High Blood Pressure Control Tips: ಆಧುನಿಕ ಜೀವನಶೈಲಿ, ಬದಲಾದ ಆಹಾರ ಕ್ರಮಗಳಿಂದ ಅನೇಕ ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ತಜ್ಞರು ತಿಳಿಸುವ ಪ್ರಕಾರ, ಔಷಧವಿಲ್ಲದೆ ನೈಸರ್ಗಿಕವಾಗಿ ಬಿಪಿ ನಿಯಂತ್ರಿಸಬಹುದು ಅಂತಾರೆ ತಜ್ಞರು.

High Blood Pressure Control Tips: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಬದಲಾಗುತ್ತಿರುವ ಆಹಾರ ಕ್ರಮ, ಜೀವನಶೈಲಿಯು ಇದಕ್ಕೆ ಪ್ರಮುಖ ಕಾರಣವಾಗಿದೆ. ಅಧಿಕ ರಕ್ತದೊತ್ತಡದಿಂದ ಹೃದಯ ಸಮಸ್ಯೆಗಳು, ಮೂತ್ರಪಿಂಡ ಕಾಯಿಲೆ ಹಾಗೂ ಪಾರ್ಶ್ವವಾಯು ಅಪಾಯ ಹೆಚ್ಚು ಎಂದು ತಜ್ಞರು ತಿಳಿಸುತ್ತಾರೆ.

ವೈದ್ಯರು ಸೂಚಿಸಿದ ಔಷಧಿಗಳಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಅನೇಕ ಜನರು ಪ್ರಯತ್ನಗಳನ್ನು ಮಾಡುತ್ತಾರೆ. ಆದ್ರೆ ಯಾವುದೇ ಔಷಧಿಗಳನ್ನು ಬಳಸದೆಯೇ ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು. ಪ್ರತಿದಿನ ಈ ಸಲಹೆ ಅನುಸರಿಸಿದರೆ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಈ ನೈಸರ್ಗಿಕ ಮಾರ್ಗಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ.
ನೈಸರ್ಗಿಕವಾಗಿ ಬಿಪಿ ನಿಯಂತ್ರಿಸುವುದು ಹೇಗೆ?
- ನಿಯಮಿತವಾಗಿ ವಾಕಿಂಗ್ ಹಾಗೂ ವ್ಯಾಯಾಮ ಮಾಡಿ. ವಾರಕ್ಕೆ ಕನಿಷ್ಠ 150 ನಿಮಿಷಗಳ ವಾಕಿಂಗ್ ಹಾಗೂ 75 ನಿಮಿಷಗಳ ವ್ಯಾಯಾಮ ಮಾಡಬೇಕು.
- ಪೊಟ್ಯಾಸಿಯಂ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ತಾಜಾ ತರಕಾರಿ, ಹಣ್ಣುಗಳು, ಸೊಪ್ಪುಗಳು, ಡೈರಿ ಉತ್ಪನ್ನಗಳು, ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸಬೇಕು.
- ನೈಸರ್ಗಿಕವಾಗಿ ದೊರೆಯುವ ಪೂರಕ ಆಹಾರಗಳನ್ನು ತೆಗೆದುಕೊಳ್ಳಬೇಕು. ನೀವು ಮೀನಿನ ಎಣ್ಣೆ, ದಾಸವಾಳದ ಚಹಾ, ಹಾಲೊಡಕು ಪ್ರೋಟೀನ್ ಮತ್ತು ಬೆಳ್ಳುಳ್ಳಿಯಂತಹವುಗಳನ್ನು ತಿನ್ನಬೇಕು.
- ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ತರಕಾರಿಗಳು, ಡೈರಿ ಉತ್ಪನ್ನಗಳು, ಕೋಳಿ ಮಾಂಸ ಮತ್ತು ಧಾನ್ಯಗಳನ್ನು ಸೇವಿಸಿ.
- ನೀವು ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರ ಸೇವಿಸಬೇಕು.
- ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ, ಏಕೆಂದರೆ ಇದರಲ್ಲಿ ಸೋಡಿಯಂ ಅಧಿಕವಾಗಿರುತ್ತದೆ.
- ಮದ್ಯವನ್ನು ಮಿತವಾಗಿ ಸೇವಿಸಬೇಕು.
- ಕೆಫೀನ್ ಸೇವನೆಯನ್ನು ಕಡಿಮೆ ಮಾಡಬೇಕು.
- ಹೆಚ್ಚು ಡಾರ್ಕ್ ಚಾಕೊಲೇಟ್ ಮತ್ತು ಕೋಕೋ ಸೇವಿಸಿ.
- ನಿಮ್ಮ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ.
- ಧೂಮಪಾನ ಮಾಡುವ ಅಭ್ಯಾಸವನ್ನು ತಕ್ಷಣ ನಿಲ್ಲಿಸಬೇಕು.
- ಕೃತಕ ಸಕ್ಕರೆ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಮಾಡಬೇಕು.
- ಪಾಲಿಫಿನಾಲ್‌ಗಳು ಅಧಿಕವಾಗಿರುವ ಹಣ್ಣುಗಳನ್ನು ಸೇವಿಸಬೇಕು.
- ನೀವು ಧ್ಯಾನ ಹಾಗೂ ಪ್ರಾಣಾಯಾಮದಂತಹ ದೈಹಿಕ ಚಟುವಟಿಕೆಗೆ ಪ್ರಯತ್ನಿಸಬೇಕು.
- ನೀವು ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ಆರಾಮವಾಗಿ ಮಲಗಬೇಕಾಗುತ್ತದೆ.
- ಒತ್ತಡ ನಿಯಂತ್ರಣದಲ್ಲಿ ಇಡಬೇಕು. ಇದಕ್ಕಾಗಿ ನೀವು ಸಂಗೀತ ಕೇಳಬೇಕು ಹಾಗೂ ಶಾಂತವಾಗಿರಲು ಪ್ರಯತ್ನಿಸಬೇಕು.

ರಕ್ತದೊತ್ತಡ ಹೇಗಿರಬೇಕು?:
- ಸಾಮಾನ್ಯ ರಕ್ತದೊತ್ತಡ – 120/80 mm Hg ಗಿಂತ ಕಡಿಮೆ
- ಹೆಚ್ಚಿದ ರಕ್ತದೊತ್ತಡ – 120/80 ರಿಂದ 129/79 mmHg
- ಅಧಿಕ ರಕ್ತದೊತ್ತಡ ಹಂತ 1 – 130/80 ರಿಂದ 139/89 mm Hg
- ಅಧಿಕ ರಕ್ತದೊತ್ತಡ ಹಂತ 2 – 140/90 mm Hg ಅಥವಾ ಹೆಚ್ಚಿನದು
- ಅಧಿಕ ರಕ್ತದೊತ್ತಡದ ಬಿಕ್ಕಟ್ಟು – ನಿಮ್ಮ ರಕ್ತದೊತ್ತಡ 180/120 mm Hg ಗಿಂತ ಹೆಚ್ಚಿದ್ದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Source : ETV Bharat
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1