ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಗೃಹಜ್ಯೋತಿ ಫಲಾನುಭವಿಯಾಗಲು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕಳೆದ ಎರಡು ದಿನಗಳಿಂದ ಆರಂಭವಾಗಿದೆ.
ಈಗಾಗಲೇ ಸುಮಾರು 2 ಲಕ್ಷ ಮಂದಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಕಳೆದ ಎರಡು ದಿನಗಳಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದರೂ ಏಕಕಾಲದಲ್ಲಿ ಸಾವಿರಾರು ಮಂದಿ ಅರ್ಜಿ ಸಲ್ಲಿಕೆ ಮಾಡಲು ಮುಂದಾಗಿರುವುದರಿಂದ ಸರ್ವರ್ ಸಮಸ್ಯೆ ಎದುರಾಗಿದೆ. ಹಲವರು ಗಂಟೆಗಟ್ಟಲೇ ಗ್ರಾಮ ಒನ್, ವಿದ್ಯುತ್ ಸೇವಾ ಕೇಂದ್ರ, ಬೆಂಗಳೂರು ಒನ್ ಸೇರಿದಂತೆ ಕರ್ನಾಟಕ ಒನ್ ಕೇಂದ್ರಗಳ ಬಳಿ ಕಾದು ನಿಲ್ಲುವ ಸ್ಥಿತಿ ಎದುರಾಗಿದೆ. ಆದರೆ ನೀವು ಮನೆಯಲ್ಲೇ ಕೂತು ನಿಮ್ಮ ಮೊಬೈಲ್, ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಹೌದು, ಅರ್ಜಿ ಸಲ್ಲಿಕೆ ಮಾಡುವ ಸುಲಭ ವಿಧಾನವನ್ನು ನೀವು ಇಲ್ಲಿ ತಿಳಿದುಕೊಳ್ಳಬಹುದಾಗಿದೆ. ಮೊದಲು ನೀವು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಿಂದ ಸೇವಾಸಿಂಧು ಪೋರ್ಟಲ್ ಲಾಗ್ಇನ್ ಆಗಬೇಕಾಗುತ್ತದೆ. ಇಲ್ಲಿ ನಿಮಗೆ ಒಂದು ಹ್ಯಾಕ್ ಇದ್ದು, ನೀವು ಸೇವಾಸಿಂಧು ಪೋರ್ಟಲ್ ಅಂತ ಸರ್ಚ್ ಮಾಡಿದರೆ ನಿಮಗೆ ಸೇವಾಸಿಂಧು ಪೋರ್ಟಲ್ನ ಮುಖಪುಟ ತೆರೆದುಕೊಳ್ಳುತ್ತದೆ. ಆದರೆ, ನೀವು ಸೇವಾಸಿಂಧು ಪೋರ್ಟಲ್ನ ಮುಖಪುಟದಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವ ಆಯ್ಕೆ ಸರ್ಚ್ ಮಾಡುವುದ ಸ್ವಲ್ಪ ಕಷ್ಟ ಸಾಧ್ಯ ಎನಿಸಬಹುದು. ಆದ್ದರಿಂದ ನೀವು ಗೂಗಲ್ನಲ್ಲಿ ಸೇವಾ ಸಿಂಧು ಪೋರ್ಟಲ್ ಸರ್ಚ್ ಮಾಡುವ ಸಂದರ್ಭದಲ್ಲಿ sevasindhugs.karnataka.gov.in ನೇರವಾಗಿ ನಿಮಗೆ ಸರ್ಕಾರ ಐದು ಗ್ಯಾರಂಟಿಗಳಿಗೆ ಅರ್ಜಿ ಸಲ್ಲಿಕೆ ಮಾಡುವ ಪೋರ್ಟಲ್ ಓಪನ್ ಆಗುತ್ತದೆ.
ಇಲ್ಲಿ ನಿಮಗೆ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವ ಆಯ್ಕೆಗಳು ಕಾಣುತ್ತವೆ. ಇಲ್ಲಿ ನೀವು ಗೃಹಜ್ಯೋತಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಉಚಿತ ವಿದ್ಯುತ್ ಪಡೆದುಕೊಳ್ಳಬೇಕಾದರೆ ನೀವು ಈ ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಕೆ ಮಾಡಲು ನಿಮಗೆ ಎರಡು ಭಾಷೆಗಳ ಆಯ್ಕೆಯನ್ನು ನೀಡಲಾಗಿದೆ. ಇಂಗ್ಲೀಷ್ ಹಾಗೂ ಕನ್ನಡ ಭಾಷೆಗಳಲ್ಲಿ ನೀವು ನಿಮಗೆ ಇಷ್ಟ ಇರುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
ನೀವು ಕನ್ನಡವನ್ನು ಆಯ್ಕೆ ಮಾಡಿಕೊಂಡ ಸಂದರ್ಭದಲ್ಲಿ 8 ಕಲಂಗಳಲ್ಲಿ ಮಾಹಿತಿಯನ್ನು ತುಂಬಾ ಬೇಕಾಗುತ್ತದೆ. ಅರ್ಜಿ ತುಂಬಲು ಆರಂಭ ಮಾಡುವ ಮುನ್ನ ನೀವು ನಿಮ್ಮ ವಿದ್ಯುತ್ ಬಿಲ್ ಹಾಗೂ ಆಧಾರ್ ಕಾರ್ಡ್ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆಯನ್ನು ನಿಮ್ಮ ಬಳಿ ಇಟ್ಟುಕೊಂಡರೆ ಅರ್ಜಿಯನ್ನು ವೇಗವಾಗಿ ತುಂಬಬಹುದಾಗಿದೆ.
ಎಸ್ಕಾಂ ಹೆಸರು:
ಮೊದಲ ಆಯ್ಕೆಯಲ್ಲಿ ನೀವು ನಿಮ್ಮ ಎಸ್ಕಾಂ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲಿ ನಿಮಗೆ ಬೆವಿಕಂ, ಚಾವಿಸನಿನಿ, ಜೆಸ್ಕಾಂ, ಹೆಸ್ಕಾಂ, ಹುಕ್ಕೇರಿ ಸೊಸೈಟಿ ಎಂಬ 6 ಆಯ್ಕೆಗಳನ್ನು ನೀಡಲಾಗಿದೆ. ನಿಮಗೆ ನಿಮ್ಮ ಎಸ್ಕಾಂ ಹೆಸರು ಗೊತ್ತಿಲ್ಲ ಎಂದರೇ, ನಿಮ್ಮ ವಿದ್ಯುತ್ ಬಿಲ್ನಲ್ಲಿ ನೋಡಿ ತಿಳಿದುಕೊಳ್ಳಬಹುದುದಾಗಿದೆ.
ಖಾತೆ ಸಂಖ್ಯೆ/ಸಂಪರ್ಕ ಸಂಖ್ಯೆ:
ನೀವು ಈ ಕಲಂನಲ್ಲಿ ನಿಮ್ಮ ಖಾತೆ ಸಂಖ್ಯೆಯನ್ನು ನಮೂದಿಸಬೇಕು. ಆದರೆ ಇದು ಆರ್ಆರ್ ಸಂಖ್ಯೆ ಅಲ್ಲ, ಹಲವು ಖಾತೆ ಸಂಖ್ಯೆ ಬಳಿ ಆರ್ಆರ್ ನಂಬರ್ ದಾಖಲು ಮಾಡ್ತಿದ್ದಾರೆ ಎನ್ನಲಾಗಿದ್ದು, ಇದು ಸಂಪರ್ಕ ಸಂಖ್ಯೆ ಅಂದರೆ ನಿಮ್ಮ ವಿದ್ಯುತ್ ಬಿಲ್ನ ಆರ್ಆರ್ ನಂಬರ್ ಕೆಳಗಡೆ ಖಾತೆ ಸಂಖ್ಯೆ ಅಥವಾ Acc ID ಇರುತ್ತೆ. ಈ ಸಂಖ್ಯೆಯನ್ನು ಇಲ್ಲಿ ನೀವು ಟೈಪ್ ಮಾಡಬೇಕು.
ಖಾತೆದಾರರ ಹೆಸರು ಎಸ್ಕಾಂ ನಲ್ಲಿ ಇರುವಂತೆ:
ಖಾತೆದಾರರ ಸಂಖ್ಯೆಯೂ ನಿಮಗೆ ವಿದ್ಯುತ್ ಬಿಲ್ನಲ್ಲೇ ನೋಡಬಹುದು. ಬಿಲ್ನಲ್ಲಿ ಇರುವಂತೆ ಯಥಾವತ್ ಆಗಿ ಟೈಮ್ ಮಾಡಿ. ಎರಡೆರಡು ಬಾರಿ ಇಲ್ಲಿ ಪರೀಕ್ಷೆ ಮಾಡಿಕೊಂಡು ಹೆಸರು ನಮೂದಿಸುವುದು ಉತ್ತಮ. ಖಾತೆದಾರರ ವಿಳಾಸ ಎಸ್ಕಾಂನಲ್ಲಿ ಇರುವಂತೆ:
ಈ ಆಯ್ಕೆ ಮಾಡುವ ಸಂದರ್ಭದಲ್ಲಿ ನಿಮ್ಮ ವಿದ್ಯುತ್ ಬಿಲ್ ಹಾಗೂ ಆಧಾರ್ ಕಾರ್ಡ್ನಲ್ಲಿರುವ ಮಾಹಿತಿ ಒಂದೇ ವಿಳಾಸ ಇರಬೇಕು. ಯಾವ ವಿಳಾಸ ಇದೇ ಅದನ್ನು ನೀವು ಇಲ್ಲಿ ಟೈಮ್ ಮಾಡಿ ತುಂಬಾ ಬೇಕಾಗುತ್ತದೆ.
ನಿವಾಸಿ ವಿಧ:
ಇಲ್ಲಿ ನಿಮಗೆ ಎರಡು ಆಯ್ಕೆಗಳನ್ನು ನೀಡಲಾಗಿದ್ದು, ಮಾಲೀಕ ಮತ್ತು ಬಾಡಿಗೆದಾರ ಎಂಬ ಆಯ್ಕೆಗಳನ್ನು ನೀವು ನೋಡುತ್ತೀರಿ. ನೀವು ಮನೆ ಮಾಲೀಕರಾಗಿದ್ದಾರೆ ಮಾಲೀಕ ಎಂಬ ಆಯ್ಕೆ ಅಥವಾ ನೀವು ಬಾಡಿಗೆದಾರರಾಗಿದ್ದರೆ ಬಾಡಿಗೆದಾರ ಅಂತ ಆಯ್ಕೆ ಮಾಡಿಕೊಳ್ಳಬೇಕು.
ಆಧಾರ್ ಸಂಖ್ಯೆ:
ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಆಧಾರ್ ಸಂಖ್ಯೆ ನಮೂದಿಸುವ ಸಂದರ್ಭದಲ್ಲಿ ಎರಡೆರಡು ಬಾರಿ ಪರಿಶೀಲನೆ ನಡೆಸಿ ನಿಮ್ಮ ನಂಬರ್ಅನ್ನು ಸರಿಯಾಗಿ ದಾಖಲಿಸುವುದು ಉತ್ತಮ.
ಅರ್ಜಿದಾರರ ಹೆಸರು:
ಇಲ್ಲಿ ವಿದ್ಯುತ್ ಮೀಟರ್ ನಿಮ್ಮ ಹೆಸರಿನಲ್ಲಿದ್ದರೆ ನಿಮ್ಮ ಹೆಸರನ್ನು ನಮೂದಿಸಿ. ನೀವು ಬಾಡಿಗೆದಾರರಾಗಿದ್ದರೆ ವಿದ್ಯುತ್ ಮೀಟರ್ ಮಾಲೀಕರ ಹೆಸರಿನಲ್ಲಿ ಇರುವುದರಿಂದ ಅವರ ಪರವಾಗಿ ನೀವು ಅರ್ಜಿ ಸಲ್ಲಿಕೆ ಮಾಡುತ್ತಿದ್ದರೆ ಅವರ ಹೆಸರನ್ನು ಸರಿಯಾಗಿ ನಮೂದಿಸಿ. ಸಂವಹನಕ್ಕಾಗಿ ದೂರವಾಣಿ ಸಂಖ್ಯೆ:
ಮುಂದಿನ ಸಂವಹನಕ್ಕಾಗಿ ಅಥವಾ ಒಟಿಪಿಗಾಗಿ ಇಲ್ಲಿ ನೀವು ಮೊಬೈಲ್ ನಂಬರ್ ನಮೂದಿಸಬೇಕಿದೆ.
ಅಂತಿಮವಾಗಿ ನೀವು ಘೋಷಣೆ ಮಾಡಬೇಕಾಗುತ್ತದೆ. ಇಲ್ಲಿ ನಿಮಗೆ ಒಂದು ಟಿಕ್ ಮಾರ್ಕ್ ಇರುತ್ತೆ. ಅದನ್ನು ನೀವು ಟಿಕ್ ಮಾಡುವುದು ಕಡ್ಡಾಯವಾಗಿದೆ. ಮಾರ್ಕ್ ಟಿಕ್ ಮಾಡುವ ಮೂಲಕ ನೀವು ಘೋಷಣೆ ಮಾಡುತ್ತಿದ್ದು, ಈ ಮೇಲಿನ ಖಾತೆ ಸಂಖ್ಯೆಯನ್ನು ಗೃಹ ಬಳಕೆಗೆ ಮಾತ್ರ ಬಳಸಲಾಗುತ್ತದೆ. ಒಂದು ವೇಳೆ ಗೃಹ ಬಳಕೆ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸಿದ್ದಲ್ಲಿ ಪ್ರಯೋಜನಗಳನ್ನು ಸ್ವಯಂಚಾಲಿತವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ನನಗೆ ತಿಳಿದಿದೆ ಮತ್ತು ನಾನು ಈಗಾಗಲೇ ಪಡೆದಿರುವ ಪ್ರಯೋಜನಗಳನ್ನು ಬಡ್ಡಿಯೊಂದಿಗೆ ಮರುಪಾವತಿಸಲು ಸಿದ್ಧನಿದ್ದೇನೆ. ನಾನು ಮೇಲೆ ಒದಗಿಸಿರುವ ಎಲ್ಲಾ ವಿವರಗಳು ನನಗೆ ತಿಳಿದಿರುವಂತೆ ಸರಿಯಾಗಿದೆ ಎಂದು ಈ ಮೂಲಕ ಧೃಢೀಕರಿಸುತ್ತೇನೆ ಎಂದು ತಿಳಿಸಿದಂತೆ.
ಇಷ್ಟೆಲ್ಲಾ ಪ್ರಕ್ರಿಯೆ ಮುಗಿದ ಬಳಿಕ ನಿಮಗೆ ಕೆಳಭಾಗದಲ್ಲಿ Word verification ಪೂರ್ಣಗೊಳಿಸಬೇಕಾಗುತ್ತದೆ. ಬಾಕ್ಸ್ ನಲ್ಲಿ ಕಾಣುವ ಸಂಖ್ಯೆಯನ್ನು ನಮೂದಿಸಿ Submit ಕೊಟ್ಟರೆ ನೀವು ಗೃಹಜ್ಯೋತಿ ಯೋಜನೆಗೆ ಸಲ್ಲಿಸುವ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಆದರೆ ಸದ್ಯ ಸರ್ವರ್ ಸಮಸ್ಯೆ ಇರುವುದರಿಂದ ಸ್ವಲ್ಪ ತಾಳ್ಮೆಯಿಂದ ಅರ್ಜಿ ಸಲ್ಲಿಕೆ ಮಾಡುವುದು ಉತ್ತಮ. ಒಮ್ಮೆ ನಿಮ್ಮ ಸ್ವೀಕೃತವಾದರೆ ನಿಮಗೆ ಅರ್ಜಿ ಸ್ವೀಕೃತ ಸ್ಲಿಪ್ ಸಿಗಲಿದೆ. ಈ ಸ್ಲಿಪ್ನಲ್ಲಿ ನಿಮ್ಮ ಅರ್ಜಿಯ ಸಂಖ್ಯೆ ಇರಲಿದ್ದು, ನೀವು ಅರ್ಜಿ ಸಲ್ಲಿಕೆ ಮಾಡಿದ ದಿನಾಂಕ ಸೇರಿದಂತೆ ಇತರೇ ಮಾಹಿತಿ ಇರಲಿದೆ.