Hypertension: ಈ ಆಹಾರಗಳನ್ನು ಸೇವಿಸಿದ್ರೆ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ!

Hypertension Foods: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಪ್ರತಿದಿನ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ರಕ್ತದೊತ್ತಡ ಕಾಯಿಲೆ ಒಂದು ರೀತಿಯ ಸೈಲೆಂಟ್ ಕಿಲ್ಲರ್ ಇದ್ದಂತೆ. ಇದು ದೇಹದ ಯಾವ ಭಾಗದ ಮೇಲೆ ಯಾವಾಗ ಪರಿಣಾಮ ಬೀರುತ್ತದೆ ಅನ್ನೋದೇ ಗೊತ್ತಾಗಲ್ಲ. ಅಂದಾಜಿನ ಪ್ರಕಾರ, 19 ಕೋಟಿಗೂ ಹೆಚ್ಚು ಭಾರತೀಯರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಹೃದಯರಕ್ತನಾಳದ ಕಾಯಿಲೆಯು ಅನೇಕರ ಸಾವಿಗೆ ಪ್ರಮುಖ ಕಾರಣವಾಗಿದೆ. ಅಧಿಕ ರಕ್ತದೊತ್ತಡಕ್ಕೆ ಜೀವನಶೈಲಿ, ಅನಾರೋಗ್ಯಕರ ಆಹಾರ, ಸ್ಥೂಲಕಾಯತೆ, ವ್ಯಾಯಾಮದ ಕೊರತೆ, ಹೆಚ್ಚು ಉಪ್ಪು & ಮದ್ಯ ಸೇವನೆ ಮತ್ತು ಒತ್ತಡ ಪ್ರಮುಖ ಕಾರಣಗಳಾಗಿವೆ. ನೀವು ಆರೋಗ್ಯಕರ ಕೊಬ್ಬು, ಹೆಚ್ಚಿನ ಫೈಬರ್ ಮತ್ತು ಪೊಟ್ಯಾಸಿಯಂ ಸಮೃದ್ಧವಾಗಿರುವ ಆಹಾರ ಸೇವಿಸಿದರೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವಿಸಿದರೆ ಖಂಡಿತ ಪರಿಹಾರ ದೊರೆಯುತ್ತದೆ.

ಕುಂಬಳಕಾಯಿ ಬೀಜಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತವೆ. ಕುಂಬಳಕಾಯಿ ಬೀಜಗಳಲ್ಲಿ ಅಮೈನೋ ಆಮ್ಲಗಳು, ನೈಟ್ರಿಕ್ ಆಕ್ಸೈಡ್ ಇರುತ್ತದೆ. ಇವು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿವೆ.

ಟೊಮೆಟೊದಲ್ಲಿರುವ ಲೈಕೋಪೀನ್ ಎಂಬ ಸಂಯುಕ್ತವು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ದೈನಂದಿನ ಆಹಾರದಲ್ಲಿ ಹೆಚ್ಚು ಟೊಮೆಟೊಗಳನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು.

ಅಧಿಕ ರಕ್ತದೊತ್ತಡ ರೋಗಿಗಳಿಗೆ ಮೊಸರು ಉತ್ತಮ ಆಹಾರವಾಗಿದೆ. ಈ ಆಹಾರವು ಕ್ಯಾಲ್ಸಿಯಂ, ಪೊಟ್ಯಾಸಿಯಂ ಮತ್ತು ಮೆಗ್ನೀಸಿಯಂ ಹೊಂದಿರುತ್ತದೆ. ಇದು ಸಹ ರಕ್ತದೊತ್ತಡವನ್ನು ನಿಯಂತ್ರಣಡಲು ಸಹಕಾರಿಯಾಗಿದೆ.

ಬಾಳೆಹಣ್ಣು ಮಧುಮೇಹ ರೋಗಿಗಳಿಗೆ ತುಂಬಾ ಒಳ್ಳೆಯದು. ಬಾಳೆಹಣ್ಣು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿದೆ. ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಬೀಟ್ರೂಟ್ ತರಕಾರಿಯು ಅಧಿಕ ರಕ್ತದೊತ್ತಡ ರೋಗಿಗಳಿಗೆ ಉತ್ತಮ. ಬೀಟ್ರೂಟ್ ಕರಿ ಅಥವಾ ಜ್ಯೂಸ್ ಸೇವನೆಯಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಮಧುಮೇಹ ರೋಗಿಗಳು ಪೌಷ್ಟಿಕಾಂಶವುಳ್ಳ ತರಕಾರಿಗಳನ್ನು ಸೇವಿಸಬೇಕು. ದೈನಂದಿನ ಆಹಾರದಲ್ಲಿ ಸಾಕಷ್ಟು ಸೊಪ್ಪು-ತರಕಾರಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡದ ಜೊತೆಗೆ ಹೃದ್ರೋಗದ ಅಪಾಯ ಕಡಿಮೆ ಮಾಡಬಹುದು.

ರಕ್ತದೊತ್ತಡ ಕಡಿಮೆ ಮಾಡಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಬೆಳ್ಳುಳ್ಳಿ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ವೇಗಗೊಳಿಸುತ್ತದೆ. ಇದು ರಕ್ತನಾಳಗಳನ್ನು ಸಹ ರಕ್ತವು ಸರಾಗವಾಗಿ ಹರಿಯಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

Source : https://zeenews.india.com/kannada/photo-gallery/hypertension-eating-these-foods-can-keep-hypertension-under-control-221241/best-foods-for-high-blood-pressure-221243

 

Leave a Reply

Your email address will not be published. Required fields are marked *