ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಅಭಿವೃದ್ದಿಗೆ ಹಾಗೂ ಇಲ್ಲಿ ನಡೆಯುವ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ನಾನು ಸಕ್ರಿಯವಾಗಿ ಭಾಗವಹಿಸುವೆ : ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜು. 11 : ನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಅಭಿವೃದ್ದಿಗೆ ಹಾಗೂ ಇಲ್ಲಿ ನಡೆಯುವ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ನಾನು ಸಕ್ರಿಯವಾಗಿ ಭಾಗವಹಿಸುವುದಾಗಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಯವರು ಭರವಸೆಯನ್ನು ನೀಡಿದ್ದಾರೆ.

ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ರಜತಾ ಮಹೋತ್ಸವ ಹಾಗೂ ದ್ವಿತೀಯ ಮಹಾ ಕುಂಭಾಭಿಷೇಕ ಮಹೋತ್ಸವದಡಿಯಲ್ಲಿ ಮಂಗಳವಾರ ರಾತ್ರಿಯ ಹಮ್ಮಿಕೊಂಡಿದ್ದ ನಾಲ್ಕನೇ ದಿನದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ಇರುವ  ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಐತಿಹಾಸಿಕವಾದ ದೇವಾಲಯವಾಗಿದೆ ಶಬರಿಮಲೆಗೆ ಹೋಗದವರು ಇಲ್ಲಿರುವ 14 ಮಟ್ಟಿಲನ್ನು ಹತ್ತುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರಾಗಬಹುದಾಗಿದೆ. ಇಲ್ಲಿನ ಸಮಿತಿಯವರು  ಉತ್ತಮವಾದ ಕೆಲಸವನ್ನು ಮಾಡಿದ್ದಾರೆ ದೇವಾಲಯ ಅಭಿವೃದ್ದಿಗೆ ತಮ್ಮ ಶ್ರಮವನ್ನು ಹಾಕಿದ್ದಾರೆ.ಈ ದೇವಾಲಯದ ಅಭಿವೃದ್ದಿಗೆ ನಾನು ಸಹಾ ನೆರವಾಗುವುದಾಗಿ ತಿಳಿಸಿದ ಶಾಸಕ ವೀರೇಂದ್ರಪಪ್ಪಿಯವರು ಮುಂದಿನ ದಿನದಲ್ಲಿ ದೇವಾಲಯದಲ್ಲಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಾಗಿ ತಿಳಿಸಿದರು.

ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಟಿ.ಬದರಿನಾಥ್ ಮಾತನಾಡಿ, ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಗೆ ಅದರ ಹಿಂದೆ ಇರುವ ಅಧ್ಯಾತ್ಮಿಕತೆಯಿಂದ ಕೂಡಿದ ತಂಡ ಇರಬೇಕಿದೆ. ಅದರ ನೇತೃತ್ವ ವಹಿಸಿಕೊಂಡ ವ್ಯಕ್ತಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಉತ್ತಮವಾದ ಕಾರ್ಯಕ್ರಮ ನಡೆಯಲು ಸಾಧ್ಯವಿದೆ, ಇಲ್ಲಿಯೂ ಸಹಾ ಇದೇ ರೀತಿಯಾದ ತಂಡ ಇರುವುದರಿಂದ ಅದರ ನೇತೃತ್ವವನ್ನು ಶರಣಕುಮಾರ್ ವಹಿಸಿರುವುದರಿಂದ ಇಂತಹ ಉತ್ತಮವಾದ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗಿದೆ ಎಂದರು.

ಚಿತ್ರದುರ್ಗ ನಗರ ಐತಿಹಾಸಿ ನಗರ ಮಾತ್ರವಲ್ಲ ಅಧ್ಯಾತ್ಮಿಕ ನಗರವಾಗಲು ತನ್ನದೆ ಆದ ಕೂಡುಗೆಯನ್ನು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ನೀಡಿದೆ. ಇದರಂತೆ ಹಿಂದೂ ಮಹಾ ಗಣಪತಿಯೂ ಸಹಾ ಕಳೆದ 18 ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಇದೆ. ಚಿತ್ರದುರ್ಗದಲ್ಲಿ ಹಲವಾರು ವರ್ಷಗಳಿಂದ ಗಣಪತಿ ಮತ್ತು ಅಯ್ಯಪ್ಪಸ್ವಾಮಿಯ ಆರಾಧನೆ ನಿರಂತರವಾಗಿ ನಡೆಯುತ್ತಾ ಬಂದಿದೆ. ಈ ಇಬ್ಬರ ಆರ್ಶಿವಾದದಲ್ಲಿ ಚಿತ್ರದುರ್ಗ ವಿಖ್ಯಾತಿಯನ್ನು ಪಡೆಯುತ್ತಿದೆ. ಮಾಲಾದಾರಿಗಳಿಗೆ ಅನ್ನದಾನ ಸೇವೆಯನ್ನು ಮಾಡುತ್ತಾ ಬಂದಿದೆ. ಎಲ್ಲರಿಗೂ ಸಹಾ ಆದ್ಯಾತ್ಮಿಕವಾಗಿ ಸೇವೆಯನ್ನು ಮಾಡುತ್ತಾ ಬಂದಿದೆ ಎಂದರು.

ಸಭಾ ಕಾರ್ಯಕ್ರಮವನ್ನು ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಾಜಂ ನ ರಾಜ್ಯಾಧ್ಯಕ್ಷರಾದ ಎನ್.ಜಯರಾಂ ನೇರವೇರಿಸಿದರು. ಅನ್ನದಾನಿ ಸಮಿತಿಯ ಕೃಷ್ಣಪ್ಪ, ರಾಷ್ಟ್ರೀಯ ಅಧ್ಯಕ್ಷರಾದ ಶೇಖರ್, ಅನುಪಮ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎಸ್,ಬಾಸ್ಕರ್, ಗುತ್ತಿಗೆದಾರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಆರ್,ಮಂಜುನಾಥ್,ಗ್ರಾ.ಪಂ.ಮಾಜಿ ಅದ್ಯಕ್ಷರಾದ ಎನ್.ಕುಮಾರ್, ವರ್ತಕರಾದ ಜಿ.ಆರ್ ಪ್ರತಾಪ್ ರೆಡ್ಡಿ,ಶ್ರೀ ರಾಮ ಕಲ್ಯಾಣ ಮಂಟಪದ ಆರ್,ತೇಜಸ್ವಿ, ಮೇದೇಹಳ್ಳಿ ಗ್ರಾ.ಪಂ.ಅಧ್ಯಕ್ಷರಾದ ಜಯರಾಮರೆಡ್ಡಿ,ಎ.ಸಿ.ಕೆ.ಗ್ರೂಪ್ಸ್‍ನ ಪಾಲುದಾರರಾದ ಚಂದ್ರು ಭಾಗವಹಿಸಿದ್ದರು.

ಬೆಳ್ಳಿಗೆ ಸಂಹಾರ ತತ್ವ ಕಳಸ ಪೂಜೆ, ಕುಂಭೇಷ ಪೂಜೆ, ಪ್ರತಿಷ್ಠಾ ಹೋಮ, ಸಂಹಾರ ತತ್ವ ಕಳಶಾಭೀಷೇಕ ಜೀವಕಳಸ ಪೂಜೆ, ಜೀವೋದ್ವಾಸನೆ, ಲಕ್ಷ್ಮಿನಾರಾಯಣ ಹೃದಯ ಹೋಮ ಹಾಗೂ ಪೂರ್ಣಾಹುತಿ ಮಹಾ ಮಂಗಳಾರತಿ ಪೂಜಾ ನೆರವೇರಿತು ಭಕ್ತಿಕುಸುಮಾಂಜಲಿಯಲ್ಲಿ ಮಂಗಳೂರಿನ ಶ್ರೀ ಅಯ್ಯಪ್ಪ ಯಕ್ಷಗಾನ  ಕೊಕ್ಕರಣೆ ಮೇಳ ಇವರಿಂದ ಯಕ್ಷಗಾನ ಕಾರ್ಯಕ್ರಮ ನೇರವೇರಿತು. ಸುಶಾಂತ ಭಂಡಾರಿ ಪ್ರಾರ್ಥಿಸಿದರು. ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಶರಣ್ ಕುಮಾರ್ ಸ್ವಾಗತಿಸಿದರು, ಸಮಿತಿಯ ಕಾರ್ಯದರ್ಶಿ ವೆಂಕಟೇಶ್ ವಂದಿಸಿದರು, ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *