ದರೆ)
  • 1 ಟೀಸ್ಪೂನ್ ಜೀರಿಗೆ ಪುಡಿ
  • ಶುಂಠಿ ಮತ್ತು ಕೊತ್ತಂಬರಿ ಸೊಪ್ಪು (ಅಗತ್ಯವಿದ್ದರೆ)
  • ಹಸಿರು ಮೆಣಸಿನಕಾಯಿ
  • ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ:

  • ಮೊದಲನೆಯದಾಗಿ ಕರಿಬೇವು ಮತ್ತು ಹಸಿರು ಕೊತ್ತಂಬರಿ ಸೊಪ್ಪನ್ನು ತೆಗೆದುಕೊಂಡು ತೊಳೆದು ಸ್ವಚ್ಛಗೊಳಿಸಿ.
  • ಈಗ ಮಿಕ್ಸಿಂಗ್ ಜಾರ್​ಗೆ ಮೊಸರು, ಕರಿಬೇವು, ಕೊತ್ತಂಬರಿ ಸೊಪ್ಪು, ಕತ್ತರಿಸಿದ ಮೆಣಸಿನಕಾಯಿ, ಶುಂಠಿ, ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ.
  • ಎಲ್ಲವೂ ಚೆನ್ನಾಗಿ ರುಬ್ಬಿಕೊಳ್ಳಬೇಕಾಗುತ್ತದೆ. ಬಳಿಕ ನಂತರ ಈ ಮಿಶ್ರಣವನ್ನು ಒಂದು ಲೋಟಕ್ಕೆ ಸುರಿಯಿರಿ ಮತ್ತು ಕರಿಬೇವು ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಗ್ಲಾಸ್​ ಹಾಕಿಕೊಳ್ಳಿ.

ಕರಿಬೇವು- ಮಜ್ಜಿಗೆಯ ಲಾಭಗಳು:

ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸಲು ಉಪಯುಕ್ತ: ನೀವು ಸುಂದರವಾಗಿ ಕಾಣಲು ಹಾಗೂ ದೇಹದ ಎಲ್ಲಾ ಭಾಗಗಳನ್ನು ಆರೋಗ್ಯವಾಗಿಡಲು ಬಯಸಿದರೆ, ದೇಹವನ್ನು ಯಾವಾಗಲೂ ಹೈಡ್ರೀಕರಿಸುವುದು ಮುಖ್ಯ.

ಮಜ್ಜಿಗೆಯನ್ನು ಮೊಸರಿನಿಂದ ತಯಾರಿಸುವುದರಿಂದ ಅದರಲ್ಲಿ ಬಹಳಷ್ಟು ಲ್ಯಾಕ್ಟಿಕ್ ಆಮ್ಲವಿದೆ. ಇದು ಚರ್ಮ ಮತ್ತು ಕೂದಲನ್ನು ಯಾವಾಗಲೂ ಹೈಡ್ರೇಟ್ ಆಗಿರಿಸುತ್ತದೆ. ಇದು ಚರ್ಮವನ್ನು ತೇವಗೊಳಿಸುತ್ತದೆ ಹಾಗೂ ಮೃದುಗೊಳಿಸುತ್ತದೆ.

ಕೂದಲಿನ ಬೆಳವಣಿಗೆಗೆ ಉಪಯುಕ್ತ: ಕರಿಬೇವಿನ ಎಲೆಗಳಲ್ಲಿ ಇರುವ ಬೀಟಾ ಕ್ಯಾರೋಟಿನ್ ಮತ್ತು ಪ್ರೋಟೀನ್ ಗುಣಗಳು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ. ಪ್ರತಿದಿನ ಕರಿಬೇವಿನ ಎಲೆಗಳೊಂದಿಗೆ ಮಜ್ಜಿಗೆ ಬೆರೆಸಿ ಸೇವಿಸುವುದರಿಂದ ಕೂದಲು ಬೇರುಗಳಿಂದ ಬಲಗೊಳ್ಳುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಉತ್ಕರ್ಷಣ ನಿರೋಧಕಗಳು: ಕರಿಬೇವು ಮತ್ತು ಕೊತ್ತಂಬರಿ ಸೊಪ್ಪುಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದು ಚರ್ಮದ ಸೋಂಕುಗಳು, ದದ್ದುಗಳು ಮತ್ತು ಮೊಡವೆಗಳಂತಹ ಸಮಸ್ಯೆಗಳಿಂದ ರಕ್ಷಿಸುತ್ತದೆ.

ಉರಿಯೂತ & ತುರಿಕೆ ತಡೆಯುತ್ತದೆ: ಶುಂಠಿಯನ್ನು ಮೊಸರು ಅಥವಾ ಮಜ್ಜಿಗೆಯೊಂದಿಗೆ ಬೆರೆಸಿ ಕುಡಿಯುವುದರಿಂದ ದೇಹ ಮತ್ತು ಚರ್ಮವು ಉರಿಯೂತ ಮತ್ತು ತುರಿಕೆಯಿಂದ ರಕ್ಷಿಸುತ್ತದೆ. ಇದು ಚರ್ಮದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಮತ್ತು ಚರ್ಮವನ್ನು ತಾಜಾ ಹಾಗೂ ಕಾಂತಿಯುತವಾಗಿಸುತ್ತದೆ.

ಚರ್ಮದ ಆರೈಕೆ: ಕರಿಬೇವು – ಮಜ್ಜಿಗೆಯಲ್ಲಿರುವ ಕರಿಬೇವು ಜೀವಿತಾವಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮೊಸರು, ಶುಂಠಿ ಹಾಗೂ ಜೀರಿಗೆ ಎಲ್ಲವೂ ಜೀರ್ಣಕ್ರಿಯೆಯನ್ನು ನಿಯಂತ್ರಿಸುತ್ತದೆ. ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಹಾಗೂ ಚರ್ಮ, ಕೂದಲಿನ ಮೇಲೂ ಉತ್ತಮ ಪರಿಣಾಮ ಬೀರುತ್ತದೆ.

ಓದುಗರಿಗೆ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳನ್ನು ಸಾಮಾನ್ಯ ಮಾಹಿತಿಗಾಗಿ ಮಾತ್ರ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Source : ETV Bharat

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *